• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ದೇಶದಲ್ಲಿ 40 ಕ್ಕೂ ಹೆಚ್ಚು ಡೆಲ್ಟಾ ರೂಪಾಂತರಿ ಪ್ರಕರಣ ಪತ್ತೆ: ಮೂರನೆ ಅಲೆಯ ಆತಂಕ!

Any Mind by Any Mind
June 23, 2021
in ದೇಶ
0
ದೇಶದಲ್ಲಿ 40 ಕ್ಕೂ ಹೆಚ್ಚು ಡೆಲ್ಟಾ ರೂಪಾಂತರಿ ಪ್ರಕರಣ ಪತ್ತೆ: ಮೂರನೆ ಅಲೆಯ ಆತಂಕ!
Share on WhatsAppShare on FacebookShare on Telegram

ಕರೊನಾ ಸೋಂಕಿನ ಹೊಸ ರೂಪಾಂತರವಾದ ಡೆಲ್ಟಾ ಪ್ಲಸ್‌ ಪ್ರಕರಣವು ದೇಶದಲ್ಲಿ 40 ಕ್ಕೂ ಹೆಚ್ಚು ವರದಿಯಾಗಿದೆ. ಒಕ್ಕೂಟ ಸರ್ಕಾರವು ಇದನ್ನು “ಕಳವಳಕಾರಿ ರೂಪಾಂತರಿ” ಎಂದು ಗುರುತಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಡೆಲ್ಟಾ ಪ್ಲಸ್ ಪ್ರಕರಣಗಳು ಕಂಡು ಬಂದಿರುವ ಕುರಿತು ನಿನ್ನೆ ಒಕ್ಕೂಟ ಸರ್ಕಾರವು ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶಕ್ಕೆ ಎಚ್ಚರಿಕೆ ಕಳುಹಿಸಿದೆ.

ADVERTISEMENT

ಭಾರತದಲ್ಲಿ ಮೊದಲು ಪತ್ತೆಯಾದ ಹೊಸ ರೂಪಾಂತರವಾದ ಡೆಲ್ಟಾ ರೂಪಾಂತರ ಅಥವಾ ಬಿ.1.617.2 ರೂಪಾಂತರದ ಪ್ರಕರಣಗಳು ಈ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ . ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 6, ಕೇರಳದಲ್ಲಿ 3, ತಮಿಳುನಾಡಿನಲ್ಲಿ 3, ಕರ್ನಾಟಕದಲ್ಲಿ 2 ಮತ್ತು ಪಂಜಾಬ್, ಆಂಧ್ರಪ್ರದೇಶ ಮತ್ತು ಜಮ್ಮುಗಳಲ್ಲಿ ತಲಾ ಒಂದು ಪ್ರಕರಣಗಳಿವೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್ ಸಾಂಕ್ರಾಮಿಕ ಡೆಲ್ಟಾ ರೂಪಾಂತರವು ‘ಡೆಲ್ಟಾ ಪ್ಲಸ್ ಅಥವಾ ಎವೈ.1(AY.1) ರೂಪಾಂತರವಾಗಿ ಪರಿವರ್ತನೆಗೊಂಡಿದೆ. ಇದು ಬಹಳ ಅಪಾಯಕಾರಿ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೊಸ ರೂಪಾಂತರದಿಂದಾಗಿ ಕರೊನಾ ರೋಗದ ತೀವ್ರತೆಯ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೈಸೂರಿನಲ್ಲಿ ಡೆಲ್ಟಾ ರೂಪಾಂತರಿ ತಳಿ ಪತ್ತೆ?

ಕೋವಿಡ್‌ ಪಾಸಿಟಿವಿಟಿ ಪ್ರಮಾಣ ಅಧಿಕ ಇರುಚ ಮೈಸೂರು ಜಿಲ್ಲೆಯಲ್ಲಿ ಡೆಲ್ಟಾ ಪ್ಲಸ್‌ ರೂಪಾಂತರಿ ತಳಿಯ ವೈರಾಣು ಪತ್ತೆಯಾಗಿರುವ ವರದಿ ಬಂದಿದೆ ಎನ್ನಲಾಗಿದೆ. ಆದರೆ, ‘ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ’ ಎಂಬುದಾಗಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

ನಿಮ್ಹಾನ್ಸ್‌ಗೆ ಸುಮಾರು 40 ಮಾದರಿ ಕಳುಹಿಸಲಾಗಿದೆ. ಡೆಲ್ಟಾ ಪ್ಲಸ್‌ ಪತ್ತೆಯಾಗಿರುವ ಬಗ್ಗೆ ಇದುವರೆಗೆ ಅಧಿಕೃತ ಮಾಹಿತಿ ಬಂದಿಲ್ಲ. ಅಧಿಕೃತವಾಗಿ ಗೊತ್ತಾಗುವವರೆಗೆ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಯಾವುದೇ ರೀತಿಯ ವೈರಾಣುವನ್ನು ಎದುರಿಸಲು ನಾವು ಸಿದ್ಧವಿದ್ದೇವೆ’ ಎಂದು ಗೌತಮ್ ಹೇಳಿದ್ದಾರೆ.

ಅದಾಗ್ಯೂ, MMCRI (Mysore Medical College And Research Institute) ನಿರ್ದೇಶಕ ಡಾ.ಸಿ.ಪಿ.ನಂಜರಾಜ್‌, ಹಾಗೂ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್‌.ಪ್ರಸಾದ್‌ ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿರುವುದಾಗಿ ಹೇಳಿದ್ದಾರೆ.

 ‘ಒಬ್ಬ ವ್ಯಕ್ತಿಯ ಗಂಟಲು ದ್ರವ ಮಾದರಿಯಲ್ಲಿ ಡೆಲ್ಟಾ ಪ್ಲಸ್‌ ತಳಿ ಪತ್ತೆಯಾಗಿರುವುದಾಗಿ ನಿಮ್ಹಾನ್ಸ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಪರೀಕ್ಷೆಗಾಗಿ ಕಳೆದ ತಿಂಗಳು ಮಾದರಿ ಕಳುಹಿಸಿದ್ದೆವು’ ಎಂದು ಡಾ.ಸಿ.ಪಿ.ನಂಜರಾಜ್‌ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲೇ ಅಧಿಕ!

ಕೋವಿಡ್‌ ಎರಡೂ ಅಲೆಗಳಿಗೆ ತೀವ್ರವಾಗಿ ತುತ್ತಾಗಿದ್ದ ಮಹಾರಾಷ್ಟ್ರದಲ್ಲೇ ಡೆಲ್ಟಾ ಪ್ಲಸ್‌ ರೂಪಾಂತರಿ ಪ್ರಕರಣಗಳು ಅಧಿಕವಾಗಿದೆ.  ಮಹಾರಾಷ್ಟ್ರದಲ್ಲಿ ಈವರೆಗೆ 21 ಡೆಲ್ಟಾ ಪ್ಲಸ್ ರೂಪಾಂತರಿ ಕೇಸ್​ಗಳು ಕಾಣಿಸಿಕೊಂಡಿವೆ ಎಂದು ರಾಜ್ಯದ ಆರೋಗ್ಯ ಸಚಿವ ರಾಜೇಶ್​ ಟೋಪೆ ಹೇಳಿದ್ದಾರೆ. ಇವುಗಳಲ್ಲಿ 9 ಪ್ರಕರಣಗಳು ರತ್ನಗಿರಿಯಲ್ಲಿ, 7 ಪ್ರಕರಣಗಳು ಜಲ್ಗೋನ್‌ನಲ್ಲಿ, 2 ಪ್ರಕರಣಗಳು ಮುಂಬೈನಲ್ಲಿ ಮತ್ತು ಸಿಂದುದರ್ಗ್​​, ಥಾಣೆ ಮತ್ತು ಪಾಲ್ಗಾರ್​ ಜಿಲ್ಲೆಗಳಲ್ಲಿ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ ಎಂದು ಟೋಪೆ  ತಿಳಿಸಿದ್ದಾರೆ.

21 ಡೆಲ್ಟಾ ಪ್ಲಸ್ ರೂಪಾಂತರಿ ಕೇಸ್​ಗಳು ಪತ್ತೆಯಾಗಿರುವ ಹಿನ್ನೆಲ್ಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ 100 ಸ್ಯಾಂಪಲ್‌ಗಳನ್ನು ಪಡೆದು ಪರೀಕ್ಷೆಗೆ ಕಳುಹಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಕಳೆದ ಮೇ 15 ರಿಂದ 7,500 ಸ್ಯಾಂಪಲ್​ಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 21 ಕೇಸ್​​ಗಳಲ್ಲಿ ಡೆಲ್ಟಾ ಪ್ಲಸ್​ ವೈರಸ್​​ ಕಂಡು ಬಂದಿದೆ. ಸೋಂಕಿತರ ವ್ಯಾಕ್ಸಿನೇಷನ್​ ಸ್ಥಿತಿ ಮತ್ತು ಅವರ ಪ್ರಯಾಣದ ಹಿನ್ನೆಲೆಯನ್ನು ಕಲೆ ಹಾಕಲಾಗಿದೆ ಎಂದು ರಾಜೇಶ್​ ಟೋಪೆ ತಿಳಿಸಿದ್ದಾರೆ.

ಕೇರಳದಲ್ಲೂ ಡೆಲ್ಟಾ ಆತಂಕ!

ಕೇರಳದ ಪಲಕ್ಕಾಡ್​​​​ ಮತ್ತು ಪಟ್ಟನಂತಿಟ್ಟ ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್​ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇರಳ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಈ ಜಿಲ್ಲೆಗಳಲ್ಲಿ ಸೋಂಕನ್ನು ನಿಯಂತ್ರಿಸಲು ಸರ್ಕಾರ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ಟನಂತಿಟ್ಟ ಜಿಲ್ಲೆಯ ಕಡಪರಾ ಪಂಚಾಯತ್ ಮೂಲದ 4 ವರ್ಷದ ಬಾಲಕನಲ್ಲಿ, ಪಲಕ್ಕಾಡ್​ನಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags: B.1.617.2 variantDelta PlusDelta plus variant
Previous Post

ಸುಮಾರು 200 ಬಿಜೆಪಿ ಕಾರ್ಯಕರ್ತರು ವಾಪಸ್ ಟಿಎಂಸಿಗೆ: ಪಕ್ಷ ಬಿಟ್ಟು ಹೋಗಿದಕ್ಕೆ ಪ್ರಾಯಶ್ಚಿತ್ತ.!

Next Post

ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಸ್ ಎಂಟ್ರಿ: ಎರಡು ಪ್ರಕರಣಗಳು ಇರುವುದಾಗಿ ಖಚಿತಪಡಿಸಿದ ಸಚಿವ ಸುಧಾಕರ್

Related Posts

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..
Top Story

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

by ಪ್ರತಿಧ್ವನಿ
April 22, 2026
0

ಹೈದ್ರಾಬಾದ್‌ :  2026ರ ಐಪಿಎಲ್‌ನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ಮಣಿಸಿದೆ. ಇನ್ನೂ ಈ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದ್ರಾಬಾದ್‌ ತಂಡದ ಓಪನರ್...

Read moreDetails
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
Next Post
ಕೋವಿಡ್-19 ಕುರಿತು ಮಾಧ್ಯಮಗಳು ಜನರನ್ನು ಅನಗತ್ಯ ಆತಂಕಕ್ಕೆ ದೂಡುತ್ತಿದೆ- ಸಚಿವ ಡಾ. ಕೆ ಸುಧಾಕರ್

ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಸ್ ಎಂಟ್ರಿ: ಎರಡು ಪ್ರಕರಣಗಳು ಇರುವುದಾಗಿ ಖಚಿತಪಡಿಸಿದ ಸಚಿವ ಸುಧಾಕರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada