• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಭಾರತೀಯ ರಣಹದ್ದು ಗಜೇಂದ್ರಗಡ ಬೆಟ್ಟ ವಲಯ ಪ್ರದೇಶದಲ್ಲಿ ಮತ್ತೆ ಗೋಚರ!

Any Mind by Any Mind
September 26, 2021
in ಕರ್ನಾಟಕ
0
ಭಾರತೀಯ ರಣಹದ್ದು ಗಜೇಂದ್ರಗಡ ಬೆಟ್ಟ ವಲಯ ಪ್ರದೇಶದಲ್ಲಿ ಮತ್ತೆ ಗೋಚರ!
Share on WhatsAppShare on FacebookShare on Telegram

ಅಕ್ಷಿಪಿಟ್ರಿಡೆ ಕುಟುಂಬಕ್ಕೆ ಸೇರಿದ ಅಳಿವಿನಂಚಿನಲ್ಲಿರು ವಿರಳಜಾತಿಯ ರಣಹದ್ದು (ವೈಜ್ಞಾನಿಕ ಹೆಸರು: ಜಿಪ್ಸ ಇಂಡಿಕಸ್, ಸಾಮಾನ್ಯ ಹೆಸರು: ಇಂಡಿಯನ್ ವಲ್ಚರ್ ಅಥವಾ ಇಂಡಿಯನ್ ಲಾಂಗ್ ಬಿಲ್‍ಡ ವಲ್ಚರ್) ಗಜೇಂದ್ರಗಡ ಬೆಟ್ಟವಲಯದಲ್ಲಿ ಪತ್ತೆಯಾಗಿದ್ದು ಪಕ್ಷಿಪ್ರೇಮಿಗಳಲ್ಲಿ ಸಂತಸತಂದಿದೆ.

ADVERTISEMENT

ಇದು ಭಾರತ, ನೇಪಾಳ ಪಾಕಿಸ್ತಾನ ಮೂಲದ ರಣಹದ್ದಾಗಿದೆ.

ರಣಹದ್ದು! ಈ ಹೆಸರು ಕೇಳಿದರೇ ಸಾಮಾನ್ಯವಾಗಿ ಭಯಪಡುತ್ತಾರೆ..6.5 ಯಿಂದ 7.8 ಫೂಟ್ ಗಾತ್ರಹೊಂದಿದ್ದು ಆಯಾಸ ವಿಲ್ಲದೆ ಹಾರಾಟ ನಡೆಸುತ್ತವೆ. ರೆಕ್ಕೆಬಡಿಯದೇ ಆಕಾಶದಲ್ಲಿ ತಾಸುಗಟ್ಟಲೆ ಸುತ್ತುಹೊಡೆಯ ಬಲ್ಲದು. ಇದರ ದೃಷ್ಟಿ ಮಾನವನಿಗಿಂದ 8 ಪಟ್ಟು ಸೂಕ್ಷ್ಮ ಅಂದರೆ ಇವು 3 ಅಡಿ ಎತ್ತರದ ಪ್ರಾಣಿಗಳನ್ನು ನಾಲ್ಕು ಮೈಲಿಯಷ್ಟು ಎತ್ತರದಿಂದಲೇ ಸ್ಪಷ್ಟವಾಗಿ ಗುರಿತಿಸಬಲ್ಲವು. ಸತ್ತ ಸಾಕು ಮತ್ತು ವನ್ಯ ಪ್ರಾಣಿಗಳು ಇವುಗಳ ಆಹಾರ. ಸತ್ತ ಕೊಳೆತ ಪ್ರಾಣಿಗಳ ಸುತ್ತ ಗುಂಪುಗುಂಪಾಗಿ ತಿನ್ನುವುದು ಸಾಮಾನ್ಯ.  ಇಂತಹ ಸತ್ತ,ಕೊಳೆತ ಪ್ರಾಣಿಗಳನ್ನು ಭಕ್ಷಿಸುವ ಮೂಲಕ ರಣಹದ್ದುಗಳು ಊರನ್ನು ದುರ್ವಾಸನೆಯಿಂದಷ್ಟೆ ಅಲ್ಲದೆ ಸತ್ತ ಪ್ರಾಣಿಗಳಿಂದ ಸಾಂಕ್ರಾಮಿಕ ರೋಗಗಳ ಹರಡದಂತೆ ನೈಸರ್ಗಿಕ  ಸ್ಕ್ಯಾವೆಂಜರ್‍ಗಳಾಗಿ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಣಹದ್ದುಗಳು 12 ಕಿ.ಮೀ ಗಿಂತಲೂ  ಎತ್ತರಕ್ಕೆ ಹಾರುತ್ತವೆ ಅಲ್ಲದೇ ತಾಸಿಗೆ 80 ಕಿ.ಮೀ ವೇಗದಲ್ಲಿ ಸಾವಿರಾರು ಕಿ.ಮಿ ಸುತ್ತಳತೆಯಲ್ಲಿ ಗಸ್ತುಹೊಡೆಯತ್ತವೆ. ಆಹಾರ ಕಂಡೊಡನೆ ಗಂಟೆಗೆ 120 ಕಿ.ಮೀ ವೇಗದಲ್ಲಿ ನೆಲಕ್ಕೆರಗಿ ಶವಗಳ ಸುತ್ತ ಪ್ರತ್ಯಕ್ಷವಾಗುತ್ತವೆ. ಇವು ಬೆಟ್ಟಗುಡ್ಡಗಳ ಎತ್ತರ ಸುರಕ್ಷಿತ ಬಂಡೆಗಳ ಮೇಲೆ ಗೂಡು ನಿರ್ಮಿಸುತ್ತವೆ. ಎತ್ತರ ಮರದ ಮೇಲು ಕೂಡ ಗೂಡು ನಿರ್ಮಿಸ ಬಲ್ಲವು.

