ಭಾರತದ ಸೀರಂ ಸಂಸ್ಥೆಯ ಕೋವಿಡ್ ಲಸಿಕೆ ಕೋವಿಶೀಲ್ಡ್‌ಗೆ ಇದೀಗ ಒಟ್ಟು 16 ಯೂರೋಪಿಯನ್ ರಾಷ್ಟ್ರಗಳು ಮಾನ್ಯತೆ ನೀಡದೆ. ಇದರಿಂದ ಪ್ರಯಾಣಕರಿಗೆ ಯಾವುದೇ ಗೊಂದಲ ಇಲ್ಲದೆ 16 ರಾಷ್ಟ್ರಗಳಿಗೆ ಪ್ರಯಾಣ ಮಾಡಬುಹುದಾಗಿದೆ. 16 ಯುರೋಪಿಯನ್ ರಾಷ್ಟ್ರಗಳು ಈಗ ಕೋವಿಶೀಲ್ಡ್ ಅನ್ನು ಅಂತರರಾಷ್ಟ್ರೀಯ ಪ್ರಯಾಣಿಕರ ಪ್ರವೇಶಕ್ಕಾಗಿ ಗುರುತಿಸಿವೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನವಾಲಾ ಹೇಳಿದ್ದಾರೆ. ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯನ್ನು ಭಾರತದಲ್ಲಿ ಕೋವಿಶೀಲ್ಡ್ ಎಂದು ಕರೆಯಲಾಗುತ್ತದೆ.
ಆದಾಗ್ಯೂ, ದೇಶದಿಂದ ದೇಶಕ್ಕೆ ಭಿನ್ನವಾಗಿರುವ ಪ್ರಯಾಣ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ.
“ಪ್ರಯಾಣಿಕರಿಗೆ ಇದು ನಿಜಕ್ಕೂ ಒಳ್ಳೆಯ ಸುದ್ದಿ, ಏಕೆಂದರೆ ಹದಿನಾರು ಯುರೋಪಿಯನ್ ರಾಷ್ಟ್ರಗಳು ಕೋವಿಶೀಲ್ಡ್ ಅನ್ನು ಅಂತರರಾಷ್ಟ್ರೀಯ ಪ್ರಯಾಣಿಕರ ಪ್ರವೇಶಕ್ಕಾಗಿ ಗುರುತಿಸಿವೆ. ಆದಾಗ್ಯೂ, ಲಸಿಕೆ ಹಾಕಿದರೂ, ಪ್ರವೇಶ ಮಾರ್ಗಸೂಚಿಗಳು ದೇಶದಿಂದ ದೇಶಕ್ಕೆ ಬದಲಾಗಬಹುದು, ಆದ್ದರಿಂದ ನೀವು ಪ್ರಯಾಣಿಸುವ ಮೊದಲು ಓದಿ” ಎಂದು ಪೂನವಾಲಾ ಟ್ವೀಟ್ ಮಾಡಿದ್ದಾರೆ.
ಹಲವಾರು ದೇಶಗಳು ಲಸಿಕೆಯನ್ನು ಗುರುತಿಸಲು ನಿರಾಕರಿಸಿದ ನಂತರ, ಯೂರೋಪಿಯನ್ ಸದಸ್ಯ ರಾಷ್ಟ್ರಗಳಿಗೆ ಪ್ರಯಾಣಿಸಲು ರೋಗನಿರೋಧಕತೆಯ ಪುರಾವೆಯಾಗಿ ಕೋವಿಶೀಲ್ಡ್ ಲಸಿಕೆಯನ್ನು ಅಂಗೀಕರಿಸುವ ವಿಷಯವನ್ನು ಇತ್ತೀಚೆಗೆ ವ್ಯಾಪಕವಾಗಿ ಚರ್ಚಿಸಲಾಗಿತ್ತು,
ಜುಲೈ 1 ರಿಂದ ಯುರೋಪಿಯನ್ ಯೂನಿಯನ್ (EU) ಸದಸ್ಯ ರಾಷ್ಟ್ರಗಳು ಪ್ರಯಾಣಿಸಲು ಗ್ರೀನ್ ಪಾಸ್ ಪರಿಚಯಿಸಿತು. ಈ ಗ್ರೀನ್ ಪಾಸ್ ಪಡೆಯಲು ಫೈಜರ್, ಆಸ್ಟ್ರಜೆನಿಕಾ ಸೇರಿದಂತೆ ಕೆಲ ಲಸಿಕೆ ಪಡೆದವರಿಗೆ ಮಾತ್ರ ನೀಡಲಾಗುತ್ತಿತ್ತು. ಈ ಕುರಿತು ಕೇಂದ್ರ ಸರ್ಕಾರ ಯುರೋಪಿಯನ್ ಯೂನಿಯನ್ಗೆ ಮನವಿ ಮಾಡಿತ್ತು. ಬಳಿಕ ಭಾರತದ ಲಸಿಕೆ ಫಲಿತಾಂಶ ಆಧರಿಸಿ EU ರಾಷ್ಟ್ರಗಳು ತಮ್ಮ ನಿಲುವು ಬದಲಿಸಿದೆ.
ಲಸಿಕೆಗಳನ್ನು ಸ್ವೀಕರಿಸಿದ ಯುರೋಪಿಯನ್ ರಾಷ್ಟ್ರಗಳ ಪಟ್ಟಿ ಈಗಿದೆ, ಆಸ್ಟ್ರಿಯಾ, ಬೆಲ್ಜಿಯಂ, ಬಲ್ಗೇರಿಯಾ, ಫಿನ್ಲ್ಯಾಂಡ್, ಜರ್ಮನಿ, ಗ್ರೀಸ್, ಹಂಗೇರಿ, ಐಸ್ಲ್ಯಾಂಡ್, ಐರ್ಲೆಂಡ್, ಲಾಟ್ವಿಯಾ, ನೆದರ್ಲ್ಯಾಂಡ್ಸ್, ಸ್ಲೊವೇನಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್ ಇದನ್ನು ಗುರುತಿಸುವ ಇತ್ತೀಚಿನ ದೇಶ ಫ್ರಾನ್ಸ್.
ಸಂಪೂರ್ಣವಾಗಿ ಲಸಿಕೆ ಹಾಕಿದ ಪ್ರಯಾಣಿಕರಿಗೆ ಪ್ರಯಾಣದ ನಿರ್ಬಂಧವನ್ನು ಫ್ರಾನ್ಸ್ ಶನಿವಾರ ತೆಗೆದುಹಾಕಿದೆ.
“ಸಂಪೂರ್ಣವಾಗಿ ಲಸಿಕೆ ಹಾಕಿದ ಪ್ರಯಾಣಿಕರು ಹೊರಡುವ ದೇಶ ಯಾವುದೆ ಇರಲಿ, ಫ್ರಾನ್ಸ್‌ಗೆ ಅಥವಾ ಅಲ್ಲಿಂದ ಪ್ರಯಾಣಿಸಲು ನಿರ್ಬಂಧಗಳಿಗೆ ಒಳಪಡುವುದಿಲ್ಲ. ಆದಾಗ್ಯೂ, ಫ್ರಾನ್ಸ್‌ನಿಂದ ” ಕೆಂಪು “ಪಟ್ಟಿಯಲ್ಲಿರುವ ದೇಶಗಳಿಗೆ ಪ್ರಯಾಣಿಸುವುದರ ವಿರುದ್ಧ ನಾವು ಬಲವಾಗಿ ಸಲಹೆ ನೀಡುತ್ತೇವೆ” ಎಂದು ಫ್ರಾನ್ಸ್‌ನ ಯುರೋಪ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.