ಬುಧವಾರ ತಮಿಳುನಾಡಿನ ಕೂನೂರು ಬಳಿ ಭಾರತೀಯ ಸೇನೆಗೆ ಸೇರಿದ್ದ Mi-17V5 ಹೆಲಿಕಾಪ್ಟರ್ ದುರಂತದಿಂದ ಮೃತಪಟ್ಟ 13 ಜನರ ಮೃತದೇಹಗಳನ್ನು ದೆಹಲಿಗೆ ರವಾನೆ ಮಾಡಲಾಗುತ್ತಿದ್ದು ವಿಮಾನ ನಿಲ್ಧಾನಕ್ಕೆ ರಸ್ತೆ ಮೂಲಕ ಕೊಂಡೊಯ್ಯಲಾಗುತ್ತಿದ್ದ ದಾರಿ ಮಧ್ಯೆ ಅಚಾತುರ್ಯವೊಂದು ನಡೆದಿದೆ.
ಹೊಸೂರಿನಿಂದ ಸೂಲೂರಿನ ಸೇನಾ ನೆಲೆಗೆ ಆಂಬ್ಯುಲೆನ್ಸ್‌ನಲ್ಲಿ ಮೃತ ದೇಹಗಳನ್ನು ಸಾಗಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ಒಂದು ಗುಡ್ಡಕ್ಕೆ ಡಿಕ್ಕಿ ಹೊಡೆದಿದೆ ಘಟನೆ ನಡೆದಿದ್ದು. ಈ ಅಪಘಾತದಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಈ ವೇಳೆ ಹಿಂಬದಿ ಬರುತ್ತಿದ್ದ ಯೋಧರು ವಾಹನ ತಕ್ಷಣವೇ ಎಚ್ಚೆತ್ತುಕೊಂಡು ಹಿಂದೆ ಬರುತ್ತಿದ್ದ ಖಾಲಿ ವಾಹನದಲ್ಲಿ ಮೃತದೇಹಗಳನ್ನು ಸಾಗಿಸಿದ್ದಾರೆ.