ಕೊರೋನಾ, ಲಾಕ್ ಡೌನ್ ಆದ ಹಿನ್ನೆಲೆ ವಿದ್ಯಾರ್ಥಿಗಳಿಗೆ ಬೌತಿಕ ತರಗತಿಗಳು ನಡೆದಿರಲಿಲ್ಲ. ಆದರಿಂದ ಬಸ್ ಪಾಸ್ ಬಳಕೆ ಆಗದೆ ಉಳಿದಿತ್ತು. ಈಗ ಕರೋನ ಕಡಿಮೆಯಾಗುತ್ತಿದಂತೆ ಶಾಲಾ, ಕಾಲೇಜುಗಳು ತೆರೆಯುತ್ತಿದ್ದು ಶಿಕ್ಷಣ ಇಲಾಖೆಯ ಮನವಿ ಮೇರೆಗೆ 2020-2021ನೇ ಸಾಲಿನ ಸ್ಟೂಡೆಂಟ್ ಪಾಸ್ ಅವಧಿಯನ್ನು ಬಿಎಂಟಿಸಿ ವಿಸ್ತರಿಸಿದೆ.
ಈ ಕುರಿತು ಸುತ್ತೋಲೆಯೊಂದನ್ನು ಹೊರಡಿಸುವ ಬಿಎಂಟಿಸಿ ಸಂಸ್ಥೆ, ಕರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಗೆ ಬಂದ ಕಾರಣ ತರಗತಿಗಳನ್ನು ಆನ್ ಲೈನ್ ಮೂಲಕ ನಡೆಸಲಾಗುತ್ತಿತ್ತು. ಲಾಕ್ ಡೌನ್ ತೆರವಾದ ಕಾರಣ ತಾಂತ್ರಿಕ/ ತಾಂತ್ರಿಕೇತರ, ಸ್ನಾತಕ/ಸ್ನಾರಕೋತ್ತರ ಕಾಲೇಜುಗಳನ್ನು ಭತಿಕವಾಗಿನಡೆಸಲು ಕ್ರಮ ಕೈಗೊಳಗಲಲಾಗಿದೆ. ಆದ್ದರಿಂದ ವಾಋಷಿಕ ಬಸ್ ಪಾಸುಗಳ ಶೈಕ್ಷಣಿಕ ವರ್ಷದವರೆಗೆ ಮುಂದುವರೆಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆತವರು ಕೋರಿರುತ್ತಾರೆ.
ಇದರ ಕುರಿತು ಬಿಎಂಟಿಸಿ ಸಂಸ್ಥೆಯು, ಐಟಿಐ, ಡಿಪ್ಲೋಮಾ, ವೃತ್ತಿಪರ, ಪದವಿ, ಸ್ನಾತಕೋತ್ತರ, ಪಿಹೆಚ್ಡಿ, ತಾಂತ್ರಿಕ & ವೈದ್ಯಕೀಯ ಹಾಗೂ ಸಂಜೆ ಕಾಲೇಜು ವಿದ್ಯಾರ್ಥಿಗಳ ಹಿತವನ್ನುಗಮನದಲ್ಲಿ ಇಟ್ಟುಕೊಂಡು, 2020-2021ನೇ ಸಾಲಿನ ಬಸ್ ಪಾಸ್ ಅವಧಿಯನ್ನು 30/09/2021 ರವರೆಗೆ ವಿಸ್ತರಿಸಿದೆ ಎಂದು ಬಿಎಂಟಿಸಿ ತನ್ನ ಸುತ್ತೋಲೇಯ ಆದೇಶದಲ್ಲಿ ತಿಳಿಸಿದೆ.

ಈ ಕುರಿತು ಬಸ್ ನ ಸಿಬ್ಬಂದಿಗಳಿಗೆ ಮತ್ತು ಎಲ್ಲಾ ಘಟಕಗಳಿಗೆ/ಬಸ್ ನಿಲ್ದಾಣಗಳಿಗೆ ಸೂಚನಾ ಫಲಕವನ್ನು ಪ್ರಕಟಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.