40,000 ವರ್ಷಗಳ ಹಿಂದಿನ ಭಾರತದಲ್ಲಿದ್ದ ಎಲ್ಲರ ಡಿಎನ್ಎ ಮತ್ತು ಇಂದಿನ ಜನರ ಡಿಎನ್ಎ ಒಂದೇ ನಮ್ಮೆಲ್ಲರ ಪೂರ್ವಜರು ಒಂದೇ ಎಂದು ಶನಿವಾರ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಧರ್ಮಶಾಲಾದಲ್ಲಿ ಮಾಜಿ ಸೈನಿಕರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮೋಹನ್ ಭಾಗವತ್, 40,000 ವರ್ಷಗಳ ಹಿಂದಿನ ಭಾರತದಲ್ಲಿದ್ದ ಎಲ್ಲರ ಡಿಎನ್ಎ ಮತ್ತು ಇಂದಿನ ಜನರ ಡಿಎನ್ಎ ಒಂದೇ ನಮ್ಮೆಲ್ಲರ ಪೂರ್ವಜರು ಒಂದೇ ಮತ್ತು ನಮ್ಮ ಪೂರ್ವಜರಿಂದ ದೇಶ ಪ್ರವರ್ಧಮಾನಕ್ಕೆ ಬಂತು ಹಾಗಾಗಿ ನಮ್ಮ ಸಂಸ್ಕೃತಿ ಮುಂದುವರೆಯಿತು ಎಂದು ಹೇಳಿದ್ದಾರೆ.
ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಮೇಲೆ ಸಂಘದ ನಿಯಂತ್ರಣವಿಲ್ಲ –
ಸರ್ಕಾರದಲ್ಲಿ ವಿಭಿನ್ನ ಕಾರ್ಯನಿರ್ವಾಹಕರು, ವಿಭಿನ್ನ ನೀತಿಗಳು, ಕಾರ್ಯ ವಿಧಾನಗಳನ್ನು ಹೊಂದಿದೆ. ಪ್ರಸ್ತುತ ಆಡಳಿತ ಸರ್ಕಾರದ ಸದಸ್ಯರ ಆಲೋಚನೆ, ಆಚರಿಸುತ್ತಿರು ಸಂಸ್ಕೃತಿ ಮತ್ತು ನಮ್ಮ ಸಂಘಟನೆಯಲ್ಲಿ ಗುರುತಿಸಿಕೊಂಡಿರುವುದರಿಂದ ಅದನ್ನು ರಿಮೋಟ್ ಕಂಟ್ರೋಲ್ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಶನಿವಾರ ನಡೆದ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸಿಡಿಎಸ್ ಬಿಪಿನ್ ರಾವತ್ ಅವರನ್ನು ಸ್ಮರಿಸಿದ ಒಂದು ನಿಮಿಷಗಳ ಕಾಲ ಮೌನಾಚರಣೆಯನ್ನು ನಡೆಸಿ ಮಾತನಾಡಿದ ಅವರು, ಸಂಘದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವಂತೆ ನೆರೆದಿದ್ದವರನ್ನು ಕೋರಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್, ಹಿಂದೆ ಇದ್ದ ಸರ್ಕಾರಗಳು ನಮ್ಮ ವಿರುದ್ದ ಇದ್ದವು ಮತ್ತು ನಮ್ಮನ್ನು ಯಾವಾಗಲೂ ವಿರೋಧಿಸುತ್ತಾ ಇದ್ದವು. ಸಂಘವು 96 ವರ್ಷಗಳಿಂದ ಎಲ್ಲಾ ಅಡೆ ತಡೆಗಳನ್ನು ದಾಟಿ ಬಂದಿದೆ. ನಮ್ಮ ಸ್ವಯಂಸೇವಕರು ಯಾವತ್ತೂ ಸುಮ್ಮನೆ ಕುಳಿತುಕೊಂಡವರಲ್ಲ. ಸಮಾಜದಲ್ಲಿ ಎಲ್ಲಿ ಕೆಲಸ ಮಾಡುವ ಅವಶ್ಯಕತೆ ಇದೆಯೋ ಜನರು ನಮ್ಮ ಕಾರ್ಯಕರ್ತರನ್ನು ಅಲಲ್ಲಿಗೆ ಕೊಂಡೊಯುತ್ತಾರೆ. ಯಾವುದೇ ಪ್ರಚಾರ, ಆರ್ಥಿಕ ಸಹಾಯ ಮತ್ತು ಸರ್ಕಾರದ ನೆರವಿಲ್ಲದೆ ಸಂಘವು ನಿರಂತರವಾಗಿ ಸಮಾಜಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.












