ಕರ್ನಾಟಕದಲ್ಲಿ ಒಂದು ತಿಂಗಳ ಕಾಲ ನಡೆದ ಕ್ಷಯರೋಗ ಸಮೀಕ್ಷೆಯಲ್ಲಿ 225 ಜನರು ಕ್ಷಯರೋಗ (TB) ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ .
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಒಂದು ಬಾರಿ ಮನೆ-ಮನೆಗೆ ಸಮೀಕ್ಷೆಯು ಆಗಸ್ಟ್ 16 ಮತ್ತು ಸೆಪ್ಟೆಂಬರ್ 11ರ ನಡುವೆ ನಡೆಸಿ 7,66,137 ಜನರನ್ನು ಪರೀಕ್ಷಿಸಿತು. ಇದರಲ್ಲಿ 225 ಜನರು ಕಾಯಿಲೆಯಿಂದ ಬಳಲುತ್ತಿರುವುದು ದೃಢವಾಗಿದ್ದು, ಇವರಲ್ಲಿ 151 ಪ್ರಕರಣಗಳು ಕೋವಿಡ್ -19 ನಿಂದ ಚೇತರಿಸಿಕೊಂಡ ರೋಗಿಗಳಾಗಿದ್ದಾರೆ. ರೋಗಿಗಲ ಸಂಪರ್ಕದಲ್ಲಿ 74 ಜನರಿದ್ದಾರೆ ಎನ್ನಲಾಗಿದೆ. ಇನ್ನು ಬೆಂಗಳೂರು ನಗರದಲ್ಲಿ 44, ಬಳ್ಳಾರಿ 25, ಮೈಸೂರು 14, ಚಿತ್ರದುರ್ಗ 13, ಕಲಬುರಗಿ 13, ಮತ್ತು ಕೊಪ್ಪಳ 13 ಜನರಿಗೆ ಟಿಬಿ ಇರುವುದು ವರದಿಯಾಗಿವೆ. ವಿಜಯಪುರ, ಕೋಲಾರ ಮತ್ತು ಯಾದಗಿರಿಯಲ್ಲಿ ಯಾವುದೇ ಟಿಬಿ ಪ್ರಕರಣಗಳು ವರದಿಯಾಗಿಲ್ಲ.
“ಈ ವರ್ಷ ಜನವರಿ ಮತ್ತು ಜೂನ್ ನಡುವೆ ಕೋವಿಡ್ಗೆ ತುತ್ತಾದ ರೋಗಿಗಳಲ್ಲಿ ಕೆಲವರು ಆರು ತಿಂಗಳ ಕಾಲ ನಿರಂತರವಾಗಿ ಕ್ಷಯರೋಗ ಚಿಕಿತ್ಸೆಗೆ ಒಳಗಾಗಿದ್ದಾರೆ. ರೋಗಿಗಳು ತಮ್ಮ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಥಾವ ಕಳೆದುಕೊಂಡಲ್ಲಿ ಸ್ಥಳೀಯ ಆಶಾ ಕಾರ್ಯಕರ್ತರು ಅವರ ಮನೆಗಳಿಗೆ ಭೇಟಿ ನೀಡುತ್ತಾರೆ. ಬಳಸಿದ ಟ್ಯಾಬ್ಲೆಟ್ ಸ್ಟ್ರಿಪ್ಗಳನ್ನು ರೋಗಿಗಳು ಆಶಾ ಕಾರ್ಯಕರ್ತರಿಗೆ ಹಿಂದಿರುಗಿಸಬೇಕು. ಮಾತ್ರೆ ತೆಗೆದುಕೊಳ್ಳುತ್ತಿದ್ದಾಋಯೇ ಇಲ್ಲವೇ ಎಂದು ನಾವು ಮನೆ ಮನೆಗೆ ನಮ್ಮ ಸಿಬ್ಬಂಧಿಗಳು ಬೇಟಿ ನೀಡಿ ಖಚಿತಪಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಪೌಷ್ಠಿಕಾಂಶ ವೆಚ್ಚಕ್ಕಾಗಿ 500 ರೂಗಳನ್ನು ಅವರಿಗೆ ನೀಡಲಾಗುತ್ತದೆ “ಎಂದು ಟಿಬಿಯ ರಾಜ್ಯ ಜಂಟಿ ನಿರ್ದೇಶಕ ಡಾ.ರಮೇಶ್ ರೆಡ್ಡಿ ಹೇಳಿದ್ದಾರೆ.
“ಕೋವಿಡ್ ರೋಗಿಗಳಿಗೆ ನೀಡುವ ಟೊಸಿಲಿಜುಮಾಬ್ನಂತಹ ಸ್ಟೀರಾಯ್ಡ್ಗಳು ರೋಗನಿರೋಧಕ ಶಕ್ತಿಯನ್ನು ನಿಗ್ರಹಿಸಲು ಕಾರಣವಾಗುತ್ತವೆ, ಇದು ರೋಗಿಯಲ್ಲಿ ಸುಪ್ತ ಕ್ಷಯವನ್ನು ಸಕ್ರಿಯಗೊಳಿಸುತ್ತದೆ. ಈ ಸಮೀಕ್ಷೆಯಲ್ಲಿ ಪತ್ತೆಯಾದ ಎಷ್ಟು ಟಿಬಿ ರೋಗಿಗಳು ಸೌಮ್ಯದಿಂದ ಮಧ್ಯಮ ಕೋವಿಡ್ ಹೊಂದಿದ್ದರು ಮತ್ತು ಸ್ಟೀರಾಯ್ಡ್ಗಳನ್ನು ಎಷ್ಟು ಜನರು ತೆಗೆದುಕೊಂಡಿದ್ದರು ಎಂದು ಪರಿಶೀಲಿಸುವುದು ಆಸಕ್ತಿದಾಯಕವಾಗಿದೆ,” ಎಂದು ಹಿರಿಯ ಸಲಹೆಗಾರರು ಮತ್ತು ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಯ ಪಲ್ಮನಾಲಜಿ ಮತ್ತು ಇಂಟರ್ವೆನ್ಷನಲ್ ಪಲ್ಮನಾಲಜಿಸ್ಟ್ ಡಾ.ರವೀಂದ್ರ ಮೆಹ್ತಾ ಹೇಳಿದ್ದಾರೆ.