ಎಸ್ ಎಸ್ ಎಲ್ ಸಿ ಮೊದಲ ಪರೀಕ್ಷೆ ಪೂರ್ಣ ಹಿನ್ನೆಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಟಿ ನಡೆಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್ ʼರಾಜ್ಯದಲ್ಲಿ ಸುಸೂತ್ರವಾಗಿ ಪರೀಕ್ಷೆ ಜರುಗಿದೆ . ಯಾವುದೇ ರೀತಿಯಲ್ಲಿ ಗೊಂದಲಕ್ಕೆ ಅವಕಾಶವಿಲ್ಲದೆ ಪರೀಕ್ಷೆ ಜರುಗಿದೆ. ಕೋರ್ ವಿಷಯದಲ್ಲೊಂದಾದ ಗಣಿತ ವಿಷಯಕ್ಕೆ ಈ ವರ್ಷ 70,83,882 ವಿದ್ಯಾರ್ಥಿಗಳು ನೋಂದಾಯಿಸಿದ್ದು, 70,81,530 ಪರೀಕ್ಷೆಗೆ ಹಾಜರಾಗಿದ್ದಾರೆ. 2352 ಗೈರು ಹಾಜರಾಗಿದ್ದಾರೆ. ಕಳೆದ ವರ್ಷ ಶೇ 98.30 ರಷ್ಟು ಹಾಜರಾಗಿದ್ದರು. ಈ ವರ್ಷ ಶೇ. 99.64. ಮೊದಲ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.
ʼ21,803 ಖಾಸಗಿಯಾಗಿ ವಿದ್ಯಾರ್ಥಿಗಳು ನೊಂದಾಯಿಸಿದ್ದು, 21,548 ಹಾಜರಾಗಿದ್ದಾರೆ. 255 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 46,506 ರಿಪೀಟರ್ಸ್ ವಿದ್ಯಾರ್ಥಿಗಳಲ್ಲಿ 46,121 ರಷ್ಟು ಹಾಜರಾಗಿದ್ದಾರೆ. 381 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಸಮಾಜ ವಿಜ್ಞಾನಕ್ಕೆ 80,24,689 ರಷ್ಟು ವಿದ್ಯಾರ್ಥಿಗಳು ನೊಂದಾಯಿಸಿದ್ದು , 80,21,823 ವಿದ್ಯಾರ್ಥಿಗಳು (ಶೇಕಡಾ 99.65) ಹಾಜರಾಗಿದ್ದಾರೆ. 2867 ಗೈರು ಹಾಜರಾಗಿದ್ದಾರೆ. ಶೇಕಡಾ 99.65 ರಷ್ಟು ಹಾಜರಾಗಿದ್ದಾರೆ. ವಿಜ್ಞಾನದಲ್ಲಿ 80,40,841 ಹಾಜರಾಗಿದ್ದು( ಶೇ. 99.62) ,327 ಗೈರು ಹಾಜರಾಗಿದ್ದಾರೆʼ ಎಂದು ಹೇಳಿದ್ದಾರೆ.
ʼಅನಾರೋಗ್ಯ ಕಾರಣ ವಿಶೇಷ ಕೊಠಡಿಯಲ್ಲಿ 111 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕರೋನಾ ಸೋಂಕಿತ 58 ವಿದ್ಯಾರ್ಥಿಗಳು ಹತ್ತಿರದ ಕೋವಿಡ್ ಕೇಂದ್ರದಲ್ಲಿ ಪರಿಕ್ಷೆ ಬರೆದಿದ್ದಾರೆ. ಬೆಂಗಳೂರು ಉತ್ತರ 1, ದಕ್ಷಿಣ 2, ಮೈಸೂರು 1, ಮಂಡ್ಯ 4, ಮಂಗಳೂರಿನಲ್ಲಿ 14, ಕೊಡಗಿನಲ್ಲಿ 5, ಚಿರ್ತದುರ್ಗ 7, ಚಿಕ್ಕಮಗಳೂರು 7, ಹಾಸನ 3, ಗದಗ 1, ಬೆಳಗಾವಿ 2, ಉ.ಕ.5, ಕಲಬುರಗಿ 1,ಕೊಪ್ಪಳ 1 ಕರೊನಾ ಸೊಂಕಿತ ಮಕ್ಕಳು ಪರೀಕ್ಷೆ ಬರೆದಿದ್ದಾರೆ. 2870 ಹಾಸ್ಟೆಲಿನಲ್ಲಿ ಇದ್ದು ಪರೀಕ್ಷೆ ಬರೆದಿದ್ದಾರೆ. 10,693 ವಲಸೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆʼ ಎಂದು ವಿವರಿಸಿದ್ದಾರೆ.
ʼಬೈಂದೂರು ತಾಲೂಕಿನ ಇಬ್ಬರು ಮಕ್ಕಳು ದೋಣಿಯಲ್ಲಿ ಬಂದು ಪರೀಕ್ಷೆ ಬರೆದಿದ್ದಾರೆ. ಬೆಂಗಳೂರಿನ ಹಲವು ಪರೀಕ್ಷಾ ಕೇಂದ್ರಗಳಿಗೆ, ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಹಾಗೂ ಸಚಿವರು, ಶಾಸಕರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳನ್ನು ಹುರಿದುಂಬಿಸಿದ್ದಾರೆʼ ಎಂದು ತಿಳಿಸಿದ್ದಾರೆ.