ಕೋವಿಡ್-19 ರ ವಿಷಯ ತಜ್ಞರ ಸಮಿತಿಯು ( Subject Expert Committee on Covid-19 ) 2-18 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಗೆ ತುರ್ತು ಬಳಕೆಯ ಅನುಮೋದನೆಯನ್ನು ನೀಡಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸೆಪ್ಟೆಂಬರ್ ನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಕೋವ್ಯಾಕ್ಸಿನ್ ನ ಹಂತ-2 ಮತ್ತು ಹಂತ-3 ಪ್ರಯೋಗಗಳನ್ನು ಪೂರ್ಣಗೊಳಿಸಿತ್ತು. ಈ ತಿಂಗಳ ಆರಂಭದಲ್ಲಿ ಡ್ರಗ್ಸ್ ಮತ್ತು ಕಂಪ್ಟ್ರೋಲರ್ ಜನರಲ್ ಆಫ್ ಇಂಡಿಯಾಗೆ (ಡಿಸಿಜಿಐ) ಪ್ರಾಯೋಗಿಕ ದತ್ತಾಂಶವನ್ನು ಸಲ್ಲಿಸಿತ್ತು.
ಭಾರತ್ ಬಯೋಟೆಕ್‌ನಿಂದ ಮಕ್ಕಳ ಲಸಿಕೆ ಪ್ರಯೋಗ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ವಯಸ್ಕರಂತೆಯೇ ಮಕ್ಕಳಲ್ಲಿ ಕೂಡ ಪರಿಣಾಮ ತೋರುತ್ತಿದೆ ಎಂಬ ಸಂಗತಿ ಹೊರಬಿದ್ದಿತ್ತು. ಜೊತೆಗೆ ಲಸಿಕೆಯ ಸುರಕ್ಷತೆ ಹಾಗೂ ರೋಗನಿರೋಧಕ ಶಕ್ತಿ ಮಕ್ಕಳಲ್ಲಿಯೂ ವಯಸ್ಕರಂತೆಯೇ ಇರಲಿದೆ ಎಂದು ತಿಳಿದುಬಂದಿತ್ತು. ಇದೀಗ ಈ ಲಸಿಕೆಯನ್ನ ಮಕ್ಕಳ ಮೇಲೆ ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ಸಿಕ್ಕಿದೆ.
ದೇಶದಲ್ಲಿ ಇದುವರೆಗೂ ಶೇಕಡಾ 60 ರಷ್ಟು ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಅಂತಾ ಇತ್ತೀಚಿಗೆ ಐಸಿಎಂಆರ್ ನಡೆಸಿದ ಸೆರೊಸರ್ವೇ ಹೇಳಿದೆ. ಜೊತೆಗೆ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಅಂತಾನೂ ತಜ್ಞರು ಹೇಳ್ತಿದ್ದಾರೆ.
ಡಬ್ಲ್ಯೂಹೆಚ್‌ಒ ಕೋವ್ಯಾಕ್ಸಿನ್ ಗೆ ತುರ್ತು ಬಳಕೆಯ ಅಧಿಕಾರವನ್ನು ಇನ್ನೂ ನೀಡಿಲ್ಲ. ಭಾರತ್ ಬಯೋಟೆಕ್ ಜುಲೈ 9 ರೊಳಗೆ ಪಟ್ಟಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಡಬ್ಲ್ಯೂಎಚ್‌ಒಗೆ ಸಲ್ಲಿಸಿದೆ ಎಂದು ವರದಿಯಾಗಿದೆ. ಸುಮಾರು ಆರು ವಾರಗಳನ್ನು ತೆಗೆದುಕೊಳ್ಳುವ ಡಬ್ಲ್ಯೂಹೆಚ್‌ಒ ಪರಿಶೀಲನಾ ಪ್ರಕ್ರಿಯೆ ಜುಲೈ ಅಂತ್ಯದ ವೇಳೆಗೆ ಪ್ರಾರಂಭವಾಗಿದೆ.