ಅಧಿಕಾರರೂಢ ಬಿಜೆಪಿಯ ಮಾತ್ರ ಸಂಘಟನೆ ಆರ್ಎಸ್ಎಸ್ ಕೂಡಾ ಭಾರತದಲ್ಲಿ ತಾಲಿಬಾನ್ ಮಾದರಿಯ ಸರ್ಕಾರಕ್ಕೆ ಹವಣಿಸುತ್ತಿದೆ, ಆದರೆ ಅಂತಹ ಸರ್ಕಾರವನ್ನು ಸಂಪೂರ್ಣವಾಗಿ ಜಾರಿಗೆ ತರಲು ದು ವಿಫಲವಾಗಿದೆ ಎಂದು ನಟ ಚೇತನ್ ಅಭಿಪ್ರಾಯಪಟ್ಟಿದ್ದಾರೆ.
ASlso Read: ಭಾರತದ ಸಂವಿಧಾನ ತಿರಸ್ಕರಿಸಿದ ಮನುಸ್ಮೃತಿಯನ್ನು RSS ಶ್ಲಾಘಿಸುತ್ತದೆ – ಚೇತನ್
ಈ ಕುರಿತು ಟ್ವೀಟ್ ಮಾಡಿರುವ ಅವರು ʼ1946ರಲ್ಲಿ ಪ್ರಜಾಪ್ರಭುತ್ವವನ್ನು ವಿರೋಧಿಸಿದ್ದ ಆರ್ಎಸ್ಎಸ್ ‘ಭಾರತಕ್ಕೆ ಸರ್ವಾಧಿಕಾರಿ ಸರ್ಕಾರ ಸೂಕ್ತವಾದ ಸರ್ಕಾರ’ ಎಂದು ಹೇಳಿತ್ತು. 1949 ರಲ್ಲಿ ಆರ್ಎಸ್ಎಸ್ ಸಂವಿಧಾನವನ್ನು ವಿರೋಧಿಸಿ ಶೂದ್ರರು ಮತ್ತು ಮಹಿಳೆಯರನ್ನು ಅಮಾನವೀಯಗೊಳಿಸಲು ಮನುಸ್ಮೃತಿಯನ್ನು ಹೇರಲು ಒತ್ತಾಯಿಸಿತ್ತುʼ ಎಂದು ಅವರು ಹೇಳಿದ್ದಾರೆ.
ಅಲ್ಪಸಂಖ್ಯಾತರನ್ನು ರಾಕ್ಷಸರಂತೆ ಚಿತ್ರಿಸುವುದೇ ಆರ್ಎಸ್ಎಸ್ ಆಧಾರ ಎಂದೂ ಅವರು ಹೇಳಿದ್ದಾರೆ.
ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನದ ಆಡಳಿತದಂತೆ ಭಾರತದಲ್ಲೂ ಆಡಳಿತ ನಡೆಸಲು ಆರ್ಎಸ್ಎಸ್ ಬಯಸುತ್ತದೆ, ಆದರೆ, ಅದು ವಿಫಲಗೊಂಡಿದೆ ಎಂದು ಅವರು ಹೇಳಿದ್ದಾರೆ.