ಚಾಮುಂಡೇಶ್ವರಿ ಮತದಾರರಿಗೆ ಸಿದ್ದರಾಮಯ್ಯ ರೇಗಿದ ವಿಚಾರದ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ. ಜಿ.ಟಿ.ದೇವೇಗೌಡರ ಜೊತೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಳ್ಳುತ್ತಾರೆ ಅವರನ್ನು ಅಪ್ಪಿಕೊಳ್ಳುತ್ತಾರೆ, ಆದರೆ ಪಕ್ಷಕ್ಕಾಗಿ ದುಡಿದ ಕಾಂಗ್ರೆಸ್ ಕಾರ್ಯಕರ್ತರಿಗೆ ರೇಗುತ್ತಾರೆ. ಇದು ನನಗೆ ನಿಜಕ್ಕೂ ಸೋಜಿಗವೆನಿಸುವುದು. ನಾವು ಹಲವು ಬಾರಿ ಚುನಾವಣೆಯಲ್ಲಿ ಸೋತಿದ್ದೇವೆ. ನಾವೆಂದೂ ಕೂಡ ಪಕ್ಷದ ಕಾರ್ಯಕರ್ತರನ್ನು ಸೋಲಿಗೆ ಹೊಣೆ ಮಾಡಿಲ್ಲ, ಕಾರ್ಯಕರ್ತರನ್ನ ಸೋಲಿಸಿದ್ದೀರಿ ಎಂದು ರೇಗಾಡಿಲ್ಲ, ನಮ್ಮ ಕೆಲವು ತಪ್ಪುಗಳಿಂದ ಸೋಲುಂಟಾಗುತ್ತದೆ. ಅದಕ್ಕೆ ಕಾರ್ಯಕರ್ತರನ್ನ ದೂರುವುದು ಸರಿಯಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಬಗ್ಗೆ ಡಿಕೆಶಿ ಮಹತ್ವದ ಸುದ್ದಿಗೋಷ್ಠಿ .!
https://youtu.be/DV6zm-FcZ-0?si=ejt260LqgwSY1fdS
Read moreDetails