ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ಕಾಂಗ್ರೆಸ್ಸಿಗರು ಆಡಳಿತ ಪಕ್ಷಕ್ಕೆ ಸೇರುವ ಪ್ರವೃತ್ತಿಯನ್ನು ಗಮನಿಸಿದರೆ ಗೋವಾದಲ್ಲಿ ಕಾಂಗ್ರೆಸ್ಗೆ ಮತ ಹಾಕಿದರೆ ಬಿಜೆಪಿಗೆ “ಪರೋಕ್ಷ ಮತ” ಹಾಕಿದಂತೆ ಅರ್ಥ. ಆದ್ದರಿಂದ, ಗೋವಾದಲ್ಲಿ ಎಎಪಿ ಮತ್ತು ಬಿಜೆಪಿ ನಡುವಿನ ಕದನವಿದೆ. ಬಿಜೆಪಿಯನ್ನು ಹೊರಗಿಡಲು ತನ್ನ ಪಕ್ಷಕ್ಕೆ ಮತ ನೀಡುವಂತೆ ಜನರನ್ನು ಒತ್ತಾಯಿಸಿದರು.
”ಗೋವಾದ ಜನತೆಗೆ ಆಪ್ ಮತ್ತು ಬಿಜೆಪಿ ನಡುವೆ ಆಯ್ಕೆ ಇದೆ. ಸ್ವಚ್ಛ, ಪ್ರಾಮಾಣಿಕ ಸರಕಾರ ಬೇಕಾದರೆ ಆಪ್ ಗೆ ಮತ ಹಾಕಬಹುದು. ಇನ್ನೊಂದು ಆಯ್ಕೆಯೆಂದರೆ ನೇರವಾಗಿ ಅಥವಾ ಪರೋಕ್ಷವಾಗಿ ಬಿಜೆಪಿಗೆ ಮತ ಹಾಕುವುದು. ಕಾಂಗ್ರೆಸ್ ಗೆ ಮತ ಹಾಕಿದಾಗ ಪರೋಕ್ಷವಾಗಿ ಬಿಜೆಪಿಗೆ ಮತದಾನ ಮಾಡಿದಂತೆ ಯಾಕೆಂದರೆ ಕಾಂಗ್ರೆಸ್ಸಿಗರು ಗೆದ್ದು ಬಿಜೆಪಿಗೆ ಹೋಗುತ್ತಾರೆ ಎಂದು ಕೇಜ್ರಿವಾಲ್ ಎನ್ಡಿಟಿವಿ ಟೌನ್ಹಾಲ್ನಲ್ಲಿ ಹೇಳಿದರು.
ಗೋವಾ ರಾಜ್ಯದಲ್ಲಿ 2017ರ ಚುನಾವಣೆಯ ನಂತರದ ಪರಿಸ್ಥಿತಿಯನ್ನು ಉಲ್ಲೇಖಿಸಿ ಮಾತನಾಡಿದ ಅರವಿಂದ್, 17 ಶಾಸಕರೊಂದಿಗೆ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್ ಈಗ ಕೇವಲ ಇಬ್ಬರನ್ನು ಶಾಸಕರನ್ನು ಹೊಂದಿದೆ. ರಾಜ್ಯದಲ್ಲಿ ಸರ್ಕಾರ ರಚಿಸಿದ ನಂತರ ಉಳಿದ ಬಹುತೇಕರು ಬಿಜೆಪಿ ಸೇರಿದ್ದಾರೆ ಎಂದು ಕುಟುಕಿದರು.
ನಿನ್ನೆ, ಎಎಪಿಯ ಎಲ್ಲಾ 40 ಅಭ್ಯರ್ಥಿಗಳು ನಿಷ್ಠೆಯ ಪ್ರತಿಜ್ಞೆಗೆ ಸಹಿ ಹಾಕಿದ್ದು ಆಯ್ಕೆಯಾದರೆ ನಾವು ಯಾರು ಪಕ್ಷಾಂತರ ಮಾಡುವುದಿಲ್ಲ ಎಂದು ಪ್ರಮಾಣಮಾಡಿದ್ದಾರೆ. ಕಾನೂನಾತ್ಮಕವಾಹಿ ನಡೆದುಕೊಳ್ಳುತ್ತೇವೆ ಮತ್ತು ಸ್ವಚ್ಛ, ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನಡೆಸುವ ಭರವಸೆ ನೀಡಿದರು ಎಂದು ತಿಳಿಸಿದರು.
“ನಮ್ಮ ಎಲ್ಲಾ ಅಭ್ಯರ್ಥಿಗಳು ಪ್ರಾಮಾಣಿಕರು. ಆದರೆ ಈ ಅಭ್ಯರ್ಥಿಗಳು ಪ್ರಾಮಾಣಿಕರು ಎಂದು ಮತದಾರರಿಗೆ ಭರವಸೆ ನೀಡಲು ಈ ಅಫಿಡವಿಟ್ ಅಗತ್ಯವಿದೆ” ಎಂದು ಕೇಜ್ರಿವಾಲ್ ಅವರು ANI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

2017ರಲ್ಲಿ ಎಎಪಿ ಗೋವಾದಲ್ಲಿ ಸ್ಪರ್ಧಿಸಿದ ಮೊದಲ ವರ್ಷ. ಈ ಬಾರಿ ಸಂಘಟಿತ, ವ್ಯವಸ್ಥಿತವಾಗಿ ತಯಾರಿ ನಡೆಸಿ ಜನರ ಬಳಿ ಹೋಗಿದ್ದೇವೆ. ಸಾಂಕ್ರಾಮಿಕ ಸಮಯದಲ್ಲಿ ಎಎಪಿ ದೇಶಾದ್ಯಂತ ದೇಣಿಗೆ ಸಂಗ್ರಹಿಸಿದ್ದೇವೆ ಮತ್ತು ಗೋವಾದಲ್ಲಿ ಮನೆ-ಮನೆಗೆ ಹೋದಾಗಿ ಅವರ ಸಮಸ್ಯೆಗಳನ್ನು ಕೇಳಿದ್ದೇವೆ ಆಲಿಸುದ್ದೇವೆ. ಆ ಸಮಯದಲ್ಲಿ ಬಿಜೆಪಿ ಸರ್ಕಾರ ಎಲ್ಲಿತ್ತು? ಕಾಂಗ್ರೆಸ್ ಎಲ್ಲಿತ್ತು?” ಎಂದು ಪ್ರಶ್ನಿಸಿದ್ದಾರೆ.
ಗೋವಾದ ಎಲ್ಲಾ 40 ಅಸೆಂಬ್ಲಿ ಸ್ಥಾನಗಳಿಗೆ ಫೆಬ್ರವರಿ 14 ರಂದು ಚುನಾವಣೆಯನ್ನು ನಿಗದಿಪಡಿಸಲಾಗಿದೆ ಮತ್ತು ಮಾರ್ಚ್ 10 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಚುನಾವಣೆ ಆಯೋಗ ಗೋಷಿಸಿದೆ. AAP ರಾಜ್ಯದ ಎಲ್ಲಾ ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ ಎಂದು ಎಎಪಿ ಹೇಳಿಕೊಂಡಿದೆ.













