ಡಿಸೆಂಬರ್ 10ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಪರಿಷತ್ ಚುನಾವಣೆಗೆ ಸುಮಾರು ಒಂದು ಲಕ್ಷ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ ಮುಖ್ಯ ಚುನಾವಣಾ ಕಚೇರಿಯಿಂದ ಬಿಡುಗಡೆಯಾಗಿರುವ ಪ್ರಕಟನೆಯಲ್ಲಿ 98,846 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ತಿಳಿಸಿದೆ.
ವಿಧಾನ ಪರಿಷತ್ಗೆ ಆಯ್ಕೆಯಾಗುವ ಅಭ್ಯರ್ಥಿಗಳು ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳಿಂದ ಆಯ್ಕೆಯಾಗುತ್ತಾರೆ. ಅಂದರೆ, ಶಾಸಕರು, ಸಚಿವರು, ಸಂಸದರು ಮತ್ತು ಗ್ರಾಮ ಪಂಚಾಯತ್ ಸದಸ್ಯರಿಂದ ಆಯ್ಕೆಯಾಗುತ್ತಾರೆ. ಈ ಭಾರಿ ಸರ್ಕಾರ ಈ ಸಂಸ್ಥೆಗಳಿಗೆ ಚುನಾವಣೆ ನಡೆಸದ ಕಾರಣ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು ತಮ್ಮ ಹಕ್ಕನ್ನು ಚಲಾಯಿಸುವಂತಿಲ್ಲ.
Also Read : ವಿಧಾನ ಪರಿಷತ್ ಚುನಾವಣೆ : ಜಿಪಂ, ತಾಪಂ ಸದಸ್ಯರಿಲ್ಲದೇ ಚುನಾವಣೆ ನಡೆಸುವ ಆಯೋಗದ ಕ್ರಮ ಸರಿಯೇ?
98,846 ಮತದಾರರಲ್ಲಿ 47,368 ಪುರುಷರು, 51,474 ಮಹಿಳಾ ಮತದಾರರಿದ್ದಾರೆ. ಬೆಳಗಾವಿ(8,871) ಕ್ಷೇತ್ರವು ಅತಿ ಹೆಚ್ಚು ಮತದಾರರನ್ನು ಹೊಂದಿದೆ. ಮೈಸೂರು, ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಮೂವರು ತೃತೀಯ ಲಿಂಗಿ ಮತದಾರರಿದ್ದಾರೆ. ಮತದಾನಕ್ಕಾಗಿ ಒಟ್ಟು 6,073 ಮತಗಟ್ಟೆಗಳನ್ನು ರಾಜ್ಯಾದ್ಯಂತ ಸ್ಥಾಪಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿಯ ಪ್ರಕಟನೆಯಲ್ಲಿ ತಿಳಿಸಿದೆ.

ಡಿಸೆಂಬರ್ 14ರಂದು ಪಲಿತಾಂಶವನ್ನ ಪ್ರಕಟಿಸಲಾಗುವುದು. ಪ್ರಸ್ತುತ ಕಾಂಗ್ರೆಸ್ನ 14 ಸದಸ್ಯರು, ಬಿಜೆಪಿಯ 7, ಜೆಡಿಎಸ್ನಿಂದ 4 ಸದಸ್ಯರ ಅವಧಿ ಮುಗಿಯಲಿದೆ.











