• Home
  • About Us
  • ಕರ್ನಾಟಕ
Sunday, February 1, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

2023 ಚುನಾವಣೆಗೆ ತಯಾರಿ; ಜೆಡಿಎಸ್‌ನಿಂದ 10 ದಿನ ಕಾರ್ಯಾಗಾರ; ಬಿಜೆಪಿಯಿಂದ 5 ದಿನ ಜನಸ್ವರಾಜ್ ಯಾತ್ರೆ

ನಚಿಕೇತು by ನಚಿಕೇತು
November 14, 2021
in ಕರ್ನಾಟಕ, ರಾಜಕೀಯ
0
2023 ಚುನಾವಣೆಗೆ ತಯಾರಿ; ಜೆಡಿಎಸ್‌ನಿಂದ 10 ದಿನ ಕಾರ್ಯಾಗಾರ; ಬಿಜೆಪಿಯಿಂದ 5 ದಿನ ಜನಸ್ವರಾಜ್ ಯಾತ್ರೆ
Share on WhatsAppShare on FacebookShare on Telegram

ರಾಜ್ಯದಲ್ಲಿ ನಡೆದ ಉಪ ಚುನಾವಣೆಯಿಂದ ತ್ರಿಪಕ್ಷಗಳು ಪಾಠ ಕಲಿತಂತಿವೆ. ಅದರಲ್ಲೂ ಬಿಜೆಪಿ ಜೆಡಿಎಸ್ಗೆ ಈ ಸೋಲು ಭಾರೀ ಹೊಡೆತ ಕೊಟ್ಟಿದೆ. ಆ ಒಂದು ಸೋಲಿನ ಹೊಡೆತದಿಂದ ಹೊರಬರಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಮುಂದಿನ ಚುನಾವಣೆಯ ಹಿತದೃಷ್ಟಿಯಿಂದಾಗಿ, ಈಗಿನಿಂದಲೇ ಮತದಾರ ಪ್ರಭುಗಳನ್ನು ಸೆಳೆಯಲು ಒಳಗೊಳಗೆ ಕಾರ್ಯತಂತ್ರ ಹೆಣೆಯುತ್ತಿವೆ.

ADVERTISEMENT

ಹಾನಗಲ್ ಸೋಲನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ, ಮುಂದೆ ಅದೇ ತಪ್ಪು ಮರುಕಳಿಸಬಾರದೆಂಬ ನಿರ್ಧಾರಕ್ಕೆ ಬಂದಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾಗಿದ್ದು, ಅದಕ್ಕಾಗಿ ಈಗಿನಿಂದಲೇ ಫುಲ್ ಅಲರ್ಟ್ ಆಗಿದೆ. ಇನ್ನೂ ಇದೇ ತಿಂಗಳು 19ರಿಂದ ಜನಸ್ವರಾಜ್ ಯಾತ್ರೆಗೆ ಸಜ್ಜಾಗಿದ್ದು, ಈ ಯಾತ್ರೆಯಲ್ಲಿ ಕೇಂದ್ರ ಸಚಿವರು, ಮಾಜಿ ಸಿಎಂಗಳು ಭಾಗಿಯಾಗಲಿದ್ದಾರೆ. ಇನ್ನೂ ಈ ಯಾತ್ರೆಯಲ್ಲಿ ಬಿ.ವೈ. ವಿಜಯೇಂದ್ರಗೆ ಪ್ರಮುಖ ಸ್ಥಾನ ನೀಡುವ ಸಾಧ್ಯತೆ ಇದೆ.

‘ಜನಸ್ವರಾಜ್ ಯಾತ್ರೆ’ಗೆ ‘ಕಮಲ’ ಸಜ್ಜು

ಬೈಎಲೆಕ್ಷನ್ ಫಲಿತಾಂಶದ ಬಳಿಕ ರಾಜ್ಯ ಪ್ರವಾಸಕ್ಕೆ ಸಜ್ಜು
ರಾಜ್ಯದಲ್ಲಿ 5 ದಿನ ಬಿಜೆಪಿಯಿಂದ ಜನಸ್ವರಾಜ್ ಯಾತ್ರೆ
ಕೇಸರಿ ಪಡೆ ನಾಯಕರ ರಾಜ್ಯ ಪ್ರವಾಸಕ್ಕೆ ವೇಳಾಪಟ್ಟಿ ರೆಡಿ
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ ಜನಸ್ವರಾಜ್ ಯಾತ್ರೆ
ನವೆಂಬರ್ 19-23ರವರೆಗೆ ನಡೆಯಲಿದೆ ಜನಸ್ವರಾಜ್ ಯಾತ್ರೆ
ಕರ್ನಾಟಕ ಪ್ರವಾಸಕ್ಕೆ ಸಿದ್ಧವಾಗಿರುವ ಬರೋಬ್ಬರಿ 4 ತಂಡಗಳು
ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿಎಸ್ವೈ
ಜಗದೀಶ್ ಶೆಟ್ಟರ್, ಸಚಿವ ಈಶ್ವರಪ್ಪ ಸೇರಿ ಹಲವರಿಂದ ಪ್ರವಾಸ

ಹಾನಗಲ್ ಬೈಎಲೆಕ್ಷನ್ ಫಲಿತಾಂಶದ ಬಳಿಕ ಬಿಜೆಪಿ ರಾಜ್ಯ ಪ್ರವಾಸಕ್ಕೆ ಸಜ್ಜಾಗಿದೆ. ರಾಜ್ಯದಲ್ಲಿ ಐದು ದಿನ ಜನಸ್ವರಾಜ್ ಯಾತ್ರೆ ನಡೆಯಲಿದ್ದು, ಈಗಾಗಲೇ ಕೇಸರಿ ಪಾಳಯದ ನಾಯಕರಿಂದ ರಾಜ್ಯ ಪ್ರವಾಸಕ್ಕೆ ವೇಳಾಪಟ್ಟಿ ರೆಡಿಯಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜನಸ್ವರಾಜ್ ಯಾತ್ರೆ ನಡೆಯಲಿದ್ದು, ನವೆಂಬರ್ 19ರಿಂದ 23ರವರೆಗೆ ಈ ಯಾತ್ರೆ ನಡೆಯಲಿದೆ.

ರಾಜ್ಯ ಪ್ರವಾಸಕ್ಕೆ 4 ಕೇಸರಿ ತಂಡಗಳು ಸಿದ್ಧವಾಗಿವೆ. ಇನ್ನೂ ಈ ಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿಎಸ್ವೈ, ಮಾಜಿ ಸಚಿವ ಜಗದೀಶ್ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಘಟಾನುಘಟಿ ನಾಯಕರು ಭಾಗಿಯಾಗುವ ಸಾಧ್ಯತೆ ಇದೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಕಾಂಗ್ರೆಸ್ ಮಾತಿನಂತೆ ಇತ್ತಾ ಎರಡು ಕಡೆ ಠೇವಣೆಯನ್ನೂ ಕಳೆದುಕೊಂಡು ದಳ ಧೂಳೀಪಟವಾಗಿತ್ತು. ಕುಮಾರಸ್ವಾಮಿ ಆ ಸೋಲನ್ನು ಸಮರ್ಥನೆ ಕೂಡ ಮಾಡಿಕೊಂಡಿದ್ರು. ಆದ್ರೆ ದಳಪತಿಗಳು ಒಳಗೊಳಗೆ ಭಾರೀ ಆತ್ಮಾವಲೋಕನ ಮಾಡಿಕೊಂಡಿದ್ದು, ಈ ಸೋಲಿನಿಂದ ಹೊರ ಬರಲು ಭಾರೀ ಸಿದ್ಧತೆ ನಡೆಸಿದ್ದಾರೆ.

ದಳ ಬಲಗೊಳಿಸಲು ‘ಜನತಾ ಸಂಗಮ’

ಇಂದು ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಕಾರ್ಯಾಗಾರ
2023ರ ಸಾರ್ವತ್ರಿಕ ಚುನಾವಣೆಗೆ ‘ದಳಪತಿ’ಗಳ ಸಿದ್ಧತೆ
‘ತೆನೆ’ ಪಕ್ಷ ಬಲಪಡಿಸಲು ಈಗಿನಿಂದಲೇ ‘ಜನತಾ ಸಂಗಮ’
ಬರೋಬ್ಬರಿ 10 ದಿನಗಳ ಕಾಲ 2ನೇ ಹಂತದ ಕಾರ್ಯಾಗಾರ
ಬೆಂಗಳೂರಿನ ಜೆ.ಪಿ. ಭವನದಲ್ಲಿ ನಡೆಯಲಿರುವ ಕಾರ್ಯಾಗಾರ
ಹಿರಿಯ ಪತ್ರಕರ್ತ ಪಿ.ರಾಮಯ್ಯರಿಂದ ಜನತಾ ಪತ್ರಿಕೆ ಬಿಡುಗಡೆ
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ, ಮಾಜಿ ಸಿಎಂ ಹೆಚ್ಡಿಕೆ
ಹಾಲಿ, ಮಾಜಿ ಶಾಸಕರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗಿ
ಪ್ರತಿ ದಿನ 2 ಜಿಲ್ಲೆಗಳ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚೆ

ಈಗಾಗಲೇ ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಜನತಾ ಸಂಗಮ ಕಾರ್ಯಾಗಾರ ಉದ್ಘಾಟಿಸುವ ಮೂಲಕ, 2023ರ ಸಾರ್ವತ್ರಿಕ ಚುನಾವಣೆಗೆ ದಳಪತಿಗಳು ಸಿದ್ಧತೆ ಮಾಡಿಕೊಳ್ತಿದ್ದಾರೆ. ತೆನೆ ಪಕ್ಷವನ್ನು ಬಲಪಡಿಸಲು ಈಗಿನಿಂದಲೇ ಜನತಾ ಸಂಗಮ ಕಾರ್ಯಾಗಾರ ಹಮ್ಮಿಕೊಂಡಿದ್ದಾರೆ. ಬರೋಬ್ಬರಿ 10 ದಿನಗಳ ಕಾಲ 2ನೇ ಹಂತದ ಕಾರ್ಯಾಗಾರ ಆಯೋಜಿಸಿದ್ದು, ಬೆಂಗಳೂರಿನ ಜೆ.ಪಿ ಭವನದಲ್ಲಿ ಕಾರ್ಯಾಗಾರಕ್ಕೆ ಚಾಲನೆ ನೀಡಿದ್ದಾರೆ. ಇನ್ನೂ ಈ ಕಾರ್ಯಾಗಾರದಲ್ಲಿ ಹಿರಿಯ ಪತ್ರಕರ್ತ ಪಿ.ರಾಮಯ್ಯ ಜನತಾ ಪತ್ರಿಕೆ ಬಿಡುಗಡೆಗೊಳಿಸಿದ್ದು, ಕಾರ್ಯಾಗಾರ ನವೆಂಬರ್ 17ರವರೆಗೆ ನಡೆಯಲಿದೆ. ಇದರಲ್ಲಿ ಪಕ್ಷದ ವರಿಷ್ಠರಾಗಿರುವ ಎಚ್.ಡಿ.ದೇವೇಗೌಡ, ಹೆಚ್ಡಿಕೆ, ಹಾಲಿ ಸಚಿವರು,

ಮಾಜಿ ಸಚಿವರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗಿಯಾಲಿದ್ದಾರೆ. ಪ್ರತಿ ದಿನ 2 ಜಿಲ್ಲೆಗಳ ಮುಖಂಡರ ಜೊತೆ ದಳಪತಿಗಳು ಚರ್ಚೆ ನಡೆಸಲಿದ್ದಾರೆ.

ಒಟ್ಟಾರೆಯಾಗಿ ಹಾನಗಲ್ ಸೋಲಿನಿಂದ ಎರಡು ಪಕ್ಷಗಳು ಆತ್ಮಾವಲೋಕನ ಮಾಡಿಕೊಂಡಿದ್ದು, ಮುಂದೆ ಇದೇ ತಪ್ಪು ಮರುಕಳಿಸದಂತೆ ನೋಡಿಕೊಳ್ಳಲು ಮುಂದಾಗಿವೆ. ಅದು ಒಂದೇ ಸಮಯದಲ್ಲಿ ಎರಡು ಪಕ್ಷಗಳು ಮತದಾರರ ಮನ ಗೆಲ್ಲಲು ತಂತ್ರ ಪ್ರತಿತಂತ್ರ ಹೆಣೆದಿವೆ. ಈ ರಾಜಕೀಯದ ತಂತ್ರ ಪ್ರತಿತಂತ್ರ ಮುಂದೆ ಯಾವ ರೀತಿಯ ಫಲ ನೀಡ್ತಾವೆ ಕಾದುನೋಡಬೇಕಿದೆ.

Tags: 2023BJPಎಚ್ ಡಿ ಕುಮಾರಸ್ವಾಮಿಚುನಾವಣೆಜನಸ್ವರಾಜ್ ಯಾತ್ರೆಜೆಡಿಎಸ್‌ನರೇಂದ್ರ ಮೋದಿಬಿಜೆಪಿ
Previous Post

ತಮಿಳುನಾಡಿನಲ್ಲಿ ಭಾರೀ ಮಳೆ; 20ಕ್ಕೂ ಹೆಚ್ಚು ಮಂದಿ ಸಾವು; ಸಾವಿರಾರು ಮನೆಗಳು ಜಲಾವೃತ

Next Post

ಬೈ ಎಲೆಕ್ಷನ್ ಸೋಲು ; ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕಟೀಲ್ಗೆ ಕೊಕ್ ; ಮುಂದಿನ ಸಾರಥಿ ಯಾರು?

Related Posts

ಸಾಮಾಜಿಕ ಜಾಲತಾಣದಲ್ಲಿ  ಜಮಾತೆ ಇಸ್ಲಾಮಿ ಮುಖ್ಯಸ್ಥರ ಪೋಸ್ಟ್: ಬಾಂಗ್ಲಾದೇಶದಲ್ಲಿ ಆಕ್ರೋಶ! ಆಗಿದ್ದಾದರೂ ಏನು ?
ರಾಜಕೀಯ

ಸಾಮಾಜಿಕ ಜಾಲತಾಣದಲ್ಲಿ  ಜಮಾತೆ ಇಸ್ಲಾಮಿ ಮುಖ್ಯಸ್ಥರ ಪೋಸ್ಟ್: ಬಾಂಗ್ಲಾದೇಶದಲ್ಲಿ ಆಕ್ರೋಶ! ಆಗಿದ್ದಾದರೂ ಏನು ?

by ಪ್ರತಿಧ್ವನಿ
February 1, 2026
0

ಜಮಾತೆ-ಇ-ಇಸ್ಲಾಮಿ (ಜೆಇಐ) ಶನಿವಾರ  ಅಮೀರ್ ಡಾ. ಶಫೀಕರ್ ರೆಹಮಾನ್ ಅವರ ಅಧಿಕೃತ 'ಎಕ್ಸ್' ಹ್ಯಾಂಡಲ್‌ನಲ್ಲಿ ಸಾರ್ವಜನಿಕ ಜೀವನ ಮತ್ತು ನಾಯಕತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು...

Read moreDetails
ಅಕ್ರಮ ಗಣಿಗಾರಿಕೆಗೆ ಜೆಸಿಬಿ ಮೇಲೆ ಕಲ್ಲೆಸೆದು ಕಾನೂನಿನ ಗಡುಸು ಮುಖ ತೋರಿಸಿದ ಮಹಿಳಾ ಅಧಿಕಾರಿ

ಅಕ್ರಮ ಗಣಿಗಾರಿಕೆಗೆ ಜೆಸಿಬಿ ಮೇಲೆ ಕಲ್ಲೆಸೆದು ಕಾನೂನಿನ ಗಡುಸು ಮುಖ ತೋರಿಸಿದ ಮಹಿಳಾ ಅಧಿಕಾರಿ

February 1, 2026
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

February 1, 2026
Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ

Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ

February 1, 2026
ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

February 1, 2026
Next Post
ಬೈ ಎಲೆಕ್ಷನ್ ಸೋಲು ; ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕಟೀಲ್ಗೆ ಕೊಕ್ ; ಮುಂದಿನ ಸಾರಥಿ ಯಾರು?

ಬೈ ಎಲೆಕ್ಷನ್ ಸೋಲು ; ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕಟೀಲ್ಗೆ ಕೊಕ್ ; ಮುಂದಿನ ಸಾರಥಿ ಯಾರು?

Please login to join discussion

Recent News

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?
Top Story

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

by ಪ್ರತಿಧ್ವನಿ
February 1, 2026
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!
Top Story

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಹಾಗೂ ಅಳಿಯನ ಬಗ್ಗೆ ಇಲ್ಲಿದೆ ಯಾರಿಗೂ ತಿಳಿಯದ ಈ ವಿಷಯ!

by ಪ್ರತಿಧ್ವನಿ
February 1, 2026
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ
Top Story

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

by ಪ್ರತಿಧ್ವನಿ
February 1, 2026
Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ
Top Story

Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ

by ಪ್ರತಿಧ್ವನಿ
February 1, 2026
ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ
Top Story

ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

by ಪ್ರತಿಧ್ವನಿ
February 1, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

ಬಜೆಟ್ ನಲ್ಲಿ ಏನು ಇಲ್ಲ ಎಂದು ಶಶಿ ತರೂರ್ ಹೇಳಿದ್ದೇಕೆ ?

February 1, 2026
ಸಾಮಾಜಿಕ ಜಾಲತಾಣದಲ್ಲಿ  ಜಮಾತೆ ಇಸ್ಲಾಮಿ ಮುಖ್ಯಸ್ಥರ ಪೋಸ್ಟ್: ಬಾಂಗ್ಲಾದೇಶದಲ್ಲಿ ಆಕ್ರೋಶ! ಆಗಿದ್ದಾದರೂ ಏನು ?

ಸಾಮಾಜಿಕ ಜಾಲತಾಣದಲ್ಲಿ  ಜಮಾತೆ ಇಸ್ಲಾಮಿ ಮುಖ್ಯಸ್ಥರ ಪೋಸ್ಟ್: ಬಾಂಗ್ಲಾದೇಶದಲ್ಲಿ ಆಕ್ರೋಶ! ಆಗಿದ್ದಾದರೂ ಏನು ?

February 1, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!