• Home
  • About Us
  • ಕರ್ನಾಟಕ
Monday, February 2, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ದೇಶದ 24 ವಿಶ್ವವಿದ್ಯಾಲಯಗಳು ನಕಲಿ!

Shivakumar A by Shivakumar A
August 3, 2021
in ದೇಶ
0
ದೇಶದ 24 ವಿಶ್ವವಿದ್ಯಾಲಯಗಳು ನಕಲಿ!
Share on WhatsAppShare on FacebookShare on Telegram

ದೇಶದ 24 ವಿಶ್ವವಿದ್ಯಾಲಯಗಳು ನಕಲಿ ಎಂದು University Grants Commission (UGC) ಘೋಷಿಸಿದೆ. ಇದರೊಂದಿಗೆ ಎರಡು ಇತರ ವಿಶ್ವವಿದ್ಯಾಲಯಗಳು ಯುಜಿಸಿಯ ನಿಮಯಗಳನ್ನು ಮೀರಿ ಕಾರ್ಯಚರಿಸುತ್ತಿವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. 

ADVERTISEMENT

ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸಿರುವ ಧರ್ಮೇಂದ್ರ ಪ್ರಧಾನ್ ಅವರು, ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಹಾಗೂ ಮಾಧ್ಯಮಗಳ ಮೂಲಕ ಬಂದಿರುವ ದೂರುಗಳನ್ನು ಯುಜಿಸಿ ಪರಿಗಣಿಸಿತ್ತು. ಆ ನಂತರ 24 ವಿವಿಗಳನ್ನು ನಕಲಿ ಎಂದು ಘೋಷಿಸಿದೆ, ಎಂದಿದ್ದಾರೆ. 

“ಇನ್ನೆರಡು ವಿಶ್ವವಿದ್ಯಾಲಯಗಳು, ಉತ್ತರ ಪ್ರದೇಶದ ಲಕ್ನೋದಲ್ಲಿ ಇರುವಂತಹ ಭಾರತೀಯ ಶಿಕ್ಷಾ ಪರಿಷದ್ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾನಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್, ನವದೆಹಲಿ 1956ರ ಯುಜಿಸಿ ಕಾಯ್ದೆಗೆ ವಿರುದ್ದವಾಗಿ ಕಾರ್ಯಾಚರಿಸುತ್ತಿರುವುದು ಕಂಡು ಬಂದಿದೆ. ಇವೆರಡೂ ವಿವಿಗಳ ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ,” ಎಂದು ಹೇಳಿದ್ದಾರೆ. 

ನಕಲಿ ವಿವಿಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ವಾರಣಾಸೇಯ ಸಂಸ್ಕೃತ ವಿವಿ, ವಾರಣಾಸಿ; ಮಹಿಳಾ ಗ್ರಾಮ್ ವಿದ್ಯಾಪೀಠ್, ಅಲಹಾಬಾದ್; ಗಾಂಧಿ ಹಿಂದಿ ವಿದ್ಯಾಪೀಠ್, ಅಲಹಾಬಾದ್; ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪಥಿ, ಕಾನ್ಪುರ್; ನೀತಾಜಿ ಸುಭಾಷ್ ಚಂದ್ರ ಬೋಸ್ ಮುಕ್ತ ವಿವಿ, ಆಲಿಗಢ್; ಉತ್ತರಪ್ರದೇಶ ವಿವಿ, ಮಥುರಾ; ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ್ ವಿವಿ, ಪ್ರತಾಪಗಢ ಮತ್ತು ಇಂದ್ರಪ್ರಸ್ಥ ಶಿಕ್ಷಾ ಪರಿಷದ್, ನೋಯ್ಡಾ ಇವು ಉತ್ತರ ಪ್ರದೇಶದಲ್ಲಿ ಸಕ್ರಿಯವಾಗಿದ್ದಂತಹ ಎಂಟು ನಕಲಿ ವಿವಿಗಳು. 

ದೆಹಲಿಯಲ್ಲಿ ಏಳು ನಕಲಿ ವಿವಿಗಳು ಪತ್ತೆಯಾಗಿವೆ. ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಚನ್ಸ್ ಯೂನಿವರ್ಸಿಟಿ, ವೊಕೇಷನಲ್ ಯೂನಿವರ್ಸಿಟಿ, ಎಡಿಆರ್ ಸೆಂಟ್ರಿಕ್ ಜ್ಯೂರಿಡೀಷಿಯಲ್ ಯೂನಿವರ್ಸಿಟಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್, ವಿಶ್ವಕರ್ಮ ಮುಕ್ತ ವಿವಿ ಮತ್ತು ಆಧ್ಯಾತ್ಮಿಕ ವಿವಿ ಎಂಬ ವಿವಿಗಳು ನಕಲಿಯಾಗಿವೆ. 

ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ತಲಾ ಎರಡು ನಕಲಿ ವಿವಿಗಳು ಪತ್ತೆಯಾಗಿವೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಲ್ಟರ್ನೇಟಿವ್ ಮೆಡಿಸಿನ್, ಕೊಲ್ಕತ್ತಾ ಹಾಗೂ ಅಲ್ಟರ್ನೇಟಿವ್ ಮೆಡಿಸಿನ್ ಆ್ಯಂಡ್ ರೀಸರ್ಚ್, ಕೊಲ್ಕತ್ತಾ ಇವು ಪಶ್ಚಿಮ ಬಂಗಾಳದಲ್ಲಿ ಇರುವ ನಕಲಿ ವಿವಿಗಳು. ಇನ್ನು ಒಡಿಶಾದಲ್ಲಿ ನಬಭಾರತ್ ಶಿಕ್ಷಾ ಪರಿಷದ್, ರೌರ್ಕೇಲಾ ಹಾಗೂ ನಾರ್ತ್ ಒರಿಸ್ಸಾ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಆ್ಯಂಡ್ ಟೆಕ್ನಾಲಜಿ ಎಂಬ ಎರಡು ನಕಲಿ ವಿವಿಗಳು ಕಾರ್ಯಾಚರಿಸುತ್ತಿವೆ. 

ಉಳಿದಂತೆ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪುದುಚೆರಿಯಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿ ತಲಾ ಒಂದು ನಕಲಿ ವಿವಿಗಳಿವೆ. ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಪುದುಚೆರಿ; ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯೂನಿವರ್ಸಿಟಿ, ಆಂಧ್ರ ಪ್ರದೇಶ; ರಾಜಾ ಅರೇಬಿಕ್ ಯೂನಿವರ್ಸಿಟಿ, ನಾಗ್ಪುರ್; ಸೈಂಟ್ ಜಾನ್ಸ್ ಯೂನಿವರ್ಸಿಟಿ, ಕೇರಳ ಹಾಗೂ ಬಡಗಾನ್ವಿ ಸರ್ಕಾರ್ ವಿಶ್ವ ಮುಕ್ತ ವಿವಿ, ಕರ್ನಾಟಕದಲ್ಲಿರುವ ನಕಲಿ ವಿವಿಗಳು. 

ಈ ನಕಲಿ ವಿವಿಗಳ ಕುರಿತಾಗಿ ಜನರಿಗೆ ಜಾಗೃತಿ ಮೂಡಿಸುವ ಕಾರಣಕ್ಕೆ ಪತ್ರಿಕೆಗಳಲ್ಲಿ ಯುಜಿಸಿ ಪರವಾಗಿ ಜಾಹಿರಾತು ನೀಡಲಾಗುವುದು. ಇಷ್ಟು ಮಾತ್ರವಲ್ಲದೇ, ಆಯಾ ರಾಜ್ಯಗಳ ರಾಜ್ಯ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಕಾರ್ಯದರ್ಶಿಗಳಿಗೆ ಮತ್ತು ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 

Tags: BJPfakeUGCಬಿಜೆಪಿ
Previous Post

ಸಾಹಿತ್ಯ ಪರಿಚಾರಕರೋ ಸಂಘ ಪ್ರಚಾರಕರೋ?

Next Post

NEET ಮೀಸಲಾತಿ: ಇದು ಬಿಜೆಪಿಯ ರಾಜಕೀಯ ಷಡ್ಯಂತ್ರವೋ? ಸಾಮಾಜಿಕ ನ್ಯಾಯದ ಬದ್ಧತೆಯೊ?

Related Posts

ಕೇಂದ್ರ ಸರ್ಕಾರ ಟೀಕಿಸುವಾಗ ದೇಶದ ಅವಹೇಳನ ಮಾಡೋದನ್ನು ನಿಲ್ಲಿಸಿ : ರಾಹುಲ್‌ಗೆ ಸಚಿವ ರಿಜಿಜು ತಿರುಗೇಟು..!
ಇದೀಗ

ಕೇಂದ್ರ ಸರ್ಕಾರ ಟೀಕಿಸುವಾಗ ದೇಶದ ಅವಹೇಳನ ಮಾಡೋದನ್ನು ನಿಲ್ಲಿಸಿ : ರಾಹುಲ್‌ಗೆ ಸಚಿವ ರಿಜಿಜು ತಿರುಗೇಟು..!

by ಪ್ರತಿಧ್ವನಿ
February 2, 2026
0

ಬೆಂಗಳೂರು : 2026 ರ ಜಾಗತಿಕ ಜಿಡಿಪಿ ಕೊಡುಗೆ ನೀಡುವಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಜಾಗತಿಕ ಅಂಕಿಅಂಶಗಳ ವರದಿಯೊಂದು ಪ್ರಕಟವಾಗಿದೆ, ಇದೇ ವಿಚಾರಕ್ಕೆ ಟೆಸ್ಲಾ ಸಿಇಒ...

Read moreDetails
Earthquake: ಬೆಳ್ಳಂ ಬೆಳಿಗ್ಗೆ ಈ ಮೂರು ಪ್ರದೇಶಗಳಲ್ಲಿ ಭೂಕಂಪ

Earthquake: ಬೆಳ್ಳಂ ಬೆಳಿಗ್ಗೆ ಈ ಮೂರು ಪ್ರದೇಶಗಳಲ್ಲಿ ಭೂಕಂಪ

February 2, 2026
ಸರ್ಕಾರಿ ನೌಕರರಿಗೆ ಸಂಬಳವಿಲ್ಲ: ಕಾರಣ ಇಲ್ಲಿದೆ!

ಸರ್ಕಾರಿ ನೌಕರರಿಗೆ ಸಂಬಳವಿಲ್ಲ: ಕಾರಣ ಇಲ್ಲಿದೆ!

February 2, 2026
ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

February 2, 2026
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

February 1, 2026
Next Post
NEET ಮೀಸಲಾತಿ: ಇದು ಬಿಜೆಪಿಯ ರಾಜಕೀಯ ಷಡ್ಯಂತ್ರವೋ? ಸಾಮಾಜಿಕ ನ್ಯಾಯದ ಬದ್ಧತೆಯೋ?

NEET ಮೀಸಲಾತಿ: ಇದು ಬಿಜೆಪಿಯ ರಾಜಕೀಯ ಷಡ್ಯಂತ್ರವೋ? ಸಾಮಾಜಿಕ ನ್ಯಾಯದ ಬದ್ಧತೆಯೊ?

Please login to join discussion

Recent News

ರೈತರನ್ನು ಉದ್ಯಮಿಗಳನ್ನಾಗಿ ಮಾಡುವುದು ಸರ್ಕಾರದ ಗುರಿ:ಸಚಿವ ಎನ್.ಚಲುವರಾಯಸ್ವಾಮಿ
Top Story

ರೈತರನ್ನು ಉದ್ಯಮಿಗಳನ್ನಾಗಿ ಮಾಡುವುದು ಸರ್ಕಾರದ ಗುರಿ:ಸಚಿವ ಎನ್.ಚಲುವರಾಯಸ್ವಾಮಿ

by ಪ್ರತಿಧ್ವನಿ
February 2, 2026
ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ
Top Story

ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ

by ಪ್ರತಿಧ್ವನಿ
February 2, 2026
ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?
Top Story

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

by ನಾ ದಿವಾಕರ
February 2, 2026
ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ
Top Story

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

by ಪ್ರತಿಧ್ವನಿ
February 2, 2026
Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌
Top Story

Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

by ಪ್ರತಿಧ್ವನಿ
February 2, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೈತರನ್ನು ಉದ್ಯಮಿಗಳನ್ನಾಗಿ ಮಾಡುವುದು ಸರ್ಕಾರದ ಗುರಿ:ಸಚಿವ ಎನ್.ಚಲುವರಾಯಸ್ವಾಮಿ

ರೈತರನ್ನು ಉದ್ಯಮಿಗಳನ್ನಾಗಿ ಮಾಡುವುದು ಸರ್ಕಾರದ ಗುರಿ:ಸಚಿವ ಎನ್.ಚಲುವರಾಯಸ್ವಾಮಿ

February 2, 2026
ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ

ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ

February 2, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!