‘ಹಿಂದೂ ವಿರೋಧಿ ವಿಚಾರ ಬಂದಾಗ ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ. ನೀವು ಯಾವ ಲೆಕ್ಕ?’ ಎಂದು ಮುಖ್ಯಮಂತ್ರಿಗೆ ಬಹಿರಂಗ ಬೆದರಿಕೆ ಹಾಕಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರನ್ನು ಮಂಗಳೂರು ನಗರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಮೈಸೂರಿನಲ್ಲಿ ದೇಗುಲ ತೆರವು ವಿಷಯಕ್ಕೆ ಸಂಬಂಧಿಸಿದಂತೆ ಶನಿವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಧರ್ಮೇಂದ್ರ, ‘ಹಿಂದೂಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ, ಗಾಂಧಿ ಹತ್ಯೆ ಮಾಡಲಿಕ್ಕಾಗುತ್ತದೆ ಎಂದಾದರೆ, ನಿಮ್ಮ ವಿಚಾರದಲ್ಲಿ ನಾವು ಆಲೋಚನೆ ಮಾಡಲು ಸಾಧ್ಯವಿಲ್ಲ ಎನ್ನುತ್ತೀರಾ’ ಎಂದು ಬಹಿರಂಗ ಬೆದರಿಕೆ ಹಾಕಿದ್ದರು.
ರಾಜ್ಯದ ಮುಖ್ಯಮಂತ್ರಿಗೆ ಬಹಿರಂಗ ಬೆದರಿಕೆ ಹಾಕಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಹಿಂದೂ ಮಹಾಸಭಾದ ಮುಖಂಡನ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಗಳು ಕೇಳಿಬಂದಿದ್ದವು.
ಅದಾದ ಬೆನ್ನಲ್ಲೇ, ಧರ್ಮೇಂದ್ರ ವಿರುದ್ಧ ಬೆಂಗಳೂರಿನ ಲೋಹಿತ್ ಕುಮಾರ್ ಸುವರ್ಣ ಎಂಬುವರು ಮಂಗಳೂರಿನ ಬರ್ಕೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಆ ಬಳಿಕ ಧರ್ಮೇಂದ್ರ ವಿಡಿಯೊ ಮೂಲಕ ‘ಗಾಂಧಿ ಹತ್ಯೆ’ ಎಂಬ ಪದ ಬಳಕೆ ಮಾಡಿದ್ದಕ್ಕೆ ಕ್ಷಮೆಯಾಚಿಸಿದ್ದರು. ಇದೀಗ ಪೊಲೀಸರು ಧರ್ಮೇಂದ್ರ ಅವರನ್ನು ಬಂಧಿಸಿದ್ದಾರೆ.