ಭಾರಿ ಕೂತುಹಲ ಹುಟ್ಟಿಸಿದ್ದ ಕರ್ನಾಟಕ ಉಪಚುನಾವಣೆಯ ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಗೆಲುವಿನತ್ತ ಸಾಗಿದೆ ಈ ಕುರಿತು ಕ್ಷೇತ್ರದ ಅಭ್ಯರ್ಥಿ ಶ್ರೀನಿವಾಸ ಮಾನೆ ಮಾತನಾಡಿದ್ದು, ಹಣಬಲ ಸೋತಿದೆ ಜನಬಲ ಗೆದ್ದಿದೆ ನನ್ನ ಕ್ಷೇತ್ರ ಜನರಿಗೆ ಸಾಷ್ಟಾಂಗ ನಮಸ್ಕಾರ ಎಂದು ಹೇಳಿದ್ದಾರೆ.
ನಮ್ಮ ಕಾಂಗ್ರೆಸ್ ನಾಯಕರು ನನ್ನ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದ್ದಾದೆ. ಆಡಳಿತ ಸರ್ಕಾರದ ತಂತ್ರವನ್ನು ಮಣಿಸಿದ್ದೇವೆ. ನಮ್ಮ ಹಾನಗಲ್ ಕ್ಷೇತ್ರದ ಜನರು ಬಿಜೆಪಿ ಸರ್ಕಾರದ ಜನವಿರೋಧಿ ನೀತಿ, ದುರಾಡಳಿತವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.
ಹಾನಗಲ್ ನಲ್ಲಿ ಒಟ್ಟು 18 ಸುತ್ತು ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ 83324 ಮತ ಕಳಿಸಿ 7325 ಮತಗಳ ಮುನ್ನಡೆ ಸಾದಿಸಿದೆ. ಬಿಜೆಪಿ 75999 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಇನ್ನೂ ಜೆಡಿಎಸ್ ಕೇವಲ 866 ಮತಗಳನ್ನು ಪಡೆದು ಕೊನೆ ಸ್ಥಾನದಲ್ಲಿದೆ.