ತವರು ಜಿಲ್ಲೆಯ ಸೋಲು ಸಿಎಂಗೆ ಮುಖಭಂಗವಾದಂತಾಗಿದೆ. ಬೊಮ್ಮಾಯಿ ತಂತ್ರ-ರಣತಂತ್ರ ಮತ್ತು ಕಾರ್ಯತಂತ್ರ ಎಲ್ಲಾವೂ ಉಲ್ಟಾ ಆಗಿದೆ. ತವರು ಜಿಲ್ಲೆಯಲ್ಲೇ ತಮ್ಮ ಅಭ್ಯರ್ಥಿ ಗೆಲ್ಲಿಸಲಾಗದ ಪರಿಸ್ಥಿತಿ ಸಿಎಂ ಬೊಮ್ಮಾಯಿ ಶಾಕ್ ಕೊಟ್ಟಿದೆ. ಒಂದು ಗೆಲುವು, ಒಂದು ಸೋಲು, ಬೊಮ್ಮಾಯಿ ನಾಯಕತ್ವದ ಬಿಜೆಪಿಗೆ ಹಲವಾರು ಪಾಠ ಕಲಿಸಿದೆ.
ತನ್ನ ತವರು ಜಿಲ್ಲೆಯಲ್ಲೇ ತಮ್ಮ ಅಭ್ಯರ್ಥಿ ಗೆಲ್ಲಿಸಲಾಗದ ಪರಿಸ್ಥಿತಿ ಸಿಎಂ ಮುಖಭಂಗಕ್ಕೆ ಕಾರಣವಾಗಿದೆ. ಬೊಮ್ಮಾಯಿ ತಂತ್ರ-ರಣತಂತ್ರ ಮತ್ತು ಕಾರ್ಯತಂತ್ರ ಎಲ್ಲಾವೂ ಉಲ್ಟಾ ಆಗಿದೆ. ಎರಡೂ ಕ್ಷೇತ್ರದಲ್ಲೂ ಗೆಲುವಿನ ಆಸೆ ಕಂಡಿದ್ದ ಬಿಜೆಪಿಗೆ ಒಂದು ಸೋಲು ಶಾಕ್ ಕೊಟ್ಟಿದೆ.
ಕರ್ನಾಟಕದ ಮಾಸ್ ಲೀಡರ್ ಬಿಎಸ್ವೈ ಬಳಿಕ ಆ ಸ್ಥಾನಕ್ಕೆ ಸೂಕ್ತ ಅಂತ ಹೈಕಮಾಂಡ್ ಬೊಮ್ಮಾಯಿಗೆ ಸಿಎಂ ಪಟ್ಟ ಕಟ್ಟಿತ್ತು. ಬೊಮ್ಮಾಯಿ ಕೂಡ ಅದೇ ಉತ್ಸಾಹದಲ್ಲಿ ಗುರು ಬಿಎಸ್ವೈ ಹಾದಿಯಲ್ಲೇ ನಡೀತಿದ್ರು. ಇದ್ರ ನಡುವೆ ಎದುರಾದ ಹಾನಗಲ್ ಸಿಂದಗಿ ಬೈ ಎಲೆಕ್ಷನ್ ಅಗ್ನಿಪರೀಕ್ಷೆ ಆಗಿತ್ತು. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಕಮಲ ಅರಳಿಸುವುದನ್ನ ಬೊಮ್ಮಾಯಿ ಪಣ ತೊಟ್ಟಿದ್ರು. ಅದ್ರಲ್ಲೂ ತಮ್ಮ ತವರು ಜಿಲ್ಲೆಯ ಹಾನಗಲ್ ಕ್ಷೇತ್ರವನ್ನ ಸಿಎಂ ಪ್ರತಿಷ್ಠೆಯಾಗಿ ಪರಿಗಣಿಸಿದ್ರು. ಅದ್ರಂತೆ ಅಬ್ಬರದ ಪ್ರಚಾರ ಮಾಡಿದ್ರು.. ಆದ್ರೆ ರಿಸಲ್ಟ್ ಬೊಮ್ಮಾಯಿಗೆ ಶಾಕ್ ಕೊಟ್ಟಿದೆ.
ಹಾನಗಲ್ ಕ್ಷೇತ್ರದ ಹೀನಾಯ ಸೋಲು ಬಿಜೆಪಿಯದ್ದು ಅನ್ನೋದ್ಕಿಂತ ಸಿಎಂಗೆ ಅದ್ರ ಪಾಲು ಹೆಚ್ಚು. ಯಾಕಂದ್ರೆ ಹೇಳಿ ಕೇಳಿ ಹಾನಗಲ್ ಬೊಮ್ಮಾಯಿ ಅವರು ಜಿಲ್ಲೆ. ಜೊತೆಗೆ ಬಿಜೆಪಿಯ ಭದ್ರಕೋಟೆ ಆದ್ರೆ, ತವರು ಜಿಲ್ಲೆಯಲ್ಲೇ ತಮ್ಮ ಅಭ್ಯರ್ಥಿ ಗೆಲ್ಲಿಸಲಾಗದ ಪರಿಸ್ಥಿತಿ ಸಿಎಂ ಮುಖಭಂಗಕ್ಕೆ ಕಾರಣವಾಗಿದೆ. ಸೋಲು ಪಾಠ ಕೂಡ ಕಲಿಸಿದೆ. ಅಲ್ಲದೆ ಇದ್ರಿಂದ ಬೊಮ್ಮಾಯಿಗೆ ಒಂದು ಸ್ಪಷ್ಟ ಸಂದೇಶನ್ನಂತೂ ನೀಡಿದೆ.
