• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಆರೋಗ್ಯ ಸೇವೆಯಲ್ಲಿ ಮತ್ತೆ ಕೇರಳ ಫಸ್ಟ್, ಯೋಗಿ ಆದಿತ್ಯನಾಥ್ ಸರ್ಕಾರ ಲಾಸ್ಟ್

Any Mind by Any Mind
December 28, 2021
in ದೇಶ, ರಾಜಕೀಯ
0
ಆರೋಗ್ಯ ಸೇವೆಯಲ್ಲಿ ಮತ್ತೆ ಕೇರಳ ಫಸ್ಟ್, ಯೋಗಿ ಆದಿತ್ಯನಾಥ್ ಸರ್ಕಾರ ಲಾಸ್ಟ್
Share on WhatsAppShare on FacebookShare on Telegram

ಸೋಮವಾರ ಬಿಡುಗಡೆಯಾಗಿರುವ ನೀತಿ ಆಯೋಗದ ವರದಿ ಪ್ರಕಾರ ಕೇರಳ ಸತತ ನಾಲ್ಕನೇ ಬಾರಿಗೆ ದೇಶದಲ್ಲಿ ಉತ್ತಮ ಆರೋಗ್ಯ ಸೇವೆಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿ ಉಳಿದಿದೆ.

ADVERTISEMENT

`The Healthy State Progressive India’ ಹೆಸರಿನಡಿ ನಡೆದ ಸಮೀಕ್ಷೆಯ ಪ್ರಕಾರ 2019-20ರಲ್ಲಿ 19 ದೊಡ್ಡ ರಾಜ್ಯಗಳು, 8 ಸಣ್ಣ ರಾಜ್ಯಗಳು, 7 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಮಾಹಿತಿಯ ಕೊರತೆಯಿಂದಾಗಿ ಪಶ್ಚಿಮ ಬಂಗಾಳ ಮತ್ತು ಲಡಾಖ್ನಲ್ಲಿ ಸಮೀಕ್ಷೆಯನ್ನು ನಡೆಸಿಲ್ಲ.

ದೊಡ್ಡ ರಾಜ್ಯಗಳ ಪೈಕಿ ಕೇರಳ ಮೊದಲ ಸ್ಥಾನ ಪಡೆದರೆ, ತಮಿಳುನಾಡು ಎರಡನೇ ಸ್ಥಾನ, ತೆಲಂಗಾಣ ಮೂರನೇ ಸ್ಥಾನ ಪಡೆದಿದೆ. ತೆಲಂಗಾಣ ರಾಜ್ಯವು ಆರೋಗ್ಯ ವಿಚಾರದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಮಹಾರಾಷ್ಟ್ರ 5ನೇ ಸ್ಥಾನ, ಆಂಧ್ರ ಪ್ರದೇಶ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಆರೋಗ್ಯ ಸೇವೆಗಳಲ್ಲಿ ಪ್ರಮುಖ ಸುಧಾರಣೆ ಕಂಡರೂ ಉತ್ತರ ಪ್ರದೇಶ ಕಡೆಯ ಸ್ಥಾನದಲ್ಲೇ ಉಳಿದಿದೆ. ಉತ್ತರ ಪ್ರದೇಶದ ಆರೋಗ್ಯ ಸೇವೆಯು ಒಟ್ಟಾರೆ ಶೇ.25.06% ರಿಂದ 30.57ಕ್ಕೆ ಏರಿಕೆ ಕಂಡಿದೆ. ಅಸ್ಸಾಂ ಕೂಡ 15ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಈ ಹಿಂದೆ ವರದಿಯಾಗುತ್ತಿದ್ದ ಮರಣ ಪ್ರಮಾಣದಲ್ಲಿ ಇಳಿಕೆಯನ್ನು ಸಹ ಕಂಡಿದೆ. ರಾಜಸ್ಥಾನ ಆರೋಗ್ಯ ಇಲಾಖೆಯ ಕಳಪೆ ಸಾಧನೆಯೊಂದಿಗೆ 16ನೇ ಸ್ಥಾನ ಪಡೆದಿದೆ.

ಸಣ್ಣ ರಾಜ್ಯಗಳ ಪೈಕಿ ಮಿಜೋರಾಂ ಮೊದಲ ಸ್ಥಾನದಲ್ಲಿದರೆ ನಾಗಾಲ್ಯಾಂಡ್ ಕೊನೆಯ ಸ್ಥಾನದಲ್ಲಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿ ಮತ್ತು ಜಮ್ಮು-ಕಾಶ್ಮೀರ ಕಳಪೆ ಸಾಧನೆಯೊಂದಿಗೆ ಕೆಳ ಹಂತದಲ್ಲಿದೆ. ಆದರೆ, ಕಳೆದ ಭಾರಿಯ ಸಮೀಕ್ಷೆಗೆ ಹೋಲಿಸಿದರೆ ದೆಹಲಿ ಮತ್ತು ಜಮ್ಮು-ಕಾಶ್ಮೀರ ಒಂದು ಸ್ಥಾನ ಸುಧಾರಿಸಿವೆ.

2018-19ರಲ್ಲಿ ನಡೆದ ಸಮೀಕ್ಷೆಯ ಪ್ರಕಾರ ದೊಡ್ಡ ರಾಜ್ಯಗಳ ಪೈಕಿ ಹಲವು ರಾಜ್ಯಗಳು ಸುಧಾರಣೆಯನ್ನು ಕಂಡಿವೆ. ಕೇರಳ ರಾಜ್ಯವು ಆರೋಗ್ಯ ವಿಚಾರದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಒಟ್ಟಾರೆಯಾಗಿ ಎಲ್ಲಾ ವಿಭಾಗಗಳಲ್ಲು ಸಹ ಸುಧಾರಣೆಯನ್ನ ಕಂಡಿದೆ.

Tags: BJPಆರೋಗ್ಯ ಸೇವೆಕರೋನಾಕೇರಳ ಫಸ್ಟ್ಕೇರಳ ಸರ್ಕಾರಬಿಜೆಪಿಯೋಗಿ ಆದಿತ್ಯನಾಥ್
Previous Post

ಜನವರಿ 3 ರಿಂದ ಮಕ್ಕಳಿಗೂ ಲಸಿಕೆ : ಬೆಂಗಳೂರಿನ 7 ಲಕ್ಷ ಮಕ್ಕಳನ್ನು ಗಣತಿ ಮಾಡಿರುವ BBMP

Next Post

ಬರಲಿದೆ ಭಯಂಕರ ಟ್ರೇಲರ್! ; ಪ್ರಥಮ್ ಅಭಿನಯದ ಚಿತ್ರ “ನಟ ಭಯಂಕರ”

Related Posts

ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ
ರಾಜಕೀಯ

ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

by ಪ್ರತಿಧ್ವನಿ
May 1, 2026
0

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್ ಹಾಗೂ ಮಾಗ್ರಾಹತ್ ಪಶ್ಚಿಮ ವಿಧಾನಸಭಾ ಕ್ಷೇತ್ರಗಳ ಒಟ್ಟು 15 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲು ಭಾರತೀಯ ಚುನಾವಣಾ...

Read moreDetails
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

May 1, 2026
Next Post
ಬರಲಿದೆ ಭಯಂಕರ ಟ್ರೇಲರ್! ; ಪ್ರಥಮ್ ಅಭಿನಯದ ಚಿತ್ರ “ನಟ ಭಯಂಕರ”

ಬರಲಿದೆ ಭಯಂಕರ ಟ್ರೇಲರ್! ; ಪ್ರಥಮ್ ಅಭಿನಯದ ಚಿತ್ರ "ನಟ ಭಯಂಕರ"

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada