ಡ್ರಗ್ ಕೇಸ್ ನಲ್ಲಿ ಗೋವಾ ಕ್ಯಾಸಿನೊ ಜೂಜು ಅಡ್ಡೆ ಬಿಸಿನೆಸ್ ಪಾಯಿಂಟ್ ಆಗಿ ಸ್ಯಾಂಡಲ್ ವುಡ್ ವಿವಾದಕ್ಕೆ ಗ್ರಾಸವಾಗಲು ಕಾರಣವಾಗಿತು. ಈಗ ಬೆಂಗಳೂರಿನ ಅಕ್ರಮ ಕ್ಯಾಸಿನೋ ಅಡ್ಡೆ ಇದೆ, ಅದು ನನ್ನ ಕ್ಷೇತ್ರದಲ್ಲೇ ಇದೆ, ಇದರಿಂದ ನನ್ನ ಕ್ಷೇತ್ರದ ಜನರಿಗೆ ಸಮಸ್ಯಯಾಗುತ್ತಿದೆ ಎಂದು ಶಾಸಕ ಕೆ ಜೆ ಜಾರ್ಜ್ ಪೊಲೀಸ್ ಮಹಾ ನಿರ್ದೇಶಕರು ,ಕಮೀನಷರ್ ಗೆ ಪತ್ರ ಬರೆದಿದ್ದಾರೆ.
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಕ್ಯಾಸಿನೋ ಅಡ್ಡ ತಲೆಯೆತ್ತಿದೆ. ಅಕ್ರಮ ಚಟುವಟಿಕಡಯಿಂದಾಗಿ ಅನೇಕ ಕುಟುಂಬಗಳು ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಕಾನೂನು ಬಾಹಿರವಾಗಿರುವ ಚಟುವಟಿಕೆಯ ಕುರಿತು ಕ್ರಮಕೈಗೊಳ್ಳಿ ಎಂದು ಖುದ್ದು ಶಾಸಕ ಕೆ ಜೆ ಜಾರ್ಜ್ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

ಶಾಸಕರ ಪತ್ರದಲ್ಲಿ ಏನೇನು ಮಾಹಿತಿ ಇದೆ
ಸರ್ವಜ್ಞ ನಗರ ಶಾಸಕ ಕೆ ಜೆ ಜಾರ್ಜ್ ಪೊಲೀಸ್ ಮಹಾ ನಿರ್ದೇಶಕರು ,ಕಮೀನಷರ್ ಎಲ್ಲರಿಗೂ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಅಕ್ರಮ ಕ್ಯಾಸಿನೋ ನಿಲ್ಲಿಸಲು ಪತ್ರ ಮೂಲಕ ಮಾಹಿತಿ ಕೊಡಲಾಗಿದೆ. ನನ್ನ ಮತಕ್ಷೇತ್ರವಾದ ಸರ್ವಜ್ಞನಗರ ವಿಧಾನ ಸಭಾ ಕ್ಷೇತ್ರದ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸರ್ವೀಸ್ ರಸ್ತೆ ಹೆಚ್ ಆರ್ ಬಿ ಆರ್ ಬಡಾವಣೆ ಹಾಗೂ ಕಮ್ಮನಹಳ್ಳಿ ಮುಖ್ಯ ರಸ್ತೆಗಳಲ್ಲಿ ಎರಡು ಕ್ಯಾಸಿನೋ ಜೂಜು ಅಡ್ಡೆ ತಲೆಯೆತ್ತಿದೆ. ಜೂಜು ಅಡ್ಡೆಗಳಿಂದ ಕಾನೂನು ಅಪರಾಧಗಳು ಹೆಚ್ಚಾಗಿವೆ ಮತ್ತು ನನ್ನ ಜನ ಆತಂಕದಲ್ಲಿ ಇದ್ದಾರೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.