ಹಿರಿಯ ಕಾಂಗ್ರೆಸ್ ನಾಯಕ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಗುರುವಾರ ಸುದ್ದಿಘೋಷ್ಠಿ ನಡೆಸಿದ್ದು 2022ರ ಗೋವಾ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಆತ್ಮವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.
ಗೋವಾ ಉಸ್ತುವಾರಿಯಾಗಿರುವ ಚಿದಂಬರಂ ಪಣಜಿಯಲ್ಲಿ ರಾಜ್ಯ ಚುನಾವಣ ಪ್ರಚಾರ ಸಮಿತಿ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು ಆತ್ಮವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.
ʻʻನಾನು ನಿಮ್ಮಗೆ ಒಂದನ್ನು ಹೇಳಲು ಇಷ್ಟ ಪಡುತ್ತೇನೆ, ಯಾರು ಗೋವಾವನ್ನು ಗೆಲುತ್ತಾರೋ ಅವರು ದೆಹಲಿಯನ್ನು ಗೆಲುತ್ತಾರೆ(ಸಾರ್ವತ್ರಿಕ ಚುನಾವಣೆ). ಅದಕ್ಕೆ, ಉತ್ತಮ ಉದಾಹರಣೆ 2007ರಲ್ಲಿ ನಾವು ಗೋವಾದಲ್ಲಿ ಅಧಿಕಾರವನ್ನ ಹಿಡಿದ್ದೆವು. 2009ರಲ್ಲಿ ನಾವು ದೆಹಲಿಯನ್ನು ಗದ್ದೆವು 2012ರಲ್ಲಿ ನಾವು ಗೋವಾನಲ್ಲಿ ಸೋತೆವು ದುರಾದೃಷ್ಟವಶಾತ್ ನಾವು ದೆಹಲಿಯನ್ನು ಕಳೆದುಕೊಂಡೆವುʼʼ ಎಂದು ಹೇಳಿದ್ದಾರೆ.
2017ರಲ್ಲಿ ನೀವು (ಪಕ್ಷದ ಕಾರ್ಯಕರ್ತರನ್ನು ಉಲ್ಲೇಖಿಸಿ) ಗೋವಾವನ್ನು ಗೆದಿದ್ದೀರಿ. ಆದರೆ, ನಮ್ಮ ಶಾಸಕರು ಗೋವಾವನ್ನು ಕಳೆದುಕೊಂಡರು ಇದರಿಂದ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿತ್ತು ಎಂದು ಹೇಳಿದ್ದಾರೆ.
2022-2024ರ ಗೋವಾ ಮತ್ತು ಸಾರ್ವತ್ರಿಕ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಆತ್ಮವಿಶ್ವಾಸದಿಂದ ಮತ್ತು ಧೈರ್ಯದಿಂದ ಎದುರಿಸಲಿದೆ ಗೋವಾ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದ್ದಾರೆ. ಕಳೆದ ಗೋವಾ ವಿಧಾನಸಭೆ ಚುನಾವಣೇಯಲ್ಲಿ 40 ಸದಸ್ಯರ ಸಂಖ್ಯಾಬಲದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಿಜೆಪಿಯ ಕುತಂತ್ರ ರಾಜಕಾರಣದಿಂದ ನಾವು ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ನಾಲ್ಕು ಶಾಸಕರನ್ನು ಹೊಂದಿದೆ ಎಂದು ಹೇಳಿದ ಅವರು ʻಇತಿಹಾಸ ನಮ್ಮದು ನಾವು ಇಂದು ಶುಭ ದಿನದಂದು ನಮ್ಮ ಪ್ರಚಾರ ಸಮಿತಿ ಕಚೇರಿಯನ್ನು ರಾಜನೀತಿ ತಜ್ಞ ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಅವರು ನಮ್ಮ ಕಚೇರಿಯನ್ನ ಉದ್ಘಾಟಿಸಿದ್ದಾರೆ. ಕೈಗಾರಿಕೆಗಳು, ಶಾಲೆಗಳು, ಕಾಲೇಜುಗಳು ಮತ್ತು ರಸ್ತೆಗಳಂತಹ ಕ್ಷೇತ್ರಗಳಲ್ಲಿ ಗೋವಾ ಮುಂದುವರಿದಾಗ, ಪ್ರಗತಿ ಹೊಂದಿದಾಗ ಮತ್ತು ಅಭಿವೃದ್ಧಿ ಹೊಂದಿದಾಗ ಅಂತಹ “ಸುವರ್ಣ ವರ್ಷಗಳನ್ನು” ನೆನಪಿಸಿಕೊಳ್ಳಬೇಕುʼ ಎಂದು ಹೇಳಿದ್ದಾರೆ.
ಗೋವಾವನ್ನು ಯಾರು ರಾಜಕೀಯ ವಸಾಹತು ಮಾಡಲು ಸಾಧ್ಯವಿಲ್ಲ. ಗೋವಾವನ್ನು ಗೋವಾದವರೇ, ಗೋವಾಗಾಗಿ, ಗೋವಾಗೋಸ್ಕರ ಆಳಬೇಕು ಎಂದು ಹೇಳಿದ್ದಾರೆ. ಇತ್ತೀಚಿಗೆ ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನ್ಹೊ ಫಲೇರೋ ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದರು.
ಕಾಂಗ್ರೆಸ್ ಹೊಸ ಮುಖಗಳಿಗೆ ಮಣೆ ಹಾಕ್ಕುತ್ತಿದ್ದು ಮುಂದಿನ ದಿನಗಳಲ್ಲಿ ಪಕ್ಷವು ಗೋವಾವನ್ನು ಆಳಲು ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಮೀನುಗಾರ ಸಮುದಾಯ ಮತ್ತು ದಲಿತರು ಸೇರಿದಂತೆ ಹೆಚ್ಚು ಹೆಚ್ಚು ನಾಯಕರನ್ನು ಕಾಂಗ್ರೆಸ್ ಪಕ್ಷ ಮುನ್ನೆಲೆಗೆ ತರಲಿದೆ ಎಂದು ಹೇಳಿದ್ದಾರೆ. ಈ ವೇಳೆ ಚಿದಂಬರಂ ಪಕ್ಷದ ಕಾರ್ಯಕರ್ತರಿಗೆ ಪಕ್ಷದ ಕಚೇರಿಯನ್ನು ಹೇಗೆ ರೋಮಾಂಚಕಾರಿಯಾಗಿ ಇಡಬೇಕೆಂದು ಪಾಠ ಮಾಡಿದರು.
ಪ್ರತಿ ಬ್ಲಾಕ್ ಅಲ್ಲು ಕಾಂಗ್ರೆಸ್ ಕಚೇರಿಯನ್ನ ತೆರೆಯಬೇಕು ಮತ್ತು ಪ್ರತಿ ಬ್ಲಾಕ್ ಕಚೇರಿ ಚುನಾವಣಾ ಪ್ರಚಾರ ಕಚೇರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಕಾರ್ಯಕರ್ತರು ಈಗಾಗಲೇ ಸಾಕಷ್ಟು ಸಮಯವನ್ನು ಕ್ಷೇತ್ರದಲ್ಲಿ ಯೋಜನೆ ರೂಪಿಸಲು ಕಳೆದಿದ್ದಾರೆ ಮತ್ತು ಚುನಾವಣಾ ಕೆಲಸಗಳನ್ನು ಪ್ರಾರಂಭಿಸಲು ಇದು ಸಕಾಲ ಎಂದು ಹೇಳಿದ್ದಾರೆ.
ಈಗಿನಿಂದ 100 ದಿನಗಳ ಒಳಗೆ ಚುನಾವಣೆ ನಡೆಯಲಿದೆ. ಚುನಾವಣೆ ದಿನಾಂಕ ಯಾವಾಗ ಘೋಷಣೆ ಮಾಡುತ್ತಾರೆ ಎಂಬುದು ನನ್ನಗು ಗೊತ್ತಿಲ್ಲಾ, ನಿಮಗು ಸಹ ಗೊತ್ತಿಲ್ಲಾ. ಆದರೆ, ಈ 100 ದಿನಗಳ ಸಮಯದಲ್ಲಿ ನಾವು ಜನತೆಯ ಹೃದಯ ಮತ್ತು ವಿಶ್ವಾಸವನ್ನಗಳಿಸಬೇಕು ಎಂದು ಹೇಳಿದ್ದಾರೆ. ಇದರಿಂದ 2022ರಲ್ಲಿ ಕರಾವಳಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಇಡೀ ದೇಶಕ್ಕೆ ಗೋವಾದಿಂದ ನಂಬಲಾರದ ಒಂದು ಸಂದೇಶವನ್ನ ರವಾನಿಸಬೇಕು ಎಂದು ಹೇಳಿದ್ದಾರೆ.