ಗುಜರಾತಿನ ಅದಾನಿ ಮುಂದ್ರಾ ಬಂದರಿನಲ್ಲಿ ವಿದೇಶದಿಂದ ಬಂದಿದೆ ಎನ್ನಲಾದ ಹಡಗಿನಲ್ಲಿ ವಿಕಿರಣ ವಸ್ತುಗಳು (Radio Active Elements) ಕಂಡು ಬಂದ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಿಕಿರಣ ವಸ್ತುಗಳು ಇರುವ ಕಂಟೈನರ್ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕಂಟೈನರ್ಗಳು ಅಪಾಯಕರಿ ವಸ್ತುಗಳನ್ನು ಹೊಂದಿದ್ದವು ಎಂದು ಮುಂದ್ರಾ ಬಂದರಿನ ಮೇಲ್ವಿಚಾರಣೇ ನಡೆಸುತ್ತಿರುವ ಅದಾನಿ ಸಂಸ್ಥೆ ಹೇಳಿದೆ.
ಹಡಗಿನಲ್ಲಿದ್ದ ಸರಕು ಅಪಾಯಕಾರಿಯಲ್ಲದ ವಸ್ತುಗಳನ್ನು ಸಾಗಿಸುತ್ತಿದ್ದೆ ಎಂದು ಮೊದಲು ಪಟ್ಟಿ ಮಾಡಲಾಗಿತ್ತು. ಕಂಟೈನರ್ ಅನ್ನು ಪರಿಶೀಲಿಸಿದಾಗ 7 ವಿಕಿರಣಶೀಲ ವಸ್ತುಗಳನ್ನು ಹೊಂದಿದ್ದನ್ನು ಕಂಡು ಬಂದ ಕಾರಣ ಅದನ್ನು ತಕ್ಷಣವೇ ವಶಕ್ಕೆ ಪಡೆಯಲಾಯಿತ್ತು ಎಂದು ತಿಳಿಸಿದೆ.
ಸರಕು ತುಂಬಿದ ಹಡಗು ಮುಂದ್ರಾ ಬಂದರಿಗೆ ಅಥವಾ ಭಾರತದ ಯಾವುದೇ ಬಂದರುಗಳಿಗೆ ಸಾಗಿಸುವ ಉದ್ಧೇಶವಿರಲಿಲ್ಲ. ಆದರೆ, ಹಡಗು ಕರಾಚಿಯಿಂದ ಶಾಂಘಗೆ ಹಿಂತಿರುಗುವಾಗ ಮುಂದ್ರಾ ಬಂದರಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ಸಂಸ್ಥೆಯು ಕಾರ್ಯಾಚರಣೆಗೆ ಕಸ್ಟಮ್ಸ್ ಮತ್ತು ಗುಪ್ತಚರ ಇಲಾಖೆಗೆ ಎಲ್ಲಾ ತರಹದ ಸಹಾಯವನ್ನು ಮಾಡಿರುವುದಾಗಿ ತಿಳಿಸಿದೆ. ತ್ವರಿತ ಕ್ರಮವನ್ನು ತೆಗೆದುಕೊಂಡ ಕಸ್ಟಮ್ಸ್ ಅಧಿಕಾರಿಗಳಿಗೆ ಧನ್ಯಾವಾದವನ್ನು ಸಂಸ್ಥೆ ತಿಳಿಸಿದೆ.
ಸುಮಾರು ಎರಡು ತಿಂಗಳ ಹಿಂದೆ ಅದಾನಿ ಸಂಸ್ಥೆಯ ಮೇಲ್ವಿಚಾರಣೆಯಲ್ಲಿರುವ ಬಂದರಿನಲ್ಲಿ ಸುಮಾರು 21 ಸಾವಿರ ಕೋಟಿ ರೂಪಾಯಿ ಮೌಲ್ಯದ ಮೂರು ಟನ್ ಹೆರಾಯಿನ್ಅನ್ನು ಕಸ್ಟಮ್ಸ್ ಅಧಿಕಾರಿಗಳು ವಿಶೇಷ ಕಾರ್ಯಚರಣೆ ನಡೆಸಿ ವಶಕ್ಕೆ ಪಡೆದಿದ್ದರು.
ಈ ಪ್ರಕರಣದ ತನಿಖೇಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಗೆ ವಹಿಸಲಾಗಿತ್ತು ಮತ್ತು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿರುದ್ಧ ಕಾನೂನುಬಾಹಿರ ತಡೆ ಚಟುವಟಿಕೆ ಕಾಯ್ದೆಯನ್ನು ತನಿಖಾ ಸಂಸ್ಥೆ ಜಾರಿಗೊಳಿಸಿತ್ತು.

ಅದಾನಿ ಪೋರ್ಟ್ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ತನ್ನಗೆ ಬಂದರನ್ನು ನಡೆಸುವ ಅಧಿಕಾರವಷ್ಟೇ ಇರುವುದು ಬಂದರಿನ ಟರ್ಮಿನಲ್ಗಳ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಕ್ರಮ ಜರುಗಿಸುವ ಯಾವುದೇ ಅಧಿಕಾರವನ್ನ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.