ಬರುವ ಉತ್ತರ ಪ್ರದೇಶ ಚುನಾವಣೆ ನಿಮಿತ್ತ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ ಬಿಜೆಪಿಯ ಮಿತ್ರ ಪಕ್ಷವಾದ ಅಪ್ನದಳವು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಭಾರೀ ಸುದ್ದಿಯಲ್ಲಿದೆ.
ಇನ್ನು ಸೀಟು ಹಂಚಿಕೆ ಕುರಿತು ಎರಡು ಪಕ್ಷಗಳ ನಡುವೆ ಮಾತುಕತೆ ನಡೆದಿಲ್ಲವಾದರು ಮೊದಲೇ ಅಪ್ನದಳ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ಪಶ್ಚಿಮ ಉತ್ತರಪ್ರದೇಶದ ಸುರ್ ವಿಧಾನಸಭಾ ಕ್ಷೇತ್ರಕ್ಕೆ ಅಪ್ನದಳ ಹೈದರ್ ಅಲಿಯನ್ನು ತನ್ನ ಹುರಿಯಾಳಾಗಿಸಿದೆ. ಇದೇ ಕ್ಷೇತ್ರದಿಂದ ಎಸ್ಪಿ ನಾಯಕ ಅಜಮ್ಖಾನ್ ಪುತ್ರ ಅಬ್ದುಲ್ಲಾ ಅಜಮ್ ಕಣಕ್ಕಿಳಿಯಲಿದ್ದಾರೆ.
ಇತ್ತೀಚಿನ ನಿದರ್ಶನಗಳಲ್ಲಿ ಬಿಜೆಪಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರುವುದು. ಈ ಮೊದಲು ಹೈದರ್ಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಎಂದು ಹೇಳಲಾಗುತಿತ್ತು. ಆದರೆ, ಕಡೇ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ ಕಾರಣ ಅಪ್ನದಳದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.






