ಸಿಪಿಐ (ಎಂ) ಬೆಂಬಲಿತ ಎಸ್ಎಫ್ಐ ಮತ್ತು ತೃಣಮೂಲ ಕಾಂಗ್ರೆಸ್ ಬೆಂಬಲಿಗರ ಕಾರ್ಯಕರ್ತರ ನಡುವೆ ಭಾನುವಾರ ಕೋಲ್ಕತಾ ಬಳಿಯ ರಾಜಪುರದಲ್ಲಿ ಘರ್ಷಣೆ ನಡೆದರಿಂದ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲಾ ಮತ್ತು ಕಾಲೇಜುಗಳನ್ನು ತೆರೆಯುವಂತೆ ಒತ್ತಾಯಿಸಿ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಕಾರ್ಯಕರ್ತರು ರಾಜಪುರದಲ್ಲಿ ಪ್ರದೇಶದಲ್ಲಿ ಮೆರವಣಿಗೆ ನಡೆಸುತ್ತಿದ್ದರು ಆ ಪ್ರದೇಶದಲ್ಲಿ ಉಂಟಾದ ಟ್ರಾಪೀಕ್ ನಲ್ಲಿ ಟಿಎಂಸಿಯ ಸೋನಾರ್ಪುರ ದಕ್ಷಿಣ ಶಾಸಕ ಲವ್ಲಿ ಮೊಯಿತ್ರಾ ಅವರ ಕಾರು ಸಿಲುಕಿಕೊಂಡಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘೋಷಣೆಗಳ ನಡುವೆ, ಎಸ್ಎಫ್ಐ ಕಾರ್ಯಕರ್ತರು ಮತ್ತು ಮೊಯಿತ್ರಾ ಜೊತೆಗಿದ್ದ ಟಿಎಂಸಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು ತಾತಕಕ್ಕೇರಿದ ಮಾತು ದೊಡ್ಡ ಘರ್ಷಣೆಗೆ ಕಾರಣವಾಯಿತು, ಎರಡೂ ಕಡೆಯಿಂದ ಹಲವಾರು ಜನರು ಗಾಯಗೊಂಡರು ಎಂದು ಅಧಿಕಾರಿ ಹೇಳಿದರು.
ಆ ಪ್ರದೇಶಕ್ಕೆ ಪೊಲೀಸ್ ತುಕಡಿಯನ್ನು ಕಳುಹಿಸಿದ ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಬಂತು ಎಂದು ಅವರು ಹೇಳಿದ್ದಾರೆ.
“ರ್ಯಾಲಿ ಸೋನಾರ್ಪುರ್ ನಿಲ್ದಾಣದಲ್ಲಿ ಪ್ರಾರಂಭವಾಯಿತು ಮತ್ತು ನಾವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಸಂಸ್ಥೆಗಳನ್ನು ತೆರೆಯಬೇಕೆಂದು ಒತ್ತಾಯಿಸಿ ರಾಜಪುರದತ್ತ ಹೊರಟಿದ್ದೇವು. ರ್ಯಾಲಿಗೆ ನಮಗೆ ಪೋಲಿಸ್ ಅನುಮತಿ ಇತ್ತು” ಎಂದು ಎಸ್ಎಫ್ಐ ನಾಯಕ ಹೇಳಿದ್ದಾರೆ.
“ನಾವು ರಾಜ್ಪುರ್ ತಲುಪಿದಾಗ ಟಿಎಂಸಿ ಕಾರ್ಯಕರ್ತರು ನಮ್ಮ ಕಡೆಗೆ ಧಾವಿಸಿ ಹೊಡೆಯಲು ಪ್ರಾರಂಭಿಸಿದರು” ಎಂದು ಅವರು ಹೇಳಿದರು.
ರ್ಯಾಲಿಯಲ್ಲಿ ಆಕೆಯ ಕಾರು ಟ್ರಾಫಿಕ್ನಲ್ಲಿ ಸಿಲುಕಿಕೊಂಡಾಗ ಮೊಯಿತ್ರಾ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಟಿಎಂಸಿ ಕಾರ್ಯಕರ್ತರೊಬ್ಬರು ಪ್ರತಿಭಟಿಸಿದಾಗ, ಎಡ ವಿದ್ಯಾರ್ಥಿಗಳು ಆತನನ್ನು ಹೊಡೆಯಲು ಆರಂಭಿಸಿದರು ಎಂದು ಆಕೆ ಹೇಳಿಕೊಂಡಿದ್ದಾಳೆ.
“ಘಟನೆಯ ಹಿಂದೆ ಇರುವ ಎಲ್ಲರಿಗೂ ಶಿಕ್ಷೆಯಾಗಬೇಕೆಂದು ನಾನು ಬಯಸುತ್ತೇನೆ” ಎಂದು ಮೊಯಿತ್ರಾ ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ಇನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.