• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕೆನಡಾದ ಬರ್ನಾಬಿಯಲ್ಲಿ ಸೆಪ್ಟೆಂಬರ್ 5 ಅನ್ನು “ಗೌರಿ ಲಂಕೇಶ್ ದಿನ” ಎಂದು ಘೋಷಿಸಿದೆ!

Any Mind by Any Mind
August 28, 2021
in ಕರ್ನಾಟಕ, ವಿದೇಶ
0
ಕೆನಡಾದ ಬರ್ನಾಬಿಯಲ್ಲಿ ಸೆಪ್ಟೆಂಬರ್ 5 ಅನ್ನು “ಗೌರಿ ಲಂಕೇಶ್ ದಿನ” ಎಂದು ಘೋಷಿಸಿದೆ!
Share on WhatsAppShare on FacebookShare on Telegram

ಕೆನಡಾ ದೇಶದ ಬರ್ನಾಬಿ ನಗರವು ಹತ್ಯೆಗೀಡಾದ ಭಾರತೀಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಗೌರವಾರ್ಥವಾಗಿ ಸೆಪ್ಟೆಂಬರ್ 5 ಅನ್ನು “ಗೌರಿ ಲಂಕೇಶ್ ದಿನ”ವೆಂದು ಘೋಷಿಸಿದೆ.

ADVERTISEMENT

ಧೈರ್ಯಶಾಲಿ ಸಂಪಾದಕಿ ಗೌರಿ ಲಂಕೇಶ್ ಅವರನ್ನು 2017 ರಲ್ಲಿ ಬೆಂಗಳೂರಿನಲ್ಲಿ ಬಲಪಂಥೀಯ ಉಗ್ರರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಸ್ತುತ ನವದೆಹಲಿಯಲ್ಲಿ ಹಿಂದೂ ರಾಷ್ಟ್ರೀಯವಾದಿ ಬಿಜೆಪಿ ಸರ್ಕಾರದ ನಡೆಸುತ್ತಿರುವ ಮೂಢನಂಬಿಕೆ ಮತ್ತು ಬೆಳೆಯುತ್ತಿರುವ ಮತಾಂಧತೆಯ ವಿರುದ್ಧ ಅವರು ನಿರಂತರವಾಗಿ ಬರೆದಿದ್ದರು.

2014 ರಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ರಾಜಕೀಯ ಭಿನ್ನಮತೀಯರ ಮೇಲೆ ದಾಳಿಗಳು ಹೆಚ್ಚಾಗಿದೆ. ತನ್ನ ಬರಹಗಳ ಮೂಲಕ,ಗೌರಿ ಲಂಕೇಶ್ ಅವರು ಅಧಿಕಾರದಲ್ಲಿರುವವರನ್ನು ಸವಾಲು ಹಾಕಿ ಪ್ರಶ್ನಿಸಿದರು ಮತ್ತು ಹಿಂಸೆಯ ವಿರುದ್ಧ ಧ್ವನಿ ಎತ್ತಿದರು.

ಆಕೆಯ ಸಾವಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕೆಲವು ಬೆಂಬಲಿಗರು ಸಂತಸ ವ್ಯಕ್ತಪಡಿಸಿದ್ದರು.

ಆಗಸ್ಟ್ 27 ಶುಕ್ರವಾರ, ಬರ್ನಾಬಿ ನಗರವು ಸೆಪ್ಟೆಂಬರ್ 5 ಅನ್ನು “ಗೌರಿ ಲಂಕೇಶ್ ದಿನ”ವೆಂದು ಘೋಷಿಸಿದೆ.

ಮೇಯರ್ ಮೈಕ್ ಹರ್ಲೆ ಅವರು ಗೌರಿ ಲಂಕೇಶ್ ಅವರನ್ನು “ಸತ್ಯ ಮತ್ತು ನ್ಯಾಯಕ್ಕಾಗಿ ನಿಂತ ಧೈರ್ಯಶಾಲಿ ಭಾರತೀಯ ಪತ್ರಕರ್ತೆ. ದಮನದ ವಿರುದ್ಧ ಮತ್ತು ಮಾನವ ಹಕ್ಕುಗಳ ಪರವಾದ ಹೋರಾಟದಲ್ಲಿ ತನ್ನ ಪ್ರಾಣವನ್ನು ತ್ಯಜಿಸಿದರು” ಎಂದಿದ್ದಾರೆ.

ಕಳೆದ ವರ್ಷ ಬರ್ನಾಬಿ ನಗರವು ಜಸ್ವಂತ್ ಸಿಂಗ್ ಖಲ್ರಾ ಅವರನ್ನು ಗೌರವಿಸಲು ಒಂದು ದಿನವನ್ನು ಘೋಷಿಸಿತ್ತು. ಪಂಜಾಬ್‌ನಲ್ಲಿ ಸಿಖ್ ಉಗ್ರಗಾಮಿತ್ವವನ್ನು ಕೊನೆಗೊಳಿಸುವ ಹೆಸರಿನಲ್ಲಿ ಅಪಹರಣ ಮತ್ತು ನಿರ್ಮೂಲನೆ ಮಾಡಿದವರ ಪ್ರಕರಣಗಳನ್ನು ದಾಖಲಿಸಿದ್ದಕ್ಕಾಗಿ ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತ ಖಲ್ರಾ ಅವರನ್ನು ಭಾರತೀಯ ಪೊಲೀಸರು ಕೊಂದಿದ್ದರು. ಖಲ್ರಾ ಅವರನ್ನು ಸೆಪ್ಟೆಂಬರ್ 6, 1995 ರಂದು ಅಮೃತಸರದಲ್ಲಿರುವ ಆತನ ಮನೆಯಿಂದ ಅಪಹರಿಸಿ, ನಂತರ ಕೊಲೆ ಮಾಡಲಾಗಿತ್ತು.

2017 ರ ಸೆಪ್ಟೆಂಬರ್ 5 ರಂದು ಬೆಂಗಳೂರಿನ ಅವರ ನಿವಾಸದ ಮುಂದೆ ಗುಂಡಿಕ್ಕಿ ಹತ್ಯೆ ಮಾಡಿದ್ದರು.

Tags: BJPBurnabycanedaGauri LankeshSeptember 5ನರೇಂದ್ರ ಮೋದಿಬಿಜೆಪಿ
Previous Post

ವೇಗ ಪಡೆದ ಲಸಿಕೆ ಉತ್ಪಾದನೆ; ದಾಖಲೆ ಸೃಷ್ಟಿಸಿದ ಅಭಿಯಾನ

Next Post

ISIS-K ಉಗ್ರ ಸಂಘಟನೆಯ ಮುಂದಿನ ಗುರಿ ಭಾರತ?

Related Posts

ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?
ವಿದೇಶ

ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?

by ಪ್ರತಿಧ್ವನಿ
April 15, 2026
0

ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷಕ್ಕೆ ಅಂತ್ಯ ತರಲು ಅಮೇರಿಕಾ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಪ್ರಯತ್ನಗಳು ಮತ್ತೆ ಚುರುಕುಗೊಳ್ಳುತ್ತಿರುವ ಸೂಚನೆಗಳು ಗೋಚರಿಸುತ್ತಿವೆ. ಇತ್ತೀಚೆಗೆ ನಡೆದ ಮಾತುಕತೆಗಳು ಸ್ಪಷ್ಟ...

Read moreDetails
ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

April 14, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
Next Post
ISIS-K ಉಗ್ರ ಸಂಘಟನೆಯ ಮುಂದಿನ ಗುರಿ ಭಾರತ?

ISIS-K ಉಗ್ರ ಸಂಘಟನೆಯ ಮುಂದಿನ ಗುರಿ ಭಾರತ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada