• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕೋವಿಡ್ ಲಸಿಕೆ ರಫ್ತು ಮಾಡಬೇಕಾದ ಭಾರತದ ಅನಿವಾರ್ಯತೆ ಮತ್ತು ಲಸಿಕಾ ರಾಜಕಾರಣ

by
April 10, 2021
in ದೇಶ
0
ಕೋವಿಡ್ ಲಸಿಕೆ ರಫ್ತು ಮಾಡಬೇಕಾದ ಭಾರತದ ಅನಿವಾರ್ಯತೆ ಮತ್ತು ಲಸಿಕಾ ರಾಜಕಾರಣ
Share on WhatsAppShare on FacebookShare on Telegram

ಪೆರುಗ್ವೆ ದೇಶಕ್ಕೆ ಕೊವಾಕ್ಸಿನ್ ನೀಡುವ ಮೂಲಕ ತೈವಾನ್ ತನ್ನ ರಾಜತಾಂತ್ರಿಕ ಮಿತ್ರತ್ವವನ್ನು‌ ಉಳಿಸಿಕೊಳ್ಳಲು ಭಾರತ ನೆರವಾಗಿದೆ ಎಂದು ತೈವಾನ್ ವಿದೇಶಾಂಗ ಸಚಿವ ಕಳೆದ ಬುಧವಾರ ಹೇಳಿಕೆ ನೀಡಿದ್ದಾರೆ. ಚೀನಾ ದೇಶವು ಹಿಂದಿನಿಂದಲೂ ತೈವಾನ್ ಅನ್ನು ಸ್ವತಂತ್ರ ದೇಶವಾಗಿ ಪರಿಗಣಿಸುವ ಎಲ್ಲಾ ದೇಶಗಳೊಂದಿಗೆ ತನ್ನ ರಾಜತಾಂತ್ರಿಕ ಸಂಬಂಧವನ್ನು ಕೊನೆಗೊಳಿಸುವ ನಿರ್ಧಾರವನ್ನು ಕಾಪಾಡಿಕೊಂಡು ಬಂದಿದೆ. ಹಾಗಾಗಿಯೇ ತೈವಾನ್ ಕೇವಲ 15 ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಬಂಧ ಹೊಂದಿದೆ. ದಕ್ಷಿಣ ಅಮೆರಿಕದ ಪೆರುಗ್ವೆ ಆ ಹದಿನೈದು ರಾಷ್ಟ್ರಗಳಲ್ಲಿ ಒಂದು.

ADVERTISEMENT

ಕೋವಿಡ್ ಬಿಕ್ಕಟ್ಟು ಪೆರುಗ್ವೆಯಲ್ಲೂ ಮಿತಿ‌ ಮೀರಿರುವಾಗ ಚೀನಾವು ತನ್ನ ಕೋವಿಡ್ ಲಸಿಕೆಯನ್ನು ಆ ದೇಶಕ್ಕೆ ನೀಡಿ ತೈವಾನ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕೊನೆಗೊಳಿಸುವ ಹೊಂಚು ಹಾಕಿತ್ತು ಎಂದು ತೈವಾನ್ ಆರೋಪಿಸುತ್ತಿದೆ. ಈ ಹಿನ್ನೆಲೆಯಲ್ಲಿ “ಚೀನಾ ತನ್ನ ರಾಜತಾಂತ್ರಿಕ ಸಂಬಂಧಗಳ ಮೇಲೆ ಒತ್ತಡ ಹೇರಲು ಲಸಿಕೆಗಳ ಪೂರೈಕೆಯನ್ನು ಬಳಸುತ್ತಿದೆ” ಎಂದು ತೈವಾನ್ ವಿದೇಶಾಂಗ ಸಚಿವ ಜೋಸೆಫ್ ವು ಹೇಳಿಕೆ ನೀಡಿದ್ದರು‌. ಆದರೆ ಭಾರತ ಈಗ ಪೆರುಗ್ವೆಗೆ ಲಸಿಕೆ ನೀಡಿ ತೈವಾನ್‌ಗೆ ಸಹಕರಿಸಿದೆ ಎಂದು ಅವರು ಹೇಳಿದ್ದಾರೆ.

ಮಾರ್ಚ್ 22 ರಂದು ಪೆರುಗ್ವೆಯ ವಿದೇಶಾಂಗ ಸಚಿವಾಲಯವು ತೈವಾನ್‌ನೊಂದಿಗಿನ ಸಂಬಂಧವನ್ನು ಮುರಿಯುವ ಷರತ್ತಿನೊಂದಿಗೆ ಕೆಲವು ದೇಶಗಳು ಲಸಿಕೆಗಳನ್ನು ನೀಡಲು ಮುಂದೆ ಬಂದಿದ್ದವು ಎಂದು ಹೇಳಿಕೆ ನೀಡಿತ್ತು.

ಲಸಿಕೆಗಳನ್ನು ಪಡೆಯುವ ಪರಾಗ್ವೆಯ ಹತಾಶ ಪ್ರಯತ್ನವು ತೈವಾನ್ ಭಾರತವೂ ಸೇರಿದಂತೆ ಇತರ ದೇಶಗಳಿಂದ ಸಹಾಯ ಕೇಳಲು ಕಾರಣವಾಯಿತು. “ಕಳೆದ ಕೆಲವು ವಾರಗಳಲ್ಲಿ, ನಾವು ಜಪಾನ್, ಯುನೈಟೆಡ್ ಸ್ಟೇಟ್ಸ್, ಭಾರತ ಸೇರಿದಂತೆ ಸಮಾನ ಮನಸ್ಕ ದೇಶಗಳೊಂದಿಗೆ ಮಾತನಾಡುತ್ತಿದ್ದೇವೆ ಮತ್ತು ಅದೃಷ್ಟವಶಾತ್ ಭಾರತವು ಪೆರುಗ್ವೆಗೆ ಕೆಲವು ಕೊವಾಕ್ಸಿನ್ ಲಸಿಕೆಗಳನ್ನು ನೀಡಲು ಒಪ್ಪಿಕೊಂಡಿತು” ಎಂದು ತೈವಾನ್ ವಿದೇಶಾಂಗ ಸಚಿವರು ಎಪ್ರಿಲ್ 7ರಂದು ಹೇಳಿದ್ದಾರೆ.

ಈ ಬೆಳವಣಿಗೆಯ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ಅಭಿವೃದ್ಧಿ ಹೊಂದದ ದೇಶಗಳಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿದೆ. ಭಾರತದೊಳಗಡೆ ಲಸಿಕೆಯ ಅಗತ್ಯವಿದ್ದು ಹೊರದೇಶಗಳಿಗೆ ಕಳುಹಿಸುವ ಅನಿವಾರ್ಯತೆಯೇನು ಅನ್ನುವ ಪ್ರಶ್ನೆಗಳೂ ಈಗ ಎದ್ದಿವೆ.

ಮಹಾರಾಷ್ಟ್ರ ಒಂದೇ ಅಲ್ಲದೆ ತೆಲಂಗಾಣ, ಒಡಿಶಾ, ಛತ್ತೀಸಗಢ, ಹರ್ಯಾಣದಂತಹ ರಾಜ್ಯಗಳಲ್ಲೂ ಲಸಿಕೆಯ ಕೊರತೆ ತೀವ್ರವಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಹೆಚ್ಚುವರಿ ಲಸಿಕೆ ದೊರೆಯದೇ ಇದ್ದಲ್ಲಿ, ಲಸಿಕೆ ಅಭಿಯಾನವನ್ನೇ ನಿಲ್ಲಿಸಬೇಕಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆಗೆ ಈ ರಾಜ್ಯಗಳು ತಿಳಿಸಿವೆ.

ಈ ಮಧ್ಯೆ ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟ ಎಲ್ಲಾ ಸರ್ಕಾರಿ ನೌಕರರಿಗೂ ಲಸಿಕೆ ತೆಗೆದುಕೊಳ್ಳುವುದು ಕಡ್ಡಾಯ ಎಂದು ಸುತ್ತೋಲೆ ಹೊರಡಿಸಿದೆ. ಆದರೆ ದೇಶದೊಳಗಿನ ಲಸಿಕೆಯ ಕೊರತೆಗೆ ಪರಿಹಾರ ಹೇಗೆ, ಏನು, ಎತ್ತ ಎಂಬುವುದು ಇನ್ನೂ ನಿರ್ಧಾರವಾಗಿಲ್ಲ.

admin

ಜಗತ್ತಿನ ಅತಿ ದೊಡ್ಡ ಕೋವಿಡ್ ಲಸಿಕೆ ಉತ್ಪಾದನಾ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದ್ದು ತನ್ನ ಬಳಕೆಗೆ ಅಗತ್ಯ ಪ್ರಮಾಣದ ಲಸಿಕೆ ದಾಸ್ತಾನಿಗೆ ಮುನ್ನವೇ ಜಗತ್ತಿನ ಹಲವು ರಾಷ್ಟ್ರಗಳಿಗೆ ಲಸಿಕೆ ರಫ್ತು ಮಾಡಿದೆ ಎಂದು ದೇಶದೊಳಗಿನಿಂದಲೇ ಟೀಕೆ ಮತ್ತು ಮೆಚ್ಚುಗೆಗಳೆರಡನ್ನೂ ಎದುರಿಸಿತ್ತು. ಈಗಾಗಲೇ ಜರ್ಮನಿ, ಮಾಲ್ಡೀವ್ಸ್, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಿಗೆ ಲಸಿಕೆ ರಫ್ತು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನ ಸೇರಿದಂತೆ ಇನ್ನೂ ಹಲವು ರಾಷ್ಟ್ರಗಳಿಗೆ ಲಸಿಕೆ ಕಳಿಸಿಕೊಡುವ ಬಗ್ಗೆ ಈಗಾಗಲೇ ಪ್ರಧಾನಿ ಮೋದಿಯವರ ಸರ್ಕಾರ ಘೋಷಣೆ ಮಾಡಿದೆ.

ಆದರೆ ಜಗತ್ತಿಗೆ ವ್ಯಾಕ್ಸಿನ್ ರಪ್ತು ಮಾಡುವ ಅನಿವಾರ್ಯತೆ ಭಾರತಕ್ಕಿದ್ದು ಈ ಬಗ್ಗೆ ರಾಜಕೀಯ ಮಾಡುವ ಸರ್ಕಾರದ ವಿರೋಧಿಗಳಾಗಲೀ ಬೆಂಬಲಿಗರಾಗಲೀ ಹೆಚ್ಚಿನ ಬೆಳಕು ಚೆಲ್ಲಿಲ್ಲ.

ಭಾರತದಲ್ಲಿ ಈಗ ಎರಡು ಕೋವಿಡ್ ವ್ಯಾಕ್ಸಿನ್‌ಗಳನ್ನು ಉತ್ಪಾದಿಸಲಾಗುತ್ತಿದ್ದು ಒಂದು ಕೊವ್ಯಾಕ್ಸಿನ್ ಮತ್ತೊಂದು ಕೋವಿಶೀಲ್ಡ್. ಇದರಲ್ಲಿ ಕೋವಿಶೀಲ್ಡ್ ಲಸಿಕೆಯು ಆಕ್ಸ್‌ಫರ್ಡ್ ವಿವಿ ಸಂಶೋಧಿಸಿ, ಆಸ್ಟ್ರಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿ ಲೈಸನ್ಸ್ ಒಪ್ಪಂದದ ಮೇರೆಗೆ ಬಾರತದ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಮೂಲಕ ಉತ್ಪಾದನೆ ಆಗುತ್ತಿರುವ ವ್ಯಾಕ್ಸೀನ್. ಈ ಸಂಸ್ಥೆಯ ಉತ್ಪಾದನಾ ಸಾಮರ್ಥ್ಯ ತಿಂಗಳಿಗೆ 5-6 ಕೋಟಿ ಡೋಸ್ ಲಸಿಕೆಗಳು. ಕೊವ್ಯಾಕ್ಸೀನ್ ಲಸಿಕೆಯು ಭಾರತಮೂಲದ್ದಾಗಿದ್ದು ಹೈದರಾಬಾದಿನ ಭಾರತ್ ಬಯೋಟೆಕ್ ಇದನ್ನು ಉತ್ಪಾದಿಸುತ್ತಿದೆ. ಇದರ ಉತ್ಪಾದನಾ ಸಾಮರ್ಥ್ಯ ತಿಂಗಳಿಗೆ 1 ಕೋಟಿ ಡೋಸ್ ಲಸಿಕೆಗಳು.

Coalition for Epidemic Preparedness Innovations (CEPI), Gavi ಮತ್ತು World Health Organization (WHO)ಗಳು ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡಲು ಸ್ಥಾಪಿಸಿರುವ COVAX ಸಂಸ್ಥೆಯ ಮೂಲಕ ಸಂಶೋಧನೆ ಆಗಿರುವ ವ್ಯಾಕ್ಸೀನ್‌ಗಳಲ್ಲಿ ಒಂದು ಕೋವಿಶೀಲ್ಡ್. ಅದರ ಉತ್ಪಾದನೆಗಾಗಿ COVAX ಒಕ್ಕೂಟವು ಆಸ್ಟ್ರಾಜೆನೆಕಾ ಮತ್ತು ಭಾರತದ SIIಗೆ ಒಪ್ಪಂದದ ಮೇರೆಗೆ ಆರ್ಥಿಕ ಸಹಾಯ ನೀಡಿದೆ. ಈ ಒಪ್ಪಂದದ ಭಾಗವಾಗಿ SII ಸಂಸ್ಥೆಯು ತನ್ನ ಉತ್ಪಾದನೆಯಲ್ಲಿ 64 ಬಡ ರಾಷ್ಟ್ರಗಳಿಗೆ ಮತ್ತು ಭಾರತದೊಳಗೆ ಈ ಲಸಿಕೆಯನ್ನು ಸರಬರಾಜು ಮಾಡಲೇಬೇಕು. ಇದಲ್ಲದೆ ವಾಣಿಜ್ಯ ಉದ್ದೇಶಕ್ಕಾಗಿ ಆಸ್ಟ್ರಜೆನೆಕಾಗೂ ಸರಬರಾಜು ಮಾಡಬೇಕು.

SII ಒಪ್ಪಂದದ ಭಾಗವಾಗಿ ಭಾರತ ಗ್ರ್ಯಾಂಟ್ ರೂಪದಲ್ಲಿ 10 ಕೋಟಿ ಡೋಸ್ ಕೊಟ್ಟಿದೆ ಮತ್ತು ವಾಣಿಜ್ಯ ಉದ್ದೇಶದಿಂದ 36 ಕೋಟಿ ಡೋಸ್ ಮಾರಾಟ ಮಾಡಿದೆ. ಒಟ್ಟು ಅಂದಾಜು 65 ಕೋಟಿ ಡೋಸ್‌ಗಳು ದೇಶದಿಂದ ಹೊರಹೋಗಿವೆ ಮತ್ತು ಅಂದಾಜು 9 ಕೋಟಿ ಡೋಸ್‌ಗಳನ್ನು ಭಾರತೀಯರಿಗೆ ಕೊಡಲಾಗಿದೆ. ಹಾಗಾಗಿ, ಭಾರತದಿಂದ ಹೊರಹೋದ ಬಹುತೇಕ ವ್ಯಾಕ್ಸೀನ್‌ಗಳು ಉತ್ಪಾದನೆಗೆ ಮೊದಲೇ ಆದ ಆರ್ಥಿಕ ಸಹಾಯದ ಒಪ್ಪಂದದ ಭಾಗವಾಗಿ ಹೊರಹೋದವೇ ಹೊರತು ಭಾರತದ ಉದಾರತೆ ಅಲ್ಲ.

ಸಂಪೂರ್ಣ ಭಾರತೀಯ ಮೂಲದ ವ್ಯಾಕ್ಸೀನ್ ಆಗಿರುವ ಕೋವ್ಯಾಕ್ಸಿನ್ ಉತ್ಪಾದನಾ ಸಂಸ್ಥೆಯ ಉತ್ಪಾದನಾ ಸಾಮರ್ಥ್ಯ ತಿಂಗಳಿಗೆ 1ಕೋಟಿ ಡೋಸ್ ಆಗಿದ್ದು, ಆಗಸ್ಟ್ ಹೊತ್ತಿಗೆ ಅವರು 13ಕೋಟಿ ಡೋಸ್‌ಗಳೊಂದಿಗೆ ತಯಾರಿರಬಹುದೆಂದು ನೀತಿ ಆಯೋಗದ ಸದಸ್ಯ ಪ್ರೊ. ವಿ.ಕೆ. ಪೌಲ್ ಇತ್ತೀಚೆಗೆ ಹೇಳಿದ್ದರು.

ಭಾರತವು ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಅನ್ನು ಎರಡು ಅಥವಾ ಮೂರು ದೇಶಗಳಿಗೆ ಮಾತ್ರ ಪೂರೈಸಿದೆ. ಕಳೆದ ವಾರ ಬ್ರೆಜಿಲ್‌ನ ಔಷಧ ನಿಯಂತ್ರಕ ANVISA ಕೋವಾಕ್ಸಿನ್ ಅನ್ನು ಆಮದು ಮಾಡಿಕೊಳ್ಳಲು ‘ಭಾರತ್ ಬಯೋಟೆಕ್‌’ನ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಎಲ್ಲಾ ರಾಜಕೀಯ ಮತ್ತು ಮಾರುಕಟ್ಟೆ ತಂತ್ರಗಳ ಮಧ್ಯೆ ಆಸ್ಟ್ರಾಜೆನಿಕಾ ಲಸಿಕೆ ಪಡೆದುಕೊಂಡ ಬಳಿಕ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ದೂರು ಸಲ್ಲಿಕೆಯಾದ ನಂತರ ಇಂಗ್ಲೆಡಿ‌ನಲ್ಲಿ ಮೂವತ್ತಕ್ಕಿಂತ ಕಡಿಮೆ ವಯಸ್ಸಿನವರಿಗೆ ಅದಕ್ಕೆ ಪರ್ಯಾಯವಾದ ಔಷಧಿ ನೀಡಲಾಗುವುದು ಎಂದು ಇಂಗ್ಲೆಂಡ್‌ನ ಔಷಧ ನಿಯಂತ್ರಣ ಸಂಸ್ಥೆ ಘೋಷಣೆ ಮಾಡಿದೆ.

Previous Post

ನಿರ್ಲಜ್ಜ ನಿರ್ದಯಿ ವ್ಯವಸ್ಥೆಯೂ ದುಡಿಮೆಯ ದನಿಗಳೂ

Next Post

ಸಿಎಂ ಮಮತಾ ಮೇಲಿನ ಹಲ್ಲೆ ಕುರಿತಾದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

May 20, 2026
“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

May 19, 2026
Next Post
ಸಿಎಂ ಮಮತಾ ಮೇಲಿನ ಹಲ್ಲೆ ಕುರಿತಾದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಸಿಎಂ ಮಮತಾ ಮೇಲಿನ ಹಲ್ಲೆ ಕುರಿತಾದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada