• Home
  • About Us
  • ಕರ್ನಾಟಕ
Saturday, November 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಅಫ್ಘನ್ ರಕ್ತಚರಿತೆ ಭಾಗ-1: ಅಫ್ಘನ್‌ ಅರಾಜಕತೆಯಲ್ಲಿ ಅಮೆರಿಕಾ-ರಷ್ಯಾದ ಪಾತ್ರ!

ಫೈಝ್ by ಫೈಝ್
August 17, 2021
in ದೇಶ, ವಿದೇಶ
0
ಅಫ್ಘನ್ ರಕ್ತಚರಿತೆ ಭಾಗ-1: ಅಫ್ಘನ್‌ ಅರಾಜಕತೆಯಲ್ಲಿ ಅಮೆರಿಕಾ-ರಷ್ಯಾದ ಪಾತ್ರ!
Share on WhatsAppShare on FacebookShare on Telegram

ಮಧ್ಯ ಏಷಿಯಾದ ಗುಡ್ಡಗಾಡು ದೇಶ ಅಫ್ಘಾನಿಸ್ತಾನ ಈಗ ಮತ್ತೆ ವಿಶ್ವ ರಾಷ್ಟ್ರಗಳ  ಗಮನ ಸೆಳೆಯುತ್ತಿದೆ.  ದೇಶದಲ್ಲಿ ನಡೆಯುತ್ತಿರುವ ಅಂತರ್‌ಯುದ್ಧದಲ್ಲಿ ಅಶ್ರಫ್‌ ಘನಿ ನೇತೃತ್ವದ ಅಫ್ಘನ್‌ ಸರ್ಕಾರದ ಭದ್ರತಾ ಪಡೆಗಳು ಸೋಲೊಪ್ಪಿಕೊಂಡು ಸರ್ಕಾರವನ್ನು ತಾಲಿಬಾನಿಗೆ ಹಸ್ತಾಂತರಿಸಿದೆ. ಅಶ್ರಫ್‌ ಘನಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಸದ್ಯ, ತಜಕಿಸ್ತಾನದ ಆಶ್ರಯದಲ್ಲಿ ಅಫ್ಘನ್‌ ಅಧ್ಯಕ್ಷರಿದ್ದಾರೆ ಎನ್ನುವುದು ಸುದ್ದಿ.

ADVERTISEMENT

ಅಫ್ಘನ್‌ ನೆಲದ ಮೇಲೆ ನಡೆಯುತ್ತಿರುವ ದೀರ್ಘಕಾಲೀನ ಯುದ್ಧಗಳಿಗೆ ವಿಶ್ವದ ದಿಗ್ಗಜ ರಾಷ್ಟ್ರಗಳಾದ ಅಮೆರಿಕಾ ಮತ್ತು ರಷ್ಯಾದ ಕಾಣಿಕೆ ಬಹುಪಾಲು ಇದೆ. ಎರಡನೇ ಜಾಗತಿಕ ಯುದ್ಧಗಳ ಬಳಿಕ ಅಮೆರಿಕಾ ಮತ್ತು ರಷ್ಯಾ ನಡುವಿನ ಶೀತಲ ಸಮರದ ಪರಿಣಾಮಗಳನ್ನು ಇದೀಗ ಅಫ್ಘನ್‌ ಅನುಭವಿಸುತ್ತಿದೆ.

ಪ್ರಸ್ತುತ ಯುದ್ಧಗ್ರಸ್ತವಾಗಿರುವ ಅಫ್ಘನ್‌ ದೇಶದ ಕುರಿತಾದ ಉಲ್ಲೇಖ ಮಹಾಭಾರತದಲ್ಲೇ ಬರುತ್ತದೆ. ಗಾಂಧಾರಿಯ ಹುಟ್ಟೂರಾದ ಕಂದಹಾರ್‌ (ಅಫ್ಘನ್‌ ಪ್ರದೇಶ) ಆಗಿನ ಕಾಲದಲ್ಲೇ ಸುಗಂಧ ದ್ರವ್ಯಗಳಿಗೆ ಪ್ರಖ್ಯಾತ ಹೊಂದಿದ್ದ ನಾಡು. ಮೌರ್ಯರು, ಕಾನಿಷ್ಕರು, ಅರಬರು, ಮಂಗೋಲಿಯನ್ನರು,  ಮೊಘಲರು ಆ ಬಳಿಕ ಬ್ರಿಟೀಷರು ಆಳಿದ ಇತಿಹಾಸವಿರುವ ಅಫ್ಘನಿಸ್ತಾನದಲ್ಲಿ ಒಂದು ಕಾಲದಲ್ಲಿ ಬೌದ್ಧ ಧರ್ಮ ವ್ಯಾಪಕವಾಗಿತ್ತು.

ಈ ಇತಿಹಾಸ ಸಂಪನ್ನ ಅಫ್ಘಾನಿಸ್ತಾನ ಇಂದು ಮದ್ದುಗುಂಡುಗಳ ಸದ್ದಿನಿಂದ ನಲುಗುತ್ತಿದೆ. ಅಲ್ಲಿನ ಮಕ್ಕಳು, ಅಮಾಯಕ ನಾಗರಿಕರು ಬಂಡುಕೋರರ ಅಥವಾ ಭದ್ರತಾ ಸಿಬ್ಬಂದಿಗಳ ಗುಂಡುಗಳಿಗೆ, ವೈಮಾನಿಕ ಬಾಂಬ್‌ ದಾಳಿಗಳಿಗೆ ಅನಾಯಾಸವಾಗಿ ಬಲಿಯಾಗುತ್ತಿದ್ದಾರೆ. ಇದಕ್ಕೆಲ್ಲಾ ನೇರ ಹೊಣೆ ತಾಲಿಬಾನ್‌ ಎಂದು ಕಂಡರೂ, ಕೇವಲ ತಾಲಿಬಾನ್‌ ಮಾತ್ರವಲ್ಲ. ಅಫ್ಘನ್‌ ಯುದ್ಧ ಚರಿತೆಗೆ ದೀರ್ಘ ಇತಿಹಾಸವಿದೆ.

ಅಫ್ಘನ್‌ ಅರಾಜಕತೆಯಲ್ಲಿ ಅಮೆರಿಕಾ-ರಷ್ಯಾದ ಪಾತ್ರ!

ಜಗತ್ತಿನ ಬಲಶಾಲಿ ಉಗ್ರ ಸಂಘಟನೆಯಾಗಿ ಗುರುತಿಸಿಕೊಂಡಿರುವ ತಾಲಿಬಾನ್‌ ಆರಂಭದಲ್ಲಿ ಈ ಸ್ವರೂಪದಲ್ಲಿರಲಿಲ್ಲ. ಅದರ ಹುಟ್ಟಿಗೆ ಹಲವಾರು ರಾಜಕೀಯ ಸ್ಥಿತ್ಯಂತರಗಳು, ಅಮೆರಿಕಾ- ರಷ್ಯಾ ಕೋಲ್ಡ್‌ ವಾರ್‌, ಇಸ್ಲಾಮಿಕ್‌ ನೇಷನ್‌ ಕಲ್ಪನೆ, ಪಾಕಿಸ್ತಾನದ ಉತ್ತೇಜನ ಹೀಗೆ ಹಲವು ಕಾರಣಗಳಿವೆ.

ಎರಡನೇ ಜಾಗತಿಕ ಯುದ್ಧ ಬಳಿಕ ಕಮ್ಯುನಿಸ್ಟ್‌ ಹಾಗೂ ಬಂಡವಾಳಶಾಹಿ ಎರಡೇ ರೀತಿಯ ವಿಚಾರಧಾರೆಗಳ ಸರ್ಕಾರಗಳು ಬಹುಪಾಲು ದೇಶಗಳನ್ನು ಆಳುತ್ತಿದ್ದವು. ಯುಎಸ್‌ಎಸ್‌ಆರ್‌ (ರಷ್ಯಾ) ಮತ್ತು ಅಮೆರಿಕಾ ನಡುವಿನ ಕೋಲ್ಡ್‌ ವಾರ್‌ಗಳು ನಡೆಯುತ್ತಿದ್ದರೆ, ಎರಡೂ ರಾಷ್ಟ್ರಗಳು ತಮ್ಮದೇ ಹಿಡಿತವನ್ನು ಕೆಲವು ದೇಶಗಳ ಮೇಲೆ ಇಟ್ಟಿದ್ದವು. ಎರಡು ದಿಗ್ಗಜ ರಾಷ್ಟ್ರಗಳು ತಮ್ಮ ಪ್ರತಿಷ್ಟೆ ಸಾಧಿಸಲು ಯಾವ ಮಟ್ಟಕ್ಕೂ ಇಳಿಯುತ್ತಿದ್ದವು.

ನೂರ್‌ ಮಹಮ್ಮದ್‌ ತಾರಕಿ

ಕಮ್ಯುನಿಸ್ಟ್‌ ಸಿದ್ಧಾಂತದ PDPA (People Decratic Party Of Afghanisthan) ಆಡಳಿತವಿದ್ದ ಅಫ್ಘಾನಿಸ್ತಾನದಲ್ಲಿ ಸರ್ಕಾರದಲ್ಲೇ ಆಂತರಿಕ ಕಲಹಗಳು ನಡೆಯತೊಡಗಿದವು. ಕಮ್ಯುನಿಸ್ಟ್‌ ಪಕ್ಷದಲ್ಲೇ ಎರಡು ಬಣಗಳಾಗಿ, ಅದರ ಆಂತರಿಕ ಭಿನ್ನಮತದಲ್ಲಿ 1979 ರಲ್ಲಿ ಕಮ್ಯುನಿಸ್ಟ್‌ ಸರ್ಕಾರದ ಅಧ್ಯಕ್ಷ ನೂರ್‌ ಮಹಮ್ಮದ್‌ ತಾರಕಿ ಅವರು ಕೊಲ್ಲಲ್ಪಡುತ್ತಾರೆ. ಇನ್ನೊಂದು ಬಣದ  ಕಮ್ಯುನಿಸ್ಟ್‌ ನೇತಾರ ಹಪೀಝುಲ್ಲಾ ಅಮೀನ್‌ ಅವರೇ ತಮ್ಮ ಅಧ್ಯಕ್ಷನನ್ನು ಬಂಧಿಸಿ ಕೊಲ್ಲಿಸಿರುತ್ತಾರೆ. ಬಳಿಕ ತಾವೇ ಗದ್ದುಗೆ ಏರಿರುತ್ತಾರೆ. ಕಮ್ಯುನಿಸ್ಟರ ನಡುವೆ ಜಗಳಗಳು ನಡೆಯುತ್ತಿದ್ದಂತೆಯೇ, ಕಮ್ಯುನಿಸ್ಟರ ವಿರುದ್ಧ ಇಸ್ಲಾಮಿಸ್ಟರೂ ಕೂಡಾ ಜಗಳ ಶುರು ಹಚ್ಚುತ್ತಾರೆ.

ಹಪೀಝುಲ್ಲಾ ಅಮೀನ್‌

ಅದೇ ಸಂಧರ್ಭದಲ್ಲಿ ನಡೆದ (1979) ಇರಾನ್‌ ಕ್ರಾಂತಿಯು ಅಫ್ಘನ್‌ ಮುಸ್ಲಿಂ ಬಂಡುಕೋರರಿಗೆ ಅಗಾಧ ಉತ್ತೇಜನ ನೀಡುತ್ತದೆ. ಇನ್ನೇನು ಮುಸ್ಲಿಮ್‌ ಬಂಡಾಯಗಾರರು ಅಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲಿದ್ದಾರೆ ಎನ್ನುವಾಗ ಕಮ್ಯುನಿಸ್ಟ್‌ ರಾಷ್ಟ್ರವಾದ ಸೋವಿಯತ್‌ ತನ್ನ ಸೇನೆಯನ್ನು ಅಫ್ಘನ್‌

ಸರ್ಕಾರದ ನೆರವಿಗೆ ರವಾನಿಸುತ್ತದೆ. ಅಫ್ಘಾನಿಸ್ತಾನದ ಪ್ರಸ್ತುತ ಸಮಸ್ಯೆಯ ಅಂದರೆ ತಾಲಿಬಾನಿನ ಮೂಲ ಇಲ್ಲಿಂದ ಆರಂಭವಾಗುತ್ತದೆ ಎನ್ನಲಾಗಿದೆ.

ಇರಾನ್‌ ಕ್ರಾಂತಿಯಿಂದ ಭಯಬಿದ್ದಿದ್ದ ಹಫೀಝುಲ್ಲಾ ಕೊನೆ ಕಾಲಕ್ಕಾಗುವಾಗ ಇಸ್ಲಾಮಿಸ್ಟರ ಬೆಂಬಲ ಪಡೆಯಲು ಕಮ್ಯುನಿಸಂ ಸಿದ್ದಾಂತದೊಂದಿಗೆ ರಾಜಿ ಮಾಡಿಕೊಳ್ಳಲು ಶುರುವಿಡುತ್ತಾರೆ. ಇದು ಕರ್ಮಠ ಕಮ್ಯುನಿಸ್ಟರಾದ ಸೋವಿಯತ್‌ ಯುನಿಯನ್‌ ಕೆಂಗಣ್ಣಿಗೆ ಕಾರಣವಾಗುತ್ತದೆ. ಅಫ್ಘನ್‌ ಸರ್ಕಾರಕ್ಕೆ ನೆರವಿಗೆ ಬಂದಿದ್ದ ಸೋವಿಯತ್‌ ಸೇನೆಯೆ ಅಧ್ಯಕ್ಷನನ್ನು ಕೊಲ್ಲುತ್ತದೆ ಎಂದು ಹೇಳುತ್ತದೆ ಇತಿಹಾಸ. ಬಳಿಕ ಕಮ್ಯುನಿಸ್ಟ್‌ ನೇತಾರನೇ ಆದ ಬಬ್ರಾಕ್‌ ಕರ್ಮಲ್‌ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ. ಆ ಮೂಲಕ ಅಫ್ಘನ್‌ನಲ್ಲಿ ತನ್ನ ಪ್ರಭಾವವನ್ನು ಬಲವಾಗಿ ಬೀರುತ್ತದೆ ಸೋವಿಯತ್‌ ಒಕ್ಕೂಟ.

ಮುಜಾಹಿದೀನ್‌ ಹೋರಾಟ

ಜಾಗತಿಕ ಎರಡು ಪ್ರಮುಖ ಧರ್ಮಗಳಾದ ಇಸ್ಲಾಂ ಮತ್ತು ಕ್ರಿಷ್ಚಿಯಾನಿಟಿಯ ನಡುವೆ ಸಾವಿರಾರು ವರ್ಷಗಳ ಕ್ರುಸೇಡ್-ಜಿಹಾದ್‌ ಪವಿತ್ರ ಯುದ್ಧಗಳು ನಡೆಯುತ್ತಿತ್ತು. ಏನೇ ಕಮ್ಯುನಿಸ್ಟ್‌ ರಾಷ್ಟ್ರವಾದರೂ ಅಫ್ಘನಿಸ್ತಾನದ ಮೇಲೆ ರಷ್ಯಾ ಸೈನಿಕರು ಬಂದಿಳಿಯುವುದು ಕ್ರುಸೇಡ್‌ನ ಭಾಗವೆಂದೇ ಅಫ್ಘನಿನ ಒಂದು ವಿಭಾಗ ಮುಸ್ಲಿಮ್‌ ಬಂಡುಕೋರರು ಕಂಡು ಕೊಂಡರು. ಹಾಗಾಗಿ, ರಷಿಯನ್ನರ ವಿರುದ್ಧ ಮುಜಾಹಿದ್‌ ಸಂಘಟನೆಯಡಿಯಲ್ಲಿ ಜಿಹಾದ್ ಪ್ರಾರಂಭವಾಯಿತು.

ಆದರೆ, ಈ ಕುರಿತು ಬೇರೆ ಬೇರೆ ವಿಶ್ಲೇಷಣೆಗಳಿವೆ. ಒಂದು ವಾದದ ಪ್ರಕಾರ, ಅಫ್ಘನ್‌ನಲ್ಲಿ ಸೋವಿಯತ್‌ ಒಕ್ಕೂಟದ ಪ್ರಭಾವವನ್ನು ತಗ್ಗಿಸಲು ಆಂತರಿಕ ಬಂಡುಕೋರರಿಗೆ ಅಮೇರಿಕಾ ಸ್ವತಃ ಉತ್ತೇಜನ ನೀಡಿ, ಅಫ್ಘನ್‌ನಲ್ಲಿ ಅರಾಜಕತೆಗೆ ಉಂಟಾಗುವಂತೆ ನೋಡಿಕೊಂಡಿತು. ಆ ಮೂಲಕ ವಿಯಟ್ನಾಮ್‌ ಸೋಲಿನ ಹಗೆಯನ್ನು ಸೋವಿಯತ್‌ ಒಕ್ಕೂಟದ ವಿರುದ್ಧ ತೀರಿಸಿಕೊಂಡಿತು ಎನ್ನುವುದು.

ಮುಜಾಹಿದೀನ್‌

ಅದೇನೇ ಇದ್ದರೂ, ಮುಜಾಹಿದ್‌ ಸಂಘಟನೆಗೆ ಸೌದಿ ಅರೇಬಿಯಾ ಬೆಂಬಲ ನೀಡುತ್ತಿತ್ತು. ಹೇಳಿ ಕೇಳಿ ಸೌದಿ ಮೊದಲೇ ಅಮೆರಿಕಾ ಬಣದಲ್ಲಿದ್ದ ರಾಷ್ಟ್ರ. ಅಮೆರಿಕಾದ ಗುಪ್ತಚರ ಇಲಾಖೆ ಸಿಐಎ ಈ ಮಿಶನ್‌ಗೆ ಆಪರೇಷನ್‌ ಸೈಕ್ಲೋನ್‌ ಹೆಸರಿಟ್ಟು, ಆರಂಭದಲ್ಲೇ 50 ಮಿಲಿಯ ಡಾಲರ್‌ ಖರ್ಚು  ಮಾಡಿತ್ತು ಎಂದು ಸಿಐಎ ನಿರ್ದೇಶಕ ರಾಬರ್ಟ್‌ ಗೇಟ್ಸ್‌ ಸ್ವತಃ ಇದನ್ನು ಒಪ್ಪಿಕೊಂಡಿದ್ದರು.

ಸಿಐಎ ಜೊತೆಗೆ ಬ್ರಿಟಿಷ್‌ ಇಂಟಲಿಜೆನ್ಸ್‌ ಎಂಐ6 ಹಾಗೂ ಸೌದಿ ಕೂಡಾ ಸೇರಿಕೊಂಡಿತ್ತು.

ಅದುವರೆಗೂ ಅಲ್ಪ ಪ್ರಮಾಣದ ಬಂಡಾಯಗಾರರಾಗಿದ್ದ ಮುಜಾಹಿದೀನ್‌ ಸಂಘಟನೆ ಮೇಲೆ ಹೇಳಿರುವ ರಾಷ್ಟ್ರಗಳ ಬೆಂಬಲದೊಂದಿಗೆ ಸೋವಿಯತ್‌ ಸೈನ್ಯವನ್ನೇ ಬಗ್ಗು ಬಡಿಯುವ ಮಟ್ಟಕ್ಕೆ ಬೆಳೆಯಿತು.

ಕಮ್ಯುನಿಸ್ಟ್‌ ಸರ್ಕಾರದ ಪತನ.!

ಸ್ವಾತಂತ್ರ್ಯ ಹೋರಾಟಗಾರರು ಎಂದು ತಮ್ಮನ್ನು ತಾವೇ ಕರೆದುಕೊಂಡ ಮುಜಾಹಿದನ್ನರು ಪಾಕಿಸ್ತಾನ ಹಾಗೂ ಅಮೆರಿಕಾ ಸಾಕಷ್ಟು ನೆರವು ನೀಡಿತು. ಅಮೆರಿಕಾದ ಬಣದಲ್ಲಿರುವ ಪ್ರಬಲ ಮುಸ್ಲಿಂ ರಾಷ್ಟ್ರ ಸೌದಿ ಅರೆಬಿಯಾ ಕೂಡಾ ಪರೋಕ್ಷವಾಗಿ ಈ ಸಂಘಟನೆಗಳಿಗೆ ಬೆಂಬಲ ನೀಡಿತ್ತು. ಮಿಲಿಟರಿ ಪರಿಕರಗಳನ್ನು, ಧನಸಹಾಯವನ್ನು ಯಥೇಚ್ಛವಾಗಿ ಅಮೆರಿಕಾ ನೀಡಿ ಬೆಂಬಲ ನೀಡಿತು. ಗುಡ್ಡಗಾಡು ಅಫ್ಘನಿನಲ್ಲಿ ನೇರಾ ನೇರಾ ಯುದ್ಧ ಮಾಡಿ ಗೆಲ್ಲುವುದು ಯಾವುದೇ ವಿದೇಶಿ ಶಕ್ತಿಗಳಿಗೆ ಸಾಧ್ಯವಿರಲಿಲ್ಲ. ಬಂಡುಕೋರರ ಗೆರಿಲ್ಲಾ ಮಾದರಿಯ ಯುದ್ಧ ಕಲೆಗಳಿಗೆ ಅವರ ಗುಡ್ಡಗಾಡು ಪ್ರದೇಶ ಪ್ರತಿಕೂಲವಾಗಿತ್ತು. ಜಿನೆವಾ ಒಪ್ಪಂದ ಬಳಿಕ ಸೋವಿಯತ್‌ ದೇಶದ ಸೈನ್ಯ ಮುಜಾಹಿದಿನ್‌ ಹುಟ್ಟಡಗಿಸಲಾಗದೆ  1989 ರಲ್ಲಿ ಮರಳಿ ತಮ್ಮ ನಾಡಿಗೆ ಹೋಯಿತು.

ಡಾ. ಮಹಮ್ಮದ್‌ ನಜೀಬುಲ್ಲಾಹ್‌

ಆ ವೇಳೆ ಡಾ. ಮಹಮ್ಮದ್‌ ನಜೀಬುಲ್ಲಾಹ್‌ ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದರು. ಸಾಕಷ್ಟು ಪ್ರಗತಿಯನ್ನು ತರಲು ಅವರು ಶ್ರಮಿಸುತ್ತಾರೆ. ಅಷ್ಟರ ವೇಳೆಗೆ ಕಮ್ಯುನಿಸ್ಟ್‌ ಪ್ರಭಾವದಿಂದ ಅಫ್ಘನ್‌ ಹೊರಬಂದಿರುತ್ತದೆ. ಇಸ್ಲಾಮಿಕ್‌ ರಿಪಬ್ಲಿಕ್‌ ಆಗಿ ಅಫ್ಘನ್‌ ಅನ್ನು ಘೋಷಿಸಿದಾಗ್ಯೂ, ಸೋವಿಯತ್‌ ಒಕ್ಕೂಟ ಇನ್ನೂ ನಜೀಬುಲ್ಲಾರಿಗೆ ಸಹಾಯ ಮಾಡುತ್ತಿದೆ ಎಂದು ಮುಜಾಹಿದೀನ್‌ ಸರ್ಕಾರದ ವಿರುದ್ಧ ತಮ್ಮ ಪ್ರತಿರೋಧವನ್ನು ದಾಖಲಿಸುತ್ತಲೇ ಇರುತ್ತದೆ.

1991 ರಲ್ಲಿ ಮುಜಾಹಿದೀನ್ ಕೊನೆಗೂ ಆಂತರಿಕ ದಂಗೆಯಲ್ಲಿ ಗೆಲುವು ಸಾಧಿಸುತ್ತದೆ. ‌ಆದರೆ, ಮುಜಾಹಿದ್‌ ಒಳಗೆ ಒಗ್ಗಟ್ಟು ಇರಲಿಲ್ಲ. ಇಸ್ಲಾಮಿಕ್‌ ದೇಶದ ಪರಿಕಲ್ಪನೆಯಲ್ಲಿ ರೂಪುಗೊಂಡಿದ್ದರೂ ಅಫ್ಘನ್‌ ಬುಡಕಟ್ಟುಗಳ ನಡುವಿನ ವೈಮನಸ್ಸು ಆ ಸಂಘಟನೆಯಲ್ಲೂ ಇದ್ದವು. ಕೊನೆಗೂ 1992ರಲ್ಲಿ ಬುರ್ಹಾನುದ್ದೀನ್‌ ರಬ್ಬಾನಿ ಅಫ್ಘನ್‌ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತಾರೆ. ‌


Tags: ಅಫ್ಘನ್‌ಅಮೆರಿಕಾ-ರಷ್ಯಾತಾಲಿಬಾನಿಮುಜಾಹಿದೀನ್‌
Previous Post

NSUI ಪ್ರತಿಭಟನೆ: ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, ಎಲ್ಲ PUC ವಿಧ್ಯಾರ್ಥಿಗಳಂತೆ ಉತ್ತೀರ್ಣ ಮಾಡುವಂತೆ ಮನವಿ

Next Post

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಯೋಗ ಕ್ಲಾಸ್: ಕೈದಿಗಳ ಆರೋಗ್ಯ ಕಾಪಾಡಲು ಸೂಚನೆ

Related Posts

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ
Top Story

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

by ಪ್ರತಿಧ್ವನಿ
November 21, 2025
0

ದುಬೈ ಏರ್​​ ಶೋ ಕಾರ್ಯಕ್ರಮದಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. https://youtu.be/_-ETZQKXvgY?si=HJdmeaIp6arDY5i5 ತೇಜಸ್ ಯುದ್ಧ ವಿಮಾನ ಏರೋಬ್ಯಾಟಿಕ್ಸ್ ಪ್ರದರ್ಶಿಸಿ ನಂತರ ಇದ್ದಕ್ಕಿದ್ದಂತೆ...

Read moreDetails

“ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆ ಮೂರು ವರ್ಷಗಳಲ್ಲಿ ರೂ 88 ಲಕ್ಷ ಕೋಟಿಗೆ ಏರಿಕೆ”

November 20, 2025

ಟೆಕ್ ಮೇಳದಲ್ಲಿ ಭವಿಷ್ಯದ ಇಂಧನ ಕ್ಷೇತ್ರ ಕುರಿತು ಸಂವಾದ ನಡೆಸಿದ ಸಚಿವ ಪ್ರಿಯಾಂಕ ಖರ್ಗೆ..!!

November 20, 2025

ವಿದ್ಯಾರ್ಥಿಗಳೊಂದಿಗೆ ಅಂತರಿಕ್ಷ ಯಾತ್ರಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರೊಂದಿಗೆ ಸಂವಾದ ಕಾರ್ಯಕ್ರಮ: ಸಚಿವ ಎನ್‌ ಎಸ್‌ ಭೋಸರಾಜು

November 20, 2025

Lakshmi Hebbalkar: ಅಧಿಕಾರ ಎಂಬುದು ಶಾಶ್ವತ ಅಲ್ಲ,‌ ಅದು ಅವಕಾಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 20, 2025
Next Post
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಯೋಗ ಕ್ಲಾಸ್: ಕೈದಿಗಳ ಆರೋಗ್ಯ ಕಾಪಾಡಲು ಸೂಚನೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಯೋಗ ಕ್ಲಾಸ್: ಕೈದಿಗಳ ಆರೋಗ್ಯ ಕಾಪಾಡಲು ಸೂಚನೆ

Please login to join discussion

Recent News

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್
Top Story

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ
Top Story

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

by ಪ್ರತಿಧ್ವನಿ
November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ
Top Story

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

by ಪ್ರತಿಧ್ವನಿ
November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌
Top Story

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 21, 2025
ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!
Top Story

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

November 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada