• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ವೈದಿಕ V/s ಲಿಂಗಾಯತ: ವಿವೇಕಾನಂದರ ಹೆಸರಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿಗೆ ರಾಮಕೃಷ್ಣ ಮಠದ ಕೈ!

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
August 9, 2021
in ಕರ್ನಾಟಕ
0
ವೈದಿಕ V/s ಲಿಂಗಾಯತ: ವಿವೇಕಾನಂದರ ಹೆಸರಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿಗೆ ರಾಮಕೃಷ್ಣ ಮಠದ ಕೈ!
Share on WhatsAppShare on FacebookShare on Telegram

ಇಲ್ಲಿ ಒಂದು ಲಿಂಗಾಯತರ ಶತಮಾನಪೂರ್ವದ ಮಠವಿದೆ, ಪಕ್ಕದಲ್ಲೇ ಶತಮಾನ ಪೂರೈಸಿದ ಹೆಣ್ಣುಮಕ್ಕಳ ಕನ್ನಡ ಸರ್ಕಾರಿ ಶಾಲೆಯಿದೆ. ಇವೆರಡನ್ನೂ ಧ್ವಂಸಗೊಳಿಸಿ ಇಲ್ಲಿ ವಿವೇಕಾನಂದರ ಸ್ಮಾರಕದ ಹೆಸರಲ್ಲಿ ರಿಯಲ್‍ ಎಸ್ಟೇಟ್‍ ವ್ಯವಹಾರ ಮಾಡಲು ಮೈಸೂರಿನ ರಾಮಕೃಷ್ಣಾಶ್ರಮ ಹೊರಟಿದೆ. ಈ ಆಶ್ರಮ ಎಂದೋ ವೈದಿಕ ಸ್ವರೂಪ ಪಡೆದುಕೊಇಂಡಿದೆ.

ADVERTISEMENT

2013ರಲ್ಲಿ ವಿವೇಕಾನಂದರ 150ನೆ ಜನ್ಮ ದಿನಾಚರಣೆ ನಿಮಿತ್ತ, ವಿವೇಕಾನಂದರು ತಂಗಿದ, ಧ್ಯಾನ ಮಾಡಿದ ಸ್ಥಳಗಳಲ್ಲಿ ಸ್ಮಾರಕ ನಿರ್ಮಿಸಲು ಕೇಂದ್ರದ ಮನಮೋಹನಸಿಂಗ್‍ ಸರ್ಕಾರ ನಿರ್ಧರಿಸಿತು. ಆಗ ಇಲ್ಲಿ ಅದಿಕಾರದಲ್ಲಿದ್ದ ಸದಾನಂದಗೌಡರ ಸರ್ಕಾರ ಕ್ಯಾಬಿನೆಟ್‍ ತೀರ್ಮಾನ ತೆಗೆದುಕೊಂಡು ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವ ಜವಾಬ್ದಾರಿಯನ್ನು ರಾಮಕೃಷ್ಣ ಮಠಕ್ಕೆ ನೀಡಿತು.

ಸರ್ಕಾರಿ ಶಾಲೆ ಮತ್ತು ನಿರಂಜನ ಮಠಗಳನ್ನು ಹಾಗೇ ಉಳಿಸಿಕೊಳ್ಳಲಯ ಸರ್ಕಾರದ ಆದೇಶವಿದ್ದರೂ, ನಿರಂಜನ ಮಠ ಮತ್ತು ಶಾಲೆಯನ್ನು ಧ್ವಂಸ ಮಾಡಲು ರಾಮಕೃಷ್ಣ ಮಠ ನಿರ್ಧರಿಸಿತು. ಆಗ ಸಾ.ರಾ. ಸುದರ್ಶನ್‍ ನೇತೃತ್ವದ ಕನ್ನಡ ಕ್ರಿಯಾಸಮಿತಿ ಶಾಲೆಯ ಉಳಿವಿಗಾಗಿ ಹೈಕೋರ್ಟ್‍ ಮೆಟ್ಟಿಲು ಏರಿತು. ಇನ್ನೊಂದು ಕಡೆ ಲಿಂಗಾಯತ ಸಂಘಟನೆಗಳು ನಿರಂಜನ ಮಠದ ಉಳಿವಿಗಾಗಿ ಹೈಕೋರ್ಟ್ ಮೊರೆ ಹೋದವು. ಅದಿನ್ನೂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ.
ಹೀಗಿರುವಾಗ 10 ದಿನಗಳ ಹಿಂದೆ ಏಕಾಏಕಿ ರಾಮಕೃಷ್ಣ ಮಠದವರು ನಿರಂಜನ ಮಠದಲ್ಲಿನ ಕೆಲವು ಗದ್ದುಗೆಗಳನ್ನು ನಾಶ ಮಾಡಿದರು. ದಕ್ಷಿಣಾ ಮೂರ್ತಿಯನ್ನು ತೆಗೆದು ಅದನ್ನು ಹೂಳಲು ಹೊರಟಾಗ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮಹಾದೇವಪ್ಪ ಇದನ್ನು ತಡೆದರು. ಈಗ 10 ದಿನಗಳಿಂದ 70ಕ್ಕೂ ಹೆಚ್ಚು ಲಿಂಗಾಯತ ಸಂಘಟನೆಗಳ ಸದಸ್ಯರು ಸರದಿ ಮೇಲೆ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಇನ್ನೊಂದು ಕಡೆ ಶಾಲೆ ಉಳಿವಿಗಾಗಿ ದೇವನೂರು ಮಹಾದೇವರ ನೇತೃತ್ವದಲ್ಲಿ ಕನ್ನಡ ಕ್ರಿಯಾ ಸಮಿತಿ ಪ್ರತಿಭಟನೆ ನಡೆಸಿದೆ.

ಇತಿಹಾಸ ಏನು ಹೇಳುತ್ತದೆ?

1892ರಲ್ಲಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದಾಗ ಅವರು ಶೂದ್ರ ಎಂಬ ಕಾರಣಕ್ಕೆ ಇಲ್ಲಿನ ಬ್ರಾಹ್ಮಣ ಮಠಗಳು ಅವರಿಗೆ ತಂಗಲು ವ್ಯವಸ್ಥೆ ಮಾಡಲು ಹಿಂದೆ ಮುಂದೆ ನೋಡಿದ್ದವು. ಆಗ ಲಿಂಗಾಯತರ ನಿರಂಜನ ಮಠವು ಅವರಿಗೆ ತಂಗಲು ಅವಕಾಶ ನೀಡಿತ್ತು. ಅಲ್ಲಿ ವ್ಯವಸ್ಥೆ ಅಷ್ಟುಸರಿಯಾಗಿ ಇರದ ಕಾರಣ ಮೂರು ದಿನಗಳ ನಂತರ ವಿವೇಕಾನಂದರು ಪಕ್ಕದ ಶೇಷಾದ್ರಿ ಭವನದಲ್ಲಿ 12 ದಿನ ತಂಗಿದ್ದರು. ಈಗ ವಿವೇಕಾನಂದರ ಆಶಯಗಳಿಗೆ ವಿರುದ್ಧವಾಗಿ ಶಾಲೆಯನ್ನೇ ನೆಲಸಮ ಮಾಡಲು ರಾಮಕೃಷ್ಣ ಆಶ್ರಮ ಮುಂದಾಗಿದೆ.

ಮೈಸೂರು ರಾಜ ಕೃಷ್ಭರಾಜ ಒಡೆಯರ್‍ ಅವರ ತಾಯಿ ಅನಕ್ಷರಸ್ಥರು. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಅವರು ನಿರಂಜನ ಮಠದ ಪಕ್ಕದಲ್ಲಿ 1880ರಲ್ಲಿ ಹೆಣ್ಣು ಮಕ್ಕಳ ಶಾಲೆ ಸ್ಥಾಪಿಸಿದರು. ಸಾವಿತ್ರಿಬಾಯಿ ಪುಲೆ ಮಹಾರಾಷ್ಟ್ರದಲ್ಲಿ ಹೆಣ್ಣು ಮಕ್ಕಳಿಗೆ ಶಾಲೆ ಆರಂಭಿಸಿದ ನಂತರ ಶುರುವಾದ ಎರಡನೇ ಹೆಣ್ಣುನಕ್ಕಳ ಶಾಲ ಇದಾಗಿದೆ.

ಈ ಕುರಿತು ಪ್ರತಿಧ್ವನಿ ಜೊತೆ ಮಾತನಾಡಿದ ದೇವನೂರು ಮಹಾದೇವ ಮತ್ತು ಸಾ.ರಾ. ಸುದರ್ಶನ್‍, ಶತಮಾನಗಳ ಇತಿಹಾಸದ ಕನ್ನಡ ಶಾಲೆ ಉಳಿಸಿಕೊಳ್ಳಲು ಬದ್ಧರಾಗಿದ್ದೇವೆ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾದ ಮಹಾದೇವಪ್ಪ, ‘ಮೈಸೂರಿನ ಹೃದಯ ಭಾಗದ ಕೃಷ್ಣ ವಿಲಾಸ ರಸ್ತೆಯಲ್ಲಿರುವ ಈ ಜಾಗ 46 ಸಾವಿರ ಚದರ ಅಡಿ ಇದ್ದು, ಸದ್ಯ ಚದರ ಅಡಿಗೆ 10-15 ಸಾವಿರ ರೂ ಮಾರುಕಟ್ಟೆ ಮೌಲ್ಯವಿದ್ದು, ಲಿಂಗಾಯತರ ನಿರಂಜನ ಮಠ ಮತ್ತು ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯನ್ನು ನಾಶ ಮಾಡಿ ಇಲ್ಲಿ ವಿವೇಕಾನಂದರ ಹೆಸರಲ್ಲಿ ರಿಯಲ್‍ ಎಸ್ಟೇಟ್‍ ದಂಧೆ ನಡೆಯುತ್ತಿದೆ. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂಬ ಬಸವಣ್ಣನವರ ಆಶಯಕ್ಕೆ ವಿರುದ್ಧವಾಗಿ ವೈದಿಕ ಹಿತಾಸಕ್ತಿಗಳು ಈ ಕೆಲಸ ಮಾಡುತ್ತಿವೆ. ಎಲ್ಲ ಲಿಂಗಾಯತ ಸಂಘಟನೆಗಳು ಸೇರಿ ನಿರಂಜನ ಮಠ ಉಳಿಸಲು ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ. ಇದು ಒಂದು ರೀತಿಯಲ್ಲಿ ಲಿಂಗಾಯತ ವರ್ಸಸ್‍ ಬ್ರಾಹ್ಮಣ್ಯ ಸ್ವರೂಪದ ಹೋರಾಟವಾಗಿದೆ’ ಎಂದರು.

ವೀರಶೈವ ಮಹಾಸಭಾ ಕೂಡ ಈ ಹೋರಾಟದಲ್ಲಿ ಭಾಗಿಯಾಗಿದ್ದು, ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸಾದ ಅವರು, ‘ಇದು ನಮ್ಮ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಶ್ನೆ. ಮಠ ಮತ್ತು ಶಾಲೆ ಎರಡನ್ನೂ ಉಳಿಸಿಕೊಳ್ಳಲೇಬೇಕಿದೆ’ ಎಂದರು.

ಸರ್ಕಾರ ಕೂಡಲೇ ಮಧ್ಯಸ್ಥಿಕೆ ಬಹಿಸಿ ರಾಮಕೃಷ್ಣ ಮಠದವರಿಗೆ ನೀಡಿರುವ ಅಧಿಕಾರವನ್ನು ಹಿಂಪಡೆಯಬೇಕು. ಸಾಂಕೇತಿಕವಾಗಿ ವಿವೇಕಾನಂದರ ಒಂದು ಪ್ರತಿಮೆ ನಿಲ್ಲಿಸಿ ವಿವಾದ ಬಗೆಹರಿಸಬೇಕು ಅಲ್ಲವೇ?

Tags: Mysore
Previous Post

ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ನಾಯಕರು; ವಿಪಕ್ಷ ನಾಯಕನ ಸ್ಥಾನದಿಂದ ತೆಗೆಯುವಂತೆ ಹೈಕಮಾಂಡ್‌‌‌ಗೆ ದೂರು

Next Post

ಇಡೀ ದೇಶದಲ್ಲಿ ಕರೋನಗೆ ಕ್ಯಾಸ್ ಲೆಸ್ ಚಿಕಿತ್ಸೆ ಕೊಟ್ಟ ಪಟ್ಟಿಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

Related Posts

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-
Top Story

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

by ಪ್ರತಿಧ್ವನಿ
April 21, 2026
0

ವಿಶೇಷ ಲೇಖನ : ನಾ. ದಿವಾಕರ್‌.. (ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ...

Read moreDetails
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
Next Post
ಇಡೀ ದೇಶದಲ್ಲಿ ಕರೋನಗೆ ಕ್ಯಾಸ್ ಲೆಸ್ ಚಿಕಿತ್ಸೆ ಕೊಟ್ಟ ಪಟ್ಟಿಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

ಇಡೀ ದೇಶದಲ್ಲಿ ಕರೋನಗೆ ಕ್ಯಾಸ್ ಲೆಸ್ ಚಿಕಿತ್ಸೆ ಕೊಟ್ಟ ಪಟ್ಟಿಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada