ರಾಜ್ಯದಲ್ಲಿ ಕಳೆದ ಕರೋನಾ ಸಾಂಕ್ರಾಮಿಕ ಪೀಡಿತ ವರ್ಷಕ್ಕೆ ಹೋಲಿಸಿದರೆ ಈ ವರ್ಷವು ಕರ್ನಾಟಕದಲ್ಲಿ ಹಣಕಾಸು ಆಯೋಗದ ಯೋಜನೆಗಳ ಅಂಕಿ ಅಂಶಗಳು ಸುಧಾರಿಸಿವೆ ಎಂಬುದು ಸಂತಸದ ವಿಷಯವಾಗಿದೆ. ಆದರೆ, ಸೆಪ್ಟೆಂಬರ್ ಅಂತ್ಯದ ವೇಳೆಗೆ, 15 ನೇ ಹಣಕಾಸು ಆಯೋಗವು 552 ಕೋಟಿಗಳಷ್ಟು ಬಜೆಟ್ ಹಂಚಿಕೆಮಾಡಿತ್ತು ಆದರೆ, ರಾಜ್ಯದ ಜನರ ಪ್ರಾಥಮಿಕ ಆರೋಗ್ಯ ಸೌಲಭ್ಯವನ್ನು ಇನ್ನಷ್ಟು ಬಲಪಡಿಸಲು ಆರೋಗ್ಯ ಇಲಾಖೆಯು ಯಾವುದೇ ವೆಚ್ಚವನ್ನು ಭರಿಸಿಲ್ಲ ಎಂಬುವುದು ಅಂಕಿಅಂಶಗಳಿಂದ ತಿಳಿದುಬಂದಿದೆ.
ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಯಲ್ಲಿ ಬಜೆಟ್ ಹಂಚಿಕೆಯ ಕುರಿತಾಗಿ ಅಂಕಿಅಂಶಗಳ ಬಗ್ಗೆ ಪ್ರಸ್ತುತಪಡಿಸಲಾಯಿತು. ಈ ವೇಳೆ ರಾಜ್ಯ ಸರ್ಕಾರ 552 ಕೋಟಿಗಳಷ್ಟು ಬಜೆಟ್ ಹಂಚಿಕೆ ಮಾಡಿದ್ದು, ಇನ್ನೂ ಸೆಪ್ಟೆಂಬರ್ ಅಂತ್ಯದ ವೇಳೆಗೆ 21,331.65 ಕೋಟಿ ರೂ ಗಳಷ್ಟು ಬಜೆಟ್ ಅನ್ನು ಹಂಚಿಕೆ ಮಾಡದೇ, ಆರೋಗ್ಯ ಇಲಾಖೆ ಸೇರಿದಂತೆ ಕನಿಷ್ಠ ನಾಲ್ಕು ಪ್ರಮುಖ ಇಲಾಖೆಗಳು ಈ ಹಣಕಾಸು ವರ್ಷದಲ್ಲಿ ಏಳು ಪ್ರಮುಖ ಯೋಜನೆಗಳಿಗೆ ಕಡಿಮೆ ಖರ್ಚು ಮಾಡಿವೆ ಎಂದು ಸಭೆಯಲ್ಲಿ ಚರ್ಚೆಗಳು ನಡೆದಿವೆ.
ಹಂಚಿಕೆಯಾದ ಒಟ್ಟು ಬಜೆಟ್ ನಲ್ಲಿ ಕೃಷಿ ಇಲಾಖೆಯು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಶೂನ್ಯ ವೆಚ್ಚ ದಾಖಲಿಸಿದೆ. ರೈತರಿಗೆ ಆರ್ಥಿಕ ಪ್ರೋತ್ಸಾಹಕ್ಕಾಗಿ 2,120 ಕೋಟಿ ರೂ. ಬಜೆಟ್ ಹೊಂದಿದೆ. ಇಂಧನ ಇಲಾಖೆಯು ನೀಡುವ ಪಿಂಚಣಿ 1000 ಕೋಟಿ ರೂ ಹಣ ಕೂಡ ಜನರಿಗೆ ತಲುಪಿಲ್ಲ, ಸರ್ಕಾರ ಈ ಹಣವನ್ನು ದುರುಪಯೋಗ ಮಾಡಿಕೊಂಡಿದೆ ಎಂಬುವುದು ಮೇಲ್ನೋಟಕ್ಕೆ ತಿಳಿಯುತ್ತದೆ.

ಎಷ್ಟೆಷ್ಟು ಹಂಚಿಕೆಯಾಗಿತ್ತು?
ಪಿಎಂವೈ ಯೋಜನೆಯಲ್ಲಿ ವಸತಿ ಇಲಾಖೆ, ಆಶ್ರಯ-ಬಸವ , ಬಿಆರ್ ಅಂಬೇಡ್ಕರ್ ನಿವಾಸ್ ಯೋಜನೆಗಳಿಗೆ ಒಟ್ಟು 1600 ಕೋಟಿ ರೂಗಳಷ್ಟು ಬಜೆಟ್ ಹಂಚಿಕೆಯಾಗಿದೆ. ಆದರೆ, ಇವುಗಳು ಶೇ. 5 ರಿಂದ 20ರಷ್ಟು ಮಾತ್ರವೇ ಖರ್ಚಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಸ್ಥಾಪಿತವಾದ ಪಿಎಂ ಗ್ರಾಮ ಸಡಕ್ ಯೋಜನೆಯು ತೀರಾ ಮಂದಗತಿಯಲ್ಲಿ ಸಾಗುತ್ತಿದ್ದು, ಇದಕ್ಕಾಗಿ ಸರ್ಕಾರವು ರೂ 1,771.36 ಕೋಟಿಗಳ ಬಜೆಟ್ ಹಂಚಿಕೆ ಮಾಡಿತ್ತು. ಆದರೆ, ಇಲ್ಲಿ ಕೇವಲ 21.48% ಮಾತ್ರವೇ ಖರ್ಚು ಮಾಡಲಾಗಿದೆ. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣಕ್ಕೆ 3,259.49 ಕೋಟಿ, ನಗರಾಭಿವೃದ್ಧಿಗೆ 2,658.52 ಕೋಟಿ ರೂ., ಗೃಹ ಇಲಾಖೆಗಳಿಗೆ 2,398.85 ಕೋಟಿ ರೂ ಬಜೆಟ್ ಬಿಡುಗಡೆಯಾಗಿತ್ತು. ಇವುಗಳಿಗೆ ಹಂಚಿಕೆಯಾದ ಬಜೆಟ್ ಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಿಲ್ಲ ಎಂಬುವುದು ಅಂಕಿಅಂಶಗಳಲ್ಲಿ ತಿಳಿದುಬಂದಿದೆ.
ಈಗಾಗಲೇ ಖರ್ಚು ವೆಚ್ಚಗಳು ಹೆಚ್ಚಾಗಿವೆ. ಸೆಪ್ಟೆಂಬರ್ ವರೆಗೆ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಪ್ರಕ್ರಿಯೆ ನಡೆಸುತ್ತಿದ್ದೆವು. ಮಾನ್ಸೂನ್ ಸಮಯ ಆಗಿದ್ದರಿಂದ, ಡಾಂಬರೀಕರಣದ ಕೆಲಸವನ್ನು ಸ್ಥಗಿತಗೊಳಿಸಬೇಕಾಗಿತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ತಿಳಿಸಿದ್ದಾರೆ.

ಕಳೆದ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ, ನೀಡಲಾದ 35.94% ಬಜೆಟ್ ನಲ್ಲಿ ಸರ್ಕಾರವು 77,883.78 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 62,065.15 ಕೋಟಿ ಇತ್ತು, ಇದೀಗ 28.23% ಕ್ಕಿಂತ ಖರ್ಚು ಹೆಚ್ಚಾಗಿದೆ. ಸರ್ಕಾರವು ಎಂಟು ಅಂಶಗಳ ಕಾರ್ಯಕ್ರಮಗಳನ್ನು ಆಯೋಜಿಸಿತ್ತು, ಪ್ರತಿಯೊಂದೂ ಯೋಜನೆಯು 500 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಬಜೆಟ್ ನೀಡಿತ್ತು. ಸಹಕಾರಿ ಬೆಳೆ ಸಾಲಗಳಿಗೆ ಬಡ್ಡಿ ಸಹಾಯಧನ, ವಿಪತ್ತು ಪರಿಹಾರ, ಅಕ್ಕಿ/ಗೋಧಿಗೆ ಸಬ್ಸಿಡಿ, ಆಯುಷ್ಮಾನ್ ಭಾರತ್, ಹೆದ್ದಾರಿ ಅಭಿವೃದ್ಧಿ, MGNREGA ಗಳಿಗೆ 95% ಕ್ಕಿಂತ ಹೆಚ್ಚಿನ ವೆಚ್ಚವನ್ನು ಹಂಚಿಕೆ ಮಾಡಿತ್ತು. ಸರ್ಕಾರವು ಹಂಚಿಕೆ ಮಾಡಿದ್ದ ಬಜೆಟ್ ಗಳು ಜನಸಾಮಾನ್ಯರಿಗೆ ಸಿಗದೇ ದುರುಪಯೋಗವಾಗುತ್ತಿವೆ. ಇದರಿಂದ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕಾಗಿದೆ.