• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕಡತಗಳ ವಿಲೇವಾರಿಗೆ 300 ಕೋಟಿ ರೂ. ಹಫ್ತಾ; ಇದೇನಾ RSS ಸಿದ್ದಾಂತ: ಹೆಚ್‌.ಡಿ.ಕುಮಾರಸ್ವಾಮಿ

ಪ್ರತಿಧ್ವನಿ by ಪ್ರತಿಧ್ವನಿ
October 24, 2021
in ಕರ್ನಾಟಕ, ರಾಜಕೀಯ
0
ಕಡತಗಳ ವಿಲೇವಾರಿಗೆ 300 ಕೋಟಿ ರೂ. ಹಫ್ತಾ; ಇದೇನಾ RSS ಸಿದ್ದಾಂತ: ಹೆಚ್‌.ಡಿ.ಕುಮಾರಸ್ವಾಮಿ
Share on WhatsAppShare on FacebookShare on Telegram

ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈಯುತ್ತಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರ್ಎಸ್ಎಸ್ ವಿರುದ್ದ ಹರಿಹಾಯುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಕಡತಗಳ ವಿಲೇವಾರಿಗಾಗಿ ಆರ್ಎಸ್ಎಸ್ ಮುಖಂಡರು ಮತ್ತು ಉದ್ಯಮಿಗಳು 300 ಕೋಟಿ ರೂಪಾಯಿ ಹಫ್ತಾ ಕೊಟ್ಟಿದ್ದರು ಎಂದು ಅಲ್ಲಿನ ಮಾಜಿ ರಾಜ್ಯಪಾಲರೇ ಹೇಳಿಕೆ ಕೊಟ್ಟಿದ್ದಾರೆ. ಇದೇನಾ ಆರ್ಎಸ್ಎಸ್ ಸಂಸ್ಕೃತಿ ಮತ್ತು ಸಿದ್ದಾಂತ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಹೆಚ್.ಡಿ.ಕೆ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ನೇಮಕವಾದ ರಾಜ್ಯಪಾಲರೇ ಹಫ್ತಾ ಬಗ್ಗೆ ಮಾತನಾಡಿದ್ದಾರೆ. ಹಿಂದುತ್ವ ಮತ್ತು ಸಂಸ್ಕೃತಿಯ ಪ್ರತೀಕ ಆರ್ಎಸ್ಎಸ್ ಎನ್ನುತ್ತೀರಿ ಇದೇನಾ ನಿಮ್ಮ ಸಂಸ್ಕೃತಿ? ಎಂದು ಕುಟುಕಿದ್ದಾರೆ.

ಈ ದೇಶದಲ್ಲಿ ಹಿಂದುತ್ವವನ್ನು ನಾಶ ಮಾಡಲು ಯಾರಿಂದಲು ಸಾಧ್ಯವಿಲ್ಲ. ಹಿಂದುತ್ವ ಅಂದರೆ ಅದು ನಮ್ಮ ದೇಶದ ಬ್ರ್ಯಾಂಡ್. ನಾನು ಆರ್ಎಸ್ಎಸ್ ಬಗ್ಗೆ ಕೆಲವು ಲೇಖಕರು ಬರೆದಿರುವ ಪುಸ್ತಕಗಳಲ್ಲಿನ ಅಂಶಗಳನ್ನಷ್ಟೇ ಪ್ರಸ್ತಾಪಿಸಿದ್ದೇನೆ. ಇದು ಅಪರಾಧನಾ ಆರ್ಎಸ್ಎಸ್ ಕುರಿತು ನಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ಸವಾಲೆಸದಿದ್ದಾರೆ.

ಎಲ್ಲರ ಮನೆ ದೋಸೆನು ತೂತು

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಡಿಎಸ್ ಅಲ್ಲ ಜೆಡಿಎಫ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್.ಡಿ.ಕೆ ʻವರುಣಾ ಕ್ಷೇತ್ರದಲ್ಲಿ ರಾಜಕೀಯದ ಗಂಧ ಗಾಳಿ ಅರಿಯದ ಅವರ ಮಗ ಯತೀಂದ್ರನನ್ನು ಚುನಾವಣೆಗೆ ನಿಲ್ಲಿಸುವ ಬದಲು ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಬಹುದಿತ್ತಲವೇ. ಇದು ಯಾವ ಫ್ಯಾಮಿಲಿ? ಕಾಂಗ್ರೆಸ್ನದ್ದೋ ಅಥವಾ ಸಿದ್ದರಾಮಯ್ಯರದ್ದೋʼ ಎಲ್ಲರ ಮನೆ ದೋಸೆನು ತೂತು ಎಂದು ಟೀಕಿಸಿದ್ದಾರೆ.

ಉಪಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಬಿಜೆಪಿ ಸಿಂಧಗಿ ಮತ್ತು ಹಾನಗಲ್ನ ಪ್ರತಿಯೊಂದು ಬೂತ್ಗೆ ಸಚಿವರನ್ನು ನೇಮಿಸಿದೆ. ಇದರಿಂದ ಆಡಳಿತ ಯಂತ್ರ ಸ್ಥಗಿತಗೊಂಡಿದೆ ಇವರುಗಳಿಗೆ ಜನರ ಸಮಸ್ಯೆಗಳನ್ನು ಆಲಿಸುವುದಕ್ಕಿಂತ ಚುನಾವಣೆ ಗೆಲುವುದೆ ಮುಖ್ಯವಾಗಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಕೂಡ ಪ್ರತಿಯೊಂದು ಬೂತ್ಗೆ ತನ್ನ ನಾಯಕರನ್ನು ನೇಮಿಸಿದೆ ಎರಡು ಪಕ್ಷಗಳು ಪೈಪೋಟಿಗೆ ಬಿದ್ದವರಂತೆ ಪ್ರಚಾರದಲ್ಲಿ ತೊಡಗಿವೆ. ಯಾರು ಎಷ್ಟೇ ಪ್ರಚಾರ ಮಾಡಿದರು ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.

Tags: BJPByElectionbypollCongress PartyCovid 19hanagalJDSJDS Karnatakasindhagiಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ಜನತಾದಳನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಚುನಾವಣೆಗೆ ದಿನಗಣನೆ: ರಾಜಕೀಯ ಪಕ್ಷಗಳಿಗೆ ಹೆಚ್ಚಾಯಿತು ಮುಸ್ಲಿಂ ಪ್ರೇಮ.!

Next Post

ಶತಕೋಟಿ ಲಸಿಕೆ ನೀಡಿಕೆ; ಹಲವು ಸವಾಲುಗಳನ್ನ ಮೆಟ್ಟಿ ನಿಂತ ಭಾರತ ಎಂದ ಮೋದಿ

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
NEP: ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಈಗ 11 ಪ್ರಾದೇಶಿಕ ಭಾಷೆಗಳಲ್ಲಿ ಕಲಿಸಲಾಗುವುದು: ಪ್ರಧಾನಿ ಮೋದಿ

ಶತಕೋಟಿ ಲಸಿಕೆ ನೀಡಿಕೆ; ಹಲವು ಸವಾಲುಗಳನ್ನ ಮೆಟ್ಟಿ ನಿಂತ ಭಾರತ ಎಂದ ಮೋದಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada