ಮೈಸೂರು: ಮರಿ ಬಿಟ್ಟು ಹೋಗಿದ್ದ ತಾಯಿ ಚಿರತೆಯೊಂದು ಮತ್ತೆ ತನ್ನ ಮರಿಗಳನ್ನು ಸೇರಿದೆ.
ಮೈಸೂರು ತಾಲ್ಲೂಕಿನ ಮಾರಶೆಟ್ಟಹಳ್ಳಿ ಗ್ರಾಮದ ಸುತ್ತ ಮುತ್ತ ಚಿರತೆಗಳು ಹೆಚ್ಚಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಗ್ರಾಮದ ಬಸವಣ್ಣ ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಟಾವು ಮಾಡುವ ಸಂದರ್ಭದಲ್ಲಿ ಮೂರು ಚಿರತೆ ಮರಿಗಳು ಸಿಕ್ಕಿದ್ದವು.
ನಂತರ ಅರಣ್ಯ ಇಲಾಖೆ ಸಿಬ್ಬಂದಿ ಮರಿ ಸಿಕ್ಕ ಸ್ಥಳದಲ್ಲಿ ಬೋನ್ ಇರಿಸಿ ಚಿರತೆ ಮರಿಗಳನ್ನು ಬೋನಿನಲ್ಲಿ ಇರಿಸಿದ್ದರು. ಸದರಿ ಬೋನಿಗೆ ಮರಿ ಚಿರತೆ ನೋಡಲು ಬಂದ ತಾಯಿ ಚಿರತೆ ಸಹ ಬೋನಿಗೆ ಬಿದ್ದಿದ್ದು, ಸದ್ಯ ಅರಣ್ಯ ಇಲಾಖೆ ಚಿರತೆ ಹಾಗೂ ಅದರ ಮರಿಗಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.