ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರವು ಸರ್ಕಾರಿ ಆಸ್ತಿಯನ್ನು ಖಾಸಗೀಕರಣಗೊಳಿಸುವ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರಿ ಆಸ್ತಿಯನ್ನು 3-4 ಕೈಗಾರಿಕೋದ್ಯಮಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಕಳೆದ 70 ವರ್ಷಗಳಲ್ಲಿ ಏನೂ ನಡೆದಿಲ್ಲ ಎಂದು ಬಿಜೆಪಿ ಮತ್ತು ಪ್ರಧಾನಿ ಮೋದಿ ಹೇಳುತ್ತಾರೆ ಆದರೆ, ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ನಿರ್ಮಿಸಿರುವ ಸ್ವತ್ತುಗಳನ್ನು ಮಾರಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಳೆದ 70 ವರ್ಷಗಳಲ್ಲಿ ಈ ದೇಶದಲ್ಲಿ ಏನು ನಿರ್ಮಿಸಲಾಗಿದೆ, ಅದನ್ನು ಮಾರಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರವು ನಾವು ಇವುಗಳನ್ನು ಮಾರಾಟ ಮಾಡುತ್ತಿಲ್ಲ ಬದಲಿಗೆ ನಾವು ಇವುಗಳನ್ನು ಗುತ್ತಿಗೆ ನೀಡುತ್ತಿದ್ದೇವೆ ಎಂದು ಹೇಳುತ್ತಿದೆ. ಸರ್ಕಾರ ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸಿದೆ ಮತ್ತು ಯುಪಿಎ ಸರ್ಕಾರ ನಿರ್ಮಿಸಿದ್ದನ್ನು ನಾಶಪಡಿಸುತ್ತಾ ಇದೆ. ಕೊನೆಯ ಉಪಾಯವಾಗಿ ಎಲ್ಲವನ್ನು ಸರ್ಕಾರ ಮಾರಾಟ ಮಾಡಲು ಹೊರಟಿದೆ. ನನ್ನ ಪ್ರಕಾರ ಇದು ಅತಿ ದೊಡ್ಡ ದುರಂತ ಎಂದು ಅವರು ಹೇಳಿದ್ದಾರೆ.
ರೈಲ್ವೆ, ವಿಮಾನ ನಿಲ್ದಾಣಗಳು, ಪೈಪ್ಲೈನ್ಗಳು ಸೇರಿದಂತೆ ಅನೇಕ ಸರ್ಕಾರಿ ಸ್ವತ್ತುಗಳನ್ನು ಖಾಸಗಿಕರಣಗೊಳಿಸಲು ಸರ್ಕಾರ ಹೊರಟಿದೆ. ನಾವು ಖಾಸಗೀಕರಣದ ವಿರುದ್ಧವಲ್ಲ ಆದರೆ ನಮ್ಮ ಖಾಸಗೀಕರಣ ಯೋಜನೆಯು ಒಂದು ಅರ್ಥವನ್ನು ಹೊಂದಿತ್ತು.ನಾವು ರೈಲ್ವೆಯನ್ನು ಖಾಸಗಿಕರಣಗೊಳಿಸಲು ಹೋಗಲಿಲ್ಲ ಏಕೆಂದರೆ ನಿತ್ಯವು ಕೋಟ್ಯಂತರ ಜನರು ಸಂಚರಿಸುತ್ತಾರೆ ಮತ್ತು ಸಾಕಷ್ಟು ಜನರಿಗೆ ಉದ್ಯೋಗವನ್ನ ನೀಡಿದೆ ಎಂದು ಮಾತನಾಡುವ ವೇಳೆ ಅವರು ಸರ್ಕಾರ ಖಾಸಗೀಕರಣಗೊಳಿಸಲು ಹೊರಟಿರುವ ಅನೇಕ ಸರ್ಕಾರಿ ಸ್ವತ್ತುಗಳನ್ನು ಉಲೇಖಿಸಿದ್ದಾರೆ.
ನಾವು ನಷ್ಟದಲ್ಲಿರುವ ಕೈಗಾರಿಕೆಗಳನ್ನು ಖಾಸಗೀಕರಣಗೊಳಿಸಿದ್ದೇವೆ, ಕನಿಷ್ಠ ಮಾರುಕಟ್ಟೆ ಪಾಲನ್ನು ಹೊಂದಿರುವ ಕಂಪನಿಗಳನ್ನು ನಾವು ಖಾಸಗೀಕರಣಗೊಳಿಸಿದ್ದೇವೆ ಆದರೆ, ನಿರ್ದಿಷ್ಟ ವಲಯದಲ್ಲಿ ಖಾಸಗಿ ವಲಯದ ಏಕಸ್ವಾಮ್ಯವನ್ನು ಪರಿಶೀಲಿಸುವ ಸಾಮರ್ಥ್ಯ ಹೊಂದಿರುವ ಸರ್ಕಾರಿ ಉದ್ಯಮಗಳನ್ನು ನಾವು ಖಾಸಗೀಕರಣಗೊಳಿಸಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ADVERTISEMENT

“ಕನ್ನಡದ ಅವಸಾನ ಆಗಬಾರದು ಎನ್ನುವುದಾದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲಿಯೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು” ಎಂದು ಪ್ರತಿವಾದಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್. ಕರ್ನಾಟಕ ಹೈಕೋರ್ಟ್ ನ್ಯಾಯಾಂಗ...