• Home
  • About Us
  • ಕರ್ನಾಟಕ
Wednesday, January 28, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

“ಡೀಪ್‌ ಫ್ರೀಜರ್‌ನಲ್ಲಿʼʼ ಕಾಂಗ್ರೆಸ್‌; ಮಮತಾ ಬ್ಯಾನರ್ಜಿ ಸರಣಿ ಟೀಕೆ

ಪ್ರತಿಧ್ವನಿ by ಪ್ರತಿಧ್ವನಿ
December 3, 2021
in ದೇಶ, ರಾಜಕೀಯ
0
“ಡೀಪ್‌ ಫ್ರೀಜರ್‌ನಲ್ಲಿʼʼ ಕಾಂಗ್ರೆಸ್‌; ಮಮತಾ ಬ್ಯಾನರ್ಜಿ ಸರಣಿ ಟೀಕೆ
Share on WhatsAppShare on FacebookShare on Telegram
ರಾಷ್ಟ್ರ ರಾಜಕಾರಣದಲ್ಲಿ ಸದಾ ಚಾಲ್ತಿಯಲ್ಲಿರುವ ಹೆಸರೆಂದರೆ ಅದು ತೃಣಮೂಲ ಕಾಂಗ್ರೆಸ್ನ ಸಂಸ್ಥಾಪಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.  ಸದಾ ಬಿಜೆಪಿ ಮತ್ತು  ಮೋದಿ-ಷಾ ಜೋಡಿಯ ವಿರುದ್ದ ಕಿಡಿಕಾರುತ್ತಿದ್ದ ಬ್ಯಾನರ್ಜಿ  ಕಳೆದ ಒಂದು ತಿಂಗಳಿನಿಂದ  ಕಾಂಗ್ರೆಸ್ ವಿರುದ್ದ ಟೀಕಾಪ್ರಹಾರ  ನಡೆಸುತ್ತಿದ್ದು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. 
ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದ ಮಮತಾ ಅನಿವಾರ್ಯ ಕಾರಣಗಳಿಂದಾಗಿ ಕಾಂಗ್ರೆಸ್ನಿಂದ ಅಂತರವನ್ನ ಕಾಯ್ದುಕೊಂಡು ಕಾಂಗ್ರೆಸ್ಗೆ ಸೆಡ್ಡು ಹೊಡೆದು ಬಂಗಾಳದಲ್ಲಿ ತಮ್ಮದೇ ಪಕ್ಷವನ್ನ ಸ್ಥಾಪಿಸಿದ್ದರು. ಅವರು ಕಾಂಗ್ರೆಸ್ಗಿಂತ ವಿರೋಧ ಪಕ್ಷದ ಪರ್ಯಾಯ ನಾಯಕಿ ಎಂಬುದನ್ನ ನಿರೂಪಿಸಲು ಹೊರಟಂತ್ತಿದೆ. 

ಪಕ್ಷದ ಮುಖವಾಣಿ ʻಜಾಗೋ ಬಾಂಗ್ಲಾʼ ಪತ್ರಿಕೆಯಲ್ಲಿ ಶುಕ್ರವಾರ ಪ್ರಕಟವಾಗಿರುವ ಲೇಖನದ ಪ್ರಕಾರ, ಕಾಂಗ್ರೆಸ್ ʻಡೀಪ್ ಫ್ರೀಜ್ʼ ಆಗಿ ಹೋಗಿದೆ ದೇಶದ ಎಲ್ಲಾ ವಿರೋಧ ಪಕ್ಷಗಳು ಸದ್ಯ ಖಾಲಿ ಇರುವ ವಿರೋಧ ಪಕ್ಷ ಸ್ಥಾನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯತ್ತ ನೋಡುತ್ತಿವೆ ಎಂದು ವರದಿ ಮಾಡಿದೆ. ಈ ಒಂದು ಸುದ್ದಿ ಈಗ ರಾಷ್ಟ್ರ ರಾಜಕಾರಣದಲ್ಲಿ ವ್ಯಾಪಕ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. 

ತೃಣಮೂಲ ಕಾಂಗ್ರೆಸ್ ಪಶ್ಷಿಮ ಬಂಗಾಳದಲ್ಲಿ ತನ್ನ ನೆಲೆಯನ್ನ ವಿಸ್ತರಿಸಿದಂತೆಯೇ ದೇಶಾದಂತ್ಯ ತನ್ನ ನೆಲೆಯನ್ನು ವಿಸ್ತರಿಸಲು ಯೋಜನೆ ರೂಪಿಸಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಮುಂದಿನ ವರ್ಷ ಚುನಾವಣೆ ನಡೆಯಲ್ಲಿರುವ ಮೇಘಾಲಯ ಮತ್ತು ಗೋವಾದಲ್ಲಿ ಈಗಾಗಲೇ ಒಂದು ಸುತ್ತು ಕಾಂಗ್ರೆಸ್ ಮತ್ತು ಅಲ್ಲಿನ ಪ್ರಾದೇಶಿಕ ಪಕ್ಷದ ನಾಯಕರನ್ನ ಬರಮಾಡಿಕೊಂಡಿರುವುದು. ಮೇಘಾಲಯದಲ್ಲಿ ಇತ್ತೀಚಿಗೆ ಮೇಘಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ  ಸೇರಿದಂತೆ ಕಾಂಗ್ರೆಸ್ನ 17 ಶಾಸಕರ ಪೈಕಿ 12 ಶಾಸಕರನ್ನು ತನ್ನತ ಸೆಳೆದುಕೊಂಡಿರುವುದು. ಗೋವಾದಲ್ಲಿ ಮಾಜಿ ಮುಖ್ಯಮಂತ್ರಿ ಲುಯಿಝಿನ್ಹೊ ಫಲೈರೊ,ಹರಿಯಾಣ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಅಶೋಕ್‌ ತನ್ವರ್‌ ಮತ್ತು ಮಾಜಿ ಕ್ರಿಕೆಟಿಗ-ರಾಜಕಾರಣಿ ಕೀರ್ತಿ ಅಜಾದ್‌ ಸೇರಿದಂತೆ ಕಾಂಗ್ರೆಸ್‌ನ ಅನೇಕ ನಾಯಕರನ್ನು ತನ್ನ ಪಕ್ಷಕ್ಕೆ ಬರ ಮಾಡಿಕೊಂಡಿದೆ. ಅದಕ್ಕೆ ಮುಖ್ಯ ಕಾರಣ ಚುನವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ದೀದಿ ಜೊತೆಗೆ ಕೈ ಜೋಡಿಸಿರುವುದು. ಇದು ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಮೋಡಿ ಮಾಡಿತ್ತು ಸಹ. 

ಇತ್ತೀಚಿಗೆ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಕೂಡ ಕಾಂಗ್ರೆಸ್‌ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಶಾಂತ್‌, ಕಾಂಗ್ರೆಸ್‌ನಲ್ಲಿ ನಾಯಕತ್ವವು ʻವ್ಯಕ್ತಿಯ ದೈವಿಕ ಹಕ್ಕಲ್ಲʼ ಎಂದು ಹೇಳಿದ್ದಾರೆ. ವಿರೋಧ ಪಕ್ಷದ ನಾಯಕತ್ವವನ್ನ ಪ್ರಜಾಸತಾತ್ಮಕವಾಗಿ ನಿರ್ಧರಿಸಬೇಕು ಎಂದು ಕರೆ ನೀಡಿದ್ದಾರೆ. 

ಪಕ್ಷದ ಮುಖವಾಣಿಯಲ್ಲಿ ಪ್ರಶಾಂತ್‌ರವರ ಟ್ವೀಟ್‌ ಬಗ್ಗೆ ಒತ್ತಿ ಹೇಳಲಾಗಿದೆ. ಚುನಾವಣಾ ತಂತ್ರಗಾರಷ್ಟೇ ಅಲ್ಲ ಕಾಂಗ್ರೆಸ್‌ ನಾಯಕರೇ ಸ್ವತಃ ಪಕ್ಷದ ನಾಯಕತ್ವವನ್ನೆ ಟೀಕಿಸುತ್ತಿದ್ದಾರೆ ಎಂದು ಹೇಳಿದೆ. 

ಬಿಜೆಪಿ ವಿರುದ್ದ ಹೋರಾಡಲು ತೃಣಮೂಲ ಕಾಂಗ್ರೆಸ್‌ ಬದ್ಧವಾಗಿದೆ ಮತ್ತು ಕಾಂಗ್ರೆಸ್‌ ಡೀಪ್‌ ಫ್ರೀಜರ್‌ನಲ್ಲಿದೆ ಎಂದು ಪ್ರತಿಪಾದಿಸಿದೆ. ಕಾಂಗ್ರೆಸ್‌ ಸದ್ಯ ದೇಶದಲ್ಲಿ ನಿಷ್ಪ್ರಯೋಜಕ ಶಕ್ತಿ ಅವರಿಗೆ ಹೋರಾಡುವ ಉತ್ಸಾಹವಿಲ್ಲ ಮತ್ತು ಬಿಜೆಪಿ ವಿರುದ್ದ ಹೋರಾಡಲು ಶಕ್ತಿಯು ಸಹ ಇಲ್ಲ. ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್‌ ಪಕ್ಷ ಎಷ್ಟು ಕುಗ್ಗಿದೆ ಎಂದರೆ ಅವರು ಪ್ರಮುಖ ವಿರೋಧ ಪಕ್ಷ ಯುಪಿಎಯನ್ನು ಪುನಃ ಕಟ್ಟಲು ಶಕ್ತರಾಗಿಲ್ಲ ಎಂದು ಹೇಳಿದೆ. 

ಇತ್ತೀಚಿಗೆ ರಾಷ್ಟ್ರೀಯ ಕಾಂಗ್ರೆಸ್‌ ನಾಯಕ ಶರದ್‌ ಪವಾರ್‌ರನ್ನು ಮುಂಬೈನಲ್ಲಿ ಭೇಟಿ ಮಾಡಿದ ದೀದಿ ʻಯುಪಿಎ ಎಂದರೇನು? ಅಸಲಿಗೆ ಯುಪಿಎ ಅಸ್ಥಿತ್ವದಲ್ಲಿದೆಯೇʼ ಎಂದು ಟೀಕಿಸಿದ್ದರು. 

ದೇಶದಲ್ಲಿ ಪ್ರಸ್ತುತ ಪರ್ಯಾಯ ವಿರೋಧ ಪಕ್ಷದ ಅಗತ್ಯವಿದೆ ಮತ್ತು ಆ ಸ್ಥಾನವನ್ನ ಮಮತಾ ಬ್ಯಾನರ್ಜಿಗೆ ನೀಡಿವೆ. ಏಕೆಂದರೆ ಅವರು ದೇಶದ ಪ್ರಮುಖ ವಿರೋಧ ಪಕ್ಷದ ಮುಖವಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. 

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕರು ಮಮತಾ ಬ್ಯನರ್ಜಿ ಮತ್ತು ಪ್ರಶಾಂತ ಕಿಶೋರ್‌ ವಿರುದ್ದ ತೀವ್ರ ವಾಗ್ದಾಳಿಯನ್ನ ನಡೆಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ವಕ್ತಾರರಾದ ಪವನ್‌ ಖೇರಾ ಮತ್ತು ಸುಪ್ರಿಯಾ ಶ್ರೀನಾಟೆ ʻರಾಹುಲ್‌ ಗಾಂಧಿ ಎಂದಿಗೂ ಫ್ಯಾಸಿಸ್ಟಗಳನ್ನು ಸೇರುವುದಿಲ್ಲʼ ಎಂಬುದನ್ನು ದೇಶದ ಜನರು ಅರಿತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. 




The people of this country can be absolutely sure of one thing – there is ONLY one man who will NEVER join the fascists, his name is Rahul Gandhi.

Can the same be said about anyone else including the TMC which has been with the divisive BJP repeatedly? NO

— Supriya Shrinate (@SupriyaShrinate) December 2, 2021
ADVERTISEMENT
Tags: "Congress In Deep Freezer": Trinamool Says Mamata Banerjee Is The One
Previous Post

ಓಮಿಕ್ರಾನ್ ಎಂಬುದು ಒಂದು ಪಿತೂರಿಯೇ, ಹಗರಣವೇ?: ಓಮಿಕ್ರಾನ್ ಪತ್ತೆಯಾದ ಒರ್ವ ಬೆಂಗಳೂರಿಗನಿಗೆ ಇತ್ತೀಚಿನ ಟ್ರಾವೆಲ್ ಹಿಸ್ಟರಿಯೇ ಇಲ್ಲ; ಸಚಿವ ಸುಧಾಕರ್ ಗೇಮ್ ಆಡುತ್ತಿದ್ದಾರೆಯೇ?

Next Post

ಓಮಿಕ್ರಾನ್ ರೂಪಾಂತರಿ ಹೊಂದಿದ ಪ್ರಯಾಣಿಕ ವಿದೇಶಕ್ಕೆ: ತನಿಖೆಗೆ ಆದೇಶಿಸಿದ ಸರ್ಕಾರ

Related Posts

ಐರೋಪ್ ಒಕ್ಕೂಟ- ಭಾರತ ಮುಕ್ತ ಮಾರುಕಟ್ಟೆ ಒಪ್ಪಂದ
ದೇಶ

ಐರೋಪ್ ಒಕ್ಕೂಟ- ಭಾರತ ಮುಕ್ತ ಮಾರುಕಟ್ಟೆ ಒಪ್ಪಂದ

by ಪ್ರತಿಧ್ವನಿ
January 28, 2026
0

ನವದೆಹಲಿ: ವಿಶ್ವದ ಎರಡನೆಯ ಅತಿದೊಡ್ಡ ಆರ್ಥಿಕತೆಯಾಗಿರುವ ಐರೋಪ್ಯ ಒಕ್ಕೂಟದೊಂದಿಗೆ, ವಿಶ್ವದ ನಾಲ್ಕನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾದ ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ಈ...

Read moreDetails
ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಡಿ.ಕೆ. ಶಿವಕುಮಾರ್ ಗುಡ್‌ ನ್ಯೂಸ್..!

ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಡಿ.ಕೆ. ಶಿವಕುಮಾರ್ ಗುಡ್‌ ನ್ಯೂಸ್..!

January 27, 2026
ಟ್ರಂಪ್‌ಗೆ ಸೆಡ್ಡು ಹೊಡೆದ ಭಾರತ : ಯುರೋಪ್‌ ಒಕ್ಕೂಟದೊಂದಿಗೆ ಮೋದಿಯ ಒಪ್ಪಂದಗಳೇನು..?

ಟ್ರಂಪ್‌ಗೆ ಸೆಡ್ಡು ಹೊಡೆದ ಭಾರತ : ಯುರೋಪ್‌ ಒಕ್ಕೂಟದೊಂದಿಗೆ ಮೋದಿಯ ಒಪ್ಪಂದಗಳೇನು..?

January 27, 2026
U-19 World Cup : ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ ವೈಭವ್‌ ಸೂರ್ಯವಂಶಿ : ಅರ್ಧ ಶತಕ ಪೊರೈಸಿದ 14ರ ಹರೆಯದ ಪೋರ..!

U-19 World Cup : ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ ವೈಭವ್‌ ಸೂರ್ಯವಂಶಿ : ಅರ್ಧ ಶತಕ ಪೊರೈಸಿದ 14ರ ಹರೆಯದ ಪೋರ..!

January 27, 2026
ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

January 27, 2026
Next Post
ಓಮಿಕ್ರಾನ್ ಭೀತಿ : ಸರ್ಕಾರ ಕೈಗೊಳ್ಳಬೇಕಾದ ಮತ್ತು ಕೈಗೊಳ್ಳಬಾರದ ಕ್ರಮಗಳು

ಓಮಿಕ್ರಾನ್ ರೂಪಾಂತರಿ ಹೊಂದಿದ ಪ್ರಯಾಣಿಕ ವಿದೇಶಕ್ಕೆ: ತನಿಖೆಗೆ ಆದೇಶಿಸಿದ ಸರ್ಕಾರ

Please login to join discussion

Recent News

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

by ನಾ ದಿವಾಕರ
January 28, 2026
Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!
Top Story

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

by ಪ್ರತಿಧ್ವನಿ
January 28, 2026
ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ
Top Story

ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 27, 2026
ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ: 1.37 ಕೋಟಿ ದೋಚಿ ಸಿಬ್ಬಂದಿ ಎಸ್ಕೇಪ್‌
Top Story

ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ: 1.37 ಕೋಟಿ ದೋಚಿ ಸಿಬ್ಬಂದಿ ಎಸ್ಕೇಪ್‌

by ಪ್ರತಿಧ್ವನಿ
January 27, 2026
ಇನ್ನುಂದೆ ಗ್ರಾಮ ಪಂಚಾಯತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿಸಿಎಂ ಡಿ.ಕೆ ಶಿವಕುಮಾರ್
Top Story

ಇನ್ನುಂದೆ ಗ್ರಾಮ ಪಂಚಾಯತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿಸಿಎಂ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 27, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬಿಲ್ಡರ್ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂ. ವಸ್ತುಗಳ ದರೋಡೆ

ಬಿಲ್ಡರ್ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂ. ವಸ್ತುಗಳ ದರೋಡೆ

January 28, 2026
ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada