• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

3 ದಿನಗಳ ಬೆಂಗಳೂರು ಟೆಕ್ ಸಮ್ಮಿಟ್ ಗೆ ತೆರೆ : ಆವಿಷ್ಕಾರ.. ಡಿಜಿಟಲ್..‌ ನವೋದ್ಯಮಕ್ಕೆ ರಾಜ್ಯದಲ್ಲಿ ಹೆಚ್ಚಿದ ಆಧ್ಯತೆ!

ಕರ್ಣ by ಕರ್ಣ
November 19, 2021
in ಕರ್ನಾಟಕ, ದೇಶ
0
3 ದಿನಗಳ ಬೆಂಗಳೂರು ಟೆಕ್ ಸಮ್ಮಿಟ್ ಗೆ ತೆರೆ : ಆವಿಷ್ಕಾರ.. ಡಿಜಿಟಲ್..‌ ನವೋದ್ಯಮಕ್ಕೆ ರಾಜ್ಯದಲ್ಲಿ ಹೆಚ್ಚಿದ ಆಧ್ಯತೆ!
Share on WhatsAppShare on FacebookShare on Telegram

ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಬೆಂಗಳೂರು ಟೆಕ್‌ ಸಮ್ಮಿಟ್‌ ಇಂದಿಗೆ ಮುಕ್ತಾಯಗೊಂಡಿದೆ. ತಾಂತ್ರಿಕವಾಗಿ ಮತ್ತು ಅವಿಷ್ಕಾರದ ನೆಲೆಗಟ್ಟಿನಲ್ಲಿ ಕರ್ನಾಟಕವನ್ನು ಅಭಿವೃದ್ಧಿ ಪಡಿಸುವ ಧ್ಯೇಯದೊಂದಿಗೆ ಪ್ರತಿ ವರ್ಷ ನಡೆಯುವ ಬೆಂಗಳೂರು ತಂತ್ರಜ್ಞಾನ ಶೃಂಗ ಈ ಬಾರಿಯೂ ಬಹಳ ಅದ್ದೂರಿಯಾಗಿ, ರಚನಾತ್ಮಕವಾಗಿ ನಡಿದಿದೆ.

ADVERTISEMENT

ನವೆಂಬರ್‌ 17ರಂದು ಆದಿಯಾಗಿ ಇಂದು ಕೊನೆಗೊಂಡ ಬೆಂಗಳೂರು ಟೆಕ್‌ ಸಮ್ಮಿಟ್ ತನ್ನ 24ನೇ ಆವೃತ್ತಿಯ ಮತ್ತೊಂದು ಅಧ್ಯಾಯವನ್ನು ಮುಗಿಸಿದೆ. ದೇಶದ ಐಟಿ ಬಿಟಿ  ರಾಜಧಾನಿಯಾಗಿರುವ ಬೆಂಗಳೂರು ಪ್ರತಿ ಬಾರಿ ಜಗತ್ತಿನ ಹಲವು ಐಟಿ ಬಿಟಿ ತಾಂತ್ರಿಕ ಕಂಪೆನಿಗಳು ಭಾಗವಹಿಸಿದ್ದವು. ನಗರದ ಖಾಸಗಿ ಹೋಟೆಲ್ ನಲ್ಲಿ ಕಳೆದ ಮೂರು ದಿನಗಳಿಂದ ನಡೆದ ಈ ಶೃಂಗದಲ್ಲಿ ಒಟ್ಟು 75 ಪೂರ್ವ ನಿರ್ಧರಿತ ಕಾರ್ಯಾಗಾರ ಹಾಗೂ 18 ಆಧ್ಯತೆ ಮೇರೆಗೆ ಕಾರ್ಯಾಗಾರ ನಡೆಸಲಾಗಿದೆ. ಇದರ ಜೊತೆಗೆ ಶೃಂಗದಲ್ಲಿ 350 ಪ್ರಮುಖರಿಂದ ಭಾಷಣ ನಡೆದಿದೆ. ಒಟ್ಟು 48 ದೇಶ ಈ ಬಾರಿಯ ಸಮ್ಮಿಟ್ ನಲ್ಲಿ ಭಾಗಿಯಾಗಿದೆ. ಮೂರು ದಿನಗಳ ಕಾರ್ಯಾಗಾರದಲ್ಲಿ 211 ಸ್ಟಾರ್ಟ್ ಅಪ್ಸ್ ಪಾಲ್ಗೊಂಡಿದೆ. ಅಲ್ಲದೆ ಕೇವಲ ಬೆಂಗಳೂರಿಗೆ ಮಾತ್ರ ಒತ್ತು ಕೊಡದೆ ಈ ಬಿಟಿಎಸ್‌ ಅಂಗವಾಗಿ ರಾಜ್ಯ ಹುಬ್ಬಳ್ಳಿ, ಮಂಗಳೂರು ಹಾಗೂ ಮೈಸೂರಿನಲ್ಲೂ ಕಾರ್ಯಾಗಾರ ಏರ್ಪಡಿಸಲಾಗಿದ್ದು ರಚನಾತ್ಮಕವಾಗಿ ನಡೆದಿದೆ. 

ಈ ಬಾರಿಯ ಟೆಕ್ ಸಮ್ಮಿಟ್ ನಿಂದಾಗಿ ಉದ್ಯೋಗಗಳು ಸೃಷ್ಟಿಯಾಗುವ ಭರವಸೆಯನ್ನು ಐಟಿ ಬಿಟಿ ಸಚಿವ ಅಶ್ವಥ್‌ ನಾರಾಯಣ್‌ ನೀಡಿದ್ದಾರೆ. ಈ ಶೃಂಗದಿಂದ ಬೆಂಗಳೂರಿನಲ್ಲಿಮಾತ್ರ 4 ಲಕ್ಷ ಉದ್ಯೋಗಗಳು ಬೇಗನೆ ತೆರೆದುಕೊಳ್ಳಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗದಲ್ಲಿನ ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತೆ. ಡಿಜಿಟಲ್ & ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚೆಚ್ಚು ಬಂಡವಾಳ ಹೂಡುವ ಉದ್ದೇಶವಿದೆ. ಮುಂದಿನದ್ದು ಡಿಜಿಟಲ್ ಯುಗ, ಈಗಲೇ ನಾವು ಅದರ ಬಗ್ಗೆ ಯೋಚಿಸಿ ಕಾರ್ಯಕ್ರಮ ರೂಪಿಸಬೇಕು. ಆವಿಷ್ಕಾರ ಮತ್ತು ಸ್ಟಾರ್ಟಪ್ಸ್ ಕ್ಷೇತ್ರಕ್ಕೂ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಇಡೀ ದೇಶಕ್ಕೆ ಬೆಂಗಳೂರು ಸ್ಟಾರ್ಟ್ ಅಪ್ ರಾಜಧಾನಿ ಕೂಡ. ಹೀಗಾಗಿ ಮುಂದಿನ ದಿನಗಳಲ್ಲಿ ನವೋದ್ಯಮಕ್ಕೆ ಹೆಚ್ಚಿನ ಆಧ್ಯತೆ ಕೊಟ್ಟು ಬಂಡವಾಳ ಹೂಡಲಾಗುವುದು ಎಂದು ಸಚಿವ ಅಶ್ವಥ್‌ ನಾರಾಯಣ್ ಅಭಿಪ್ರಾಯಪಟ್ಟರು.

ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಈ ಬಾರಿ BTS ನಲ್ಲಿ ಒಪ್ಪಂದವಿಲ್ಲ.!!

ಇನ್ನು ಪ್ರತಿ ಬಾರಿಯ ಶೃಂಗದಲ್ಲಿ ಕರ್ನಾಟಕ ಹಲವು ಅಂತರಾರಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕುತ್ತಿತ್ತು. ಆದರೆ ಈ ಬಾರಿ ಯಾವುದೇ ಒಪ್ಪಂದ ಮಾಡಿಲ್ಲ. ಇದಕ್ಕೆ ಕಾರಣ, ಎಂಎಲ್‌ಸಿ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ನೀತಿ ಸಂಹಿತೆ. ಹೀಗಾಗಿ ಚುನಾವಣೆ ಮುಗಿದ ಬೆನ್ನಲ್ಲೇ ಮತ್ತೊಂದು ಸಭೆ ನಡೆಸಿ ಹಲವು ಒಪ್ಪಂದಗಳಿಗೆ ಕರ್ನಾಟಕ ಸಾಕ್ಷಿಯಾಗಲಿದೆ. ಇನ್ನು ಈ ಬಾರಿಯ ಬಿಟಿಎಸ್‌ನಿಂದಾಗಿ ಐದು ಪ್ರಮುಖ ಕಂಪೆನಿಗಳು ಕರ್ನಾಕದ ಡಿಜಿಟಲ್‌ ಹಾಗೂ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಐದು ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದೆ. ಇದು ಮುಂದಿನ ದಿನಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಭರಸವೆ ಹುಟ್ಟಿಸಿದೆ.

ಅಂದಹಾಗೆ, ಈ ಬಾರಿಯ ಬಿಎಟಿಎಸ್‌ನಲ್ಲಿ ಒಟ್ಟು 14 ಸಾವಿರ ಬ್ಯುಸಿನೆಸ್  ಮೀಟಿಂಗ್‌ಗಳು ನಡಿದಿದೆ. ಮುಂದಿನ ವರ್ಷ ಬೆಂಗಳೂರು ಟೆಕ್‌ ಸಮ್ಮಿಟ್‌ ನ 25ನೇ ಆವೃತ್ತಿಯಾಗಿರುವುದರಿಂದ ಹಿಂದೆಂದೂ ನಡೆಯದ ರೀತಿಯಲ್ಲಿ ಬಿಟಿಎಸ್‌ ಅನ್ನು ನಡೆಸಲು ಸರ್ಕಾರ ತೀರ್ಮಾನಿಸಿದೆ. ಮುಂದಿನ ಆವೃತ್ತಿಯ ಬಿಟಿಎಸ್‌ ನವೆಂಬರ್ 16, 17, 18ರಂದು ನಡೆಸಲು ಐಟಿ ಬಿಟಿ ಸಚಿವಾಲಯ ನಿರ್ಧರಿಸಿದೆ. ಒಟ್ಟಾರೆ ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆ ಈ ಬಾರಿಯೂ ಬಹಳ ಅರ್ಥಪೂರ್ಣವಾಗಿ, ಮುಂದಿನ ದಿನಗಳನ್ನು ಉಜ್ವಲವಾಗಿಸುವ ಭರಸವೆಯನ್ನು ಮೂಡಿಸಿದೆ.

Tags: BJPCongress PartyCovid 19ಆವಿಷ್ಕಾರಟೆಕ್ ಸಮ್ಮಿಟ್ಡಿಜಿಟಲ್ನವೋದ್ಯಮಬಿಜೆಪಿ
Previous Post

“ಮಾರ್ಕ್ ಮೈ ವರ್ಡ್ಸ್” : ಕೃಷಿ ಕಾನೂನುಗಳ ಕುರಿತು ರಾಹುಲ್ ಗಾಂಧಿ ಭವಿಷ್ಯ ನಿಜವಾಗಿದೆ – ವಿಡಿಯೋ ವೈರಲ್‌

Next Post

ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರೆಗೂ ವಿಧಾನಸಭೆ ಪ್ರವೇಶಿಸುವುದಿಲ್ಲ : ಚಂದ್ರಬಾಬು ನಾಯ್ಡು

Related Posts

ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?
ಕರ್ನಾಟಕ

ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?

by ಪ್ರತಿಧ್ವನಿ
May 28, 2026
0

ಕರ್ನಾಟಕ ರಾಜಕೀಯದಲ್ಲಿ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದ ಆಡಳಿತದ ಬಳಿಕ ಅಧಿಕೃತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಉಪಮುಖ್ಯಮಂತ್ರಿ...

Read moreDetails
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಮಧ್ಯಾಹ್ನ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಡಿಕೆಶಿ ಮುಂದಿನ ಸಿಎಂ ಬಹುತೇಕ ಖಚಿತ?

May 28, 2026
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

May 28, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
Next Post
ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರೆಗೂ ವಿಧಾನಸಭೆ ಪ್ರವೇಶಿಸುವುದಿಲ್ಲ : ಚಂದ್ರಬಾಬು ನಾಯ್ಡು

ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರೆಗೂ ವಿಧಾನಸಭೆ ಪ್ರವೇಶಿಸುವುದಿಲ್ಲ : ಚಂದ್ರಬಾಬು ನಾಯ್ಡು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada