ಫ್ರಾನ್ಸ್‌ನ ನ್ಯಾಷನಲ್ ಫೈನಾನ್ಷಿಯಲ್ ಪ್ರಾಸಿಕ್ಯೂಟರ್ ಆಫೀಸ್ (ಪಿಎನ್‌ಎಫ್) 36 ರಫೇಲ್ ಜೆಟ್‌ಗಳ ಖರೀದಿಗಾಗಿ 2016ರಲ್ಲಿ ಭಾರತದೊಂದಿಗೆ ಬಹು-ಶತಕೋಟಿ ಡಾಲರ್ ಒಪ್ಪಂದದಲ್ಲಿ “ಭ್ರಷ್ಟಾಚಾರದ” ವಾಸನೆ ಕಂಡುಬಂದಿದ್ದು ಈ ಕುರಿತು ತನಿಖೆ ನಡೆಸಲು ನ್ಯಾಯಾಧೀಶರನ್ನು ನೇಮಿಸಿದೆ ಎಂದು ಫ್ರೆಂಚ್ ಮಾಧ್ಯಮ ವರದಿಗಳು ತಿಳಿಸಿವೆ.

ಫ್ರೆಂಚ್ ತನಿಖಾ ವೆಬ್‌ಸೈಟ್ ಮೀಡಿಯಾಪಾರ್ಟ್ ಸಲ್ಲಿಸಿದ ವರದಿಯಲ್ಲಿ, 2016 ರ 7.8 ಬಿಲಿಯನ್ ಯುರೋ ರಾಫೆಲ್ ಒಪ್ಪಂದದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಫ್ರಾನ್ಸ್‌ನಲ್ಲಿ ಜೂನ್ 14 ರಂದು ನ್ಯಾಯಾಂಗ ತನಿಖೆಯನ್ನು ತೆರೆಯಲಾಗಿದೆ ಎಂದು ವರದಿಯಾಗಿದೆ.
ಈ ಒಪ್ಪಂದದಲ್ಲಿ “ಭ್ರಷ್ಟಾಚಾರ” ಆಗಿರುವ ಅನುಮಾನಗಳನ್ನು ಕಂಡುಬಂದಿದ್ದು ತನಿಖೆ ಮಾಡುವ ಜವಾಬ್ದಾರಿಯನ್ನು ಫ್ರೆಂಚ್ ನ್ಯಾಯಾಧೀಶರಿಗೆ ವಹಿಸಲಾಗಿದೆ ಎಂದು ಪಿಎನ್‌ಎಫ್ ಹೇಳಿದೆ ಎಂದು ಫ್ರೆಂಚ್ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
ಹೊಸ ತನಿಖೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಮೀಡಿಯಾಪಾರ್ಟ್ ಮಾಡಿದ ಸಾಲು ಸಾಲು ಸರಣಿ ವರದಿಗಳನ್ನು ಮುಂದಿರಿಸಿದ್ದರು, ರಫೇಲ್ ವಿಮಾನ ತಯಾರಕರಾದ ಡಸಾಲ್ಟ್ ಏವಿಯೇಷನ್ ಎಲ್ಲಾ ಭ್ರಷ್ಟಾಚಾರದ ಆರೋಪಗಳನ್ನು ನಿರಾಕರಿಸಿದೆ.

ಮೀಡಿಯಾಪಾರ್ಟ್‌ನ ವರದಿಗಳ ಆಧಾರದ ಮೇಲೆ, ಫೈನಾನ್ಸಿಯಲ್ ಕ್ರೈಮ್ಗೆ ಬಲಿಯಾದವರಿಗೆ ಬೆಂಬಲ ನೀಡುವ ಕ್ಷೇತ್ರದಲ್ಲಿ ಕೆಲಸ ಮಾಡುವ ಶೆರ್ಪಾ ಎಂಬ ಎನ್‌ಜಿಒ, ಏಪ್ರಿಲ್‌ನಲ್ಲಿ ಪಿಎನ್‌ಎಫ್‌ಗೆ ದೂರು ನೀಡಿ, ಭ್ರಷ್ಟಾಚಾರ ಮತ್ತು ವಿವಿಧ ಫೈನಾನ್ಸಿಯಲ್ ಕ್ರೈಮ್ ಅಪರಾಧಗಳಿಗೆ ನ್ಯಾಯಾಂಗ ತನಿಖೆಯನ್ನು ತೆರೆಯುವಂತೆ ಕೋರಿತ್ತು. ಈ ತನಿಖೆಯು 36 ಯುದ್ಧ ವಿಮಾನಗಳ ಮಾರಾಟದ ಮಾಡಿದ ಫ್ರಾನ್ಸ್ ಮೂಲದ ಏರ್ ಕ್ರಾಫ್ಟ್ ತಯಾರಿಸುವ ಡಸಾಲ್ಟ್ ಏವಿಯೇಷನ್ ನ ಕುರಿತಾಗಿದೆ.
ವಿವಿಐಪಿ ಚಾಪರ್ ಹಗರಣಕ್ಕೆ ಸಂಬಂಧಿಸಿದಂತೆ 2019 ರಲ್ಲಿ ಭಾರತದ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಮಧ್ಯವರ್ತಿಯೊಂದಿಗೆ ಡಸಾಲ್ಟ್ ಕಂಪನಿ ಸಂಪರ್ಕ ಹೊಂದಿದ್ದು ಅನುಮಾನಾಸ್ಪದ ಪಾವತಿಗಳನ್ನು ಮಾಡಿದೆ ಎಂದು ಎಜೆನ್ಸ್ ಫ್ರಾಂಕೈಸ್ ಆಂಟಿಕ್ರಪ್ಷನ್ (ಎಎಫ್‌ಎ) ಕಂಡುಹಿಡಿದಿದೆ ಎಂದು ಮೀಡಿಯಾಪಾರ್ಟ್ ಹೇಳಿಕೊಂಡಿತ್ತು.
ಫ್ರೆಂಚ್ ಭ್ರಷ್ಟಾಚಾರ ವಿರೋಧಿ ಕಾನೂನಿನ ಸಪಿನ್ 2 ರ ಅಡಿಯಲ್ಲಿ ದೊಡ್ಡ ಕಂಪನಿಗಳು ಭ್ರಷ್ಟಾಚಾರ ವಿರೋಧಿ ಕಾರ್ಯವಿಧಾನಗಳನ್ನು ಜಾರಿಗೆ ತಂದಿದೆಯೆ ಎಂದು ಪರಿಶೀಲಿಸುವ ಉದ್ದೇಶದಿಂದ 2017 ರಲ್ಲಿ ಸ್ಥಾಪಿಸಲಾದ ಎಎಫ್‌ಎ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಗೆ ಹೋಲುತ್ತದೆ. ಆದಾಗ್ಯೂ, ಭಾರತದ ಸಿಎಜಿಗಿಂತ ಭಿನ್ನವಾಗಿ, ಪ್ರೆಂಚ್ ನ ಎಎಫ್‌ಎ ಖಾಸಗಿ ಸಂಸ್ಥೆಗಳನ್ನೂ ಲೆಕ್ಕಪರಿಶೋಧಿಸುತ್ತದೆ.
ಏನಿದು ರಫೇಲ್ ಹಗರಣ? ಯಾವೆಲ್ಲ ಪ್ರಶ್ನೆಗೆ ಉತ್ತರ ಸಿಗಬೇಕಿದೆ?
ರಫೇಲ್ ಹಗರಣದ ಬಗ್ಗೆ ನೋಡುವುದಾದರೆ 2007ರಲ್ಲಿ ಕೇಂದ್ರದ ಯುಪಿಎ ಸರ್ಕಾರ ರಫೇಲ್ ಯುದ್ದವಿಮಾನ ಆಮದು ಕುರಿತು ಪ್ರಾನ್ಸ್ ಸರ್ಕಾರದ ಡಸಾಲ್ಟ್ ಕಂಪನಿ ಜೊತೆ ಮೊದಲ ಸುತ್ತಿನ ಮಾತುಕಥೆ ಪ್ರಾರಂಭಿಸುತ್ತದೆ. ಆ ಮಾತುಕಥೆ ಒಪ್ಪಂದ 2013 / 2014ರ ಹೊತ್ತಿಗೆ ಪೂರ್ಣಗೊಂಡು ಭಾರತ ಒಟ್ಟು 126 ವಿಮಾನಗಳನ್ನ ಪ್ರತೀ ವಿಮಾನಕ್ಕೆ 570 ಕೋಟಿಯಂತೆ ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಅಂದಿನ ಪ್ರದಾನಿ ಮನಮೋಹನ್ ಸಿಂಗ್ ಸಹಿ ಹಾಕುತ್ತಾರೆ. ಅದರಲ್ಲಿ 108 ವಿಮಾನಗಳು ಭಾರತದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ತಯಾರಿಸಲು ತಂತ್ರಜ್ಞಾನ ವರ್ಗಾವಣೆ ಒಪ್ಪಂದವೂ ಆಗಿರುತ್ತದೆ. ಒಪ್ಪಂದದ ಒಟ್ಟುಗಾತ್ರ 42000 ಕೋಟಿ.

ಈ ರೀತಿಯ ತಂತ್ರಜ್ಞಾನ ವರ್ಗಾವಣೆ ಇದೆ ಮೊದಲಲ್ಲ. ನಮ್ಮ ವಾಯುಸೇನೆ ಬಳಸುವ ಮಿಗ್ ಮಿರಾಜ್ ಸುಖೋಯ್ ಜಾಗ್ವಾರ್ ನಂಥಹ ವಿಮಾನಗಳು ತಂತ್ರಜ್ಞಾನ ವರ್ಗಾವಣೆ ಮಾಡಿಕೊಂಡು HAL ನಲ್ಲಿ ತಯಾರಾಗಿವೆ.
ನಂತರ 2014ರಲ್ಲಿ ದೇಶದ ಪ್ರಧಾನಿಯಾಗಿ ಮೋದಿ ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಮನಮೋಹನ್ ಸಿಂಗ್ ಅವರ ಕಾಲದ ರಫೇಲ್ ಒಪ್ಪಂದವನ್ನ ರದ್ದು ಪಡಿಸಿ ಹೊಸ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ಆ ಒಪ್ಪಂದದ ಪ್ರಕಾರ ಕೇವಲ 36 ವಿಮಾನಗಳ ಆಮದು ಮಾಡಿಕೊಳ್ಳುತ್ತದೆ. ಹೊಸ ಒಪ್ಪಂದದ ಪ್ರಕಾರ ಪ್ರತೀ ವಿಮಾನಕ್ಕೆ 1670ಕೋಟಿ. ಹಳೆ ಒಪ್ಪಂದಕ್ಕೆ ಹೋಲಿಸಿದರೆ ಬರೋಬ್ಬರಿ 90 ವಿಮಾನಗಳು ಕಡಿಮೆ ಮತ್ತು ಪ್ರತಿ ವಿಮಾನಕ್ಕೆ ಬರೋಬ್ಬರಿ 1110 ಕೋಟಿ ರೂ ಹೆಚ್ಚು. ಹೊಸ ಒಪ್ಪಂದ ಒಟ್ಟು ಗಾತ್ರ 60000 ಕೋಟಿ ರೂ. ಹಳೆ ಒಪ್ಪಂದಕ್ಕಿಂತ ಒಟ್ಟು ಬರೋಬ್ಬರಿ 18000 ಕೋಟಿ ರೂ ಹೆಚ್ಚು.
ಈ ಒಪ್ಪಂದದಿಂದ 85 ವರ್ಷದ ಅನುಭವಿ ಕಂಪನಿ HALನ ಕೈಬಿಟ್ಟು ಆಜಾಗಕ್ಕೆ ಏರೋಸ್ಪೇಸ್ ನಲ್ಲಿ ಅನುಭವವೇ ಇಲ್ಲದ ರಿಲಯನ್ಸ್ ಅನ್ನು ತಂದು ಕೂರಿಸಲಾಗುತ್ತದೆ ಅಸಲಿಗೆ ರಿಲಯನ್ಸ್ ಏರ್ ಕ್ರಾಪ್ಟ್ ಕಂಪನಿ ಈ ಒಪ್ಪಂದದ ಕೆಲವೆ ದಿನಗಳ ಮೋದಲು ಜನ್ಮತಾಳಿರುತ್ತದೆ.
ನಂತರ ಕಾಂಗ್ರೆಸ್ ಈ ಹಗರಣದ ಬಗ್ಗೆ ಪ್ರಸ್ಥಾಪಿಸಿ ಸದನದಲ್ಲಿ ದಾಖಲೆ ಕೇಳಿದಾಗ ಕೆಲವೇ ದಿನಗಳಲ್ಲಿ ರಫೇಲ್ ಒಪ್ಪಂದದ ಫೈಲ್ ಕಾಣೆಯಾಗಿದೆ ಎಂದು ಸರ್ಕಾರ ಸಂಸತ್ ಗೆ ಉತ್ತರಿಸುತ್ತದೆ.
