• Home
  • About Us
  • ಕರ್ನಾಟಕ
Monday, January 19, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಅಫ್ಘನ್ ಬಿಕ್ಕಟ್ಟು: ವೀಸಾ ಅವಧಿ ವಿಸ್ತರಿಸುವಂತೆ ಕೇಳಿಕೊಳ್ಳುತ್ತಿರುವ ಅಫ್ಘನ್ ಮೂಲದ JNU ವಿದ್ಯಾರ್ಥಿಗಳು!

ಪ್ರತಿಧ್ವನಿ by ಪ್ರತಿಧ್ವನಿ
August 17, 2021
in ದೇಶ
0
ಅಫ್ಘನ್ ಬಿಕ್ಕಟ್ಟು: ವೀಸಾ ಅವಧಿ ವಿಸ್ತರಿಸುವಂತೆ ಕೇಳಿಕೊಳ್ಳುತ್ತಿರುವ ಅಫ್ಘನ್ ಮೂಲದ JNU ವಿದ್ಯಾರ್ಥಿಗಳು!
Share on WhatsAppShare on FacebookShare on Telegram

ತಾಲಿಬಾನ್ ಕ್ರೌರ್ಯದಿಂದ ಅತ್ತ ಅಫ್ಘಾನಿಸ್ತಾನ ತಲ್ಲಣಿಸಿ ಹೋಗಿದೆ. ತಾಲಿಬಾನಿಗಳ ಉಗ್ರವಾದಕ್ಕೆ ಅಫ್ಘಾನಿಸ್ತಾನವನ್ನು ಮೊತ್ತವಾಗಿ ವಶಪಡಿಸಿಕೊಂಡಿದ್ದಾರೆ. ಇದರ ನಡುವೆ ದೆಹಲಿಯ ಜೆಎನ್ಯೂ ಯೂನಿವೆರ್ಸಿಟಿಯ ಅಫ್ಘಾನ್ ವಿಧ್ಯಾರ್ಥಿಗಳಲ್ಲಿ ಇದೀಗ ತಳಮಳ ಶುರುವಾಗಿದೆ.

ADVERTISEMENT

 ದೆಹಲಿಯ ಜೆಎನ್ಯೂವಿನಲ್ಲಿ ಶಿಕ್ಷಣ ಪಡೆಯುತ್ತಿರುವ ಅಫ್ಘಾನಿಸ್ತಾನ ಮೂಲದ ವಿಧ್ಯಾರ್ಥಿಗಳಿಗೆ ತಮ್ಮ ವೀಸಾ ಅವಧಿ ಸವಾಲಾಗಿ ಪರಿಣಮಿಸಿದೆ. ANI ವರದಿ ಮಾಡಿರುವ ಪ್ರಕಾರ ಜೆಎನ್ಯೂವಿನ ಕೆಲ ಅಫ್ಘಾನಿ ವಿಧ್ಯಾರ್ಥಿಗಳ ವೀಸಾ ಅವಧಿ ಇನ್ನೇನು ಕೆಲ ತಿಂಗಳಲ್ಲೇ ಮುಕ್ತಾಯಗೊಳ್ಳಲಿದ್ದು, ಅಂಥಾ ವಿಧ್ಯಾರ್ಥಿಗಳಿಗೆ ಅತ್ತ ತಾಯ್ನಾಡಿಗೂ ಹೋಗುವಂತಿಲ್ಲ, ಇತ್ತ ವೀಸಾ ಅವಧಿ ಮುಗಿಯುವ ಕಾರಣ ಭಾರತದಲ್ಲೂ ಉಳಿದುಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. 

ANI ವರದಿ ಪ್ರಕಾರ ಜೆಎನ್ಯೂವಿನ ಬಹುತೇಕ ಅಫ್ಘಾನಿ ವಿಧ್ಯಾರ್ಥಿಗಳ ವೀಸಾ ಅವಧಿ ಇದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಮುಕ್ತಾಯಗೊಳ್ಳಲಿದೆ. ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಮುಂದುವರೆದಿರುವ ಹಿನ್ನೆಲೆಯಲ್ಲಿ ವಿಧ್ಯಾರ್ಥಿಗಳು ಅಫ್ಘಾನಿಸ್ತಾನಕ್ಕೆ ಮರಳಲು ಮನಸ್ಸು ಮಾಡುತ್ತಿಲ್ಲ. ಹಾಗೂ ಇಲ್ಲೇ ಉಳಿದುಕೊಂಡು ಸ್ನಾತಕ್ಕೋತ್ತರ ವಿಷಯಗಳ ಮೇಲೆ ಶಿಕ್ಷಣ  ಮುಂದುವರೆಸಲು ವೀಸಾ ಅವಧಿ ವಿಸ್ತರಿಸುವಂತೆ ಅನುಮತಿಯನ್ನು ಸರ್ಕಾರಕ್ಕೆ ಕೋರಿಕೊಳ್ಳಲಾಗಿದೆ. 

ಈ ಬಗ್ಗೆ ಎಎನ್ಐ ಜೊತೆ ಮಾತನಾಡಿದ ಓರ್ವ ಅಫ್ಘಾನಿ ಮೂಲದ ವಿಧ್ಯಾರ್ಥಿ, ಅಫ್ಘಾನಿಸ್ತಾನದಲ್ಲಿ ಸದ್ಯ ಯುದ್ಧದ ವಾತಾವರಣ ಮನೆ ಮಾಡಿದೆ. ಯಾವ ಕ್ಷಣದಲ್ಲಿ ಬೇಕಿದ್ದರೂ ಯುದ್ಧ ಘಟಿಸಬಹುದು. ಮನುಷ್ಯರ ಮಾರಣಹೋಮ ನಡೆಯುತ್ತಿದೆ. ಹೋದರೆ ಒಂದಾ ಸಾವು ಇಲ್ಲವೇ ಇಲ್ಲವೇ ಸೆರೆಯಲ್ಲಿ ಬದುಕಬೇಕಿದೆ. ಇದೇ ವೇಳೆ ನಮ್ಮ ಮೇಳೆ ಭಾರೀ ಪ್ರಮಾಣದ ಶೈಕ್ಷಣಿಕ ಶುಲ್ಕ ವಿಧಿಸಿದರೆ ನಮ್ಮನ್ನದು ಮತ್ತಷ್ಟು ಕಷ್ಟಕ್ಕೆ ದೂಡಲಿದೆ ಎಂದು ಸಂಕಟ ತೋಡಿಕೊಂಡಿದ್ದಾರೆ.

ಇನ್ನು ಜೆಎನ್ಯೂವಿನ ಟರ್ಮಿನಲ್ ವಿಧ್ಯಾರ್ಥಿಗಳು ಸೆಪ್ಟೆಂಬರ್ 23ರ ಒಳಗಾಗಿ ಹಾಸ್ಟೆಲ್ ಖಾಲಿ ಮಾಡಿ ಕೊಡುವ ಅನಿವಾರ್ಯತೆಗೆ ಸಿಲುಕಿಕೊಂಡಿದ್ದಾರೆ. ಹೀಗಾಗಿ ಹೊರಗಡೆ ತಂಗುವುದು ಇವರಿಗೆ ಆರ್ಥಿಕವಾಗಿ ಭಾರೀ ಹೊಡೆತ ಕೊಡಲಿದೆ. 

ʻʻಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಹೀಗಾಗಿ ನಮ್ಮ ಪರಿಸ್ಥಿತಿಯನ್ನು ಜೆಎನ್ಯೂ ಆಡಳಿತ ಮಂಡಳಿ ಅರ್ಥಮಾಡಿಕೊಂಡು ನನ್ನ ವೀಸಾ ಅವಧಿ ವಿಸ್ತರಿಸಿ ಕೊಡುತ್ತೇ ಎಂದು ನಂಬಿದ್ದೇನೆ. ಜೊತೆಗೆ, ಜೆಎನ್ಯೂವಿನಲ್ಲಿ ಪಿಹೆಚ್ಡಿ ನಂಥಾ ಕೋರ್ಸ್ಗಳು ಬಹಳ ದುಬಾರಿ. ನಮ್ಮಂಥಾ ಬಡ ಹಿನ್ನೆಲೆಯುಳ್ಳ ವಿಧ್ಯಾರ್ಥಿಗಳಿಗೆ ಭರಿಸಿಕೊಳ್ಳುವಂಥಾ ಶಕ್ತಿ ಇಲ್ಲ. ಹೀಗಾಗಿ ಮುಂದೇನು ಮಾಡಬೇಕು ಎಂಬ ಚಿಂತೆಯಲ್ಲಿದ್ದೇವೆʼʼ ಎಂದು ಅಫ್ಘಾನ್ ಮೂಲದ ಜೆಎನ್ಯೂ ವಿಧ್ಯಾರ್ಥಿ ಜಲಾಲುದ್ದೀನ್  ರಾಷ್ಟ್ರೀಯ ಮಾಧ್ಯಮಗಳಗೆ ಪ್ರತಿಕ್ರಿಯಿಸಿದ್ದಾರೆ. 

Delhi | Afghan students of Jawaharlal Nehru University (JNU) want their stay in India extended

My visa will expire next month. My request is to extend my visa for the long term. I don't have any option. Other students from Afghan also facing the same problem: Jalal-ud-din pic.twitter.com/MScQYdIUZy

— ANI (@ANI) August 15, 2021

ಇನ್ನು ಭಾರತ ಸರ್ಕಾರ ಅಫ್ಘಾನಿಸ್ತಾನ ಮೂಲದ ವಿಧ್ಯಾರ್ಥಿಗಳಿಗೆ ವೀಸಾ ಅವಧಿ ವಿಸ್ತರಿಸಿಕೊಡದಿದ್ದರೆ, ಅಂಥಾ ವಿಧ್ಯಾರ್ಥಿಗಳು ಕಡ್ಡಾಯವಾಗಿ ಇಲ್ಲಿಂದ ನಿರ್ಗಮಿಸಬೇಕಿದೆ. ಒಂದು ವೇಳೆ ವೀಸಾ ಅವಧಿ ವಿಸ್ತರಿಸುವುದೇ ಆದರೂ ಪಾಸ್ಪೋರ್ಟ್ ಗಡುವು ದಿನಾಂಕ (Expiry Date) ಸಮಸ್ಯೆ ಎದುರಾಗುವ ಸಂಭವವಿದೆ. ವಿಸ್ತರಣೆಗೊಂಡ ವೀಸಾ ಅವಧಿಯ ಆಸುಪಾಸಿನಲ್ಲಿ ಪಾಸ್ಪೋರ್ಟ್ ಎಕ್ಸ್ಪೈಯರ್ ದಿನಾಂಕ ಇರುವಂತಿಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಅಫ್ಘಾನ್ ಮೂಲದ ವಿಧ್ಯಾರ್ಥಿಗಳು.

ʻʻನನ್ನ ವೀಸಾ ಅವಧಿ ಇದೇ ವರ್ಷದ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳಲಿದೆ. ಇಲ್ಲಿಗೆ ಬರುವುದಕ್ಕೂ ಮೊದಲೇ ನಾನು ಅಫ್ಘಾನಿಸ್ತಾನದಲ್ಲಿ ಸರ್ಕಾರಿ ಕೆಲಸದಲ್ಲಿದ್ದೆ. ಈಗ ನಾನು ವಾಪಾಸ್ ಹೋದರೆ ಅವರು ನನ್ನನ್ನು ವಶಕ್ಕೆ ಪಡೆದು ಹಿಂಸೆ ಕೊಡುವವರಿದ್ದಾರೆ. ತಾಲಿಬಾನಿಗಳು ವಶಕ್ಕೆ ಪಡೆದುಕೊಂಡ ಪ್ರದೇಶವೊಂದರಲ್ಲೇ ನನ್ನ ಕುಟುಂಬವೂ ಇದೆ. ಕಳೆದ ಒಂದೂವರೆ ವಾರದಿಂದ ನಾನು ನನ್ನ ಕುಟುಂಬದ ಜೊತೆ ಮಾತನಾಡಲಿಲ್ಲ. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ನನಗೆʼʼ ಎಂದು ಶಫೀಕ್ ಸುಲ್ತಾನ್ ಎಂಬ ಜೆಎನ್ಯೂ ವಿಧ್ಯಾರ್ಥಿ ANI ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಾರೆ.

ಒಟ್ಟಾರೆ ಅಫ್ಘಾನಿಸ್ತಾನ ತಾಲಿಬಾನ್ ಉಗ್ರ ಸಂಘಟನೆಯ ತೆಕ್ಕೆಗೆ ಉರುಳುತ್ತಿದ್ದಂತೆ ದೇಶದಲ್ಲಿದ್ದು ಶಿಕ್ಷಣ ಪಡೆಯುತ್ತಿರುವ ವಿಧ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ. ವೀಸಾ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲ ಉಳಿದುಕೊಳ್ಳುವುದಕ್ಕೂ ಆಗದೆ ಅತ್ತ ತಾಯ್ನಾಡಿಗೂ ಮರಳಲಾಗದ ಪರಿಸ್ಥಿತಿಯಲ್ಲಿದ್ದಾರೆ.

Tags: JNU ವಿದ್ಯಾರ್ಥಿಅಫ್ಘನ್ ಬಿಕ್ಕಟ್ಟು
Previous Post

ಯುದ್ಧಗ್ರಸ್ತ ಅಫ್ಘಾನಿಸ್ತಾನದ ಭೀಕರತೆಯನ್ನು ಸಾರುವ ಚಿತ್ರಗಳಿವು…!

Next Post

ನೆರೆ ಹಾನಿ: ಸಂತ್ರಸ್ತರಿಗೆ ಪರಿಹಾರ ಬಿಡಗಡೆ ಮಾಡುವಂತೆ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ

Related Posts

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್
ಇದೀಗ

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

by ಪ್ರತಿಧ್ವನಿ
January 18, 2026
0

ಬೆಂಗಳೂರು : ರಾಜ್ಯದ ಅಬಕಾರಿ ಇಲಾಖೆಯಲ್ಲಿ ಕೇಳಿ ಬಂದಿರುವ ಲಂಚ ಹಗರಣದಲ್ಲಿ ಬೆಂಗಳೂರು ನಗರ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷಗಳು...

Read moreDetails
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

January 18, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

January 17, 2026
ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

January 17, 2026
Next Post
ನೆರೆ ಹಾನಿ: ಸಂತ್ರಸ್ತರಿಗೆ ಪರಿಹಾರ ಬಿಡಗಡೆ ಮಾಡುವಂತೆ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ

ನೆರೆ ಹಾನಿ: ಸಂತ್ರಸ್ತರಿಗೆ ಪರಿಹಾರ ಬಿಡಗಡೆ ಮಾಡುವಂತೆ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada