ದುಬೈನಲ್ಲಿ ವರ್ಸೈಲ್ಸ್ನ ಎವೋಕೇಟಿವ್ ಬಂಗಲೆಯು ಮಾರಾಟಕ್ಕಿದ್ದು ಇದರ ಬೆಲೆ ಬರೋಬ್ಬರಿ 204 ಮಿಲಿಯನ್ ಡಾಲರ್ ಆಗಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಈ ಐಷಾರಾಮಿ ಆಸ್ತಿ ಕೊಳ್ಳುವವರು ಬರೋಬ್ಬರಿ 1675 ಕೋಟಿ ರೂಪಾಯಿಗಳನ್ನು ನೀಡಬೇಕಿದೆ.

ಎಮಿರೇಟ್ಸ್ ಹಿಲ್ಸ್ ಸಮೀಪದಲ್ಲಿರುವ ಈ ಮನೆಯು ಬರೋಬ್ಬರಿ 60 ಸಾವಿರ ಚದರ ಅಡಿ ಒಳಗಾಂಗಣ ಸ್ಥಳವನ್ನು ಹೊಂದಿದೆ. ಆದರೆ ಇಷ್ಟು ದೊಡ್ಡ ಸ್ಥಳವಿದ್ದರೂ ಸಹ ಈ ಭವ್ಯವಾದ ಮನೆಯಲ್ಲಿ ಇರುವುದು ಕೇವಲ ಐದು ಬೆಡ್ ರೂಮ್ಗಳು. ನೆಲ ಮಹಡಿಯಲ್ಲಿ ಡೈನಿಂಗ್ ಹಾಗೂ ಮನರಂಜನೆಗೆ ಪ್ರತ್ಯೇಕ ಕೊಠಡಿಗಳನ್ನು ಇಡಲಾಗಿದೆ. ಈ ಮನೆಯ ಒಂದು ಬೆಡ್ ರೂಮ್ ಒಂದು ಮನೆಯಷ್ಟು ದೊಡ್ಡದಿದೆ.
ಮನೆಯ ಒಳಗೆ ಹಾಗೂ ಹೊರಗೆ ಎರಡೂ ಕಡೆಯಲ್ಲಿ ಪೂಲ್ಗಳು, ಅಕ್ವೆರಿಯಂ, ಪವರ್ ಸಬ್ಸ್ಟೇಷನ್ ಹಾಗೂ ಗಾಲ್ಫ್ ಮೈದಾನವನ್ನು ಇಡಲಾಗಿದೆ.
ಸದ್ಯ ಮಾರಾಟಕ್ಕಿರುವ ಈ ಭವ್ಯ ಬಂಗಲೆಗೆ ಮಾರ್ಬಲ್ ಪ್ಯಾಲೇಸ್ ಎಂದು ಹೆಸರಿಡಲಾಗಿದೆ. ಇದನ್ನು ಇಟಾಲಿಯನ್ ಕಲ್ಲಿನಲ್ಲಿ ಅಂದಾಜು 80 ಮಿಲಿಯನ್‌ನಿಂದ 100 ಮಿಲಿಯನ್ ದಿರ್ಹಂ ಬಳಸಿ ನಿರ್ಮಿಸಲಾಗಿದೆ. ಈ ಐಷಾರಾಮಿ ಆಸ್ತಿಯನ್ನು ಮಾರಾಟ ಮಾಡುತ್ತಿರುವ Luxhabitat Sotheby’s International Realty ಹೇಳುವ ಪ್ರಕಾಯ ಈ ಮನೆಯ ನಿರ್ಮಾಣಕ್ಕೆ ಬರೋಬ್ಬರಿ 12 ವರ್ಷಗಳು ತಗುಲಿವೆಯಂತೆ..!