ಆರು ವರ್ಷದ ಬಾಲಕನನ್ನು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಉಳಿಸಿದ ಕೇಂದ್ರ ರೈಲ್ವೆ ಉದ್ಯೋಗಿ ಮಯೂರ್ ಶೆಲ್ಕೆ ಅವರಿಗೆ ರೈಲ್ವೆ ಸಚಿವಾಲಯ ₹ 50,000 ನಗದು ಪ್ರಶಸ್ತಿಯನ್ನು ಘೋಷಿಸಿದೆ.
ಇನ್ನೇನು ಮಗುವಿನ ಮೇಲೆ ರೈಲು ಹರಿಯಿತು ಅನ್ನೊ ಕ್ಷಣದಲ್ಲಿ ಶೆಲ್ಕೆ ಅವರು ಆ ಮಗುವನ್ನು ಅಪಾಯದಿಂದ ಪಾರು ಮಾಡುತ್ತಾರೆ. ಈ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಮೆಚ್ಚುಗೆಯನ್ನು ಪಡೆದಿತ್ತು.

ರೈಲ್ವೆ ಮಂಡಳಿಯ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕರು, ಶೆಲ್ಕೆ ಅವರ “ಧೈರ್ಯ ಮತ್ತು ಮನಸ್ಸಿನ ಉಪಸ್ಥಿತಿ”ಯನ್ನು ಮೆಚ್ಚಿ ಪ್ರಶಸ್ತಿ ನೀಡುವ ಬಗ್ಗೆ ಪತ್ರದ ಮೂಲಕ ಕೇಂದ್ರ ರೈಲ್ವೆ ಜನರಲ್ ಮ್ಯಾನೇಜರ್‌ಗೆ ಮಾಹಿತಿ ನೀಡಿದರು.
“ಶೆಲ್ಕೆ ತನ್ನ ಜೀವವನ್ನು ಪಣಕಿಟ್ಟು ಮುಂಬರುವ ರೈಲಿನ ಎದುರು ಓಡಿ ಮಗುವನ್ನು ರಕ್ಷಿಸಿದನು ಹಾಗೂ ಮಗುವನ್ನು ಪ್ಲಾಟ್ಪಾರಂ ನತ್ತ ಕರೆತಂದ ರೀತಿಯನ್ನು ಮತ್ತು ಮಗುವನ್ನು ಸುರಕ್ಷತೆಯಿಂದ ಎತ್ತಿದ್ದನು” ಪತ್ರದಲ್ಲಿ ಶ್ಲಾಘಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಮುಂಬೈನ ವಂಗಾನಿ ನಿಲ್ದಾಣದಲ್ಲಿ ನಡೆದಿದ್ದು, ಏಪ್ರಿಲ್ 17 ರಂದು ಶೆಲ್ಕೆ ಅವರನ್ನು ಪಾಯಿಂಟ್‌ಮ್ಯಾನ್ ಆಗಿ ನೇಮಿಸಲಾಗಿತ್ತು.
ಹಳಿಗಳ ಮೇಲೆ ಬಿದ್ದು ಮುಂಬರುವ ರೈಲಿನ ಹಾದಿಯಲ್ಲಿದ್ದ ಹುಡುಗನನ್ನು ಶೆಲ್ಕೆ ಗುರುತಿಸಿದರು. ಈಗೆ ಗುರುತಿಸಿದ ತಕ್ಷಣ ಕೆಳಗೆ ಹಾರಿ, ಹುಡುಗನ ಕಡೆಗೆ ಓಡಿ ಹುಡುಗನನ್ನು ಮೊದಲು ಪ್ಲಾಟ್‌ಪಾರಂ ಮೇಲೆ ಹಾಕಿ ನಂತರ ಆತ ಬರುತ್ತಾನೆ. ಈ ಘಟನೆ ನಡೆದ ಎರಡೇ ಎರಡು ಸೆಕೆಂಡುಗಳಲ್ಲಿ ರೈಲು ಆ ಜಾಗದಿಂದ ಪಾಸಾಗಿದೆ ಎಂದು ತಿಳಿದುಬಂದಿದೆ.
ಹೃದಯ ಬಡಿತ ಹೆಚ್ಚಿಸುವ ಈ ಘಟನೆ ಸಿಸಿಟಿವಿ ದೃಶ್ಯಾವಳಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆಡೆ ವೈರಲ್ ಆಗಿವೆ. ಶೆಲ್ಕೆ ಅವರ ಧೈರ್ಯಕ್ಕಾಗಿ ಕೇಂದ್ರ ರೈಲ್ವೆ ಅಧಿಕಾರಿಗಳು ಈಗಾಗಲೇ ಸನ್ಮಾನಿಸಿದ್ದಾರೆ.
ಬಹುಮಾನವಾಗಿ ಮೋಟರ್ ಬೈಕ್ ನೀಡಿದ ಜಾವಾ
ಮಯೂರ್ ಶೆಲ್ಕೆ ಸಮಯಪ್ರಜ್ಞೆಗೆ ಹಾಗೂ ಧೈರ್ಯವನ್ನು ಕೊಂಡಾಡಿರುವ ಜಾವಾ ಮೋಟರ್ ಸೈಕಲ್ ಸಂಸ್ಥೆಯ ಡೈರೆಕ್ಟರ್ ಅನುಪಮ್ ತೆರೆಜಾ, ಸಂಸ್ಥೆಯ ವತಿಯಿಂದ ಮೋಟರ್ ಬೈಕ್ ಅನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದ್ದಾರೆ.













