ಸದಾ ನೆಗೆಟಿವ್ ಸುದ್ದಿಯಲ್ಲಿರ್ತಿದ್ದ ಸೆಂಟ್ರಲ್ ಜೈಲ್ ಅಧಿಕಾರಿಗಳೀಗ ಪಾಸಿಟಿವ್ ನತ್ತ ಹೆಜ್ಜೆ ಹಾಕಿದ್ದಾರೆ. ಕೆ ಎಸ್ ಆರ್ ಪಿ ಆಯ್ತು, ಲಾ ಅಂಡ್ ಆರ್ಡರ್ ಆಯ್ತು ಇದೀಗ ಪರಪ್ಪನ ಅಗ್ರಹಾರದಲ್ಲಿ ಫಿಟ್ನೆಸ್ ಮಂತ್ರ ಜಪಿಸಲಾಗ್ತಿದೆ. ಗಾಂಜಾ, ಚಾಕು, ಚೂರಿ, ಹೊಡೆದಾಟ ಅಂತಿದ್ದ ಜೈಲಿನಲ್ಲೀಗ ಧ್ಯಾನ, ಯೋಗದ ತರಬೇತಿ ಶುರುವಾಗಿದೆ. ಕೋವಿಡ್ ಹಿನ್ನೆಲೆ ಜೈಲಿನಲ್ಲಿ ಕೈದಿಗಳ ಸದೃಢ ಆರೋಗ್ಯಕ್ಕೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ಶ್ರೀ ರವಿಶಂಕರ್ ಗುರೂಜಿ ಆಶ್ರಮದ ಕಿರಣ್ ಎಂಬುವರಿಂದ ಯೋಗ ತರಬೇತಿ ಕೊಡಿಸಲಾಗುತ್ತಿದೆ.
ಸೂರ್ಯ ನಮಸ್ಕಾರ, ಯೋಗ, ಧ್ಯಾನ, ಗೂರೂಜಿ ಪುಸ್ತಕಗಳ ಬಗ್ಗೆ ಪ್ರವಚನ ನೀಡಲಾಗ್ತಿದೆ. ಕೇವಲ ಯೋಗ ಅಷ್ಟೇ ಅಲ್ದೆ, ಮನಪರಿವರ್ತನೆ ತರಬೇತಿಯೂ ಕೊಡಲಾಗುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ಸಾವಿರಕ್ಕೂ ಹೆಚ್ಚು ಸಜಾಬಂಧಿ ಕೈದಿಗಳಿದ್ದು, 10 ಗುಂಪುಗಳಾಗಿ ವಿಂಗಡಣೆ ಮಾಡಲಾಗಿದೆ. ಒಂದೊಂದು ಟೀಂನಲ್ಲಿ 60 ಕೈದಿಗಳಿದ್ದು , ಪ್ರತಿನಿತ್ಯ ಒಂದೊಂದು ಟೀಂಗೆ ತರಬೇತಿ ನೀಡಲಾಗುತ್ತಿದೆ. ಪ್ರತಿ ನಿತ್ಯ 6.30 ರಿಂದ 8.30 ರವರೆಗೂ ಯೋಗ ತರಬೇತಿ ಕೊಡಲಾಗುತ್ತಿದೆ.

ಈ ನಡುವೆ ಹೆಚ್ಚು ತೂಕ ಇರೋರು, ಅನಾರೋಗ್ಯವುಳ್ಳವರಿಗೆ ಪ್ರತ್ಯೇಕ ತರಬೇತಿ ಇದೆ. ಮೊದಲು ಆಸಕ್ತಿವುಳ್ಳವರನ್ನ ಮಾತ್ರ ಕರೆದು ಟ್ರೈನಿಂಗ್ ಕೊಡಲಾಗುತ್ತಿತ್ತು. ಎರಡೇ ದಿನಕ್ಕೆ ಎಲ್ಲಾ ಸಜಾ ಬಂಧಿ ಕೈದಿಗಳಿಂದ ತರಬೇತಿಗೆ ಸಕರಾತ್ಮಕ ಸ್ಪಂದನೆ ಸಿಕ್ಕಿದೆ. ತರಬೇತುದಾರರು ಹೇಳಿಕೊಟ್ಟದ್ದನ್ನ ಚಾಚು ತಪ್ಪದೆ ಪಾಲನೆ ಮಾಡ್ತಿದ್ದು, ಟ್ರೈನಿಂಗ್ ತರುವಾಯ ರಾತ್ರಿ ವೇಳೆ ಮತ್ತೆ ಕೆಲ ಕೈದಿಗಳು ಪ್ರಾಕ್ಟೀಸ್ ಮಾಡುತ್ತಿದ್ದಾರೆ.
ಕಡ್ಡಾಯವಾಗಿ ಪಿಟ್ನೆಸ್ ಮೈಂಟೇನ್ ಮಾಡಲು ಸೂಚಿಸಿದ್ದಾರೆ. ಕೇವಲ ಯೋಗ ಅಷ್ಟೇ ಅಲ್ದೆ ಪ್ರತಿ ನಿತ್ಯ ಎಲ್ಲರೂ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸಿ ಆರೋಗ್ಯದ ಬಗ್ಗೆ ನಿಗಾ ಇಡಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಜೈಲು ಸಿಬ್ಬಂದಿಗಿಂತಲೂ ಹೆಚ್ಚು ಆಕ್ಟೀವ್ ಆಗಿ ಸದೃಢ ಆರೋಗ್ಯಕ್ಕೆ ಕೈದಿಗಳು ಕೈಜೋಡಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಹೆಚ್ಚು ತೂಕ ಇರೋರು, ಅನಾರೋಗ್ಯ ವುಳ್ಳವರಿಗೆ ಪ್ರತ್ಯೇಕ ತರಬೇತಿ ಇದೆ. ಮಹಿಳಾ ಜೈಲು, ಮುಖ್ಯ ಜೈಲಿನ ಒಳಗೆ ಹಾಗೂ ಹೊರಗೆ ಭದ್ರತೆ ಇರೋರನ್ನ ಪ್ರತ್ಯೇಕ ಟೀಂ ಮಾಡಿರೋ ಜೈಲಾಧಿಕಾರಿಗಳು, ಕಡ್ಡಾಯವಾಗಿ ಪಿಟ್ನೆಸ್ ಮೈಂಟೇನ್ ಮಾಡಲು ಸೂಚಿಸಿದ್ದಾರೆ. ಹತ್ತು ದಿನವೂ ಒಂದೊಂದು ಟೀಂಗೆ ಆಶ್ರಮದ ಇಬ್ಬರು ತರಬೇತುದಾರರಿಂದ ಟ್ರೈನಿಂಗ್ ನೀಡಲಾಗುತ್ತಿದೆ.

ಒಂದು ಕಡೆ ಜೈಲು ಸಿಬ್ಬಂದಿಗೂ ತರಬೇತಿ ನೀಡಲಾಗ್ತಿದ್ದು , ಎಲ್ಲರೂ ತಪ್ಪದೇ ಬೆಳಗ್ಗೆ ಹಾಜರಾಗಬೇಕಿದೆ. ಒಂದು ವೇಳೆ ಯಾರಾದರೂ ಪದೇ ಪದೇ ಗೈರಾದ್ರೆ ಶಿಸ್ತುಕ್ರಮದ ಎಚ್ಚರಿಕೆ ನೀಡಲಾಗಿದೆ. ಸಿಬ್ಬಂದಿ ಜೊತೆಗೆ ಕೈದಿಗಗಳಿಗೂ ಆರೋಗ್ಯದ ದೃಷ್ಠಿಯಲ್ಲಿ ಹಿರಿಯ ಅಧಿಕಾರಿಗಳು ಸ್ಪಂದಿಸ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಕೈದಿಗಳಲ್ಲಿ ಹೆಚ್ಚು ಆಕ್ಟೀವ್ ಇರುವಂತಹವರನ್ನ ಆಯ್ಕೆ ಮಾಡಿ, ಅವರಿಂದಲೇ ತರಬೇತಿ ಕೊಡಿಸಲು ಪ್ಲಾನ್ ಮಾಡಲಾಗಿದೆ. ಈ ಮೂಲಕ ಕೈದಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸೋ ಕೆಲಸವನ್ನ ಅಧಿಕಾರಿಗಳು ಮಾಡುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ವಿಚಾರಣಾ ಕೈದಿಗಳಿಗೂ ತರಬೇತಿ ಕೊಡಲು ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ಒಟ್ಟಾರೆ ಅಪರಾಧ ಹಿನ್ನೆಲೆಯಿಂದ ಬಂದವರ ಮನಪರಿಪರ್ತನೆಯ ಇದರ ಹಿಂದಿನ ಮುಖ್ಯ ಗುರಿ.












