ಜೆಡಿಎಸ್ ನಾಯಕರು ಮತ್ತು ಜಿ ಟಿ ದೇವೇಗೌಡ ಅವರ ನಡುವಿನ ವಾಕ್ಸಮರ ಮತ್ತೆ ಮುಂದುವರೆದಿದೆ. ಈಗ ಜೆಡಿಎಸ್ ನಾಯಕರ ವಿರುದ್ದ ಕಿಡಿಕಾರಿರುವ ಅವರು, ಜಿಟಿಡಿ ಬೇರು ಕಿತ್ತು ಹಾಕಲು ಹೋಗಿ ಜೆಡಿಎಸ್ ಬೇರನ್ನೇ ಕಿತ್ತು ಹಾಕುತ್ತಿದ್ದಾರೆ, ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
“ಈ ಹಿಂದೆಯೂ ಹಲವು ಸಹಕಾರಿ ಸಂಘಗಳಿಗೆ, ಡಿಸಿಸಿ ಬ್ಯಾಂಕ್ಗಳಿಗೆ ಸ್ಪರ್ಧಿಸುವ ಅವಕಾಶ ನನಗಿತ್ತು. ನಾನು ಅದನ್ನು ಅವಾಗಲೂ ಮಾಡಿಲ್ಲ, ಈಗಲೂ ಮಾಡಲ್ಲ. ನನ್ನ ಮಗನೂ ಸ್ಪರ್ಧಿಸಿಲ್ಲ. ಎಲ್ಲವೂ ತಾಯಿ ಚಾಮುಂಡೇಶ್ವರಿಗೆ ಬಿಟ್ಟಿರುವಂತದ್ದು. ನಾನೇನು ಗಂಭೀರವಾಗಿ ತೆಕೊಂಡಿಲ್ಲ,” ಎಂದು ಅವರು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಮೈಸೂರು ಹೈಕಮಾಂಡ್ ಹೆಚ್ ಡಿ ಕೋಟೆನಲ್ಲಿ ಹೇಳಿಕೆ ನೀಡಿದೆ, ಆಲದ ಮರವನ್ನು ತೆಗೆದು ಹೊಸ ಬೀಜ ಹಾಕ್ತೇವೆ ಎಂದು. ಆದರೆ, ಜಿ ಟಿ ದೇವೇಗೌಡ ಅವರ ಬೇರು ಕಿತ್ತು ಹಾಕಲು ಹೋಗಿ, ಜೆಡಿಎಸ್ ಬೇರನ್ನೇ ಕಿತ್ತು ಹಾಕಲು ಇವರು ಹೊರಟಿದ್ದಾರೆ,” ಎಂದಿದ್ದಾರೆ.
“ಪಿರಿಯಾಪಟ್ಟಣದಲ್ಲಿ ಜೆಡಿಎಸ್ನ ಕಟ್ಟಾ ಬೆಂಬಲಿಗ ಮಹಾದೇವ್ ಮಗ ಚುನಾವಣೆಗೆ ನಿಂತಾಗ ಅವರ ವಿರುದ್ದ ಹೋಗಿ ಕಾಂಗ್ರೆಸ್ ಗೆಲ್ಲಿಸಲು ಕೆಲ ಜೆಡಿಎಸ್ ನಾಯಕರು ಪ್ರಯತ್ನಿಸಿದ್ದಾರೆ. ಮಹಾದೇವ್ ಅವರ ಮಗ ಪಿರಿಯಾಪಟ್ಟಣದಲ್ಲಿ ಶಕ್ತಿಯುತವಾಗಿ ಬೆಳೆಯುತ್ತಿದ್ದಾರೆ. ಹಾಗಾಗಿ ಅವರನ್ನು ಸೋಲಿಸಲು ವೆಂಕಟೇಶ್ ಅವರ ಪರ ಪತಯಾಚನೆ ಮಾಡಲು ಹೆಚ್ಡಿಕೆ ಪಿರಿಯಾಪಟ್ಟಣಕ್ಕೆ ಹೋಗಿದ್ದರು,” ಎಂದು ಜಿಟಿಡಿ ಆರೋಪಿಸಿದ್ದಾರೆ.