ನಂತರ ಕಾಂಗ್ರೆಸ್ ಈ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಕೇಸು ದಾಖಲಿಸುತ್ತದೆ. ಆದರೆ ಕೆಲವೇ ತಿಂಗಳಲ್ಲಿ ಈ ಪ್ರಕರಣ ರದ್ದುಗೊಂಡು ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಲಾಗುತ್ತದೆ. ನಂತರ ಕ್ಲೀನ್ ಚಿಟ್ ನೀಡಿದ ನ್ಯಾಯಮೂರ್ತಿ ನಿವೃತ್ತಿ ನಂತರ ಬಿಜೆಪಿಯಿಂದ ಕಳೆದ ವರ್ಷ ರಾಜ್ಯಸಭೆಗೆ ಆಯ್ಕೆಆಗುತ್ತಾರೆ.
ಇದೆ ವರ್ಷ ಏಪ್ರಿಲ್ ಎರಡನೇ ವಾರದಂದು ರಫೇಲ್ ಡೀಲ್ ನಲ್ಲಿ ಭಾರತೀಯ ಮಧ್ಯವರ್ತಿಗೆ ಪ್ರೆಂಚ್ ಕಂಪನಿ ಡಸಾಲ್ಟ್ 1 ಮಿಲಿಯನ್ ಯುರೋವನ್ನು ಪಾವತಿಸಿದ್ದಾರೆ. ಈ ಹಣವನ್ನು ಡಸಾಲ್ಟ್ ಕಂಪನಿ ಯಾಕೆ ನೀಡಿತು? ಯಾವ ಉದ್ದೇಶದಿಂದ ನೀಡಿದೆ? ರಫೇಲ್ ಒಪ್ಪಂದಕ್ಕೂ ಈ ಮಧ್ಯವರ್ತಿಗೂ ಏನು ಸಂಬಂದ ಎನ್ನುವುದು ಕೂಡ ಈಗ ಪ್ರೆಂಚ್ ತನಿಖೆಯಲ್ಲಿ ಬಹಿರಂಗವಾಗಲಿದೆ ಎನ್ನಲಾಗಿದೆ.
ಭಾರತದಲ್ಲೂ ತನಿಖೆಗೆ ಒತ್ತಾಯಿಸಿದ ವಿರೋಧ ಪಕ್ಷ:
2016 ರಫೇಲ್ ವಿಮಾನ ವ್ಯವಹಾರದಲ್ಲಿ ಭ್ರಷ್ಟಾಚಾರ ಆಗಿದೆ ಅನ್ನುವ ಆರೋಪಗಳನ್ನು ಫ್ರಾನ್ಸ್ ನ ಹೊಸ ನ್ಯಾಯಾಂಗ ತನಿಖೆ ಮಾಡಲು ಆದೇಶಿದ್ದು, ಈಗ ಭಾರತದಲ್ಲಿ ರಾಜಕೀಯ ಹೊಸ ಬೆಳವಣಿಗೆ ಕಂಡಿದೆ. ಈ ಹಿಂದೆ 60,000 ಕೋಟಿ ರೂ.ಗಳ ರಕ್ಷಣಾ ಒಪ್ಪಂದದಲ್ಲಿ ಅಸಮರ್ಪಕ ಆರೋಪದ ಬಗ್ಗೆ ವಿವಿಧ ಪ್ರಶ್ನೆಗಳನ್ನು ಎತ್ತಿದ್ದ ವಿರೋಧ ಪಕ್ಷಗಳು ಮತ್ತು ವಿಮರ್ಶಕರು ಮತ್ತೆ ಕೇಂದ್ರ ಸರ್ಕಾರವನ್ನು ಪ್ರಶ್ನಿ ತನಿಖೆಗೆ ಒತ್ತಾಯಿಸಲು ಪ್ರಾರಂಭಿಸಿದ್ದಾರೆ.

ಕಳೆದ ಎರಡು ತಿಂಗಳುಗಳಲ್ಲಿ, ಫ್ರೆಂಚ್ ವೆಬ್‌ಸೈಟ್ ಮೀಡಿಯಾಪಾರ್ಟ್ ರಫೇಲ್ ಒಪ್ಪಂದದಲ್ಲಿ ಹಲವಾರು ಹಣಕಾಸಿನ ಅಪರಾಧಗಳನ್ನು ಬಹಿರಂಗಪಡಿಸಿದೆ, ಇದರ ಆಧಾರದ ಮೇಲೆ ಫ್ರಾನ್ಸ್‌ನಲ್ಲಿ ಹೊಸ ನ್ಯಾಯಾಂಗ ತನಿಖೆಗೆ ಆದೇಶಿಸಲಾಗುದೆ ಎನ್ನಲಾಗಿದೆ.
ಮೊದಲಿಗೆ ಪ್ರತಿಕ್ರಿಯಿಸಿದವರಲ್ಲಿ ಪ್ರಖ್ಯಾತ ವಕೀಲ ಪ್ರಶಾಂತ್ ಭೂಷಣ್ ಕೂಡ ರಫೇಲ್ ವಿಮಾನ ಖರೀದಿಯ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಭಾರತದ ಸುಪ್ರೀಂ ಕೋರ್ಟ್‌ಗೆ ತೆರಳಿದ್ದರು. ಆದರೆ, ಸುಪ್ರೀಂ ಕೋರ್ಟ್ ನಲ್ಲಿ ಆಗ ಇದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ಪೀಠ ಅರ್ಜಿಯನ್ನು ವಜಾಗೊಳಿಸಿತು.
ದಿ ವೈರ್‌ನೊಂದಿಗೆ ಮಾತನಾಡಿದ ಭೂಷಣ್, “ಈ ಒಪ್ಪಂದದ ಬಗ್ಗೆ ಸ್ವತಂತ್ರ ತನಿಖೆ ಕೋರಿ ನಾವು ಸುಪ್ರೀಂ ಕೋರ್ಟ್‌ನ ಮುಂದೆ ಇಟ್ಟಿರುವ ಸಂಪೂರ್ಣ ಸಾಕ್ಷ್ಯವನ್ನು ಮೀಡಿಯಾಪಾರ್ಟ್ ವರದಿ ಮತ್ತಷ್ಟು ದೃಢಪಡಿಸುತ್ತದೆ. ದುರದೃಷ್ಟವಶಾತ್, ಸಿಜೆಐ ಗೊಗೊಯ್ ನೇತೃತ್ವದ ನ್ಯಾಯಪೀಠವು ಮೊಹರು ಮಾಡಿದ ಕವರ್ ಟಿಪ್ಪಣಿಯಲ್ಲಿ ಸರ್ಕಾರವು ಹೇಳಿದ್ದನ್ನು ಕುರುಡಾಗಿ ಸ್ವೀಕರಿಸಲು ಆದ್ಯತೆ ನೀಡಿತು. ಸಿಎಜೆ ವರದಿಯಲ್ಲಿ ಸುಳ್ಳುಗಳು ಕಂಡು ಬಂದಿತ್ತು. ನ್ಯಾಯಮೂರ್ತಿ ಗೊಗೊಯ್ ಅವರಿಗೆ ನಿವೃತ್ತಿಯಾದ ಕೂಡಲೇ ರಾಜ್ಯಸಭಾ ಸ್ಥಾನ ನೀಡಲಾಯಿತು ಎಂದು ಹೇಳಿದ್ದಾರೆ.
ಬೋಫೋರ್ಸ್ ಪ್ರಕರಣವನ್ನು ತೆಗೆದುಕೊಂಡಂತೆ ರಫೇಲ್ ಹಗರಣವನ್ನು “ಭಾರತೀಯ ಮಾಧ್ಯಮಗಳು ಅನುಸರಿಸದಿರುವುದು ದುರದೃಷ್ಟಕರ” ಎಂದು ಅವರು ಹೇಳಿದರು.
ಭ್ರಷ್ಟಾಚಾರ, ಲಂಚ, ಹಣ ವರ್ಗಾವಣೆ ಮತ್ತು ಒಪ್ಪಂದದಲ್ಲಿ ಭಾಗಿಯಾಗಿರುವ ಪ್ರಭಾವದ ಬಗ್ಗೆ ಸ್ವತಂತ್ರ ತನಿಖೆಗೆ ಕಾರಣವಾಗಿದೆ ಮತ್ತು ಅನಿಲ್ ಅಂಬಾನಿಯ ಮೇಲೆ ಮತ್ತೆ ಗಮನ ಸೆಳೆಯುತ್ತದೆ ಎಂದು ಭೂಷಣ್ ಹೇಳಿದ್ದಾರೆ.
ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಪತ್ರಿಕಾಗೋಷ್ಠಿಯಲ್ಲಿ, ಈ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯನ್ನು ರಚಿಸುವ ತಮ್ಮ ಪಕ್ಷದ ಬೇಡಿಕೆಗಳನ್ನು ನವೀಕರಿಸಿದರು. “ಉದಯೋನ್ಮುಖ ಸಂಗತಿಗಳು ಈಗ ಸಂಪೂರ್ಣ ಜೆಪಿಸಿ ತನಿಖೆಗೆ ಕರೆ ನೀಡುತ್ತವೆ. ರಫೇಲ್ ಒಪ್ಪಂದದ ಬಗ್ಗೆ ಜೆಪಿಸಿ ತನಿಖೆ ನಡೆಸುತ್ತದೆಯೇ ಹೊರತು ನ್ಯಾಯಾಲಯದ ವಿಚಾರಣೆಯಲ್ಲ, will clear the air ಎಂದು ಹೇಳಿದ್ದಾರೆ.
ಭಾರಿ ಭ್ರಷ್ಟಾಚಾರ, ದೇಶದ್ರೋಹ ಮತ್ತು ಸಾರ್ವಜನಿಕ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ ರಫೇಲ್ ಹಗರಣವನ್ನು ಅಂತಿಮವಾಗಿ ಫ್ರೆಂಚ್ ಮಾಧ್ಯಮ ಬಹಿರಂಗಪಡಿಸಿದೆ. ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ನಿಲುವನ್ನು ಇಂದು ಸಮರ್ಥಿಸಲ್ಪಟ್ಟಿದೆ, ಈ ಹಲವು ಆರೋಪಗಳನ್ನು ಈಗಾಗಲೇ ಕಾಂಗ್ರೆಸ್ ಮೊದಲೇ ಎತ್ತಿ ತೋರಿಸಿದೆ ಎಂದು ಅವರು ಹೇಳಿದ್ದಾರೆ.
“ಇಂಡೋ-ಫ್ರೆಂಚ್ ರಕ್ಷಣಾ ಒಪ್ಪಂದದಲ್ಲಿನ ಹೊಸ ಭ್ರಷ್ಟಾಚಾರದ ಆರೋಪಗಳು ಭಾರತದೊಂದಿಗೆ ಸಂಕೀರ್ಣವಾಗಿ ಸಂಬಂಧ ಹೊಂದಿದ್ದರಿಂದ, ಇಲ್ಲಿ ಏಕೆ ಜೆಪಿಸಿ ತನಿಖೆ ಆಗಬಾರದು?”. “ಫ್ರಾನ್ಸ್ ತನ್ನ ವಿವಾದಾತ್ಮಕ ಒಪ್ಪಂದಕ್ಕೆ ಅನುಕೂಲವಾಗುವಂತೆ ತನಿಖೆ ಮಾಡಲು ಸಾಧ್ಯವಾದರೆ, ಈ ವಿಷಯದಲ್ಲಿ ಭಾರತದಲ್ಲಿ ಏಕೆ ತನಿಖೆ ಆಗಬಾರದು?” ಎಂದು ಪ್ರಶ್ನಿಸಿದ್ದಾರೆ.
“ಇದು ರಾಷ್ಟ್ರೀಯ ಭದ್ರತೆ ಮತ್ತು ಘನತೆಯ ವಿಷಯವಾಗಿದೆಯೇ ಹೊರತು ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸ್ಪರ್ಧೆಯಲ್ಲ. ಕೇಂದ್ರ ಸರ್ಕಾರವನ್ನು ವಿಮರ್ಶಾತ್ಮಕ ಪ್ರಶ್ನೆಗಳನ್ನು ಕೇಳುವುದು ಸಹಜ. ” ಎಂದು ಹೇಳಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರಕ್ಕೆ ವಿರೋಧ ಪಕ್ಷಗಳು ಕೇಳಿದ ಪ್ರಶ್ನೆಗಳ ವಿವರ ಇಲ್ಲಿದೆ:
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಪ್ರತಿ ವಿಮಾನಕ್ಕೆ 570ಕೋಟಿ ಇದ್ದದ್ದು ಮೋದಿಯ ಕಾಲದಲ್ಲಿ 1670ಕೋಟಿ ಹೇಗಾಯಿತು? ಡಸಾಲ್ಟ್ ಕಂಪನಿ ಎರಡೆರಡು ರೀತಿ ವ್ಯವಹಾರ ಮಾಡಿತೆ ಅಥವಾ ಇದರಲ್ಲಿ ಬೇರೆ ಏನಾದರು ಇದೆಯೇ?

ಮೂಲ ಬೆಲೆಯ ಪ್ರಕಾರ 36ವಿಮಾನಗಳ ಒಟ್ಟು ಮೌಲ್ಯ ಕೇವಲ 20,520ಕೋಟಿ ರೂ. ಮೋದಿ ಸರ್ಕಾರ ನೀಡಿದೆ ಎನ್ನಲಾದ ಬೆಲೆ 60,120 ಕೋಟಿ.ರೂ. ಹಾಗಾದರೆ ಈ ವ್ಯತ್ಯಾಸದ ಬರೋಬ್ಬರಿ 40,600 ಕೋ. ರೂಪಾಯಿ ಯಾರ ಜೇಬು ಸೇರಿತು. ಇದರಲ್ಲಿ ಯಾರೆಲ್ಲ ಕೈವಾಡವಿದೆ ಎಂಬುದು ಈಗ ಫ್ರೆಂಚ್ ತನಿಖೆಯಲ್ಲಿ ನಡೆಸುತ್ತಿದೆ.
ಹಳೆ ಒಪ್ಪಂದ ಆದ ಕೆಲವೇ ವರ್ಷಗಳಲ್ಲಿ ರಾಫೆಲ್ ವಿಮಾನದ ಬೆಲೆ ಮೂರು ಪಟ್ಟು ಹೆಚ್ಚಾಗಲು ಕಾರಣವೇನು?
100 ವರ್ಷಗಳ ಸಮೀಪದ ಅನುಭವ ಹೊಂದಿರುವ ಸರಕಾರಿ ಸ್ವಾಮ್ಯದ HAL ಬದಲಿಗೆ ಕೆಲವೇ ದಿನಗಳ ಮುಂಚೆ ನೋಂದಣಿ ಆದ ಮೋದಿಯ ಆಪ್ತ ಸ್ನೇಹಿತರಾದ ಅಂಬಾನಿಯ Reliance ಕಂಪೇನಿಗೆ ಹೇಗೆ ರಫೇಲ್ ಗುತ್ತಿಗೆ ಸಿಕ್ಕಿತು? ಮತ್ತು HAL ಮುಂದಿನ ಕಥೆ ಏನು? ಎಂಬುದನ್ನು ಇಲ್ಲಿಯ ಸರ್ಕಾರವೇ ಉತ್ತರಿಸಬೇಕು.
ವಾಯುಸೇನೆ ಬೇಡಿಕೆ ಇಟ್ಟಿದ್ದ 126 ವಿಮಾನಗಳ ಬದಲಿಗೆ ಕೇವಲ 36 ವಿಮಾನಗಳನ್ನು ಮಾತ್ರವೇ ಖರೀದಿಸುವ ಒಪ್ಪಂದ ಮಾಡಿಕೊಳ್ಳುವ ಮೂಲಕ ಸೈನ್ಯದ ಬಲ ಕುಂದಿಸಿದಂತಾಗಲಿಲ್ಲವೇ ? ಉಳಿದ ಆ 90 ಯುದ್ದ ವಿಮಾನಗಳ ಸ್ಥಾನವನ್ನು ತುಂಬಲು ಯಾವ ಕ್ರಮ ಕೈಗೊಳ್ಳಲಾಗಿವೆ ? ಇದನ್ನು ರಿಲಯನ್ಸ್ ಕಂಪನಿಗೆ ಕೊಡುವಿರಾ ಅಥವಾ HAL ನಲ್ಲಿ ತಯಾರಾಗುವಿದೇ..? ಎಂಬುದನ್ನು ಕೂಡ ಕೇಂದ್ರವೇ ಉತ್ತರಿಸಬೇಕು.