ಕಳೆದ ಎರಡು ವಾರಗಳಿಂದ ನಾದಬ್ರಹ್ಮ ಹಂಸಲೇಖ ಅವರ ಹೇಳಿಕೆಯ ಕುರಿತು ಕಿಡಿಕಾರುತ್ತಿರುವವರ ವಿರುದ್ಧ ಟ್ವೀಟ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿರುವ ನಟ ಚೇತನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ನನ್ನನ್ನು ಜೈಲಿಗೆ ತಳ್ಳಲು ಪ್ರಯತ್ನಿಸಿದ ಬ್ರಾಹ್ಮಣ ಲಾಬಿಗಳೇ ಇಂದು ಹಂಖಲೇಖರಿಗೂ ಕಿರುಕುಳ ನೀಡುತ್ತಿದ್ದಾರೆ ಆದರು ಯಾವುದೇ ರಾಜಕಾರಣಗಳು ನಮಗೆ ಬೆಂಬಲ ನೀಡಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಪೇಸ್ ಬುಕ್ ಪೋಸ್ಟ್ ಮಾಡಿರು ನಟ ಚೇತನ್, 6 ತಿಂಗಳ ಹಿಂದೆ ನನ್ನನ್ನು ಜೈಲಿಗೆ ತಳ್ಳಲು ಬ್ರಾಹ್ಮಣ ಲಾಬಿಗಳು ಪ್ರಯತ್ನಿಸಿದಾಗ, ಕರ್ನಾಟಕದ ಮುಖ್ಯವಾಹಿನಿಯಲ್ಲಿರುವ ಯಾವುದೇ ಪಕ್ಷದ ರಾಜಕಾರ್ಣಿಯೂ/ಸದಸ್ಯನೂ ನನಗೆ ಬೆಂಬಲ ನೀಡಲಿಲ್ಲ ಎಂದಿದ್ದಾರೆ.
ಇಂದು, ಶ್ರೀ ಹಂಸಲೇಖ ಅವರು ಕೂಡ ಅದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ, ಜೆ-ಸಿ-ಬಿಯ (ಜೆಡಿಎಸ-ಕಾಂಗ್ರೆಸ್-ಬಿಜೆಪಿಯ) ಎಲ್ಲಾ ರಾಜಕಾರಣಿಗಳು ಸುಮ್ಮನಾಗಿದ್ದಾರೆ ಎಂದಿದ್ದಾರೆ.
ಬುದ್ಧ – ಬಸವ – ಅಂಬೇಡ್ಕರ್ – ಪೆರಿಯಾರ್ ಕಾರ್ಯಕರ್ತರಾದ ನಾವುಗಳು ಮಾತ್ರ ಪ್ರಜಾಪ್ರಭುತ್ವವನ್ನು ಮತ್ತು ವಾಕ್ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಟ ಚೇತನ್, ನನ್ನನ್ನು ಯಾವ ಸಮುದಾಯ ಟಾರ್ಗೆಟ್ ಮಾಡಿತ್ತೊ ಅದೇ ಸಮುದಾಯದ ಲಾಬಿಗಳು ಇಂದು ಹಂಸಲೇಖ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ನನಗೆ ಯಾವ ಅಡಿಯಲ್ಲಿ ಪೋಲಿಸ್ ದೂರು ದಾಖಲಾಗಿತ್ತೊ ಅದೇ ಅಡಿಯಲ್ಲಿ ಹಂಸಲೇಖ ಅವರಿಗೂ ಆಗಿದೆ. ಅದೇ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಮೂರು ವಾರಗಳ ಹಿಂದೆ ನಾದಬ್ರಹ್ಮ ಮೈಸೂರಿನ ಕಾರ್ಯಕ್ರವೊಂದರಲ್ಲಿ ದಲಿತರು ಮತ್ತು ಬಲಿತರ ನಡುವಿನ ವ್ಯತ್ಯಾಸ ಮತ್ತವರ ಊಟದ ಪದ್ದತಿ ಪಂಕ್ತಿ ಭೇದದ ಬಗ್ಗೆ ಮಾತಾಡಿದ್ದರು. ಈ ಹೇಳಿಕೆಯನ್ನು ಸಂಪೂರ್ಣವಾಗಿ ಪೇಜಾವರ ಶ್ರೀಗಳಿಗೆ ತಳುಕು ಹಾಕಿ ಕ್ಷಮೆಯಾಚಿಸುವಂತೆ ಅನೇಕ ಹಿಂದು ಸಂಘಟನೆಗಳಿ ಮತ್ತು ಬ್ರಾಹ್ಮಣ ವೇದಿಕೆಗಳು ಆಗ್ರಹಿಸಿದ್ದರು. ಇದನ್ನೆಲ್ಲ ನೋಡಿದ ಹಂಸಲೇಖ ಅವರು ಸಾಮಾಜಿಕ ಜಾಲತಾಣದಲ್ಲೇ ಕ್ಷಮೆಯಾಚಿಸಿದ್ದರು ಇದಾದ ನಂತರವು ಕೂಡ ಅವರ ವಿರುದ್ಧ ಪೋಲಿಸ್ ದೂರು ಮತ್ತು ಮಟಕ್ಕೆ ಬಂದು ಕ್ಷಮೆ ಕೇಳುವಂತೆ ಕಿರುಕುಳ ನೀಡಲಾಗಿತ್ತು ಈ ಕುರಿತು ನಟ ಚೇತನ್ ಸೇರಿದಂತೆ ಅನೇಕ ಚಿಂತಕರು ಮತ್ತು ಸಮಾಜಿಕ ಕಾರ್ಯಕರ್ತರು ಹಂಸಲೇಕರನ್ನು ಬೆಂಬಲಿಸಿ ಪೇಸ್ ಬುಕ್ ಪೋಸ್ಟ್ ಮಾಡಿ, ಪ್ರತಿಭಟನೆ ಕೂಡ ಮಾಡಿದ್ದರು.