ಬೊಮ್ಮಾಯಿಗೆ ಸೋಲಿನ ಪಾಠ
- ಬಿಎಸ್ ಯಡಿಯೂರಪ್ಪ ರೀತಿ ಮಾಸ್ ಲೀಡರ್ ಅಲ್ಲ ಎಂಬುದು ಕನ್ಫರ್ಮ್
- ಜನರಿಂದ ಸಿಎಂ ಆದವರಲ್ಲ.. ಹೈಕಮಾಂಡ್ ಸಿಎಂ ಎಂಬುವುದು ಸ್ಪಷ್ಟ
- ಸಿಎಂ ಆಗಿ 100 ದಿನ ಸಾಧನೆಯ ಬಗ್ಗೆ ಪ್ರಸ್ತಾಪ ಮಾಡದೇ ಕ್ಯಾಂಪೇನ್
- ಬೊಮ್ಮಾಯಿ ನಾಯಕತ್ವವನ್ನ ಪಕ್ಷದ ಶಾಸಕರು ಒಪ್ಪಿಲ್ಲ ಎಂಬ ಸಂದೇಶ
- ಇನ್ಮುಂದೆ ಅಭಿವೃದ್ಧಿ ಕಾರ್ಯಗಳಿಗೆ ಸಿಗಬೇಕಿದೆ ಅತೀ ಹೆಚ್ಚು ವೇಗ
- ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಹೆಚ್ಚಿಸಿಕೊಳ್ಳಬೇಕಿದೆ ಸ್ವಂತ ಇಮೇಜ್
- 2023ರ ಚುನಾವಣೆ ವೇಳೆಗೆ ವೈಯಕ್ತಿಕ ವರ್ಚಸ್ಸು ವೃದ್ದಿಯ ಅನಿವಾರ್ಯತೆ
ಬಿ. ಎಸ್ ಯಡಿಯೂರಪ್ಪ ರೀತಿ ಬೊಮ್ಮಾಯಿ ಮಾಸ್ ಲೀಡರ್ ಅಲ್ಲ. ಅವರು ಜನರಿಂದ ಸಿಎಂ ಆದವರಲ್ಲ.. ಹೈಕಮಾಂಡ್ ಸಿಎಂ ಎಂಬುವುದು ಸ್ಪಷ್ಟವಾಗಿದೆ. ಇದೆಲ್ಲಾ ಒಂದು ಕಡೆಯಾದ್ರೆ ಇನ್ನು ಸಿಎಂ ಆಗಿ 100 ದಿನ ಸಾಧನೆಯ ಬಗ್ಗೆ ಪ್ರಸ್ತಾಪ ಮಾಡದೇ ಕ್ಯಾಂಪೇನ್ ಮಾಡಿದ್ದು ಸೋಲಿಗೆ ಕಾರಣವಾಗಿದೆ ಎನ್ನಲಾಗ್ತಿದೆ.
ಬೊಮ್ಮಾಯಿ ನಾಯಕತ್ವವನ್ನ ಪಕ್ಷದ ಶಾಸಕರು ಒಪ್ಪಿಲ್ಲ ಎಂಬ ಸಂದೇಶ ಕೂಡ ಕೊಟ್ಟಂತಾಗಿದೆ. ಈ ಎಲ್ಲಾ ಪಾಠದಿಂದ ಇನ್ಮುಂದೆ ಅಭಿವೃದ್ಧಿ ಕಾರ್ಯಗಳಿಗೆ ಅತೀ ಹೆಚ್ಚು ವೇಗ ಸಿಗಬೇಕಿದೆ ಅನ್ನೋ ಸಂದೇಶ ಸಿಕ್ಕಿದೆ. ಅಷ್ಟೇ ಅಲ್ಲದೆ ಸಿಎಂ ಆಗಿ ಬೊಮ್ಮಾಯಿ ಸ್ವಂತ ಇಮೇಜ್ ಹೆಚ್ಚಿಸಿಕೊಳ್ಳಬೇಕಿರುವುದು ಹಾಗೂ 2023ರ ಚುನಾವಣೆ ವೇಳೆಗೆ ವೈಯಕ್ತಿಕ ವರ್ಚಸ್ಸು ವೃದ್ದಿಯ ಅನಿವಾರ್ಯತೆ ಎದುರಾಗಿದೆ.
ಒಟ್ನಲ್ಲಿ ಹಾನಗಲ್ನ ಬಿಜೆಪಿ ಭದ್ರಕೋಟೆಗೆ ಕಾಂಗ್ರೆಸ್ ಲಗ್ಗೆ ಇಟ್ಟಿದೆ. ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿದ್ದ ಸಿಎಂ ಬೊಮ್ಮಾಯಿಗೆ ಮತದಾರ ಕೈಕೊಟ್ಟು ಮಾನೆಗೆ ಮಣೆಹಾಕಿದ್ದಾರೆ. ಇದು ಬೊಮ್ಮಾಯಿಗೆ ಅರಗಿಸಿಕೊಳ್ಳಲಾಗದ ಹಿನ್ನಡೆಗೆ ಕಾರಣವಾಗಿದೆ. ಸದ್ಯ ಇದೆಲ್ಲದ್ರಿಂದ ಸಿಎಂ ಪುಟಿದೆದ್ದು ತಮ್ಮ ನಾಯಕತ್ವ ಹೇಗೆ ಬಲಪಡಿಸಿಕೊಳ್ತಾರೆ ಅನ್ನೋದೆ ಸದ್ಯದ ಕುತೂಹಲ.