ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಶುಕ್ರವಾರ ನಡೆದ ಲಸಿಕಾ ಮೇಳ (ವ್ಯಾಕ್ಸಿನೇಷನ್ ಡ್ರೈವ್) ಕರ್ನಾಟಕದಲ್ಲಿ ಯಶಸ್ವಿಯಾಗಿ ಜರುಗಿತ್ತು. ಆದರೀಗ ರಾಜ್ಯದಲ್ಲಿ ಲಸಿಕಾ ಸಂಖ್ಯೆಗಳಲ್ಲಿ ಭಾರಿ ಕುಸಿತ ಕಂಡಿದ್ದು ದಿನಕ್ಕೆ ಐದು ಲಕ್ಷ ಲಸಿಕೆ ನೀಡುವ ಯೋಜನೆಯನ್ನು ಸರ್ಕಾರ ಮರೆತಂತಿದೆ.
ಶುಕ್ರವಾರ ಕರ್ನಾಟಕದಲ್ಲಿ ನಡೆದ ವ್ಯಾಕ್ಸಿನೇಷನ್ ಡ್ರೈವ್ ನಲ್ಲಿ 31 ಲಕ್ಷ (31,43,598) ಜನರಿಗೆ ಲಸಿಕೆಯನ್ನು ನೀಡಲಾಯಿತು. ಅದರ ನಂತರ ದಿನನಿತ್ಯದ ಲಸಿಕೆಗಳಲ್ಲಿ 90 ಪ್ರತಿಶತದಷ್ಟು ಇಳಿಕೆ ಕಂಡುಬಂದಿದೆ. ಮರುದಿನವೇ ಕೇವಲ 1.82 ಲಕ್ಷ (1,82,309) ಡೋಸ್‌ಗಳನ್ನು ನೀಡಲಾಗಿದೆ. ಭಾನುವಾರ ಅತ್ಯಂತ ಕಡಿಮೆ ಪ್ರಮಾಣವನ್ನು ಗಮನಿಸಲಾಗಿದ್ದು ಕೇವಲ 58,509 ಡೋಸ್‌ಗಳನ್ನು ನೀಡಲಾಗಿದೆ. ಲಸಿಕಾ ಮೇಳದ ಸಾಧನೆಗೆ ಹತ್ತಿರವಾಗದಿದ್ದರೂ, ಸೋಮವಾರ 2,55,503 ಡೋಸ್‌ಗಳನ್ನು ನೀಡಿದ್ದು ಕಳೆದ ಮೂರು ದಿನಗಳನ್ನು ತಾಳೆ ಮಾಡಿದರೆ ಸೋಮವಾರದಂದು ಹೆಚ್ಚಳ ಕಂಡುಬಂದಿದೆ. ಇನ್ನು ಮಂಗಳವಾರ, 2,62,709 ಡೋಸ್‌ಗಳನ್ನು ನೀಡಲಾಗಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕಿ ಡಾ.ಅರುಂಧತಿ ಚಂದ್ರಶೇಖರ್ ಮಾತನಾಡಿ, “ಲಸಿಕೆ ಮೇಳಕ್ಕಾಗಿ ಜಿಲ್ಲೆಗಳಿಗೆ ಕಳುಹಿಸಿದ ಸ್ಟಾಕ್ ಒಂದೇ ದಿನದಲ್ಲಿ ಖಾಲಿಯಾಗಿದೆ. ಮುಂದಿನ ಎರಡು ದಿನಗಳು ವಿರಾಮದ ದಿನಗಳು, ಸೋಮವಾರ ಮತ್ತೊಮ್ಮೆ ಲಸಿಕೆ ಹಾಕುವ ಮೂಲಕ. ನಮ್ಮ ಪ್ರತಿದಿನ 5 ಲಕ್ಷ ಡೋಸ್‌ಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಮುಂದುವರೆದು, ರಾಜ್ಯದಿಂದ ಜಿಲ್ಲೆಗಳಿಗೆ ದಾಸ್ತಾನು ತಲುಪಲು ಒಂದರಿಂದ ಒಂದೂವರೆ ದಿನಗಳು ಬೇಕಾಗುತ್ತದೆ ಎಂದು ಡಾ.ಅರುಂಧತಿ ಹೇಳಿದ್ದಾರೆ. ಜಿಲ್ಲಾ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಸಭೆಯಲ್ಲಿ, ಲಸಿಕೆ ಆಡಳಿತವನ್ನು ಕಾರ್ಯತಂತ್ರಗೊಳಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೂಚನೆ ನೀಡಲಾಯಿತು. ಒಂದು ಅಥವಾ ಎರಡು ದಿನಗಳಲ್ಲಿ ಡ್ರೈವ್ ಟ್ರ್ಯಾಕ್‌ಗೆ ಬರಲಿದೆ ಎಂದು ಹೇಳಿದರು. ಸೆಪ್ಟೆಂಬರ್ 21 ಬುಧವಾರದ ನಂತರದ ಮೇಳಕ್ಕೆ ಇಲಾಖೆಯು ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ, ಅವರು 20 ಲಕ್ಷಕ್ಕಿಂತ ಹೆಚ್ಚಿನ ಡೋಸ್‌ಗಳ ಸ್ಟಾಕ್ ಅನ್ನು ಸ್ವೀಕರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಸಂಪರ್ಕಿಸಿದಾಗ ಲಭ್ಯವಿರದಿರುವುದಾಗಿ ದಿ ನ್ಯೂ ಇಂಡಿಯಾ ಎಕ್ಸ್‌ಪ್ರೆಸ್ ವರದಿ ಮಾಡಿದೆ.
COWIN ಡ್ಯಾಶ್‌ಬೋರ್ಡ್ ಪ್ರಕಾರ, ಕರ್ನಾಟಕವು ದೇಶದಲ್ಲಿ ಏಳನೇ ಸ್ಥಾನದಲ್ಲಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ 5,26,63,920 ಜನರಿಗೆ ಲಸಿಕೆ ನೀಡಲಾಗಿದೆ. ಅದಕ್ಕೂ ಮುಂಚೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಟಾಪ್ ಏಳು ಸ್ಥಾನದಲ್ಲಿ ಜಾಗ ಪಡೆದಿದೆ. ರಾಜ್ಯದೊಳಗೆ, ಬಿಬಿಎಂಪಿ, ಬೆಳಗಾವಿ, ಮೈಸೂರು, ದಕ್ಷಿಣ ಕನ್ನಡ ಫಲಾನುಭವಿಗಳಿಗೆ ಅತಿ ಹೆಚ್ಚು ಡೋಸ್‌ಗಳನ್ನು ನೀಡಿದೆ.