ಸಂರಕ್ಷಣೆಯ ಅಗತ್ಯ: ಈಗಾಗಲೆ ಅಳಿವಿನಂಚಿನ ಭೀತಿಯೆದುರುಸುತ್ತಿರುವ ರಣಹದ್ದುಗಳ ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವದರಿಂದ ಸಂರಕ್ಷಣೆ ಮುಖ್ಯವಾಗಿದ್ದು ಅರಣ್ಯ ಇಲಾಖೆಯ ಜೊತೆ ಸ್ಥಳೀಯ ಸಾರ್ವಜನಿಕರ ಸಹಕಾರ ಕೂಡಾ ಅವಶ್ಯ. ಗಜೇಂದ್ರಗಡ, ನಾಗೆಂದ್ರಗಡ, ಕಾಲಕಾಲೇಶ್ವರ ಬೆಟ್ಟ, ಶಾಂತೇಶ್ವರ ಬೆಟ್ಟಗಳು ರಣಹದ್ದು ಸೇರಿದಂತೆ ಇತರ ಹದ್ದುಗಳಿಗೆ ಸೂಕ್ತ ನೈಸರ್ಗಿಕ ಆವಾಸ ಸ್ಥಾನ ವಾಗಿದ್ದು ಇಲ್ಲಿ ಈಗಾಗಲೆ ಅಳಿವಿಂಚಿನಲ್ಲಿರುವ ತೋಳ ಹಾಗೂ ಕತ್ತೆಕಿರುಬಗಳು ಇದ್ದು ಸಂರಕ್ಷಣೆಯ ಕ್ರಮಗಳು ಅವಶ್ಯವಾಗಿದೆ.

ವಿಶ್ವದಲ್ಲಿರುವ 23 ಜಾತಿಯ ರಣಹದ್ದುಗಳ ಪೈಕಿ 16 ಜಾತಿಯ ರಣಹದ್ದುಗಳು ಅಳಿವಿನಂಚು ತಲುಪಿವೆ. ಭಾರತದಲ್ಲಿ 9 ವಿವಿಧ ಬಗೆಯ ರಣಹದ್ದುಗಳಿದ್ದು 4 ಜಾತಿಯ ರಣಹದ್ದುಗಳು ಅಳಿವಿನ ಭೀತಿಯನ್ನೆದುರಿಸುತ್ತವೆ. ಭಾರತದಲ್ಲಿ ರಣಹದ್ದುಗಳ ಸಂರಕ್ಷಣೆಗಾಗಿ ನಮ್ಮ ರಾಜ್ಯದ ರಾಮನಗರ ಜಿಲ್ಲೆಯ 346 ಹೆಕ್ಟೆರ್ “ರಾಮದೇವರ ಬೆಟ್ಟ”  ಎಕೈಕ ಪ್ರದೇಶವಾಗಿದೆ. (2012 ರ ಜನೆವರಿಯಲ್ಲಿ ರಣಹದ್ದುಗಳ ಸಂರಕ್ಷಿತ ತಾಣ ವಾಗಿ ಘೋಷಣೆ)

ರಣಹದ್ದುಗಳು ಸತ್ತು ಕೊಳೆಯುತ್ತಿರುವ ವನ್ಯಪ್ರಾಣಿ ಮತ್ತು ಸಾಕು ಪ್ರಾಣಿಗಳನ್ನು ತಿನ್ನುವುದರ ಮೂಲಕ ದುರ್ವಾಸನೆ ಹಾಗೂ ಅವುಗಳಿಂದ ಹರಡಬಹುದಾದ ರೋಗ ರುಜಿನಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಸುಮಾರು 2 ದಶಕಗಳ ಹಿಂದೆ ಅಪಾರ ಸಂಖ್ಯೆಯಲ್ಲಿದ್ದ ರಣಹದ್ದುಗಳ ಜಾನುವಾರುಗಳಿಗೆ ಬಳಸುತ್ತಿದ್ದ ಡೈಕ್ಲೋಫೀನಾಕ್ ಔಷಧಿಯಿಂದಾಗ ಹದ್ದುಗಳ ಆರೋಗ್ಯದ ಮೇಲಾಗು ದುಷ್ಪರಿಣಾಮದಿಂದಾಗಿ ಗಣನೀಯವಾಗಿ ಕುಸಿದು ಅಳಿವಿಂಚು ಸೇರುತ್ತಿದೆ. ರಣಹದ್ದುಗಳ ಸಂರಕ್ಷಣೆಗಾಗಿ ಸರಕಾರ 4 ವರ್ಷದಿಂದ ಡೈಕ್ಲೋಫಿನಾಕ್ ಬಳಕೆಗೆ ನಿಷೇದ ಹೆರಿದ್ದು ಗಮನಾರ್ಹ ವಿಷಯ.

ಕಳೆದ ವಾರ ಗದಗ ಜಿಲ್ಲೆಯ ಎ.ಸಿ.ಎಫ್ ಪರಿಮಳ ಹುಲಗನ್ನವರವರ ಹಿರೇಹಾಳ ಗ್ರಾಮದಲ್ಲಿರುವ ಹೊಲದಲ್ಲಿ ರಣಹದ್ದು ಗೊಚರಿಸಿದೆ. ಶಾಂತಗೇರಿ ಬೆಟ್ಟದಲ್ಲಿನ ಅರಣ್ಯ ರಕ್ಷಕ ಸಿಬ್ಬಂದಿಗಳಾದ ಈಶ್ವರ ಮರ್ತೂರ, ಮಲ್ಲೇಶ ಹುಲ್ಲಣ್ಣವರ, ಶಾಂತಪ್ಪ ಹಟ್ಟಿಮನಿ ಮತ್ತು ಯಮನೂರ ಪಿಳಮಂಟರ ಇವರಿಗೂ ಸಹ ಗೂಚರಿಸಿವೆ. ಅರಣ್ಯ ಇಲಾಖೆ ಇವುಗಳ ಸಂರಕ್ಷಣೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಮಂಜುನಾಥ ಎಸ್ ನಾಯಕ, ಜೀವವೈವಿಧ್ಯ ಸಂಶೋಧಕರ ಪ್ರಕಾರ “ರಣ ಹದ್ದುಗಳು ಗದಗ್ ಜಿಲ್ಲೆಯ ಗಜೇಂದ್ರಗಡ ಗಿರಿಗಳತ್ತ ಬಂದಿದ್ದೆ ನಮಗೆಲ್ಲ ಖುಚಿ ವಿಷಯ. ಇವು ನಮ್ಮ ಅತಿಥಿಗಳಿದ್ದ ಹಾಗೆ. ಇವುಗಳನ್ನು ಉಪಚರಿಸ ಗೋಜು ಬೇಡ ಆದರೆ ಅವುಗಳ ಸಂರಕ್ಷಿಸಿದರೆ ಅಷ್ಟೆ ಸಾಕು”.

ಗದಗ್ ಜಿಲ್ಲಾ ಅರಣ್ಯಾಧಿಕಾರಿ ದೀಪಿಕಾ ಬಾಜಪೇಯಿ ಅವರು ಹೇಳಿದ್ದು ಹೀಗೆ, “ಈ ಭಾಗದಲ್ಲಿ 20 ವರ್ಷಗಳ ನಂತರ ರಣ ಹದ್ದುಗಳು ಬಂದಿವೆ ಎಂಬುದು ನಿಜಕ್ಕೂ ಸಂತಸದ ವಿಷಯ. ನಮ್ಮ ಇಲಾಖೆಯು ಇವುಗಳನ್ನು ಸಂರಕ್ಷಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ”.

