ಮುಂದಿನ ಚುನಾವಣೆಗೆ ಇನ್ನೂ ಒಂದೂ ಕಾಲು ವರ್ಷವಿದೆ. ಈ ಹೇಳಿಕೆ ಈಗ ಅಗತ್ಯವಿತ್ತೆ? ಚುನಾವಣಾ ಚಾಣಕ್ಯ ಎಂದು ಬಿಂಬಿಸಲ್ಪಟ್ಟ ಅಮಿತ್ ಶಾ, ತಮ್ಮ ಈ ಹೇಳಿಕೆ ರಾಜ್ಯ ಬಿಜೆಪಿ ನಾಯಕರಲ್ಲಿ ಅಸಮಾಧಾನ ಉಂಟು ಮಾಡಲಿದೆ ಎಂಬುದು ಗೊತ್ತಿದ್ದೂ, ಉದ್ದೇಶಪೂರ್ವಕವಾಗಿಯೇ ಹೇಳಿದ್ದರ ಹಿಂದಿನ ತಂತ್ರವೇನು?
ಪರೀಣಾಮಗಳು ಆಗಲೇ ಅಸಮಾಧಾನಕ್ಕೆ ಕಾರಣವಾಗಿವೆ. ಆದರೆ ಅಮಿತ್ ಶಾ ಮತ್ತು ಟೀಂ ಅದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಬಿಜೆಪಿಯ ಮೊದಲ ಆದ್ಯತೆ ಆರ್ಎಸ್ಎಸ್ ಮೂಲದವರು ಮತ್ತು ಸಂಪರ್ಕ ಇರುವರನ್ನು ಸಿಎಂಗಳನ್ನಾಗಿ ಮಾಡುವುದೇ ಆಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಡೈಲೂಟ್ ಆಗಿದೆ. ಒಟ್ಟಿನಲ್ಲಿ ದೇಶದ ಮತ್ತು ರಾಜ್ಯಗಳ ಆಡಳಿತ ತಮ್ಮಲ್ಲಿರಲು ಅದು ಎಲ್ಲ ಡ್ರಾಮಾಗಳನ್ನೂ ಮಾಡುತ್ತಿದೆ.
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಪೈಕಿ ನಾಲ್ಕರಲ್ಲಿ ಹೊರಗಿನಿಂದ ಬಂದವರೇ ಸಿಎಂ ಆಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಗೆದ್ದ ಬಿಜೆಪಿ ಕಾಂಗ್ರೆಸ್ನಿಂದ ಬಂದ ಬಿಸ್ವಾಸ್ ಅವರನ್ನು ಸಿಎಂ ಕುರ್ಚಿಯಲ್ಲಿ ಕೂಡಿಸಿದೆ.
ಈಶಾನ್ಯ ಭಾರತದ ಬಹುಪಾಲು ರಾಜ್ಯಗಳಲ್ಲಿ ಅದರ ಶಾಸಕರುಗಳೆಲ್ಲ ಹೊರಗಿನಿಂದ ಬಂದವರೇ. ಗೋವಾದಲ್ಲಿರುವುದು ಬಿಜೆಪಿ ಬೋರ್ಡ್ ತಗುಲಿ ಹಾಕಿಕೊಂಡಿರುವ ಕಾಂಗ್ರೆಸ್ ಸರ್ಕಾರ.
ಒಟ್ಟಿನಲ್ಲಿ ಬಿಜೆಪಿಯ ಉದ್ದೇಶವಿಷ್ಟೇ: ಕೇಸರಿ ಶಾಲು ಧರಿಸಿ ಬಂದವರೆಲ್ಲ ತನ್ನವರು ಎಂದು ಬಾಹ್ಯವಾಗಿ ಬಿಂಬಿಸುವುದು. ಆದರೆ ಅವರನ್ನು ತಮ್ಮ ಸಿದ್ಧಾಂತಗಳ ಹೇರಿಕೆಗೆ ಬಳಸಿಕೊಳ್ಳುವುದು.
ಈಗ ಜಗದೀಶ್ ಶೆಟ್ಟರ್, ಈಶ್ವರಪ್ಪ ಮತ್ತು ಕೊನೆಗೆ ಯಡಿಯೂರಪ್ಪ ಬೆಂಬಲಿಗರು ‘ಬೊಮ್ಮಾಯಿ ಹೊರಗಿನವರು’ಎಂದು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ವಿಷುತ್ರವಾಗಿದೆ. ಆದರೆ ಈ ಬಗ್ಗೆ ಈಶ್ವರಪ್ಪ ಬಹಿರಂಗವಾಗಿ ಅಸಮಾಧಾನ ವ್ಯಕ್ತ ಮಾಡಿರುವುದು, ಆಶ್ಚರ್ಯಕರ ರೀತಿಯಲ್ಲಿ ಶೆಟ್ಟರ್ ಅವರು ಯಡಿಯೂರಪ್ಪರನ್ನು ಭೇಟಿಯಾಗಿ ಈ ವಿಷಯದ ಕುರಿತೇ ಚರ್ಚೆ ಮಾಡಿದ್ದಾರೆ. ಒಟ್ಟಿನಲ್ಲಿ ಅಸಮಾಧಾನಕ್ಕೆ ಒಂದು ಕಿಡಿ ಬಿದ್ದಿದೆ. ಆದರೆ ಅಮಿತ್ ಶಾ ಯಾವಾಗಲಾದರೂ ಬೊಮ್ಮಾಯಿಯನ್ನು ಬದಲಿಸಬಹುದು.
ಬ್ರಾಹ್ಮಣ ಸಿಎಂ ಬಿಲ್ಕುಲ್ ಅಸಾಧ್ಯ
ಸದ್ಯದ ಪರಿಸ್ಥಿತಿಯಲ್ಲಿ ಬ್ರಾಹ್ಮಣರೊಬ್ಬರನ್ನು ಸಿಎಂ ಮಾಡುವುದು ಅಸಾಧ್ಯದ ಕೆಲಸ. ಹಾಗೇನಾದರೂ ಮಾಡಿದರೆ ಅದು ದುಸ್ಸಾಹಸವಾಗಲಿದೆ. ಇದು ಗೊತ್ತಿರುವ ಬಿಜೆಪಿ ಬೇಕೆಂತಲೇ ಪ್ರಹ್ಲಾದ್ ಜೋಶಿ ಮತ್ತು ಬಿ.ಎಲ್ ಸಂತೋಷರನ್ನು ದೂರವಿಟ್ಟಿದೆ. ಅದರ ಮೊದಲ ಆದ್ಯತೆ ಆರ್ಎಸ್ಎಸ್ ಸಂಪರ್ಕದ ಲಿಂಗಾಯತ ಅಥವಾ ಒಕ್ಕಲಿಗರನ್ನು ಸಿಎಂ ಮಾಡುವುದು. ಹೀಗಾಗಿಯೇ ಬಿಜೆಪಿಯ ಮೊದಲ ಮೂವರು ಸಿಎಂಗಳಾದ ಯಡಿಯೂರಪ್ಪ, ಸದಾನಂದಗೌಡರ್ ಮತ್ತು ಶೆಟ್ಟರ್ ಆರ್ಎಸ್ಎಸ್ ಸಂಒರ್ಕದವರಾಗಿದ್ದರು. ಆದರೆ ಈ ಅವಧಿಯಲ್ಲಿ ಯಡಿಯೂರಪ್ಪ ಆರ್ಎಸ್ಎಸ್ ಹಿಡಿತದಿಂದ ಹೊರಬಂದು ತಮ್ಮದೇ ಪಾಲಿಟಿಕ್ಸ್ ಶುರು ಮಾಡಿದ್ದು, ಹೈಕಮಾಡಂಡಿಗೆ ಸವಾಲಾಗಿದ್ದು ಬಿಜೆಪಿಗೆ ತಲೆನೋವಾಗಿತ್ತು.
ಲಿಂಗಾಯತರನ್ನೇ ಸಿಎಂ ಮಾಡಬೇಕೆಂದು ಹಲವಾರು ಸ್ವಾಮಿಗಳು ಬಹಿರಂಗವಾಗಿಯೇ ಬ್ಲ್ಯಾಕ್ಮೇಲ್ ಮಾಡಿದ ಕಾರಣಕ್ಕೆ ಬಿಜೆಪಿ ಒಂದು ಸಾಫ್ಟ್ ಆಯ್ಕೆಯನ್ನು ಮಾಡಿಕೊಂಡಿತು. ಸಾದರ ಲಿಂಗಾಯತ ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಮಾಡುವ ಮೂಲಕ ತನ್ನ ಮಾತು ಕೇಳುವ ಗಿಣಿಯೊಂದನ್ನು ಮುಂದಕ್ಕೆ ತಂದಿತು.
ಪಾಪುಲಿಸ್ಟ್ ಎಂಬ ತಂತ್ರ
ಇತ್ತೀಚಿನ ಬಿಜೆಪಯ ತಂತ್ರವೆಂದರೆ ಜನಪ್ರಿಯ (ಪಾಪುಲಿಸ್ಟ್) ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದು, ಮಾಧ್ಯಮಗಳ ನೆರವಿನಿಂದ ಅದನ್ನು ಹೈಲೈಟ್ ಮಾಡಿ ಪಾಪುಲಿಸ್ಟ್ ಸರ್ಕಾರ ಎಂದು ಬಿಬಿಸುವುದು. ಆದರೆ ಅದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲಗಳೇ ಇರುವುದಿಲ್ಲ. ನಾಮಕಾವಸ್ಥೆಗೆ ಆ ಕಾರ್ಯಕ್ರಮಗಳನ್ನು ಜಾರಿ ಮಾಡುವುದು,.ಅದರ ಫೋಟೊ, ವಿಡಿಯೋ ಬಳಸಿ ಪ್ರಚಾರ ಪಡೆದುಕೊಳ್ಳುವುದು. ಈವರೆಗೆ ಮೋದಿ ಮಾಡಿದ್ದೂ ಅದೇ ಅಲ್ಲವೇ? ‘ಒವತ್ತು ‘ಉಜಾಲಾ’ ಯೋಜನೆ ಹಳ್ಳ ಹಿಡಿದಿರುವುದು ಅದಕ್ಕೇ ಅಲ್ಲವೇ?
ಈಗ ಬೊಮ್ಮಾಯಿ ಕೂಡ ಬೊಕ್ಕಸದಲ್ಲಿ ಸಾಕಷ್ಟು ದುಡ್ಡು ಇರದಿದ್ದರೂ ಒಂದಿಷ್ಟು ಜನಪದ ಘೋಷಣೆಗಳನ್ನು ಮಾಡಿದ್ದಾರೆ. ಮೀಡಿಯಾಗಳ ಮೂಲಕ ಬೊಮ್ಮಾಯಿಯನ್ನು ಪಾಪುಲಿಸ್ಟ್ ಸಿಎಂ ಎಂದು ಬಿಂಬಿಸಲು ಬಿಜೆಪಿ ನಾಯಕತ್ವ ಹೊರಟಿದೆ.
ಕರ್ನಾಟಕ ರಾಜಕಾರಣದಲ್ಲಿ ಅದು ಅಷ್ಟು ಸುಲಭವಲ್ಲ. ಬೊಮ್ಮಾಯಿ ಅವರಿಗೇನೋ ಒಟ್ಟಿನಲ್ಲಿ ಒಮ್ಮೆ ಸಿಎಂ ಆದೆ ಎಂಬ ಸಂತೃಪ್ತಿಯಿದೆ ಅಷ್ಟೇ. 2007ರಲ್ಲಷ್ಟೇ ಚುನಾವಣೆಗೂ ಸ್ವಲ್ಪ ತಿಂಗಳು ಮೊದಲಷ್ಟೇ ಬಿಜೆಪಿ ಸೇರಿದ ಬೊಮ್ಮಾಯಿ ಅವರ ಅದೃಷ್ಟ ಕಂಡು ಮೂಲ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದರೂ, ಲಿಂಗಾಯತ ಸಿಎಂ ಎಂದು ಸುಮ್ಮನಿದ್ದರು. ಆದರೆ ಈಗ ಅಮಿತ್ ಶಾ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂದ ಕೂಡಲೇ ಈ ಅಸಮಾಧಾನ ಬಹಿರಂಗವಾಗುತ್ತಿದೆ, ಎರಡು-ಮೂರು ತಿಂಗಳಲ್ಲಿ ಯಡಿಯೂರಪ್ಪರ ಅಸಮಾಧಾನ ಸ್ಫೋಟಿಸಲೂಬಹುದು. ಏಕೆಂದರೆ ಮಹತ್ವಾಕಾಂಕ್ಷಿ ಯಡಿಯೂರಪ್ಪರಿಗೆ ಹೈಕಮಾಡ್ ಹಂಗಿಲ್ಲ.
ತಮ್ಮ ರಾಜ್ಯ ಪ್ರವಾಸವನ್ನು ತಡೆ ಹಿಡಿದ ಹೈಕಮಾಡ್ ಬಗ್ಗೆ ಯಡಿಯೂರಪ್ಪರಲ್ಲಿ ಆಕ್ರೋಶ ಹುಟ್ಟಿದೆ. ಪ್ರಾತಿನಿಧ್ಯ ಸಿಗದ ಹಲವಾರು ಜಿಲ್ಲೆಗಳು, ಸಮುದಾಯಗಳತ್ತ ಅವರ ದೃಷ್ಟಿಕೋನ ನೆಟ್ಟಿದೆ.