ಹಲವು ಕಾನೂನಾತ್ಮಕ ಮತ್ತು ಸಾಮಾಜಿಕ ವಿರೋಧದ ನಡುವೆಯೂ ಅದಾನಿ ಗ್ರೂಪ್ ತಿರುವನಂತಪುರಂನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿರುವ ಅದಾನಿ ಗ್ರೂಪ್, ಅಧಿಕೃತವಾಗಿ ಆಡಳಿತ ಜವಾಬ್ದಾರಿಯನ್ನು ವಹಿಸುಕೊಳ್ಳುವಿಕೆಯನ್ನು ಘೋಷಿಸಿದೆ. ಸೊಂಪಾದ ಹಸಿರು, ಸುಂದರ ಕಡಲತೀರಗಳು ಮತ್ತು ಸೊಗಸಾದ ತಿನಿಸುಗಳಿಂದ ಕೂಡಿದ ದೇವರ ನಾಡಿಗೆ ಪ್ರಯಾಣಿಕರನ್ನು ಸ್ವಾಗತಿಸಲು ಮತ್ತು ಅವರ ಸೇವೆ ಮಾಡಲು ಹೆಮ್ಮೆ ಪಡುತ್ತೇವೆ ಎಂದು ಹೇಳಿಕೊಂಡಿದೆ.
ಆಡಳಿತಾರೂ ಎಲ್‌ಡಿಎಫ್ ಮತ್ತು ವಿರೋಧ ಪಕ್ಷವಾದ ಯುಡಿಎಫ್ ಎರಡೂ ಪಕ್ಷ ಖಾಸಗಿಕರಣದ ವಿರುದ್ಧ ಪ್ರತಿಭಟನೆ ಮಾಡಿತ್ತು ಇದರ ಹೊರತಾಗಿಯೂ ವಿಮಾನ ನಿಲ್ದಾಣದ ಹಸ್ತಾಂತರ ಆಗಿದೆ.
ಕಳೆದ ವರ್ಷ, ಕೇರಳದ ಅಸೆಂಬ್ಲಿಯಲ್ಲಿ ವಿಮಾನ ನಿಲ್ದಾಣದ ಖಾಸಗೀಕರಣವನ್ನು ವಿರೋಧಿಸುವ ನಿರ್ಣಯವನ್ನು ಸರ್ವ ಪಕ್ಷಗಳು ಸರ್ವಾನುಮತದಿಂದ ಅಂಗೀಕರಿಸಿತು. ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್, ವಿಮಾನ ನಿಲ್ದಾಣವನ್ನು ಅದಾನಿ ಗ್ರೂಫ್ ವಹಿಸಿಗೊಂಡಿರುವುದನ್ನು ಖಂಡಿಸಿದ್ದಾರೆ. ಇದು ಯಾವುದೇ ಅಬಿವೃದ್ಧಿಗಾಗಿ ಅಲ್ಲ, ಬದಲಾಗಿ ಔದ್ಯಮಿಕ ಏಕಸ್ವಾಮ್ಯತೆಯನ್ನು ಸೃಷ್ಟಿಸಲು ಈ ರೀತಿ ಖಾಸಗೀಕರಣ ಮಾಡಲಾಗುತ್ತದೆ ಎಂದು ಪಿನರಾಯಿ ವಿಜಯನ್ ಕೇಂದ್ರ ಸರ್ಕಾರವನ್ನು ದೂರಿದ್ದಾರೆ.
ಈ ವರ್ಷ ಜನವರಿಯಲ್ಲಿ, ಅದಾನಿ ಎಂಟರ್‌ಪ್ರೈಸಸ್ ಜೈಪುರ ಮತ್ತು ಗುವಾಹಟಿ ವಿಮಾನ ನಿಲ್ದಾಣಗಳೊಂದಿಗೆ ತಿರುವನಂತಪುರಂ ವಿಮಾನ ನಿಲ್ದಾಣವನ್ನು ನಿರ್ವಹಿಸಲು ಮತ್ತು ಅಭಿವೃದ್ಧಿಪಡಿಸಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಯೊಂದಿಗೆ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿತು. ರೆಗ್ಯುಲೇಟರಿ ಫೈಲಿಂಗ್‌ನಲ್ಲಿ, ಕಂಪನಿಯು ರಿಯಾಯಿತಿ ಅವಧಿಯು ಹಸ್ತಾಂತರ ದಿನಾಂಕದಿಂದ 50 ವರ್ಷಗಳು ಎಂದು ಹೇಳಿತ್ತು.
ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣ, ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಿಗಳು ಅದಾನಿ ಸಮೂಹವು ವಿಮಾನ ನಿಲ್ದಾಣವನ್ನು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಉದ್ಯೋಗಿಗಳು ತಮ್ಮ ವಿಶೇಷ ರಜೆ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ ಮತ್ತು ಎಎಐ ಒಪ್ಪಂದಕ್ಕೆ ಸಹಿ ಹಾಕಲು ಅವಸರದ ಕಾರಣವನ್ನು ತಿಳಿಯಲು ಬಯಸಿದ್ದಾರೆ ಎಂದುವರದಿಯಾಗಿದೆ.