ಉಪ ಅರಣ್ಯ ಅಧಿಕಾರಿಗಳಾದ ಪರಿಮಳ ಹುಲಗನ್ನವರ, “ನಾನು ಸ್ವತಃ ಕಂಡಿದ್ದು, ನನ್ನ ಹೊಲದಲ್ಲಿ ಕಾಯಕದಲ್ಲಿ ತೊಡಗಿದ್ದಾಗ ನನ್ನ ತಲೆ ಮೇಲೆ ಹಾದುಹೋಯಿತು. ಬಹುಶ ನಾನು ಇದ್ದೀನಿ ನನ್ನ ಕಡೆಗೆ ಗಮನ ಹರಿಸಿ ಎಂದು ಸಂದೇಶವಿತ್ತಿತೇನೋ ಎಂಬ ಭಾವ ನನ್ನಲ್ಲಿ ಮೂಡಿತು. ಆ ಕ್ಷಣ ನನಗೆ ಖುಷಿ ಮತ್ತು ಆಶ್ಚರ್ಯ ಒಮ್ಮೆಲೆ ಆಯಿತು. ಇದು ನಡೆದಿದ್ದು ಹಿರೇಹಾಳ ಗ್ರಾಮದ ಹೊರವಲಯದಲ್ಲಿ ಶುಕ್ರವಾರ. ಇವುಗಳ ಸಂರಕ್ಷಣೆಗೆ ನಾವೆಲ್ಲ ಬದ್ಧರಿದ್ದೇವೆ”. 

Tags: ಗಜೇಂದ್ರಗಡನೇಪಾಳಪಾಕಿಸ್ತಾನಭಾರತಭಾರತೀಯ ರಣಹದ್ದು
Previous Post

ಪಿಎಂ ಕೇರ್ಸ್ ವಿವಾದ: ಮತ್ತಷ್ಟು ಕಗ್ಗಂಟಾದ ಪ್ರಶ್ನೆಗಳಿಗೆ ಸಿಗುವುದೇ ಉತ್ತರ?

Next Post

ಅಫ್ಘಾನ್ ನೆಲೆ ಭಯೋತ್ಪಾದನೆಗೆ ಬಳಕೆಯಾಗಲು ಬಿಡೋದಿಲ್ಲ; ಚೀನಾ-ಪಾಕ್ ವಿರುದ್ಧ ಮೋದಿ ಕಿಡಿ

Related Posts

Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
0

https://youtu.be/DaADq5Dowbg

Read moreDetails

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

July 10, 2025

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

July 10, 2025
5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

July 10, 2025
ದೆಹಲಿಯಲ್ಲಿ ಸಿಎಂ & ಡಿಸಿಎಂ ರಾಜಕೀಯ ದಾಳ..? – ವರಿಷ್ಠರಿಗೆ ಇಂದೇ ವರದಿ ನೀಡಲಿದ್ದಾರೆ ಸುರ್ಜೇವಾಲಾ! 

ದೆಹಲಿಯಲ್ಲಿ ಸಿಎಂ & ಡಿಸಿಎಂ ರಾಜಕೀಯ ದಾಳ..? – ವರಿಷ್ಠರಿಗೆ ಇಂದೇ ವರದಿ ನೀಡಲಿದ್ದಾರೆ ಸುರ್ಜೇವಾಲಾ! 

July 10, 2025
Next Post
ಅಫ್ಘಾನ್ ನೆಲೆ ಭಯೋತ್ಪಾದನೆಗೆ ಬಳಕೆಯಾಗಲು ಬಿಡೋದಿಲ್ಲ; ಚೀನಾ-ಪಾಕ್ ವಿರುದ್ಧ ಮೋದಿ ಕಿಡಿ

ಅಫ್ಘಾನ್ ನೆಲೆ ಭಯೋತ್ಪಾದನೆಗೆ ಬಳಕೆಯಾಗಲು ಬಿಡೋದಿಲ್ಲ; ಚೀನಾ-ಪಾಕ್ ವಿರುದ್ಧ ಮೋದಿ ಕಿಡಿ

Please login to join discussion

Recent News

Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
Top Story

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

by ಪ್ರತಿಧ್ವನಿ
July 10, 2025
Top Story

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

by ಪ್ರತಿಧ್ವನಿ
July 10, 2025
5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 
Top Story

5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

by Chetan
July 10, 2025
ದೆಹಲಿಯಲ್ಲಿ ಸಿಎಂ & ಡಿಸಿಎಂ ರಾಜಕೀಯ ದಾಳ..? – ವರಿಷ್ಠರಿಗೆ ಇಂದೇ ವರದಿ ನೀಡಲಿದ್ದಾರೆ ಸುರ್ಜೇವಾಲಾ! 
Top Story

ದೆಹಲಿಯಲ್ಲಿ ಸಿಎಂ & ಡಿಸಿಎಂ ರಾಜಕೀಯ ದಾಳ..? – ವರಿಷ್ಠರಿಗೆ ಇಂದೇ ವರದಿ ನೀಡಲಿದ್ದಾರೆ ಸುರ್ಜೇವಾಲಾ! 

by Chetan
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

July 10, 2025

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

July 10, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada