ಬೆಳಗಾವಿಯ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಮತ್ತು ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರ ಅತ್ಯಾಚಾರದ ಕುರಿತಾದ ಹೇಳಿಕೆ ಈಗ ದಿಲ್ಲಿ ಕಾಂಗ್ರೆಸ್ ನಾಯಕರ ಬಾಗಿಲು ತಲುಪಿದೆ. ಈ ಕುರಿತು ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದು, ರಮೇಶ್ ಕುಮಾರ್ ಅವರು ನೀಡಿದ ಹೇಳಿಕೆಯನ್ನು ನಾನು ಹೃದಯದಿಂದ ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇಂತಹ ಮಾತುಗಳನ್ನು ಹಿರಿಯರು ಹೇಗೆ ಹೇಳುತ್ತಾರೆ? ಇಂತಹ ಹೇಳಿಕೆ ಅಸಮರ್ಥನೀಯ. ಅತ್ಯಾಚಾರ ಘೋರ ಅಪರಾಧ. ಈ ಹೇಳಿಕೆಯನ್ನು ನಾನು ಹೃದಯದಿಂದ ಖಂಡಿಸುತ್ತೇನೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ರಮೇಶ್ ಕುಮಾರ್ ಗುರುವಾರ ಸದನದಲ್ಲಿ “ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಿ” ಎಂದು ಹೇಳಿದ್ದರು. ಈ ಒಂದು ಹೇಳಿಕೆ ವಿವಾದಕ್ಕೆ ತಿರುಗಿದಾಗ ಎಚ್ಚೆತ್ತುಕೊಂಡ ರಮೇಶ್ ಕುಮಾರ್ ಕೂಡಲೇ ಅವರು ಟ್ವೀಟ್ ಮಾಡಿ ಕ್ಷಮೆ ಕೋರಿದರು.






