• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ವೇಗ ಪಡೆದ ಲಸಿಕೆ ಉತ್ಪಾದನೆ; ದಾಖಲೆ ಸೃಷ್ಟಿಸಿದ ಅಭಿಯಾನ

Shivakumar A by Shivakumar A
August 28, 2021
in ದೇಶ
0
ವೇಗ ಪಡೆದ ಲಸಿಕೆ ಉತ್ಪಾದನೆ; ದಾಖಲೆ ಸೃಷ್ಟಿಸಿದ ಅಭಿಯಾನ

TOPSHOT - Members of ground staff walk past a container stacked at the Cargo Terminal 2 of the Indira Gandhi International Airport, which will be used as a Covid-19 coronavirus vaccines handling and distribution center during the media preview in New Delhi on December 22, 2020. (Photo by Sajjad HUSSAIN / AFP) (Photo by SAJJAD HUSSAIN/AFP via Getty Images)

Share on WhatsAppShare on FacebookShare on Telegram

ಲಸಿಕಾ ಅಭಿಯಾನದಲ್ಲಿ ಭಾರತ ಶುಕ್ರವಾರದಂದು ಹೊಸ ದಾಖಲೆಯನ್ನು ಬರೆದಿದೆ. ಒಂದೇ ದಿನದಲ್ಲಿ ಒಂದು ಕೋಟಿಗೂ ಮಿಕ್ಕಿ ಜನರಿಗೆ ಲಸಿಕೆ ನೀಡಲಾಗಿದೆ. ಜೂನ್ ತಿಂಗಳ ಬಳಿಕ ದೇಶದಲ್ಲಿ ವೇಗವನ್ನು ಹೆಚ್ಚಿಸಿಕೊಂಡಿದ್ದ ಲಸಿಕಾ ಅಭಿಯಾನ ಈಗ ಸಂಭಾವ್ಯ ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದೆ.

ADVERTISEMENT

ಕೇಂದ್ರ ಆರೋಗ್ಯ ಇಲಾಖೆಯ ಅಧಿಕೃತ ಅಂತರ್ಜಾಲ ತಾಣದಲ್ಲಿ ನೀಡಿರುವ ಅಂಕಿಅಂಶಗಳ ಪ್ರಕಾರ ಶುಕ್ರವಾದಂದು 1,03,35,290 ಜನರು ಲಸಿಕೆ ಪಡೆದುಕೊಂಡಿದ್ದಾರೆ. ಇದರಿಂದಾಗಿ ದೇಶದ ಒಟ್ಟು 62,29,89,134 ಜನರು ಕನಿಷ್ಟ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಡಿಸೆಂಬರ್ 31ರ ಒಳಗಾಗಿ ಭಾರತದ ಎಲ್ಲಾ ವಯಸ್ಕರಿಗೆ ಮೊದಲ ಡೋಸ್ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದ್ದು, ಈ ನಿಟ್ಟಿನಲ್ಲಿ ಈಗ ಲಸಿಕಾ ಅಭಿಯಾನ ವೇಗ ಪಡೆದುಕೊಂಡಿದೆ.

ಶುಕ್ರವಾರದಂದು ಉತ್ತರ ಪ್ರದೇಶವು 28.62 ಲಕ್ಷ ಡೋಸ್ ಲಸಿಕೆಯನ್ನು ನೀಡಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕವು 10.79 ಲಕ್ಷ ಡೋಸ್ ಲಸಿಕೆ ನೀಡಿ ಎರಡನೇ ಸ್ಥಾನದಲ್ಲಿದೆ. ದೇಶದ 14 ಕೋಟಿಗೂ ಹೆಚ್ಚಿನ ಜನರು ಲಸಿಕೆಯ ಎರಡೂ ಡೋಸ್ ಪಡೆದಿದ್ದಾರೆ.

ಜನವರಿ 16ರಂದು ಭಾರತದಲ್ಲಿ ಲಸಿಕಾ ಅಭಿಯಾನ ಆರಂಭವಾಗಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಹಲವು ತಪ್ಪು ನಿರ್ಧಾರಗಳಿಂದಾಗಿ ಲಸಿಕಾ ಅಭಿಯಾನಕ್ಕೆ ಹಿನ್ನಡೆಯಾಗಿತ್ತು.

ಭಾರತದಲ್ಲಿ ತಯಾರಿಸಿದ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡುವ ಕೇಂದ್ರ ಸರ್ಕಾರದ ನಿರ್ಧಾರ, ದೇಶವಾಸಿಗಳಿಗೆ ನಿಜಕ್ಕೂ ಮಾರಕವಾಗಿ ಪರಿಣಮಿಸಿತ್ತು. ಮೊದಲ ಹಂತದ ಲಸಿಕಾ ಅಭಿಯಾನದಲ್ಲಿ ಅರವತ್ತು ಮವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟು ಇತರೆ ರೋಗಗಳನ್ನು ಹೊಂದಿರುವ ಜನರಿಗೆ ಮಾತ್ರ ಲಸಿಕೆಯನ್ನು ನೀಡಲಾಗಿತ್ತು.ನಂತರ ಲಸಿಕೆಗಳ ರಫ್ತು ಹೆಚ್ಚಾಗಿದ್ದರಿಂದ ದೇಶದ ಹಲವು ಲಸಿಕಾ ಕೇಂದ್ರಗಳು ಮುಚ್ಚಲ್ಪಟ್ಟವು. ಸರ್ಕಾರವು ಒಟ್ಟು 6.45 ಕೋಟಿ ಡೋಸ್ ಲಸಿಕೆಯನ್ನು ಈವರೆಗೆ ರಫ್ತು ಮಾಡಿದೆ.

ಅಂದಿನ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಅವರು, ನೀಡಿರುವ ಮಾಹಿತಿಯ ಪ್ರಕಾರ 85 ದೇಶಗಳಿಗೆ ಲಸಿಕೆಯನ್ನು ರಫ್ತು ಮಾಡಲಾಗಿದೆ. ಇವುಗಳಲ್ಲಿ 25 ದೇಶಗಳಿಗೆ ವಾಣಿಜ್ಯ ಒಪ್ಪಂದದ ಪ್ರಕಾರ 3.58 ಕೋಟಿ ಡೋಸ್ ಲಸಿಕೆ ರಫ್ತಾಗಿದ್ದರೆ,

44 ದೇಶಗಳಿಗೆ ಅನುದಾನದ ರೂಪದಲ್ಲಿ 1.04 ಕೋಟಿ ಡೋಸ್ ಲಸಿಕೆ ನೀಡಲಾಗಿತ್ತು. ಜಾಗತಿಕ ಕೊವ್ಯಾಕ್ಸ್ ನೀತಿಯಂತೆ 39 ದೇಶಗಳಿಗೆ 1.82 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿತ್ತು.

ಈ ರಫ್ತು ನೀತಿಯಿಂದಾಗಿ ದೇಶದಲ್ಲಿ ಲಸಿಕೆಗಳ ಕೊರತೆ ಉಂಟಾಗಿತ್ತು. ವಿರೋಧ ಪಕ್ಷಗಳು ನಡೆಸಿದ ತೀವ್ರವಾದ ಹೋರಾಟದಿಂದ ಮೇ ತಿಂಗಳಲ್ಲಿ ಲಸಿಕೆ ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ಇದರಿಂದಾಗಿ ದೇಶದಲ್ಲಿ ಕೋವಿಡ್ ಲಸಿಕಾ ಅಭಿಯಾನ ಮತ್ತಷ್ಟು ವೇಗ ಪಡೆಯಲು ಸಾಧ್ಯವಾಯಿತು.

ಜೂನ್ ತಿಂಗಳ ವೇಳೆಗೆ ಲಸಿಕೆ ಉತ್ಪಾದನೆಯ ವೇಗವು ಅಭಿಯಾನದ ವೇಗಕ್ಕೆ ಸಮಾನಾಂತರವಾಗಿ ಸಾಗದ ಹಿನ್ನೆಲೆಯಲ್ಲಿ ಅಭಿಯಾನಕ್ಕೆ ಮತ್ತಷ್ಟು ಹಿನ್ನಡೆ ಉಂಟಾಗಿತ್ತು. ಜೂನ್ ತಿಂಗಳ ಅಂತ್ಯಕ್ಕೆ ಸರಾಸರಿಯಂತೆ 3.2 ಮಿಲಿಯನ್ ಡೋಸ್ ಲಸಿಕೆಯನ್ನು ವಿತರಿಸಲಾಗುತ್ತಿತ್ತು. ಇದೇ ವೇಗದಲ್ಲಿ ಮುಂದುವರೆದಿದ್ದರೆ, ಈ ವರ್ಷಾಂತ್ಯಕ್ಕೆ 45%ದಷ್ಟು ಭಾರತೀಯರಿಗೆ ಲಸಿಕೆ ಲಭ್ಯವಾಗಲಿತ್ತು. ಮಾರ್ಚ್ 2022ರ ವೇಳೆಗೆ 60%ದಷ್ಟು ಜನರಿಗೆ ಲಸಿಕೆ ಲಭ್ಯವಾಗುತ್ತಿತ್ತು. ಆದರೆ, ಈ ವೇಗಕ್ಕಿಂತ ಇನ್ನೂ 30% ವೇಗವನ್ನು ಹೆಚ್ಚಿಸಿದರೆ ಮಾತ್ರ ಈ ವರ್ಷಾಂತ್ಯದೊಳಗೆ 55% ಜನರಿಗೆ ಲಸಿಕೆ ನೀಡುವ ಸಾಧ್ಯತೆಗಳಿದ್ದವು.

“ಭಾರತ ದೊಡ್ಡ ದೇಶ. ಇಲ್ಲಿ ಲಸಿಕೆ ಪಡೆಯಬೇಕಾದ ಜನರ ಸಂಖ್ಯೆ ಅತೀ ದೊಡ್ಡದಿದೆ. ಮೂರನೇ ಅಲೆಗೂ ಮುನ್ನ ಎಲ್ಲರಿಗೂ ಲಸಿಕೆ ನೀಡಬೇಕೆಂಬುದು ಒಳ್ಳೆಯ ಆಶಯ. ಆದರೆ, ಅದು ಸಾಧ್ಯವಾಗದಿದ್ದರೆ ಸೋಂಕಿಗೆ ಸುಲಭದಲ್ಲಿ ತುತ್ತಾಗಬಲ್ಲ ವರ್ಗದವರಿಗಾದರೂ ಲಸಿಕೆ ನೀಡಬೇಕು,” ಎಂದು ಐಸಿಎಂಆರ್ ವಿಜ್ಞಾನಿ ಅಪರ್ಣಾ ಮುಖರ್ಜಿ ಸಲಹೆ ನೀಡಿದ್ದರು.

ಇನ್ನು ಕೇಂದ್ರ ಸರ್ಕಾರವು ಮೇ ತಿಂಗಳಲ್ಲಿ ಸುಪ್ರಿಂಕೋರ್ಟ್’ಗೆ ನಿಡಿದ ಅಫಿಡವಿಟ್ ಪ್ರಕಾರ ಭಾರತದ ಪ್ರಮುಖ ಲಸಿಕಾ ಉತ್ಪಾದಕರಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಕ್ರಮವಾಗಿ 6.5 ಕೋಟಿ ಮತ್ತು 2 ಕೋಟಿ ಲಸಿಕೆಗಳನ್ನು ಪ್ರತಿ ತಿಂಗಳು ಉತ್ಪಾದಿಸುತ್ತಿದ್ದವು. ಒಟ್ಟು 8.5 ಕೋಟಿ ಡೋಸ್ ಲಸಿಕೆ ಪ್ರತಿ ತಿಂಗಳು ಭಾರತದಲ್ಲಿ ಉತ್ಪಾದನೆಯಾಗುತ್ತಿತ್ತು. ಮೂರನೇ ಆಯ್ಕೆ ಸ್ಪುಟ್ನಿಕ್ ವಿ. ಇದು ಕೂಡಾ ಅಲ್ಪ ಪ್ರಮಾಣದಲ್ಲಿ ಮಾತ್ರ ಬಳಕೆಗೆ ಲಭ್ಯ.

ಈ 8.5 ಕೋಟಿ ಡೋಸ್ ಲಸಿಕೆಯನ್ನು 50:50 ಅನುಪಾತದಲ್ಲಿ ಕೇಂದ್ರ ಸರ್ಕಾರ ಎರಡು ಭಾಗ ಮಾಡಿ, 4-4.5 ಕೋಟಿ ಲಸಿಕೆ ಕೇಂದ್ರ ಸರ್ಕಾರ ಪಡೆದುಕೊಂಡು, ಉಳಿದ 4-4.5 ಕೋಟಿ ಲಸಿಕೆ ರಾಜ್ಯ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನೀಡಿತ್ತು. ಇದು ಸರ್ಕಾರ ನೀಡಿದ ಲೆಕ್ಕಾಚಾರ.

ಆದರೆ, ಸರ್ಕಾರ ಸುಪ್ರಿಂಕೋರ್ಟ್’ಗೆ ನೀಡಿದ ಲೆಕ್ಕಾಚಾರ ಕೇವಲ ಅಂದಾಜು ಲೆಕ್ಕಾಚಾರ. ವಾಸ್ತವದಲ್ಲಿ 8.5 ಕೋಟಿ ಲಸಿಕೆ ಉತ್ಪಾದನೆಯಾಗಿತ್ತೆ ಎಂದು ಪ್ರಶ್ನಿಸಿದರೆ ಸಿಗುವ ಉತ್ತರ, ಇಲ್ಲ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಮೇ ತಂಗಳಲ್ಲಿ ಒಟ್ಟು ಸೇರಿ ಉತ್ಪಾದಿಸಿದ್ದು ಸುಮಾರು 6-6.5 ಕೋಟಿ ಡೋಸ್’ಗಳಷ್ಟು ಲಸಿಕೆ ಮಾತ್ರ. ಮೇ ತಿಂಗಳಲ್ಲೇ ಸುಮಾರು ಎರಡು ಕೋಟಿಗೂ ಹೆಚ್ಚು ಡೋಸ್ ಲಸಿಕೆಗಳ ಕೊರತೆ ಉಂಟಾಗಿತ್ತು. ಇದರಿಂದಾಗಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಲಸಿಕಾ ಅಭಿಯಾನ ವೇಗ ಪಡೆದುಕೊಳ್ಳುವಲ್ಲಿ ವಿಫಲವಾಗಿತ್ತು.

ಆಗಸ್ಟ್ ತಿಂಗಳಲ್ಲಿ ವೇಗ ಪಡೆದ ಲಸಿಕೆ ಪೂರೈಕೆ:

ಆಗಸ್ಟ್ 25ರ ವೇಳೆಗೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 58.07 ಕೋಟಿ ಡೋಸ್ ಲಸಿಕೆ ಪೂರೈಸಿತ್ತು. ಇದರೊಂದಿಗೆ 5.2 ಮಿಲಿಯನ್ ಡೋಸ್ ಲಸಿಕೆಗಳು ಬಿಡುಗಡೆಗೆ ಸಿದ್ದವಾಗಿದ್ದವು. 3.62 ಲಸಿಕೆಗಳು ರಾಜ್ಯ ಸರ್ಕಾರಗಳ ಬಳಿ ಬಳಕೆಯಾಗದೇ ಉಳಿದುಕೊಂಡಿದ್ದವು.

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸೆಪ್ಟೆಂಬರ್ ವೇಳಗೆ ತನ್ನ ಉತ್ಪಾದನಾ ವೇಗವನ್ನು ತಿಂಗಳಿಗೆ 110 ಮಿಲಿಯನ್ ಡೋಸ್’ನಷ್ಟು ಹೆಚ್ಚಿಸಲು ನಿರ್ಧರಿಸಿದೆ. ಇದರೊಂದಿಗೆ ಭಾರತ್ ಬಯೋಟೆಕ್ ಕೂಡಾ ಅಕ್ಟೋಬರ್ ವೇಳೆಗೆ ತಿಂಗಳಿಗೆ 60 ಮಿಲಿಯನ್ ಡೋಸ್ ಲಸಿಕೆ ಪೂರೈಸುವ ಗುರಿ ಹೊಂದಿದೆ. ಈ ಯೋಜನೆಗಳ ಕಾರಣದಿಂದಾಗಿ ಈಗ ಭಾರತದಲ್ಲಿ ಲಸಿಕೆ ಪೂರೈಕೆ ಹಿಂದಿಗಿಂತಲೂ ವೇಗ ಪಡೆದುಕೊಂಡಿದ್ದು, ದಿನವೊಂದಕ್ಕೆ ಒಂದು ಕೋಟಿಗೂ ಮಿಕ್ಕಿ ಡೋಸ್ ಲಸಿಕೆ ನೀಡುವಲ್ಲಿ ಸರ್ಕಾರ ಯಶಸ್ವಿಯಾಗುತ್ತಿದೆ.

ಈ ವರ್ಷಾಂತ್ಯಕ್ಕೆ ದೇಶದಲ್ಲಿ ಕೋವಿಡ್ ಲಸಿಕೆ ಉತ್ಪಾದನೆಯ ಪ್ರಮಾಣ 130 ಮಿಲಿಯನ್ ಡೋಸ್’ಗಳಿಂದ 360 ಮಿಲಿಯನ್ ಡೋಸ್’ಗೆ ಏರಿಕೆಯಾಗುವ ಸಾಧ್ಯತೆಯಿದೆ, ಎಂದು ಸಿಎಆರ್ಇ ವರದಿ ಮಾಡಿದೆ. ಆದರೆ, ದೇಶದ ಎಲ್ಲರಿಗೂ ಲಸಿಕೆ ನೀಡಲು ಇನ್ನೂ ಎರಡು ಬಿಲಿಯನ್ ಡೋಸ್ ಲಸಿಕೆಗಳನ್ನು ಉತ್ಪಾದಿಸುವ ಅವಶ್ಯಕತೆಯಿದೆ.

Tags: BJPCovid 19covid-19 vaccinevaccinationಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಮರೆಯಲಾಗದ ದಲಿತ ನಾಯಕ – ಅಯ್ಯನ್ ಕಾಳಿ

Next Post

ಕೆನಡಾದ ಬರ್ನಾಬಿಯಲ್ಲಿ ಸೆಪ್ಟೆಂಬರ್ 5 ಅನ್ನು “ಗೌರಿ ಲಂಕೇಶ್ ದಿನ” ಎಂದು ಘೋಷಿಸಿದೆ!

Related Posts

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
0

ಬೀದರ್ ಜಿಲ್ಲಾ ಪಂಚಾಯತ್ ಆವರಣದಲ್ಲಿ ವಿತರಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ವಿಶೇಷ ಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು. ಬೀದರ್...

Read moreDetails

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
Next Post
ಕೆನಡಾದ ಬರ್ನಾಬಿಯಲ್ಲಿ ಸೆಪ್ಟೆಂಬರ್ 5 ಅನ್ನು “ಗೌರಿ ಲಂಕೇಶ್ ದಿನ” ಎಂದು ಘೋಷಿಸಿದೆ!

ಕೆನಡಾದ ಬರ್ನಾಬಿಯಲ್ಲಿ ಸೆಪ್ಟೆಂಬರ್ 5 ಅನ್ನು "ಗೌರಿ ಲಂಕೇಶ್ ದಿನ" ಎಂದು ಘೋಷಿಸಿದೆ!

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada