ಶಿವಸೇನಾ ನಾಯಕ ಸಂಜಯ್ ರಾವುತ್ ಶುಕ್ರವಾರ ಮೋದಿ ಸರ್ಕಾರ ಇಸ್ರೇಲ್ ಪೆಗಾಸಸ್ ಸ್ಪೈವೇರ್ ಬಳಸಿ ನುಣುಚಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ಪೆಗಾಸಸ್ ಪ್ರಕರಣವು ನಿಜವಾಗಿದ್ದಲ್ಲಿ ಇದು ಗಂಭೀರ ವಿಷಯವಾಗಿದೆ ಎಂಬ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿರುವುದ್ದನ್ನು ಕೇಂದ್ರ ಸರ್ಕಾರ ಗಮನಿಸುತ್ತಿಲ್ಲ ಎಂದು
ಕೇಂದ್ರ ಸರ್ಕಾರದ ವಿರುದ್ಧ ಅಚ್ಚರಿ ವ್ಯಕ್ತಪಡಿಸಿದ್ದಾರೆ .
ಗುರುವಾರ, ಸುಪ್ರೀಂ ಕೋರ್ಟ್ ಪೆಗಾಸಸ್-ಸಂಬಂಧಿತ ಸ್ನೂಪಿಂಗ್ ಆರೋಪಗಳು “ಗಂಭೀರ ಸ್ವರೂಪದ್ದಾಗಿದೆ” ಎಂದು ಹೇಳಿದ್ದು ಅವುಗಳ ವರದಿಗಳು ಸರಿಯಾಗಿದ್ದರೆ. ಇಸ್ರೇಲ್ ಸ್ಪೈವೇರ್ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಅರ್ಜಿದಾರರು ಈ ಬಗ್ಗೆ ಕ್ರಿಮಿನಲ್ ದೂರು ಸಲ್ಲಿಸಲು ಯಾವುದಾದರು ಪ್ರಯತ್ನಗಳನ್ನು ಮಾಡಿದ್ದಾರೆಯೇ ಎಂದು ಕೇಳಿದೆ.
“ಪೆಗಾಸಸ್ ಸ್ಪೈವೇರ್‌ನೊಂದಿಗೆ ಕೇಂದ್ರವು ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳನ್ನು ದುರ್ಬಲಗೊಳಿಸುತ್ತಿದೆ. ಪೆಗಾಸಸ್ ಮೇಲೆ ಚರ್ಚೆಯಾಗಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಸರ್ಕಾರವು ತಿರಸ್ಕರಿಸುತ್ತಿದೆ. ಕೇಂದ್ರವು ಈ ಸಮಸ್ಯೆಯನ್ನು ಹಾಗೂ ರೈತರ ಆಂದೋಲನವನ್ನು ಚರ್ಚಿಸಲು ಸಿದ್ಧವಿಲ್ಲ, ”ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಹಿಂದೆ ವರದಿ ಮಾಡಿದಂತೆ, ಇಬ್ಬರು ಮಂತ್ರಿಗಳು, ವಿವಿಧ ಪತ್ರಕರ್ತರು, ಕೆಲವು ವಿರೋಧ ಪಕ್ಷದ ನಾಯಕರು ಹಾಲಿ ನ್ಯಾಯಾಧೀಶರು ಉದ್ಯಮಿಗಳ ಮೊಬೈಲ್ ಸಂಖ್ಯೆಗಳು ಒಳಗೊಂಡಂತೆ ಹಲವಾರು ಜನರ ಮೊಬೈಲ್ ಫೋನಗಳನ್ನು ಇಸ್ರೇಲಿ ಸ್ಪೈವೇರ್ ಮೂಲಕ ಹ್ಯಾಕ್ ಮಾಡಲಾಗಿತ್ತು ಎಂದು ಆರೋಪಿಸಿದ್ದರು.
ಅದಾಗ್ಯೂ, ನಿರ್ದಿಷ್ಟ ಜನರ ಮೇಲೆ ಯಾವುದೇ ತರಹದ ಬೇಹುಗಾರಿಕೆ ನಡೆದಿಲ್ಲ ಎಂದು ಸರ್ಕಾರ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿತು.

ಮತ್ತೆ ಮುನ್ನೆಲೆಗೆ ಬಂದ ಮರಾಠ ಮೀಸಲಾತಿ :
ಮರಾಠ ಮೀಸಲಾತಿ ಬಗ್ಗೆ ಪ್ರತಿಕ್ರಯಿಸಿದ ಅವರು, ಕೋಟಾದ ಮೇಲಿನ ಶೇಕಡ 50 ರಷ್ಟು ಸಡಿಲಿಕೆ ನೀಡದ ಹೊರತು ಈ ಸಮುದಾಯಕ್ಕೆ ಮೀಸಲಾತಿಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಈ ವರ್ಷ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರ ಮರಾಠರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮತ್ತು ಸ್ಥಳೀಯರಿಗೆ ಶೇಕಡ50 ರಷ್ಟು ಕೋಟಾವನ್ನು ನೀಡಿತ್ತು , ಇದನ್ನು “ಅಸಂವಿಧಾನಿಕ” ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ವಿಧಾನ ಪರಿಷತ್ತಿಗೆ ರಾಜ್ಯ ಸರ್ಕಾರದಿಂದ ಶಿಫಾರಸು ಮಾಡಿದ 12 ಸದಸ್ಯರ ಹೆಸರುಗಳನ್ನು ಅನುಮೋದಿಸದೆ, ಅವರು ಸಂವಿಧಾನವನ್ನು ಅನುಸರಿಸುತ್ತಿಲ್ಲ. ಇದು ರಾಜ್ಯ ಶಾಸಕಾಂಗ ಮತ್ತು ಮಹಾರಾಷ್ಟ್ರದ ಜನರಿಗೆ ಮಾಡಿದ ಅವಮಾನ” ಎಂದು ರಾವುತ್ ಹೇಳಿದರು.