ಸಿದ್ಧರಾಮಯ್ಯ ಮತ್ತು ಬಿಜೆಪಿ ನಾಯಕರ ನಡುವೆ ನಡೆಯುತ್ತಿರುವ ʻRSS ತಾಲಿಬಾನ್ʼ ವಾಕ್ಸಮರ ಮತ್ತೆ ಮುಂದುವರೆದಿದೆ. “ಸಿದ್ದರಾಮಯ್ಯ ಒಬ್ಬ ದೊಡ್ಡ ಭಯೋತ್ಪಾದಕ” ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, “ಇಂದು ಕಾಂಗ್ರೆಸ್ ಅತಂತ್ರ ಸ್ಥಿತಿಯಲ್ಲಿರುವ ಕಾರಣ ಅವರು ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಹತ್ಯೆಗಳಾಗಿವೆ. ಶರತ್ ಮಡಿವಾಳ, ದೀಪಕ್ ರಾವ್, ಪ್ರತಾಪ್ ಪೂಜಾರಿ, ಹೀಗೆ ಹಲವು ಹಿಂದೂ ಮುಖಂಡರು ಮತ್ತು ಕಾರ್ಯಕರ್ತರ ಹತ್ಯೆಯಾಗಿದೆ. ಸುಳ್ಯದಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಎಟಿಎಂ ಒಳಗೆ ಹೋದ ಮಹಿಳೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಇದೆಲ್ಲ ಅವರ ಕಾಲಘಟ್ಟದಲ್ಲೇ ನಡೆದಿದ್ದು, ಅವರ ಆಡಳಿತದಲ್ಲೇ ಅತಿ ಹೆಚ್ಚು ಕೊಲೆ, ಸುಲಿಗೆ, ಅತಿ ಹೆಚ್ಚು ಗೋ ಹತ್ಯೆ ನಡೆದಿದೆ” ಎಂದು ನಳಿನ್ ಕುಮಾರ್ ಕಿಡಿಕಾರಿದ್ದಾರೆ.
ಕಳೆದ ಎರಡು ದಿನಗಳಿಂದ ಸಿದ್ದರಾಮಯ್ಯ ಹಾಗು ಬಿಜೆಪಿ ನಾಯಕರ ನಡುವೆ ಮಾತಿನ ಸಮರ ನಡೆಯುತ್ತಿದೆ . RSSನವರದ್ದು ತಾಲಿಬಾನ್ ಸಂಸ್ಕೃತಿ ಎಂದು ಭಾಷಣದ ವೇಳೆ ಸಿದ್ಧರಾಮಯ್ಯ ಟೀಕಿಸಿದ್ದರು. ಅದಾದ ಬಳಿಕ ಸಿದ್ದರಾಮಯ್ಯ ಟೀಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಹಲವು ಬಿಜೆಪಿ ನಾಯಕರು ಖಾರವಾಗಿ ಪ್ರತಿಕ್ರಿಯಿಸಿದ್ದರು. “ಕಾಂಗ್ರೆಸ್ ಆಡಳಿತವಿದ್ದಾಗ ಭಾರತದ ಒಳಗೆ ತಾಲಿಬಾನಿಗಳು, ಐಎಸ್‌ಐ ಉಗ್ರರನ್ನು ಭಾರತದೊಳಕ್ಕೆ ನುಸುಳಲು ಬಿಟ್ಟು ಮುಂಬೈ ಹಾಗು ಇನ್ನಿತರ ಭಾಗಗಳಲ್ಲಿ ಉಗ್ರರ ದಾಳಿಯಾಗುವಂತೆ ಮಾಡಿದ್ದು ನೂರಾರು ಮುಗ್ಧರ ಸಾವಿನ ಭಾರ ನಿಮ್ಮ ಪಕ್ಷದ ಮೇಲಿರುವುದು ಮರೆತುಬಿಟ್ಟಿರಾ? ಸಿದ್ದರಾಮಯ್ಯನವರೇ” ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ “ನಾನು ಸಿದ್ದರಾಮಯ್ಯರವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಆರ್‌ಎಸ್‌ಎಸ್ ಬಗ್ಗೆ ಅವರಿಗೆ ಗೊತ್ತಿರಲಿಲ್ಲ ಎಂಬಿದನ್ನು ನಾನು ತಿಳಿದುಕೊಂಡಿದೆ. ಆದರೆ, ಅವರಿಗೆ ತಾಲಿಬಾನ್ ಬಗ್ಗೆಯೂ ಗೊತ್ತಿಲ್ಲವೆಂಬುದನ್ನು ಅವರು ಸಾಬೀತು ಪಡಿಸಿದ್ದಾರೆ ಎಂಬುದು ನನಗೀಗ ಅರ್ಥ ಆಗಿದೆ” ಎಂದು ಸಿದ್ದರಾಮಯ್ಯ ಹೇಳಿಕೆಗೆ ಕುಟುಕಿದ್ದಾರೆ.