• Home
  • About Us
  • ಕರ್ನಾಟಕ
Wednesday, January 14, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸೆಪ್ಟೆಂಬರ್‌ ಅಂತ್ಯದೊಳಗೆ ಮಕ್ಕಳಿಗೂ ಕರೋನಾ ಲಸಿಕೆ: ಭಾರತ್‌ ಬಯೋಟೆಕ್‌ ಭರವಸೆ !

ಪ್ರತಿಧ್ವನಿ by ಪ್ರತಿಧ್ವನಿ
August 20, 2021
in ದೇಶ
0
ಸೆಪ್ಟೆಂಬರ್‌ ಅಂತ್ಯದೊಳಗೆ ಮಕ್ಕಳಿಗೂ ಕರೋನಾ ಲಸಿಕೆ: ಭಾರತ್‌ ಬಯೋಟೆಕ್‌ ಭರವಸೆ !
Share on WhatsAppShare on FacebookShare on Telegram

ಕರೋನಾ ಮೂರನೇ ಅಲೆಗೂ ಮುಂಚಿತವಾಗಿಯೇ ದೇಶದಲ್ಲಿ ಮಕ್ಕಳಿಗೂ ಕರೋನಾ ಲಸಿಕೆ ಸಿಗುವ ಸಂಭವವಿದೆ. ಸದ್ಯ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಹಂಚಿಕೆಯಾಗುತ್ತಿದ್ದು, ಮುಂದಿನ ಸೆಪ್ಟೆಂಬರ್‌ ಅಂತ್ಯದೊಳಗಡೆ  18 ವರ್ಷ ಕೆಳಗಿರುವ ಮಕ್ಕಳಿಗೂ ಕರೋನಾ ವ್ಯಾಕ್ಸಿನ್‌ ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ್‌ ಬಯೋಟೆಕ್‌ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೃಷ್ಣ ಎಲ್ಲಾ ರಾಷ್ಟ್ರೀಯ ಸುದ್ದಿ ಮಾಧ್ಯಮಕ್ಕೆ ಕೊಟ್ಟಿರುವ ಒಂದು ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.

ADVERTISEMENT

ʻʻಮಕ್ಕಳ ಲಸಿಕೆ ಮೇಲಿನ ನಮ್ಮ ವೈದ್ಯಕೀಯ ಪ್ರಯೋಗ ಮುಕ್ತಾಯಗೊಂಡಿದೆ. ಮುಂದಿನ ಸೆಪ್ಟೆಂಬರ್‌ ಆರಂಭ ಅಥವಾ ಕೊನೆಯ ವೇಳೆಗೆ ನಮ್ಮ ಪ್ರಯೋಗದ ವರದಿ ಸಿದ್ಧಗೊಳ್ಳಲಿದೆ. ಅದಾದ ಬಳಿಕ ಮಕ್ಕಳ ಲಸಿಕೆಗೆ ಪರವಾನಗೆ ಪಡೆದುಕೊಳ್ಳಬೇಕಿದೆ. ವಿಶೇಷ ಎಂದರೆ ಇಡೀ ಜಗತ್ತಿನಲ್ಲಿ 2-18 ವರ್ಷದೊಳಗಿನ ಮಕ್ಕಳಿಗೆ ಕೊಡಬಲ್ಲ ಏಕೈಕ ಲಸಿಕೆ ಇದಾಗಿರಲಿದೆʼʼ ಎಂದು ಭಾರತ್‌ ಬಯೋಟೆಕ್‌ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೃಷ್ಣ ಎಲ್ಲಾ ತಿಳಿಸಿದ್ದಾರೆ.

ಎರಡೂ ಡೋಸ್‌ ಲಸಿಕೆ ಪಡೆದುಕೊಂಡ ಮೇಲೂ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಅಂಥವರಿಗಾಗಿ ಬೂಸ್ಟರ್‌ ಡೋಸ್‌ (Third Dose) ನೀಡುವ ಬಗ್ಗೆಯೂ ಚರ್ಚೆಗಳಾಗುತ್ತಿದೆ. ಸದ್ಯ ಕರೋನಾ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ನೀಡಲು ಸ್ವತಃ ಸರ್ಕಾರವೇ ನಿರ್ಧರಿಸಿದ್ದು, ಅಗತ್ಯವಿರುವ ಕಾರ್ಯಕರ್ತರು ಬೂಸ್ಟರ್‌ ಡೋಸ್‌ ಪಡೆದುಕೊಳ್ಳಬಹುದಾಗಿದೆ. ಆದರೆ ಸಾರ್ವಜನಿಕರಿಗೆ ಬೂಸ್ಟರ್‌ ಡೋಸ್‌ ಪಡೆಯಲು ಸಾಧ್ಯವಿಲ್ಲ. 

ಈ ಬಗ್ಗೆಯೂ ಪ್ರತಿಕ್ರಯಿಸಿದ ಡಾ. ಕೃಷ್ಣ ಎಲ್ಲಾ, ಮೊದಲು ಎಲ್ಲರಿಗೂ ಎರಡು ಡೋಸ್‌ ಲಸಿಕೆ ಸಂಪೂರ್ಣವಾಗಿ ನೀಡಿಕೆಯಾಗ ಬೇಕಿದೆ. ಅದಾದ ಬಳಿಕ ಸಾರ್ವತ್ರಿಕ ಬೂಸ್ಟರ್‌ ಡೋಸ್‌ ಒಳಿತು. ಸದ್ಯಕ್ಕೆ ಭಾರತ್‌ ಬಯೋಟೆಕ್‌ ಮಕ್ಕಳ ಲಸಿಕೆ ಜೊತೆಯಲ್ಲೇ ಮೂಗಿನ ರಂಧ್ರದ ಮೂಲಕ ನೀಡಲಾಗುವ Nasal Vaccine ಅನ್ನೂ ಬಳಕೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯಕ್ಕೆ ಬಳಕೆಯಲ್ಲಿರುವ ಚುಚ್ಚು ಲಸಿಕೆ ಸೋಂಕಿನಿಂದಾಗುವ ತೀವ್ರತೆಯನ್ನು ಕಡಿಮೆ ಮಾಡಬಲ್ಲದೆ ಹೊರತು, ಒಬ್ಬರಿಂದ ಮತ್ತೊಬ್ಬರಿಗೆ ಹರಡುವಿಕೆಗೆ ಕಡಿವಾಣ ಹಾಕಲಾರದು. ಆದರೆ ಈ ನಸಲ್‌ ವ್ಯಾಕ್ಸಿನ್‌, ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವಿಕೆಗೆ ತಡೆಗೋಡೆಯಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಅಂದಹಾಗೆ, ಭಾರತ್‌ ಬಯೋಟೆಕ್‌ ಮಕ್ಕಳ ಲಸಿಕೆಯನ್ನು ವೈದ್ಯಕೀಯ ಪ್ರಯೋಗಕ್ಕೆ ಕಳೆದ ಜೂನ್‌ ತಿಂಗಳಿನಲ್ಲಿ ಒಳಪಡಿಸಿತ್ತು. ಸದ್ಯ ಪ್ರಯೋಗದ ವರದಿಗಾಗಿ ಭಾರತ್‌ ಬಯೋಟೆಕ್‌ ಕಾಯುತ್ತಿದೆ.

ಇನ್ನು ರಾಷ್ಟ್ರೀಯ ವೈರಾಲಜಿ ಸಂಸ್ಥೆ (National Institute of Virology) ಕೂಡ ಮಕ್ಕಳ ಲಸಿಕೆ ಬಗ್ಗೆ ಅಧ್ಯಯನ ನಡೆಸುತ್ತಿದ್ದು ಇದೂ ಕೂಡ ಮುಂದಿನ ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಬಳಕೆಗೆ ಸಿಗುವ ಸಾಧ್ಯತೆ ಇದೆ. ರಾಷ್ಟ್ರೀಯ ವೈರಾಲಜಿ ಸಂಸ್ಥೆ ಪುಣೆ ವಿಭಾಗದ ನಿರ್ದೇಶಕಿ ಡಾ. ಪ್ರಿಯ ಅಬ್ರಹಾಂ ಈ ಬಗ್ಗೆ ಮಾತನಾಡಿ 2-18 ವರ್ಷದೊಳಗಿನ ಮಕ್ಕಳ ಲಸಿಕೆ ಎರಡು ಮತ್ತು ಮೂರನೇ ಹಂತದ ಪ್ರಯೋಗಗಳು ಚಾಲ್ತಿಯಲ್ಲಿದೆ. ಮುಂದಿನ ಸೆಪ್ಟೆಂಬರ್‌ ವೇಳೆಗೆ ಮಕ್ಕಳ ಲಸಿಕೆ ಬಳಕೆಗೆ ಸಿಗುವ ನಿರೀಕ್ಷೆಯಿದೆ ಎಂದಿದ್ದಾರೆ. ಇದೇ ವೇಳೆ, ಝೈಡಸ್‌ ಕ್ಯಾಡಿಲ ಎಂಬ ಹೊಸ ಕಂಪೆನಿಯ ಲಸಿಕೆಯೂ ಮಾರ್ಕೆಟ್‌ಗೆ ಬರುವ ಸಂಭವವಿದೆ ಎಂದು ಹೇಳಿದ್ದಾರೆ.

ಕರೋನಾ ನಡುವೆ ಮತ್ತಷ್ಟು ಆತಂಕ ಹುಟ್ಟಿಸಿದ್ದು ಕರೋನಾ ರೂಪಾಂತರಗಳು. ಅದ್ರಲ್ಲೂ ಪ್ರಮುಖವಾದದ್ದು ಡೆಲ್ಟಾ ಮತ್ತು ಡೆಲ್ಟಾ ಪ್ಲಸ್‌ ರೂಪಾಂತರಿಗಳು. ಸದ್ಯಕ್ಕೆ ಜಗತ್ತಿನ 130 ದೇಶಗಳಲ್ಲಿ ಈ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್‌ ರೂಪಾಂತರಿಗಳು ಪತ್ತೆಯಾಗಿವೆ. ಈ ತಳಿಗಳೂ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದಾದ ತಾಕತ್ತು ಹೊಂದಿದೆ. ಈ ಬಗ್ಗೆ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಪುಣೆ ವಿಭಾಗ ನಡೆಸಿದ ಅಧ್ಯಯನದಲ್ಲಿ, ಸದ್ಯಕ್ಕೆ ಚಾಲ್ತಿಯಲ್ಲಿರುವ ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್‌ ಸೇರಿದಂತೆ ಎಲ್ಲಾ ರೂಪಾಂತರಿ ವೈರಾಣುಗಳ ವಿರುದ್ಧ ಹೋರಾಟ ಮಾಡಬಲ್ಲ ಸಾಮರ್ಥ್ಯ ಹೊಂದಿದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಝೈಡಸ್‌ ಕ್ಯಾಡಿಲ ಲಸಿಕೆ ಕೂಡ ಇದೇ ರೀತಿಯಾದ ಕಿಮ್ಮತ್ತು ಹೊಂದಿರಲಿದೆ. ಈ ಲಸಿಕೆ ಸಂಪೂರ್ಣವಾಗಿ ಸೋಂಕು ತಡೆಯಲಿದೆ ಎನ್ನುವುದಕ್ಕಿಂತ ಸೋಂಕಿನ ತೀವ್ರತೆ ಕಡಿಮೆ ಮಾಡಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲಿದೆ. ಈ ಮೂಲಕ ಸಾವು ಅಥವಾ ಮಾರಣಾಂತಿಕ ಸಮಸ್ಯೆಗಳಿಂದ ಈ ಲಸಿಕೆ ಜನರನ್ನು ರಕ್ಷಿಸಲಿದೆ.

Tags: (Third Dose Nasal Vaccinebharat biotechCovid 19Covid vaccinesNational Institute of Virologyಕರೋನಾ ಮೂರನೇ ಅಲೆಕರೋನಾ ಲಸಿಕೆಕೋವಿಡ್-19ಬೂಸ್ಟರ್‌ ಡೋಸ್ಭಾರತ್‌ ಬಯೋಟೆಕ್‌ಮಕ್ಕಳ ಲಸಿಕೆರಾಷ್ಟ್ರೀಯ ವೈರಾಲಜಿ ಸಂಸ್ಥೆ
Previous Post

ಕಾಂಗ್ರೆಸ್ ಒಳಜಗಳ: ಸಿದ್ದರಾಮಯ್ಯ ಮತ್ತು ಎಚ್.ಸಿ ಮಹದೇವಪ್ಪ ನಡುವೆ ಮುಂದುವರಿದ ಮುಸುಕಿನ ಗುದ್ದಾಟ

Next Post

ಆನೆಗಳನ್ನು ಪೂಜೆ ಕಾರ್ಯಕ್ಕೆ ಬಳಸುವುದು ತಪ್ಪು; ಆನೆ ಕಾಡಿನಲ್ಲಿ ಇರಬೇಕು, ದೇವಸ್ಥಾನದಲ್ಲಿ ಅಲ್ಲ: ಕರ್ನಾಟಕ ಹೈಕೋರ್ಟ್

Related Posts

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
0

ಬೆಂಗಳೂರು: ನಾನು ಎಂಎಲ್ಎ ಆದ ಮೇಲೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಯಾವ ಜಾತಿ ಗಲಭೆ, ಜಾತಿ ರಾಜಕಾರಣ, ಪೊಲೀಸರ ಮೇಲೆ ಒತ್ತಡ, ಒತ್ತಾಯ ಮಾಡಿಲ್ಲ.ಕುವೆಂಪುರವರು ಹೇಳಿದಂತೆ ನಮ್ಮ...

Read moreDetails

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

January 13, 2026
Next Post
ಬೋಧಕ, ಬೋಧಕೇತರರನ್ನು ಕರೋನಾ ಫ್ರಂಟ್ ಲೈನ್ ಕಾರ್ಯಕರ್ತರೆಂದು ಪರಿಗಣಿಸಿ: ಬೊಮ್ಮಾಯಿ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಆನೆಗಳನ್ನು ಪೂಜೆ ಕಾರ್ಯಕ್ಕೆ ಬಳಸುವುದು ತಪ್ಪು; ಆನೆ ಕಾಡಿನಲ್ಲಿ ಇರಬೇಕು, ದೇವಸ್ಥಾನದಲ್ಲಿ ಅಲ್ಲ: ಕರ್ನಾಟಕ ಹೈಕೋರ್ಟ್

Please login to join discussion

Recent News

Sankranti 2026: ಎಳ್ಳು ಬೆಲ್ಲದ ನಡುವೆ ಲೌಕಿಕ ಬದುಕಿನ ಸಿಕ್ಕುಗಳು..!
Top Story

Sankranti 2026: ಎಳ್ಳು ಬೆಲ್ಲದ ನಡುವೆ ಲೌಕಿಕ ಬದುಕಿನ ಸಿಕ್ಕುಗಳು..!

by ನಾ ದಿವಾಕರ
January 14, 2026
Daily Horoscope: ಸಂಕ್ರಾಂತಿಗೆ ಅದೃಷ್ಟ ಹೊತ್ತು ತರುವ ರಾಶಿಗಳಿವು..!
Top Story

Daily Horoscope: ಸಂಕ್ರಾಂತಿಗೆ ಅದೃಷ್ಟ ಹೊತ್ತು ತರುವ ರಾಶಿಗಳಿವು..!

by ಪ್ರತಿಧ್ವನಿ
January 14, 2026
Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
Top Story

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

by ಪ್ರತಿಧ್ವನಿ
January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!
Top Story

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Sankranti 2026: ಎಳ್ಳು ಬೆಲ್ಲದ ನಡುವೆ ಲೌಕಿಕ ಬದುಕಿನ ಸಿಕ್ಕುಗಳು..!

Sankranti 2026: ಎಳ್ಳು ಬೆಲ್ಲದ ನಡುವೆ ಲೌಕಿಕ ಬದುಕಿನ ಸಿಕ್ಕುಗಳು..!

January 14, 2026
Daily Horoscope: ಸಂಕ್ರಾಂತಿಗೆ ಅದೃಷ್ಟ ಹೊತ್ತು ತರುವ ರಾಶಿಗಳಿವು..!

Daily Horoscope: ಸಂಕ್ರಾಂತಿಗೆ ಅದೃಷ್ಟ ಹೊತ್ತು ತರುವ ರಾಶಿಗಳಿವು..!

January 14, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada