ಪೂರ್ಣ ಪ್ರಮಾಣದ ಲಸಿಕೆ ಆಗಬೇಕು ಎಂಬ ನಿಟ್ಟಿನಲ್ಲಿ ಪಾಲಿಕೆ ನಗರದ ವಾಣಿಜ್ಯ ಕ್ಷೇತ್ರದ ಎಲ್ಲಾ ಕಾರ್ಮಿಕರಿಗೂ ಲಸಿಕೆ ಕಡ್ಡಾಯವಾಗಿ ಹಾಕಿಸಿಬೇಕು ಅಂತ ಹೇಳಿತ್ತು. ಅಲ್ಲದೆ ಅದಕ್ಕೊಂದು ಡೆಡ್ ಲೈನ್ ಕೂಡ ಕೊಟ್ಟಿತ್ತು. ಆ ಡೆಡ್ ಲೈನ್ ಆಗಸ್ಟ್ 31ಅಂದರೆ ಇವತ್ತಕ್ಕೆ ಮುಕ್ತಾಯಕಂಡಿದೆ. ನಾಳೆಯಿಂದ ಲಸಿಕೆ ಹಾಕಿಸಿಕೊಳ್ಳದ ಉದ್ದಿಮಗಳಿಗೆ ಪಾಲಿಕೆ ದಂಡದ ಬಿಸಿ ಮುಟ್ಟುವ ಸಾಧ್ಯತೆ ಇದೆ.
ಇಡೀ ದೇಶದಲ್ಲೇ ಲಸಿಕೆ ಹಂಚಿಕೆಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಕೊರೋನಾ ಮುಕ್ತ ಮಾಡುವಲ್ಲಿ ಹೋರಾಡುತ್ತಿದೆ. ಬೆಂಗಳೂರಿನ ಆಡಳಿತಯಂತ್ರ ಬಿಬಿಎಂಪಿ ಕೂಡ ನಗರವನ್ನು ಕೊರೋನಾ ಮುಕ್ತ ಮಾಡಲು ಶತಪ್ರಯತ್ನ ಮಾಡುತ್ತಿದೆ. ಇದರ ನಡುವೆ ನಗರದ ವಾಣಿಜ್ಯ ಕ್ಷೇತ್ರಗಳೆಲ್ಲಾ ಸಂಪೂರ್ಣವಾಗಿ ಓಪನ್ ಆಗಿರುವ ಹಿನ್ನೆಲೆ ಇಲ್ಲಿಂದ ಕೊರೋನಾ ಹರಡುವ ಭೀತಿ ಇದ್ದೇ ಇದೆ. ಹೀಗಾಗಿ ಕಳೆದ 26ರಂದು ಪಾಲಿಕೆ ಸುತ್ತೋಲೆಯೊಂದನ್ನು ಹೊರಡಿಸಿ ನಗರದ ಹೋಟೆಲ್, ರೆಸ್ಟೋರೆಂಟ್, ವ್ಯಾಪಾರ ಮಳಿಗೆಗಳು, ಥಿಯೇಟರ್ ಸೇರಿದಂತೆ ಎಲ್ಲಾ ವಾಣಿಜ್ಯ ಕ್ಷೇತ್ರಗಳಿಗೂ ಲಸಿಕೆ ಕಡ್ಡಾಯ ಮಾಡಿತ್ತು. ಅಲ್ಲದೆ ಆಗಸ್ಟ್ 31ರ ಒಳಗೆ ಲಸಿಕೆ ಬಾಕಿ ಇರುವವರಿಗೆ ಕೊಟ್ಟು ಮುಗಿಸಲು ಡೆಡ್ ಲೈನ್ ಫಿಕ್ಸ್ ಮಾಡಿತ್ತು. ಆ ಡೆಡ್ ಲೈನ್ ಇವತ್ತಿಗೆ ಮುಗಿದಿದೆ.

ವಾಣಿಜ್ಯ ವಹಿವಾಟುಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಪಾಲಿಕೆ ಕೊಟ್ಟ ಡೆಡ್ ಲೈನ್ ಇಂದಿಗೆ ಮುಕ್ತಾಯ.!!
ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ಹಾಕಿಸಿಕೊಳ್ಳದೆ ವ್ಯಾಪಾರ ವಹಿವಾಟು ಮಾಡುವರಿದ್ರೆ ಸ್ವಲ್ಪ ಹುಷಾರಾಗಿ ಇರುವುದು ಒಳ್ಳೆಯದ್ದು. ಯಾಕಂದ್ರೆ ನಾಳೆಯಿಂದ ಅಂದ್ರೆ ಸೆಪ್ಟೆಂಬರ್ 1ರಿಂದ ವಾಣಿಜ್ಯ ಕ್ಷೇತ್ರದ ಮೇಲೆ ಪಾಲಿಕೆ ವಿಶೇಷ ನಿಗಾ ಇಡಲಿದೆ. ಈಗಾಗಲೇ ಲಸಿಕೆ ಹಾಕಿಸಿಕೊಳ್ಳಲು ಕಾಲವಕಾಶ ಕೂಡ ಪಾಲಿಕೆ ಕೊಟ್ಟಿದ್ದು, ಈಗಲೂ ಕಾರ್ಮಿಕರಿಗೆ ಲಸಿಕೆ ಹಾಕಿಸಿಕೊಳ್ಳದೆ ಉದ್ಯಮ ನಡೆಸುವ ಪಾಲಿಗೆ ಪಾಲಿಕೆಯೆ ದಂಡದ ಬಿಸಿ ತಟ್ಟಲಿದೆ. ಈ ಬಗ್ಗೆ ನ್ಯೂಸ್ 18 ಮಾತನಾಡಿದ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ ರಂದೀಪ್, ಈಗಾಗಲೇ ಹಲವು ಬಾರಿ ನಾವು ಉದ್ಯಮಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಸುತ್ತೋಲೆಯನ್ನೂ ಕೊಟ್ಡಿದ್ದೇವೆ. ಲಸಿಕೆ ಹಾಕಿಸಿಕೊಂಡರೆ ಅಪಾಯ ತಪ್ಪಿಸಿಕೊಳ್ಳಬಹುದು. ಈ ದೃಷ್ಟಿಯಿಂದ ಲಸಿಕೆ ಹಾಕಿಸಿಕೊಳ್ಳಲು ನಾವು ಹಿಂದೆ ಬೀಳುತ್ತಿದ್ದೇವೆ ಎಂದರು.
ಹೋಟೆಲ್, ರೆಸ್ಟೋರೆಂಟ್ ಗಳಿಗೇ ಬಂದು ಪಾಲಿಕೆ ಲಸಿಕೆ ಹಂಚಲಿ : ಉದ್ಯಮಿಗಳ ಆಗ್ರಹ.!!
ಪಾಲಿಕೆಯ ಈ ನಡೆಗೆ ಹೋಟೆಲ್ ಹಾಗೂ ಇತರೆ ಉದ್ಯಮಿಗಳಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕೊರೋನಾ ಹಾಗೂ ಲಾಕ್ ಡೌನ್ ನಿಂದಾಗಿ ಈಗಾಗಲೇ ವಾಣಿಜ್ಯ ಕ್ಷೇತ್ರಗಳು ತಲ್ಲಣಿಸಿ ಹೋಗಿದೆ. ಇಂಥಾ ಟೈಮಲ್ಲಿ ಬಿಬಿಎಂಪಿ ಈ ರೀತಿಯಾದ ಕ್ರಮಗಳನ್ನು ತೆಗೆದುಕೊಂಡರೆ ನಾವು ಏನು ಮಾಡಬೇಕು. ಬೇಕಿದ್ದರೆ ಪಾಲಿಕೆಯೇ ನಮ್ಮ ಸಂಸ್ಥೆಗಳಿಗೆ ಬಂದು ವ್ಯಾಕ್ಸಿನ್ ಕ್ಯಾಂಪ್ ಮಾಡಿ ಲಸಿಕೆ ಹಂಚಿಕೆ ಮಾಡಲಿದೆ. ಒಂದೊಂದು ದಿನವಿಡೀ ಸಾಲುಗಟ್ಟಿ ನಿಂತು ಸಮಯ ವ್ಯರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗೆ ಒತ್ತಾಯ ಮಾಡಿಸಿ ಲಸಿಕೆ ಹಾಕಿಸಿಕೊಳ್ಳುವ ಹಾಗಿಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿರುವುದು ಪಾಲಿಕೆ ಗಮನಕ್ಕಿಲ್ಲವೇ ಎಂದು ಕಿಡಿ ಕಾರಿದರು.
ಒಟ್ಟಾರೆಯಾಗಿ ಇಂದಿಗೆ ಪಾಲಿಕೆ ವಾಣಿಜ್ಯ ಕ್ಷೇತ್ರಕ್ಕೆ ಕೊಟ್ಟಿರುವ ಡೆಡ್ ಲೈನ್ ಇಂದಿಗೆ ಮುಕ್ತಾಯಗೊಂಡಿದೆ. ಆಗಸ್ಟ್ 26ರಂದು ಸುತ್ತೋಲೆ ಹೊರಡಿಸುವಾಗ, ಲಸಿಕೆ ಹಾಕಿಸಿಕೊಳ್ಳದಿದ್ದರೆ ಸೆಪ್ಟೆಂಬರ್ ಒಂದರಿಂದ ವಾಣಿಜ್ಯ ಕ್ಷೇತ್ರದ ಕಣ್ಣಿಡಲು ಮಾರ್ಷಲ್ಸ್ ಹಾಗೂ ಆರೋಗ್ಯ ಸಿಬ್ಬಂದಿಗಳ ವಿಶೇಷ ತಂಡ ಕೆಲಸ ಮಾಡಲಿದೆ ಎಂದಿತ್ತು. ಅಲ್ಲದೆ ಲಸಿಕೆ ಹಾಕಿಸಿಕೊಳ್ಳದೆ ಕಾರ್ಮಿಕರನ್ನು ಕೆಲಸಕ್ಕಿಟ್ಟುಕೊಂಡಿದ್ದರೆ ಮಾಲೀಕನಿಗೆ, IPC 188 & ಎಪಿಡಮಿಕ್ ಡಿಸೀಸ್ ಆ್ಯಕ್ಟ್ 1897 ಅಡಿಯಲ್ಲಿ ಕಾನೂನು ಕ್ರಮದ ಜೊತೆಗೆ ಹತ್ತು ಸಾವಿರದಿಂದ ಒಂದು ಲಕ್ಷದ ವರೆಗೆ ದಂಡವೂ ಬೀಳಲಿದೆ.